ಕಾರ್ನ್ ಅಂದರೆ ಮುಸುಕಿನ ಜೋಳ. ಇದು ಅನೇಕರ ಮೆಚ್ಚಿನ ಆಹಾರ ಕೂಡ. ಕಾರ್ನ್ ಅನ್ನು ಹಲವು ರೀತಿಯಲ್ಲಿ ಬಳಸುತ್ತೇವೆ. ಮುಸುಕಿನ ಜೋಳವನ್ನು ನೇರವಾಗಿ ಸೇವಿಸುವುದರೊಂದಿಗೆ ಇದರ ಹಿಟ್ಟನ್ನು ಆಹಾರ ತಯಾರಿಕೆಯ ವಿವಿಧ ಹಂತಗಳಲ್ಲಿ ಬಳಸಲಾಗುತ್ತದೆ. ಇದಕ್ಕಿರುವ ಪ್ರಮುಖ ಕಾರಣ, ಇದರ ರುಚಿ. ಜೊತೆಗೆ ಅದ್ಬುತ ಆರೋಗ್ಯ ಗುಣ. ಕಾರ್ನ್ ಫೈಬರ್ ಸಮೃದ್ಧವಾದ ಕ್ಯಾಲ್ಸಿಯಂ, ವಿಟಮಿನ್ ಬಿ2, ಸಿ ಮತ್ತು ಕ್ಯಾಲೋರಿಸ್ ಒಳಗೊಂಡಿದೆ. ಇಂತಹ ಕಾರ್ನ್ ಅನ್ನು ಟೀಯಲ್ಲಿ ಬೆರೆಸಿ ಸೇವಿಸುವುದು ಕೂಡ ಅದ್ಬುತ ಪ್ರಯೋಜನ ನೀಡುತ್ತದೆ.
ಮೂತ್ರಪಿಂಡ ಶುದ್ದಿ: ಕಾರ್ನ್ಫೈಬರ್ ಪ್ಯಾನೆಸ್ ರೀತಿ ಮೂತ್ರಪಿಂಡದಲ್ಲಿ ಕೆಲಸ ಮಾಡುತ್ತದೆ. ಇದು ಮೂತ್ರ ಪಿಂಡದಲ್ಲಿನ ಹಾನಿಕಾರಕ ವಿಷ ತೆಗೆದುಹಾಕುತ್ತದೆ. ಕಲ್ಲುಗಳ ನಿವಾರಣೆಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಕಾರ್ನ್ ಸ್ಟಾರ್ಚ್‌ನಿಂದ ಮಾಡಿದ ಚಹಾ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು.
ಮೂತ್ರದ ಸೋಂಕು: ಬಹುತೇಕರನ್ನು ಕಾಡುವ ಈ ಸಮಸ್ಯೆಗೆ ಕಾರ್ನ್ ಸ್ಟಾರ್ಚ್ ಸಹಾಯ ಮಾಡುತ್ತದೆ. ಇದರಲ್ಲಿನ ಊರಿಯುತ ನಿವಾರಣೆಯ ಗುಣ ಉತ್ತಮವಾಗಿ ಕಾರ್ಯನಿರ್ವಹಿಸಿ, ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮೂತ್ರದಲ್ಲಿನ ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತದೆ. ದೇಹದಲ್ಲಿನ ವಿಷ ನಿವಾರಿಸುವ ಮೂಲಕ ಇದು ಪ್ರಾಸ್ಪೇಟ್ ಗ್ರಂಥಿಗಳನ್ನು ಆರೋಗ್ಯವಾಗಿರಿಸುತ್ತದೆ.
ಸಕ್ಕರೆ ನಿಯಂತ್ರಣ: ಕಾರ್ನ್ ಫೈಬರ್ ಫೈಬರ್, ವಿಟಮಿನ್ ಮತ್ತು ಮಿನರಲ್ಗಳಿಂದ ಸಮೃದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇದು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಷ್ಟೇ ಅಲ್ಲದೇ, ಇನ್ಸುಲಿನ್ ಹಾರ್ಮೋನ್ ಮಟ್ಟ ನಿಯಂತ್ರಿಸಿ, ರಕ್ತದ ಸಕ್ಕರೆ ಮಟ್ಟವನ್ನೂ ನಿಯಂತ್ರಣದಲ್ಲಿಡುತ್ತದೆ. ಮಧುಮೇಹಿಗಳು ಪ್ರತಿನಿತ್ಯ ಕಾರ್ನ್ ಸ್ಟಾರ್ಚ್ ಚಹಾ ಕುಡಿಯುವುದರಿಂದ ಸಕ್ಕರೆ ಮಟ್ಟ ನಿಯಂತ್ರಿಸಬಹುದು.
ತೂಕ ನಿರ್ವಹಣೆ: ಫೈಬರ್ ದೇಹದ ಚಯಾಪಚಯನವನ್ನು ಸುಧಾರಣೆ ಮಾಡುತ್ತದೆ. ಇದು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಬ್ಬು ನಿವಾರಣೆ ಮಾಡಬಹುದು. ಈ ಕಾರಣದಿಂದ ಸುಲಭವಾಗಿ ದೇಹದ ಕೊಬ್ಬು ಕಳೆದುಕೊಂಡು, ತೂಕ ನಿರ್ವಹಣೆ ಮಾಡಲು ಸಹಾಯಕ.
ಸೌಂದರ್ಯಕ್ಕೂ ಸಹಾಯ: ಕಾರ್ನ್ ಸ್ಟಾರ್ಚ್ ಆರೋಗ್ಯ ನಿರ್ವಹಣೆ ಜೊತೆಯಲ್ಲಿಯೇ ಮುಖದ ಅಂದ ಕಾಪಾಡಲು ಕೂಡ ಸಹಕಾರಿ. ಚರ್ಮದ ಸೋಂಕನ್ನು ನಿವಾರಣೆ ಮಾಡುತ್ತದೆ. ಚರ್ಮದಲ್ಲಿ ಉಂಟಾಗುವ ಕಿರಿಕಿರಿ ಮತ್ತು ಕಡಿತವನ್ನು ನಿರ್ವಹಣೆ ಮಾಡುತ್ತದೆ. ಜೊತೆಗಿದು ತ್ವಚೆಯ ಮಾಶ್ಚರೈಸರ್ ಮತ್ತು ಬೆವರಿನ ನಿರ್ವಹಿಸುತ್ತದೆ. ನಿಯಮಿತವಾಗಿ ಇದರ ಬಳಕೆಯಿಂದ ಮುಖದ ಕಾಂತಿ ಹೊಮ್ಮುತ್ತದೆ.
ಇದನ್ನೂ ಓದಿ: Dates: ಖರ್ಜೂರ ಸೇವಿಸಿ, ರೋಗಗಳಿಂದ ದೂರವಿರಿ!