ನವದೆಹಲಿ: ಮೂಳೆಗಳ ಆರೋಗ್ಯ ಕಾಪಾಡಲು ದಿನವೀಡಿ ವಾಕಿಂಗ್, ರನ್ನಿಂಗ್, ಕೂರುವುದು, ಡ್ಯಾನ್ಸ್ ಮಾಡುವುದು ಅಥವಾ ಮೆಟ್ಟಿಲು ಹತ್ತುವ ಚಟುವಟಿಕೆಯಲ್ಲಿ ತೊಡಗುತ್ತೇವೆ. ಆದರೆ, ಚಳಿಗಾಲದಲ್ಲಿ ಆರೋಗ್ಯ ಕೊಂಚ ಸವಾಲುದಾಯಕವಾಗಿರುತ್ತದೆ. ಅದರಲ್ಲೂ ಅಸ್ಥಿಸಂಧಿವಾತದಂತಹ ಸಮಸ್ಯೆ ಹೊಂದಿರುವವರಿಗೆ ಕಷ್ಟವೇ ಸರಿ.
ಈ ಋತುಮಾನದಕಲ್ಲಿ ಮೂಳೆಗಳು ಮತ್ತು ಕೀಲಿನ ಆರೋಗ್ಯವನ್ನು ಕಾಪಾಡುವುದು ನಿರ್ಣಾಯಕವಾಗಿರುತ್ತದೆ. ಚಳಿಯಿಂದಾಗಿ ನೈಸರ್ಗಿಕ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಕಡಿಮೆಯಾಗುವುದರ ಜೊತೆಗೆ ವಿಟಮಿನ್ ಡಿ ಮಟ್ಟ ಕೂಡ ಕಡಿಮೆ ಆಗುತ್ತದೆ. ಮೂಳೆಗಳ ಆರೋಗ್ಯ ನಿರ್ವಹಣೆ ಮಾಡುವಲ್ಲಿ ವಿಟಮಿನ್ ಡಿ ಪಾತ್ರ ಮುಖ್ಯವಾಗಿರುತ್ತದೆ. ಇದನ್ನು ಆಹಾರದ ಮೂಲಕ ಈ ಸಮಯದಲ್ಲಿ ಪಡೆಯುವುದು ಅವಶ್ಯವಾಗುತ್ತದೆ. ಈ ಮೂಲಕ ಮೂಳೆ ಮತ್ತು ಕೀಲಿನ ಆರೋಗ್ಯವನ್ನು ಕಾಪಾಡಬಹುದಾಗಿದೆ.
ಪೋಷಕಾಂಶ ಸಮೃದ್ಧ ಆಹಾರಗಳು: ವಯಸ್ಸಾದಂತೆ, ಮೂಳೆ ಆರೋಗ್ಯದ ನಿರ್ವಹಣೆಯನ್ನು ನಿರ್ಲಕ್ಷಿಸಿದರೆ, ಅದು ಆಸ್ಟಿಯೊಪೊರೋಸಿಸ್ನಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಮೂಳೆಯ ಆರೋಗ್ಯವನ್ನು ಬಲಪಡಿಸಲು ಮತ್ತು ಉಳಿಸಿಕೊಳ್ಳಲು, ಆಹಾರದಲ್ಲಿ ಕೆಳಗಿನ ಪೋಷಕಾಂಶ ಭರಿತ ಆಹಾರಗಳನ್ನು ಸೇರಿಸುವುದು ಅತ್ಯಗತ್ಯ.
ಹಾಲು ಮತ್ತು ಡೈರಿ ಉತ್ಪನ್ನಗಳು: ಡೈರಿ ಉತ್ಪನ್ನಗಳು ಪೋಷಕಾಂಶ ಸಮೃದ್ಧವಾಗಿದ್ದು, ಮೂಳೆಗಳ ಆರೋಗ್ಯಕ್ಕೆ ಪ್ರಮುಖವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್ ಡಿ, ಪೊಟಾಶಿಯಂ ಮತ್ತು ಫಾಸ್ಪರಸ್ ಇರುತ್ತದೆ. ದೇಹಕ್ಕೆ ಕ್ಯಾಲ್ಸಿಯಂ ಮಟ್ಟ ನಿರ್ಣಾಯಕವಾಗಿದ್ದು, ಅದರ ಮೂಲಕ ವಿಟಮಿನ್ ಡಿ ಆಗಿದೆ. ಕನಿಷ್ಠ 3 ಲೋಟ ಹಾಲು ಕುಡಿಯುವುದರಿಂದ ಇದನ್ನು ಪಡೆಯಬಹುದು. ಹಾಲನ್ನು ಕುಡಿಯಲು ಇಷ್ಟವಿಲ್ಲದವರು, ಅದನ್ನು ಸ್ಮೂಥಿ ಅಥವಾ ಇನ್ನಿತರ ಪರ್ಯಾಯ ಕ್ರಮದ ಮೂಲಕ ಸೇವನೆ ಮಾಡುವುದು ಅವಶ್ಯ.
ಪಾಲಕ್: ಪಾಲಕ್ ಸೊಪ್ಪು ಪೋಷಕಾಂಶದ ಆಗರವಾಗಿದ್ದು, ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಮತ್ತು ಇತರೆ ಅನೇಕ ಮಿನರಲ್ಸ್ ಇರುತ್ತವೆ. ವಾರದ ಪೋಷಕಾಂಶದ ಯೋಜನೆ ರೂಪಿಸಿದರೆ ಒಂದು ಊಟದಲ್ಲಿ ಇದನ್ನು ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು.
ನಟ್ಸ್ ಮತ್ತು ಸೀಡ್: ಒಣಹಣ್ಣುಗಳು ಮತ್ತು ಬೀಜದ ಮೂಲಕ ಉತ್ತಮ ಆರೋಗ್ಯ ಪ್ರಯೋಜನ ಪಡೆಯಬಹುದು. ಎಳ್ಳು, ಕಾಮಕಸ್ತೂರಿ ಬೀಜ, ಕುಂಬಳಕಾಯಿ ಬೀಜಗಳು, ಅಗಸೆ ಬೀಜಗಳು, ಕಮಲದ ಬೀಜ, ಬ್ರೆಜಿಲ್ ಬೀಜಗಳು ಮತ್ತು ಪಿಸ್ತಾದಲ್ಲಿ ಇದು ಯಥೇಚ್ಚವಾಗಿದೆ. ಇತರೆ ಕ್ಯಾಲ್ಸಿಯಂ ಸಮೃದ್ದ ಒಣ ಹಣ್ಣುಗಳು ಎಂದರೆ, ಬಾದಾಮಿ, ವಾಲ್ನಟ್, ಚೆಸ್ಟ್ನಟ್ಸ್, ಇವು ಅಸ್ಟಿಯೋಪೊರೀಸಿಸ್ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
ಬೀನ್ಸ್ ಮತ್ತು ಲೆಟಿನ್ಸ್: ಪ್ರತಿನಿತ್ಯದ ಆಹಾರದಲ್ಲಿ ಬೀನ್ಸ್, ಲೆಟಿನ್ಸ್ ಮತ್ತು ಧಾನ್ಯಗಳನ್ನು ಸೇವಿಸುವ ಮೂಲಕವೂ ಅಗತ್ಯ ಪ್ರೋಟಿನ್, ವಿಟಮಿನ್ಸ್, ಮಿನರಲ್ಸ್ನಂತಹ ಪ್ರಮುಖ ಅಗತ್ಯ ಪೋಷಕಾಂಶವನ್ನು ಪಡೆಯಬಹುದು. ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಮುಖವಾಗಿದೆ.
ಸೋಯಾಬೀನ್: ಸಸ್ಯಾಹಾರಿಗಳಿಗೆ ಪ್ರೋಟಿನ್ ಸಮೃದ್ಧ ಆಹಾರವಾಗಿರುವ ಇದು ಮೂಳೆಗಳ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸೋಯಾ ರುಚಿಯಯನ್ನು ಹೆಚ್ಚಿಸುವ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ಸೋಯಾ ಪಾನೀಯಗಳು, ಸೋಯಾ ಹಾಲು ಮತ್ತು ಟೋಫುಗಳ ಆಹಾರ ಸೇವನೆ ಮಾಡಬಹುದು. ಇದು ಪ್ರೋಟಿನ್ ನೀಡುವ ಜೊತೆಗೆ ಮೂಳೆಗಳ ಆರೋಗ್ಯ ಕಾಪಾಡುತ್ತದೆ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಅಗಸೆ ಬೀಜಗಳು ಸಹಕಾರಿ