ಹೈದರಾಬಾದ್: ಮಾನವ ದೇಹ ವಯಸ್ಸಾಗುತ್ತಾ ಬಂದಂತೆ ಹಲವು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ತವರು ಮನೆಯಾಗಿಬಿಡುತ್ತದೆ. ಇಂತಹ ಮುಪ್ಪಿನ ಸಮಯದಲ್ಲಿ ಕಾಣಿಸಿಕೊಳ್ಳುವ ಕೆಮ್ಮಿನಂತಹ ಕಾಯಿಲೆಯನ್ನ ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ಈ ಕೆಮ್ಮು ಬರುವುದು ವಯಸ್ಸಾಗಿರುವ ಲಕ್ಷಣ ಎಂದಷ್ಟೇ ಭಾವಿಸಿ ಚಿಕಿತ್ಸೆ ಪಡೆಯದೆ ಸುಮ್ಮನಾಗುತ್ತಾರೆ. ಆದರೆ ಈ ರೀತಿಯ ತಪ್ಪುಗಳು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ)ಗೆ ಒಳಮಾಡುತ್ತದೆ. ಹಾಗಾದರೆ ಈ ಸಿಒಪಿಡಿ ಎಂದರೆ ಏನು..? ಇದಕ್ಕೆ ಚಿಕಿತ್ಸೆ ಇದೆಯೇ..?ಎಂಬ ಕುರಿತು ತಿಳಿದುಕೊಳ್ಳೋಣ..
ಉಸಿರಾಟ ಕ್ರಿಯೆಯಲ್ಲಿ ಉಂಟಾಗುವ ಸಮಸ್ಯೆಗಳ ಒಟ್ಟಾರೆಯಾಗಿ ಸಿಒಪಿಡಿ ಎಂದು ಕರೆಯಾಗುತ್ತದೆ. ಅಥವಾ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಹೀಗೆನ್ನುತ್ತಾರೆ. ಇದು ಧೂಮಪಾನ ಮಾಡುವ ಜನಸಂಖ್ಯೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ ಎಂಫಿಸೆಮಾ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ ಕಾಯಿಲೆಯೂ ಇದು ಒಳಗೊಂಡಿದೆ. ಆದರೆ ಸಾಮಾನ್ಯವಾಗಿ ಈ ರೋಗ ಲಕ್ಷಣ ಇರುವವರು ಇದೊಂದು ಆಯಾಸ ಅಥವಾ ದೈಹಿಕ ಬಳಲಿಕೆ ಎಂದಷ್ಟೇ ಭಾವಿಸಿ ನಿರ್ಲಕ್ಷಿಸುತ್ತಾರೆ.
ರೋಗ ಲಕ್ಷಣಗಳು
- ಆಗಾಗ್ಗೆ ಕೆಮ್ಮು ಅಥವಾ ಉಬ್ಬಸ
- ಹೆಚ್ಚುವರಿ ಕಫ, ಲೋಳೆಯ ಅಥವಾ ಕಫ ಉತ್ಪಾದನೆ
- ಉಸಿರಾಟದ ತೊಂದರೆ
- ದೀರ್ಘ ಉಸಿರನ್ನು ತೆಗೆದುಕೊಳ್ಳುವಲ್ಲಿ ತೊಂದರೆ
ಈ ಕಾಯಿಲೆ ಪತ್ತೆಹಚ್ಚಲು ಮುಖ್ಯ ಸ್ಟಿರೋಮೆಟ್ರಿ ಎಂಬ ಪರೀಕ್ಷೆ ಮಾಡಲಾಗುತ್ತದೆ. ಇದು ಕೊಳವೆಯೊಳಗೆ ಗಾಳಿ ಊದುವ ಪರೀಕ್ಷೆ ಒಳಗೊಂಡಿರುತ್ತದೆ. ಈ ಪರೀಕ್ಷೆಯಲ್ಲಿ ಆ ವ್ಯಕ್ತಿಯ ಶ್ವಾಸಕೋಶದ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ತಿಳಿಯಬಹುದಾಗಿದೆ. ಆದೆ ಕೆಲವರಿಗೆ ಕ್ಸ್ಕ್ಯಾನಿಂಗ್ ಮತ್ತು ರಕ್ತ ಪರೀಕ್ಷೆ ಮಾಡಿಯೂ ಈ ಕಾಯಿಲೆ ತೀವ್ರತೆ ಪತ್ತೆಮಾಡಲಾಗುತ್ತದೆ.
ಸಿಒಡಿಪಿಯ ಪರಿಣಾಮಗಳೇನು?
- ಮೆಟ್ಟಿಲು ಹತ್ತುವುದು ಅಥವಾ ದೂರದವರೆಗೆ ನಡೆಯುವುದು ಅಸಾಧ್ಯವಾಗಬಹುದು.
- ಕೆಲಸ ಮಾಡಲು ಆಗದಿರುವುದು
- ಉಸಿರಾಟ ಪ್ರಕ್ರಿಯೆಯಲ್ಲಿ ತೊಡಕಿರುವಂತೆ ಅನಿಸುವುದು
- ಉಸಿರಾಟಕ್ಕಾಗಿ ಪೋರ್ಟಬಲ್ ಆಕ್ಸಿಜನ್ ಟ್ಯಾಂಕ್ಗಳ ಅವಶ್ಯಕತೆ
- ಗೊಂದಲ ಮತ್ತು ಮರೆವು ಹೆಚ್ಚಾಗುವುದು
- ಕಾಯಿಲೆಯು ಹೆಚ್ಚಾಗಿ ಆಸ್ಪತ್ರೆಯಲ್ಲಿ ಉಳಿಯುವಂತೆ ಮಾಡಬಹುದು
- ಸಂಧಿವಾತ, ಹೃದಯಾಘಾತ, ಮಧುಮೇಹ, ಪರಿಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು ಅಥವಾ ಆಸ್ತಮಾದಂತಹ ದೀರ್ಘಕಾಲದ ಕಾಯಿಲೆಗಳಿಗೆ ದಾರಿ
- ಖಿನ್ನತೆ ಅಥವಾ ಇತರ ಮಾನಸಿಕ ಅಥವಾ ಭಾವನಾತ್ಮಕ ಸ್ಥಿತಿಗಳನ್ನು ಹೊಂದಿರಿ
ಈ ಉಸಿರಾಟ ಸಂಬಂಧಿ ಕಾಯಿಲೆಯಿಂದ ಹೊರಬರಬೇಕಾದರೆ ವೈದ್ಯರ ಸೂಚಿಸಿರುವ ಚಿಕಿತ್ಸೆಯ ಜೊತೆಗೆ ಕೆಲವು ಹೆಚ್ಚುವರಿ ಚಿಕಿತ್ಸಾ ವಿಧಾನ ಅನುಸರಿಸುವುದು ಉತ್ತಮವಾಗಿದೆ.
- ಧೂಮಪಾನಕ್ಕೆ ಕಡಿವಾಣ
- ಸಿಗರೇಟ್, ಬೀಡಿ ಮತ್ತು ಇತರೆ ಮಾಲಿನ್ಯಕಾರಕ ಹೊಗೆಗಳಿಂದ ಮುಕ್ತಿ ಪಡೆಯಿರಿ
- ಶ್ವಾಸಕೋಶ ಆರೋಗ್ಯ ಕುರಿತು ನಿರಂತರ ವೈದ್ಯರ ಸಲಹೆ
- ಶ್ವಾಸಕೋಶ ಸೋಂಕನ್ನು ತಪ್ಪಿಸುವುದು
- ಪೂರಕ ಆಮ್ಲಜನಕ ಬಳಕೆ ಮಾಡುವುದು