ETV Bharat / sukhibhava

ಕರುಳಿನ ಕ್ಯಾನ್ಸರ್​ನ ಅಪಾಯ ಹೇಗೆ ಮತ್ತು ಯಾಕೆ ಕಾಡುತ್ತದೆ?.. ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ! - ಕರುಳಿನಲ್ಲಿ ಪಾಲಿಪ್ಸ್​ ಸೃಷ್ಟಿ

ಈ ಹಿಂದೆ ಕರಳಿನ ಕ್ಯಾನ್ಸರ್​ ಹೊಂದಿದವರಲ್ಲಿ ಇದರ ಅಪಾಯ ಹೆಚ್ಚಿದೆ. ಕರುಳಿನ ಕ್ಯಾನ್ಸರ್​ಗೆ ಇಂತಹದ್ಧೇ ಎಂಬ ನಿರ್ದಿಷ್ಟ ಕಾರಣವಿಲ್ಲ. ಕುಟುಂಬದಲ್ಲಿ ಈ ರೀತಿಯ ಯಾವುದೇ ಕಾಯಿಲೆ ಹೊಂದಿಲ್ಲದವರಿಗೂ ಇದು ಪ್ರಮುಖವಾಗಿ ಕಾಡುತ್ತಿದೆ

ಕರುಳಿನ ಕ್ಯಾನ್ಸರ್​ನ ಅಪಾಯ ಹೇಗೆ ಮತ್ತು ಯಾಕೆ ಕಾಡುತ್ತದೆ?

author img

By

Published : Nov 28, 2022, 1:13 PM IST

ನವದೆಹಲಿ: ಭಾರತದಲ್ಲಿ ಕೊಕೊರೆಕ್ಟಲ್​ ಕ್ಯಾನ್ಸರ್​ ಕರುಳು ಅಥವಾ ಗುದನಾಳದಲ್ಲಿ ಮೊದಲ ಪತ್ತೆಯಾಗಿತ್ತು. ಈ ಕ್ಯಾನರ್​ ಸಾವಿಗೂ ಕಾರಣವಾಗುತ್ತಿರುವುದು ವರದಿಯಾಗಿದೆ. ಈ ಕ್ಯಾನ್ಸರ್​ ಸಾಮಾನ್ಯವಾಗಿ 45 ವರ್ಷ ಮೇಲ್ಪಟ್ಟ ಹಿರಿ ವಯಯಸ್ಕರಲ್ಲಿ ಕರುಳಿನ ಜೀವಕೋಶಗಳು ನಿಯಂತ್ರಣಕ್ಕೆ ಬಾರದಾಗ ಕಂಡು ಬರುತ್ತದೆ.

ಕರುಳಿನಲ್ಲಿ ಪಾಲಿಪ್ಸ್​ ಸೃಷ್ಟಿಯಾಗಿ ಇದು ಒಂದು ರೀತಿಯ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಸಮಯ ಕಳೆದಂತೆ ಈ ಪಾಲಿಕ್ಸ್​ ಕ್ಯಾನರ್​ ರೀತಿಯ ಜೀವಕೋಶ​ಗಳನ್ನು ಅಭಿವೃದ್ಧಿ ಪಡಿಸುತ್ತದೆ. ಕರುಳಿನ ಆರೋಗ್ಯಕರ ಕೋಶಗಳ ಡಿಎನ್‌ಎ ರೂಪಾಂತರಗೊಂಡಾಗ ಮತ್ತು ಜೀವಕೋಶಗಳು ಒಟ್ಟಿಗೆ ನಿರ್ಮಿಸಿದಾಗ ಗಡ್ಡೆ ರೂಪುಗೊಳ್ಳುತ್ತದೆ. ಈ ಕ್ಯಾನ್ಸರ್ ಕೋಶಗಳು ಕಾಲಾನಂತರದಲ್ಲಿ ವಿಸ್ತರಿಸಿ, ದೇಹದೊಳಗಿನ ಆರೋಗ್ಯಕರ ಅಂಗಾಂಶವನ್ನು ಆಕ್ರಮಿಸಿ, ನಾಶ ಮಾಡುತ್ತವೆ.

ಈ ಹಿಂದೆ ಕರಳಿನ ಕ್ಯಾನ್ಸರ್​ ಹೊಂದಿದವರಲ್ಲಿ ಇದರ ಅಪಾಯ ಹೆಚ್ಚಿದೆ. ಕರುಳಿನ ಕ್ಯಾನ್ಸರ್​ಗೆ ಇಂತಹದ್ಧೇ ಎಂಬ ನಿರ್ದಿಷ್ಟ ಕಾರಣವಿಲ್ಲ. ಕುಟುಂಬದಲ್ಲಿ ಈ ರೀತಿಯ ಯಾವುದೇ ಕಾಯಿಲೆ ಹೊಂದಿಲ್ಲದವರಿಗೂ ಇದು ಪ್ರಮುಖವಾಗಿ ಕಾಡುತ್ತಿದೆ. ಪೋಷಕರಲ್ಲಿ ಯಾರಿಗಾದರೂ ಅಥವಾ ಒಡಹುಟ್ಟಿದವರು ಅಥವಾ ಮಕ್ಕಳು ಕ್ಯಾನ್ಸರ್​ ಹೊಂದಿದ್ದರೆ ಅಥವಾ ಅವರ ಸಂಬಂಧಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾಗ ಕ್ಯಾನ್ಸರ್ ಹೊಂದಿದ್ದರೆ ಇದರ ಅಪಾಯವು ಹೆಚ್ಚಾಗಿರುತ್ತದೆ.

ಅಡೆನೊಮ್ಯಾಟಸ್ ಪಾಲಿಪ್ಸ್ ಅಥವಾ ಅದರ ಇತಿಹಾಸ ಹೊಂದಿರುವ ಕುಟುಂಬ ಸದಸ್ಯರು ಇದ್ದರೆ, 45 ವರ್ಷಕ್ಕಿಂತ ಮೊದಲು ತಪಾಸಣೆಗೆ ಒಳಗಾಗಿ ವೈದ್ಯರ ಜೊತೆ ಚರ್ಚೆ ಮಾಡಬೇಕಿದೆ. ಕರುಳಿನ ಕ್ಯಾನ್ಸರ್​ ಹೊಂದಿದ್ದರೆ, ಈ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಬೇಕು, ಸ್ಕ್ರೀನಿಂಗ್​ಗೆ ಒಳಗಾಗುವುದರಿಂದ ಇದರ ಅಪಾಯವನ್ನು ತಪ್ಪಿಸಬಹುದಾಗಿದೆ.

ಕರುಳಿನ ಕ್ಯಾನ್ಸರ್​ ಗುಣಲಕ್ಷಣ

  • ಭೇದಿ ಅಥವಾ ಮಲಬದ್ದತೆ ಅಂತಹ ಸಮಸ್ಯೆಗಳಿಂದ ಬಳಲುವುದು.
  • ರಕ್ತ ಅಥವಾ ಗುದನಾಳದಲ್ಲಿ ಮಲ ರಕ್ತಸ್ರಾವ.
  • ಹೊಟ್ಟೆಯಲ್ಲಿ ನೋವು, ಗ್ಯಾಸ್​ ಅಥವಾ ನೋವಿನಂತಹ ಸಮಸ್ಯೆ.
  • ಬೊಜ್ಜು ಅಥವಾ ತೂಕ ನಷ್ಟದ ಸಮಸ್ಯೆ.
  • ರೋಗಿಗಳಿಂದ ರೋಗಿಗಳಿಗೆ ಈ ಕುರಳಿನ ಕ್ಯಾನ್ಸರ್​ ವಿಭಿನ್ನವಾಗಿದೆ. ಇನ್ನು ಈ ಕಾಯಿಲೆಯಿಂದ ಬಳಲುತ್ತಿರುವ ಅನೇಕರಗೆ ಆರಂಭಿಕ ಹಂತದಲ್ಲಿ ಯಾವುದೆ ಲಕ್ಷಣ ಗೋಚರಿಸದೇ ಇರಬಹುದು.

ಅಪಾಯದ ಮಟ್ಟ- ವಯಸ್ಸು: ಕರುಳಿನ ಕ್ಯಾನ್ಸರ್​ ಯಾವುದೇ ವಯಸ್ಸಿನಲ್ಲಿ ಪತ್ತೆಯಾಗಬಹುದು. ಆದರೆ, ಬಹುತೇಕ ಮಂದಿಗೆ 50 ವರ್ಷದ ಬಳಿಕ ಇದು ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ಪತ್ತೆಯಾಗಿಲ್ಲ. ಆದರೆ, ಯುವ ವಯಸ್ಸಿನ ಜನರಲ್ಲೂ ಈ ಸಮಸ್ಯೆ ಕಾಡುತ್ತಿದೆ.

ವೈಯಕ್ತಿಕ ಇತಿಹಾಸ: ಈಗಾಗಲೇ ಕ್ಯಾನ್ಸರ್​ ಹೊಂದಿದ್ದರೆ ಅಥವಾ ಕ್ಯಾನ್ಸರಿಯಸ್​ ಪಾಲಿಪ್ಸ್​ ಇದ್ದರೆ ಭವಿಷ್ಯದಲ್ಲಿ ಇದರ ಅಪಾಯ ಹೆಚ್ಚಿರುತ್ತದೆ.

ಉರಿಯುತದ ಕರುಳಿನ ಪರಿಸ್ಥಿತಿ: ಕ್ರೋನ್ಸ್ ಕಾಯಿಲೆ ಮತ್ತು ಅಲ್ಸರೇಟಿವ್ ಕೊಲೈಟಿಸ್ ಕೂಡ ಕರಳಿನ ಕ್ಯಾನ್ಸರ್​ನ್ನು ಹೆಚ್ಚಿಸುತ್ತದೆ.

ಅನುವಂಶಿಕ ಕಾಯಿಲೆ: ಕರುಳಿನ ಕ್ಯಾನ್ಸರ್ ಎಫ್​ಎಪಿ, ತೊನ್ನಿನ ರೀತಿ​ ಸಣ್ಣ ಪ್ರಮಾಣದಲ್ಲಿ ಅನುವಂಶಿಕ ಕಾಯಿಲೆಯಾಗಿ ಕಾಡುವ ಸಾಧ್ಯತೆ ಇದೆ. ಇದನ್ನು ಹೆರಿಡೆಟರಿ ನನ್​ಪಾಲಿಪೊಸಿಸ್​ ಕೊಲೆಕ್ಟಾರಲ್​ ಕ್ಯಾನ್ಸರ್​ ಎಂದು ಕರೆಯುತ್ತಾರೆ.

ಕುಟುಂಬದ ಇತಿಹಾಸ: ನಿಮ್ಮ ರಕ್ತ ಸಂಬಂಧಿಗಳು ಈ ಕಾಯಿಲೆಯನ್ನು ಹೊಂದಿದ್ದರೆ, ಇದರ ಅಪಾಯ ಹೆಚ್ಚಿದೆ. ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚಿನ ಜನರು ಈ ಕರುಳಿನ ಕ್ಯಾನ್ಸರ್​ಗೆ ಗುರಿಯಾದರೆ ಅದರ ಅಪಾಯ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ.

ಜೀವನ ಶೈಲಿ: ಕ್ರಿಯಾಶೀಲರಲ್ಲದ, ಹೆಚ್ಚಿನ ಬೊಜ್ಜು ಅಥವಾ ಕಡಿಮೆ ಫೈಬರ್​ ಡಯಟ್​ ಹೊಂದಿರುವವರಲ್ಲಿ ಈ ಕರುಳಿನ ಕ್ಯಾನ್ಸರ್​ ಹೆಚ್ಚುತ್ತದೆ. ಮದ್ಯಪಾನ, ಹೆಚ್ಚು ಧೂಮಪಾನ ನಿಮಗೆ ಹೆಚ್ಚಿನ ಅಪಾಯ ತಂದೊಡ್ಡುತ್ತದೆ. ದೈನಂದಿನ ಕ್ರಿಯಾಶೀಲತೆ ಹೊಂದಿರುವವರಲ್ಲಿ ಈ ಅಪಾಯ ಹೆಚ್ಚು.

ಟೈಪ್​ 2 ಡಯಾಬೀಟಿಸ್​: ಟೈಪ್​ 2 ಡಯಾಬೀಟಿಸ್​ ಹೊಂದಿರುವ ರೋಗಿಗಳಿಗೂ ಇದರ ಅಪಾಯ ಇದೆ.

ಬೊಜ್ಜು: ಬೊಜ್ಜು ಹೊಂದಿರುವರಲ್ಲೂ ಕೂಡ ಈ ರೋಗದ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿದೆ.

ರೇಡಿಯೇಷನ್​ ಥೇರಪಿ: ಈ ಥೇರಪಿ ಹೊಟ್ಟೆ ಮೇಲೆ ಪರಿಣಾಮ ಬೀರಲಿದ್ದು, ಈ ಹಿಂದಿನ ಕ್ಯಾನ್ಸರ್​ನಿಂದಾಗಿ ಇದರ ಅಪಾಯವನ್ನು ಹೆಚ್ಚಿಸುತ್ತದೆ.

ಕರುಳಿನ ಕ್ಯಾನ್ಸರ್​ನಿಂದ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಹೇಗೆ: ತಪಾಸಣೆ- 45 ವರ್ಷವಾದ ಬಳಿ ಸಾಂಪ್ರಾದಾಯಿಕ ಕೊಲೊನೊಸ್ಕೋಪಿ ಪರೀಕ್ಷೆಗೆ ಒಳಗೊಳ್ಳಬೇಕು. ಇದರ ಹೊರತು ವೈದ್ಯರು ಸೂಚಿಸಿದ ಇನ್ನಿತರ ಪರೀಕ್ಷೆಗೆ ಒಳಗಾಗಬೇಕು.

ಕೊಲೊನೊಸ್ಕೋಪಿ: ಕರುಳು ಮತ್ತು ಗುದನಾಳ ಪರೀಕ್ಷೆ ಇದಾಗಿದೆ. ಇದನ್ನು ಗೋಲ್ಡ್​ ಸ್ಟಾಂಡರ್ಡ್​​ ಎಂದು ಕರೆಯಲಾಗುತ್ತದೆ. ಕಾರಣ ಇದರ ಮೂಲಕ ಕ್ಯಾನ್ಸರ್​ನ ಬೆಳವಣಿಗೆ ಮತ್ತು ಇನ್ನಿತರ ದೃಢೀಕರಣವನ್ನು ವೈದ್ಯರು ನಡೆಸುತ್ತಾರೆ.

ವರ್ಚುಯಲ್​/ ಸಿಟಿ ಕೊಲೊನೊಸ್ಕೋಪಿ: ಇದರಲ್ಲಿ ವೈದ್ಯರು ಸಿಟಿ ಸ್ಕ್ಯಾನ್​ ಮಾಡಿ ಅದರ ಬಗ್ಗೆಗಿನ ಮಾಹಿತಿ ನೀಡುತ್ತಾರೆ.

ಸರಳ ಸಿಗ್ಮೊಯಡೊಸ್ಕೋಪಿ: ಬೆಳಕಿ ಮತ್ತು ಕ್ಯಾಮೆರಾ ಲೈನ್ಸ್​ ಅಥವಾ ಸಿಗ್ಮೊಯಡೊಸ್ಕೋಪಿ ಮೂಲಕ ಕರಳಿನ ರೋಗ ಪತ್ತೆ ಮಾಡಬಹುದು.

ಡಿಎನ್​ಎ ಆಧಾರಿತ ಪರೀಕ್ಷೆ: ಅನುವಂಶೀಕ ಅಥವಾ ಕೌಟುಂಬಿಕ ಆರೋಗ್ಯ ಇತಿಹಾಸದ ಮೂಲಕ ತಿಳಿಯಬಹುದಾಗಿದೆ.

ಜೀವನ ಶೈಲಿ ಬದಲಾವಣೆ: ಮದ್ಯಪಾನ ಸೇವನೆ, ಧೂಮಪಾನ ಸೇವನೆಯಲ್ಲಿ ಬದಲಾವಣೆ, ಆರೋಗ್ಯ ಯುತ ತೂಕದ ಜೊತೆ ನಿಯಮಿತ ವ್ಯಾಯಮ ಮಾಡುವ ಮೂಲಕ ಈ ಕರುಳಿನ ಕ್ಯಾನ್ಸರ್​ ಅಪಾಯವನ್ನು ತಡೆಯಬಹುದಾಗಿದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವಿರಾ? ತೂಕ ಇಳಿಸಲು ಬೇಕು ಸಮತೋಲಿತ ಆಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.