ಬೇಸಿಗೆ ರಜೆಯಲ್ಲಿ ಮಕ್ಕಳು ಏನು ಮಾಡಬೇಕು?. ಇದು ಮಕ್ಕಳಿಗೆ ಶಾಲೆಯಿಂದ ಒಂದು ದೊಡ್ಡ ವಿರಾಮದ ಸಮಯ. ಪ್ರಯಾಣ ಮತ್ತು ಮಕ್ಕಳಿಗೆ ಆಟವಾಡಲು ಹೆಚ್ಚು ಸಮಯ ಸಿಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಬಹುತೇಕ ರಜೆಗಳು ಟಿವಿ, ಮೊಬೈಲ್ಗಳಲ್ಲೇ ಕಳೆದು ಹೋಗುತ್ತಿದೆ. ಶೇ 85ರಷ್ಟು ಮಕ್ಕಳು ತಮ್ಮ ಈ ಬಿಡುವಿನ ಅವಧಿಯಲ್ಲಿ ಅತಿ ಹೆಚ್ಚು ಸ್ಕ್ರೀನ್ ಟೈಂ (ಟಿವಿ ಅಥವಾ ಮೊಬೈಲ್ ವೀಕ್ಷಣೆ)ಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂಬ ಸಂಗತಿ ಪೋಷಕರಲ್ಲಿ ಆತಂಕ ಮೂಡಿಸಿದೆ ಎಂದು ಸಮೀಕ್ಷೆಯೊಂದು ಹೇಳುತ್ತದೆ.
ಈ ಸಮೀಕ್ಷೆಯಲ್ಲಿ, ಭಾರತದ 10 ಮೆಟ್ರೋ ಮತ್ತು ಮೆಟ್ರೋ ಹೊರತಾದ ನಗರಗಳಲ್ಲಿ 750 ಮಕ್ಕಳು ಮತ್ತು ಮಕ್ಕಳನ್ನು (3-8ವರ್ಷ) ಸಮೀಕ್ಷೆಗೆ ಒಳಪಡಿಸಲಾಗಿತ್ತು. ಅಂದಾಜು ಶೇ. 96ರಷ್ಟು ಪೋಷಕರು ಮಕ್ಕಳ ಈ ಸ್ಕ್ರೀನ್ ಟೈಂಗೆ ಪರ್ಯಾಯವಾಗಿ ಅವರನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಐಡಿಯಾ ಹುಡುಕುತ್ತಿದ್ದಾರಂತೆ.
ಶೇ 82ರಷ್ಟು ಮಕ್ಕಳು ಬೇಸಿಗೆಯಲ್ಲಿ ತಮ್ಮ ಮಕ್ಕಳು ಹೆಚ್ಚು ಸಮಯವನ್ನು ಸ್ಕ್ರೀನ್ ಟೈಂನಲ್ಲಿ ಕಳೆಯುತ್ತಿರುವ ಬಗ್ಗೆ ಚಿಂತಿತರಾಗಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಹೊಸ ಕಲಿಕೆಗೆ ಉತ್ತೇಚಿಸುತ್ತಿದ್ದು, ಹೊಸ ಕುತೂಹಲಕ್ಕೆ ತಮ್ಮನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ಮಕ್ಕಳ ಬೇಸರವನ್ನು ಕ್ರಿಯಾತ್ಮಕ ಮಾರ್ಗಗಳ ಮೂಲಕ ಹೊಡೆದು ಹಾಕಲು ಪ್ರಯತ್ನಿಸುತ್ತಿದ್ದಾರೆ.
ಸ್ಕ್ರೀನ್ ಟೈಂನಲ್ಲಿ ಹೆಚ್ಚಿನ ಸಮಯ ಕಳೆಯುವ ಶೇ 90ರಷ್ಟು ಮಕ್ಕಳು ಹೆಚ್ಚು ಕ್ರಿಯಾಶೀಲವಾಗಿಲ್ಲದೇ ಇರುವುದು ಕಂಡುಬಂದಿದೆ. ಬಹುತೇಕರು ಸ್ಕ್ರೀನ್ ಟೈಂಗೆ ಹೆಚ್ಚೆಂದರೆ 2 ಗಂಟೆ ನೀಡಬಹುದು ಎಂದಿದ್ದಾರೆ. ಶೇ.69 ರಷ್ಟು ಮಂದಿ ತಮ್ಮ ಮಕ್ಕಳು 3ಕ್ಕೂ ಹೆಚ್ಚು ಗಂಟೆ ಸ್ಕ್ರೀನ್ ಟೈಂನಲ್ಲಿ ಕಳೆಯುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಕ್ಕಳು ಹೊಸ ವಿಷಯವನ್ನು ಕಲಿಯಲು ಉತ್ಸುಕರಾಗಿರುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವರು ಮೋಜಿಗಾಗು ಎದುರು ನೋಡುತ್ತಾರೆ. ಬೇಸಿಗೆಯಲ್ಲಿ ಮಕ್ಕಳು ಹೆಚ್ಚು ಸಮಯ ಮೊಬೈಲ್ನಲ್ಲಿ ಕಳೆಯುವುದರಿಂದ ಬೇರೆ ಚಟುವಟಿಕೆಯಲ್ಲಿ ಬ್ಯುಸಿಯಾಗಿಡುವುದು ಪೋಷಕರಿಗೂ ಕೂಡ ಸವಾಲು ಎಂದು ಸರ್ವೇ ನಡೆಸಿದ ಸಂಸ್ಥೆ ಕಾಂತಾತ್ನ ಎಕ್ಸಿಕ್ಯೂಟಿವ್ ಮ್ಯಾನೇಜಿಂಗ್ ಡೈರೆಕ್ಟರ್ ದೀಪೇಂದ್ರ ರಾಣಾ ತಿಳಿಸಿದ್ದಾರೆ. ನಮ್ಮ ಸಮೀಕ್ಷೆಯಲ್ಲಿ ಪೋಷಕರು ಮಕ್ಕಳಿಗೆ ಕಡಿಮೆ ಸಮಯದ ಸ್ಕ್ರೀನ್ ಟೈಂಗೆ ಅವಕಾಶ ನೀಡಲು ಬಯಸುವುದರೊಂದಿಗೆ ಅವರನ್ನು ಹೊಸ ಕೌಶ್ಯಲ್ಯ, ಮೋಜುಭರಿತ ಚಟುವಟಿಕೆಯಲ್ಲಿ ಕಲಿಕೆಗೆ ಚಟುವಟಿಕೆಗೆ ಸಹಾಯ ಮಾಡಲು ಮುಂದಾಗುತ್ತಾರೆ ಎಂಬುದು ಸೂಚಿಸಲಾಗಿದೆ.
ಮಕ್ಕಳನ್ನು ಬೇಸಿಗೆ ರಜೆಯಲ್ಲಿ ಫೋಷಕರು ಹೊಸ ಕೌಶಲ್ಯ ಚಟುವಟಿಕೆಯಲ್ಲಿ ತೊಡಗಿಸಲು ಮುಂದಾಗುತ್ತಾರೆ. ಈ ಪೈಕಿ ಶೇ 50ರಷ್ಟು ಮಂದಿ ಇಂಗ್ಲಿಷ್ ಮಾತನಾಡುವಿಕೆ, ಶೇ 45ರಷ್ಟು ಮಂದಿ ಉತ್ತಮ ನೈತಿಕತೆ ಮತ್ತು ಸಾಮಾಜಿಕ ಬದ್ಧತೆ, ಶೇ 36 ಮಂದಿ ನೃತ್ಯ, ಹಾಡುಗಾರಿಕೆ ಮತ್ತು ಸಂಗೀತ ವಾದ್ಯ ಕಲಿಕೆಗೆ, ಶೇ 32 ಮಂದಿ ಕಲೆ ಮತ್ತು ಕರಕುಶಲತೆ ಮತ್ತು ಶೇ 32ರಷ್ಟು ದೈಹಿಕ ಮತ್ತು ಹೊರಾಂಗಣ ಚಟುವಟಿಕೆಯಲ್ಲಿ ಅವರನ್ನು ತಲ್ಲೀನರನ್ನಾಗುವಂತೆ ಪ್ರೇರೇಪಿಸುತ್ತಿದ್ದಾರೆ.
ಇದನ್ನೂ ಓದಿ: ಹೆಚ್ಚಿದ ಬಿಸಿಲ ಝಳ: ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ