ETV Bharat / sukhibhava

ಕೋವಿಡ್​ 19 ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲ; ಡಬ್ಲ್ಯೂಎಚ್​ಒ - ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲ

ಜಗತ್ತನ್ನು ತಲ್ಲಣಗೊಳಿಸಿದ್ದ ಕೋವಿಡ್​ 19 ಅನ್ನು ಮೂರು ವರ್ಷದ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿತ್ತು.

Covid 19 is not a public health emergency; WHO

author img

By

Published : May 6, 2023, 10:48 AM IST

ಬೆಂಗಳೂರು: ಕಳೆದ ಮೂರು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಕೋವಿಡ್​ 19 ಸಾಂಕ್ರಾಮಿಕ ರೋಗ ಇನ್ಮುಂದೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

2019ರ ಅಂತ್ಯದಲ್ಲಿ ಕಾಣಿಸಿಕೊಂಡ ಕೋವಿಡ್​ 19 ಸೋಂಕು 2020ರಲ್ಲಿ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿತು. ಈ ವೇಳೆ ಇದನ್ನು ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಲಾಗಿದೆ. ಬಳಿಕ ಆರು ವಾರಗಳ ನಂತರ ಇದನ್ನು ಸಾಂಕ್ರಾಮಿಕ ರೋಗ ಎನ್ನಲಾಯಿತು. ಅಲ್ಲದೇ, ಆ ಸಮಯದಲ್ಲಿ 763 ಮಿಲಿಯನ್​ ಮಂದಿ ಸೋಂಕಿಗೆ ಒಳಗಾಗಿ, ಜಾಗತಿಕವಾಗಿ 6.9 ಮಿಲಿಯನ್​ಗಿಂತಲೂ ಹೆಚ್ಚು ಜನರು ಸಾವನ್ನಪ್ಪಿದರು.

ಸೋಂಕಿನ ಇಳಿಕೆ ಹಿನ್ನಲೆ ನಿರ್ಧಾರ: ಕೋವಿಡ್​-19 ಸಾವುಗಳು, ತೀವ್ರ ನಿಗಾ ಘಟಕ ಸೇರಿದಂತೆ, ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಮತ್ತು ಅಧಿಕ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಿರುವ ಹಿನ್ನಲೆ ಕೋವಿಡ್​ 19 ಅನ್ನು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯಿಂದ ತೆಗೆದು ಹಾಕಲು ಶಿಫಾರಸು ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್​ ಅಧಾನಮ್​ ಘೆಬ್ರಿಯೆಸಸ್​ ತಿಳಿಸಿದ್ದಾರೆ.

ಇಂಟರ್​ನ್ಯಾಷನಲ್​ ಹೆಲ್ತ್​ ರೆಗ್ಯುಲೇಷನ್ಸ್​​ (2005) ತುರ್ತು ಸಮಿತಿಯ 15 ಸಭೆಯಲ್ಲಿ ಈ ಕುರಿತು ತಿಳಿಸಲಾಗಿದೆ. ಈ ವೇಳೆ ಕೋವಿಡ್​ 19 ಅನ್ನು ದೀರ್ಘಕಾಲೀನ ನಿರ್ವಹಣೆಗೆ ಇದು ಪರಿವರ್ತನೆಯ ಸಮಯವಾಗಿದೆ. ಕಳೆದೊಂದು ವರ್ಷದಿಂದ ಸಾಂಕ್ರಾಮಿಕವೂ ಇಳಿಮುಖವಾಗಿದೆ ಎಂದು ಕೂಡ ತಿಳಿಸಿದ್ದಾರೆ.

ಇದೀಗ ಜನರು ಕೋವಿಡ್​-19ಕ್ಕಿಂತ ಮುಂಚೆ ಇದ್ದ ಜೀವನಶೈಲಿಗೆ ಮರಳುತ್ತಿದ್ದಾರೆ. ಈ ಹಿನ್ನಲೆ ಇನ್ನು ಮುಂದೆ ಕೋವಿಡ್​ 19 ಅನ್ನು ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿಯಿಂದ ಅಂತ್ಯಗೊಳಿಸಲು ತಂಡ ಶಿಫಾರಸು ಮಾಡಿದ್ದು, ಅದನ್ನು ನಾವು ಸ್ವೀಕರಿಸುತ್ತಿರುವುದಾಗಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಕೋವಿಡ್​ 19 ಹೊರತಾಗಿ ಎಚ್​ಐವಿಯಂತಹ ಸಾಂಕ್ರಾಮಿಕ ಸ್ಥಿತಿ ಮುಂದುವರೆಯುತ್ತದೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಕೋವಿಡ್​ 19 ಆರಂಭವಾದ ಬಳಿಕ ಸೋಂಕಿನಲ್ಲಿ ರೂಪಾಂತರಗಳು ಕಂಡು ಬಂದಿದ್ದು, ಓಮ್ರಿಕಾನ್​, XBB.1.15 ಮತ್ತು XBB.1.15 ಸೋಂಕು ಹಲವರ ಸಾವಿಗೆ ಕಾರಣವಾಗಿದ್ದರೂ, ಇದೀಗ ಈ ಸೋಂಕು ಇಳಿಕೆ ಕಂಡಿದೆ.

ಲಸಿಕೆ ಮದ್ದು: ಎಪ್ರಿಲ್​ನಲ್ಲಿ ಕೊನೆಯವಾರದಲ್ಲಿ ಕೋವಿಡ್​ ಸೋಂಕಿಗೆ ಜಾಗತಿಕವಾಗಿ 3,500 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್​​ ವಿರುದ್ದ ಹೋರಾಡಲು ಈಗಾಗಲೇ ಹಲವು ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಎರಡು ಮತ್ತು ಬೋಸ್ಟರ್​ ಡೋಸ್​​ ಲಸಿಕೆಯನ್ನು ನೀಡುವ ಮೂಲಕ ಜನರನ್ನು ಸೋಂಕಿನ ವಿರುದ್ಧ ಹೋರಾಡಲು ಅಣಿಗೊಳಿಸಲಾಗಿದೆ. ಈ ನಡುವೆಯೂ ಜಾಗತಿಕವಾಗಿ ಬಿಲಿಯನ್​ಗಿಂತ ಹೆಚ್ಚು ಜನರು ಲಸಿಕೆ ಪಡೆದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಅನುಸಾರ ಕೋವಿಡ್​ 19 ಪ್ರಕರಣಗಳ ವರದಿ ಗಮನಾರ್ಹವಾಗಿ ಕುಸಿದಿದೆ. ಕೆಲವು ಪ್ರದೇಶಗಳ ಮಧ್ಯಸ್ಥಿಗೆಯಲ್ಲಿ ಇದು ಮುಂದುವರೆದಿದೆ ಎಂಬುದು ಕಳವಳಕಾರಿಯಾಗಿದೆ. ಏತನ್ಮಥ್ಯೆ, ಅನೇಕ ದೇಶಗಳು ಕೋವಿಡ್​ ತುರ್ತು ಪರಿಸ್ಥಿತಿಯನ್ನು ಅಂತ್ಯಗೊಳಿಸಿದೆ. ಅಮೆರಿಕ ಕೂಡ ಮೇ 11ರಿಂದ ಕೋವಿಡ್​ ತುರ್ತು ಪರಿಸ್ಥಿತಿಯನ್ನು ಕೈ ಬಿಡುತ್ತಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ವಾರದಲ್ಲಿ 10 ಸಾವಿರ ಮಕ್ಕಳಲ್ಲಿ ಕೋವಿಡ್​ ಪ್ರಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.