ETV Bharat / sukhibhava

ಬೆಳಗಿನ ತಿಂಡಿ, ರಾತ್ರಿ ಊಟ ತಡವಾಗಿ ಮಾಡುತ್ತೀರಾ; ಹಾಗಾದ್ರೆ ಈ ವಿಷಯ ತಿಳಿಯಿರಿ

author img

By ETV Bharat Karnataka Team

Published : Jan 2, 2024, 6:34 PM IST

ತಿಂಡಿಯನ್ನು ಬೆಳಗ್ಗೆ 8 ಗಂಟೆಯೊಳಹೆ ಸೇವನೆ ಮಾಡಬೇಕು. ಹಾಗೇ ರಾತ್ರಿ ಊಟವನ್ನು ಕೂಡ 8ಗಂಟೆಯೊಳಗೆ ಮುಗಿಸುವುದು ಆರೋಗ್ಯಕರ ಅಭ್ಯಾಸವಾಗಿದೆ.

correct-time-eating-habit-may-help-heart-health

ಲಂಡನ್​: ಬೆಳಗಿನ ತಿಂಡಿ ಮತ್ತು ರಾತ್ರಿ ಊಟ ತಪ್ಪಿಸುವುದು ಅಥವಾ ವಿಳಂಬವಾಗಿ ಸೇವನೆ ಮಾಡುವ ಮುನ್ನ ಎಚ್ಚರ. ಏಕೆಂದರೆ ಇದು ನಿಮ್ಮ ಹೃದಯಕ್ಕೆ ಹೆಚ್ಚಿನ ಅಪಾಯ ತರಲಿದೆ ಎಂದು ಸಂಶೋಧನೆಯೊಂದು ಎಚ್ಚರಿಸಿದೆ.

ಅಧ್ಯಯನ ಅನುಸಾರ, ರಾತ್ರಿ ಇಡೀ ಏನು ಸೇವನೆ ಮಾಡದ ಹಿನ್ನೆಲೆ ಬೆಳಗಿನ ತಿಂಡಿ ಸೇವನೆ ಅವಶ್ಯವಾಗಿದೆ. ಈ ತಿಂಡಿಯನ್ನು ಬೆಳಗ್ಗೆ 8 ಗಂಟೆಯೊಳಗೆ ಸೇಚಿಸಬೇಕು. ಹಾಗೇ ರಾತ್ರಿ ಊಟವನ್ನು ಕೂಡ 8ರೊಳಗೆ ಮುಗಿಸುವುದರಿಂದ ಹೃದಯ ರಕ್ತನಾಳ ರೋಗದ ಅಪಾಯವನ್ನು ತಪ್ಪಿಸಬಹುದು ಎನ್ನುತ್ತಿದೆ ಅಧ್ಯಯನ.

ಜಾಗತಿಕ ಸಾವಿನ ಪ್ರಮಾಣದಲ್ಲಿ ಹೃದಯ ರಕ್ತನಾಳದ ರೋಗದ ಕಾರಣ ಪ್ರಮುಖವಾಗಿದೆ. ಗ್ಲೋಬಲ್​ ಬರ್ಡನ್​ ಆಫ್​ ಡೀಸಿಸ್​​ ಅಧ್ಯಯನ ಪ್ರಕಾರ, 2019ರಲ್ಲಿ ಜಾಗತಿಕವಾಗಿ ಈ ಸಮಸ್ಯೆಯಿಂದ 18.6 ಮಿಲಿಯನ್​ ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಡಯಟ್​​ನಿಂದ ಕೊಡುಗೆ ಶೇ 7.9ರಷ್ಟಿದೆ. ಇದರ ಅರ್ಥ ಈ ರೋಗಗಳ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಡಯಟ್​​ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಫ್ರೆಂಚ್​​ ಸಂಶೋಧನಾ ಸಂಸ್ಥೆ ಐಎನ್​ಆರ್​ಎಇ ಮತ್ತು ನ್ಯಾಷನಲ್​ ರಿಸರ್ಚ್​​ ಇನ್ಸುಟಿಟ್ಯೂಟ್​ ಫಾರ್​​ ಅಗ್ರಿಕಲ್ಚರ್​​, ಫುಡ್​ ಅಂಡ್​ ಎನ್ವರಮೆಂಟ್​​​ ಪ್ರಕಾರ ದಿನದ ಮೊದಲ ಅಹಾರವನ್ನು ಅಂದರೆ ತಿಂಡಿಯನ್ನು ತಪ್ಪಿಸುವುದು ಹೃದಯ ಸಮಸ್ಯೆ ಅಪಾಯವನ್ನು ಶೇ 6ರಷ್ಟು ಹೆಚ್ಚಿಸುತ್ತದೆ.

ಉದಾಹರಣೆ ವ್ಯಕ್ತಿಯೊಬ್ಬ ಬೆಳಗ್ಗೆ 8 ಗಂಟೆ ಬದಲಾಗಿ 9ಗಂಟೆಗೆ ಸೇವಿಸಿದಾದ ಹೃದಯರಕ್ತನಾಳ ಸಮಸ್ಯೆ ಶೇ 6ರಷ್ಟು ಹೆಚ್ಚುತ್ತದೆ. ಇನ್ನು ದಿನದ ಕಡೆಯ ಆಹಾರ ಅಂದರೆ, ರಾತ್ರಿ ಊಟವನ್ನು 8ಗಂಟೆ ಬದಲಾಗಿ 9 ಗಂಟೆಗೆ ಸೇವನೆ ಮಾಡುವುದರಿಂದ ಇದರ ಅಪಾಯವನ್ನು ಶೇ 28ರಷ್ಟು ಹೆಚ್ಚಿಸಿದಂತೆ. ಅದರಲ್ಲೂ ಈ ಅಪಾಯ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಎಂದು ಅಧ್ಯಯನ ವಿವರಿಸಿದೆ.

ಅಂತಿಮವಾಗಿ ದೀರ್ಘಕಾಲದ ರಾತ್ರಿ ಸಮಯದ ಉಪವಾಸವು ರಾತ್ರಿಯ ಊಟ ಮತ್ತು ಬೆಳಗಿನ ತಿಂಡಿಯ ನಡುವಿನ ಅಮಯವನ್ನು ಅಧ್ಯಯನ ಮಾಡಲಾಗಿದೆ. ಇದು ಹೆಚ್ಚಾದಂತೆ ಹೃದಯದ ಸಮಸ್ಯೆ ಹೆಚ್ಚುತ್ತದೆ ಎಂದು ಅಧ್ಯಯನ ತಿಳಿಸಿದೆ.

ಈ ಅಧ್ಯಯನವನ್ನು ನೇಚರ್​​ ಕಮ್ಯೂನಿಕೇಷನ್​​ನಲ್ಲಿ ಪ್ರಕಟಿಸಲಾಗಿದೆ. ಇದಕ್ಕಾಗಿ ಸಂಶೋಧಕರಯ 1,03,389 ಭಾಗಿದಾರರ ಆಹಾರ ಸೇವನೆ ಮಾದರಿ ಮತ್ತು ಹೃದಯ ರಕ್ತನಾಳ ನಡುವಿನ ಸಂಬಂಧವನ್ನು ಅಧ್ಯಯನ ನಡೆಸಿದ್ದಾರೆ.

ಅಧ್ಯಯನದ ಫಲಿತಾಂಶದಲ್ಲಿ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದರಿಂದ ಹೃದಯರಕ್ತನಾಳದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಫಿಟ್​ ಆಗಿರುವ ಜನರನ್ನೂ ಕಾಡುತ್ತಿದೆ ಹೃದಯಾಘಾತ; ಉತ್ತರ ಹುಡುಕಾಟದಲ್ಲಿ ತಜ್ಞರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.