ETV Bharat / sukhibhava

ಶೈಕ್ಷಣಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಕಾಶ್ಮೀರ ಕಣಿವೆ ಮಕ್ಕಳು: ಎನ್​ಸಿಇಆರ್​ಟಿ ಸಮೀಕ್ಷೆಯಲ್ಲಿ ಬಯಲು - ಈಟಿವಿ ಭಾರತ್​ ಕನ್ನಡ

ಎನ್​ಸಿಇಆರ್​ಟಿ ಸಮೀಕ್ಷೆ ಅನುಸಾರ ಕಣಿವೆ ರಾಜ್ಯದ ಶೇ 30ರಷ್ಟು ಮಕ್ಕಳು ಅಧ್ಯಯನದ ಒತ್ತಡ ಮತ್ತು ಆತಂಕದಿಂದ ಬಳಲುತ್ತಿದ್ದಾರೆ

ಶೈಕ್ಷಣಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಕಾಶ್ಮೀರ ಕಣಿವೆಯ ಮಕ್ಕಳು; ಎನ್​ಸಿಇಆರ್​ಟಿ ಸಮೀಕ್ಷೆಯಲ್ಲಿ ಬಯಲು
children-of-kashmir-valley-are-under-educational-pressure-ncert-survey
author img

By

Published : Feb 4, 2023, 3:49 PM IST

ಶ್ರೀನಗರ( ಕಾಶ್ಮೀರ): ವಿದ್ಯಾರ್ಥಿಗಳ ಮೇಲೆ ಶೈಕ್ಷಣಿಕ ಒತ್ತಡ ಹೆಚ್ಚುತ್ತಿರುವುದು ವರದಿಯಾಗುತ್ತಲೇ ಇದೆ. ಈ ಕುರಿತು ಈಗ ಎನ್​ಸಿಆರ್​ಟಿಇ ಕೂಡ ಸಮೀಕ್ಷೆ ನಡೆಸಿದೆ. ದೇಶದ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಕಾಶ್ಮೀರ ಕಣಿವೆಯ ವಿದ್ಯಾರ್ಥಿಗಳು ಅಧ್ಯಯನದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಸಮೀಕ್ಷೆ ವರದಿ ತಿಳಿಸಿದೆ. ಪರೀಕ್ಷೆ ಅಥವಾ ಅಧ್ಯಯನದಿಂದ ಕಣಿವೆ ರಾಜ್ಯದ ಶೇ 10ರಷ್ಟು ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಾಗುತ್ತಿದ್ದಾರೆ. ವಾರ್ಷಿಕ ಪರೀಕ್ಷೆ ವೇಳೆ ಈ ಅಂಕಿ - ಅಂಶ ಶೇ 30ರಷ್ಟು ತಲುಪಲಿದೆ. ಬಾಲಕ ಮತ್ತು ಬಾಲಕಿಯರಿಬ್ಬರಲ್ಲೂ ಈ ಒತ್ತಡ ಕಂಡು ಬರುತ್ತಿದ್ದು, ಇದರಲ್ಲಿ ಅತಿ ಹೆಚ್ಚು ಹುಡುಗಿರಯರು ಮಾನಸಿಕ ಒತ್ತಡಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿಲಾಗಿದೆ

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಸಮೀಕ್ಷೆಯ ಪ್ರಕಾರ, ಶೈಕ್ಷಣಿಕ ಒತ್ತಡದಿಂದ ಬಾಲಕರಿಗಿಂದ 6ರಿಂದ 12ನೇ ತರಗತಿ ಬಾಲಕಿಯರು ಆತಂಕದ ಸಮಸ್ಯೆ ಮತ್ತು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ 6ರಿಂದ 12ನೇ ತರಗತಿ ಅಧ್ಯಯನ ನಡೆಸುತ್ತಿರುವ 2,00,00 ಹುಡುಗಿರಯನ್ನು ಮತ್ತು ಅದೇ ಪ್ರಮಾಣದ ಬಾಲಕರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ

ಮಾನಸಿಕ ಒತ್ತಡ: ಇದರಲ್ಲಿ 12. 25ರಷ್ಟು ಬಾಲಕಿಯರು ಪರೀಕ್ಷೆ ಮತ್ತು ಅಧ್ಯಯನದ ವೇಳೆ ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಶೆ 9.98ರಷ್ಟು ಬಾಲಕರು ಕೂಡ ಈ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನು ಸಮೀಕ್ಷೆ ವೇಳೆ ಕೂಡ 81.1ರಷ್ಟು ಬಾಲಕಿಯರು ಕೆಲವು ಬಾರಿ ಅಧ್ಯಯನದ ಹಿನ್ನೆಲೆ ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಶೇ 77.7ರಷ್ಟು ಬಾಲಕರು ಕೂಡ ಶೈಕ್ಷಣಿಕ ಒತ್ತಡಕ್ಕೆ ಒಳಗಾಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.

ಶೈಕ್ಷಣಿಕ ಅಧ್ಯಯನದ ವೇಳೆ ವಿದ್ಯಾರ್ಥಿಗಳು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಅದರಲ್ಲೂ ವಾರ್ಷಿಕ ಪರೀಕ್ಷೆ ಅಥವಾ ಫಲಿತಾಂಶದ ಪ್ರಕಟಣೆ ವೇಳೆ ಈ ಆತಂಕ ಹೆಚ್ಚುತ್ತದೆ. ಹಲವು ವಿದ್ಯಾರ್ಥಿಗಳಲ್ಲಿ ರಾಜ್ಯದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ವೇಳೆ ಈ ಒತ್ತಡ ಮತ್ತು ಆಂತಂ ಮುಂದುವರೆಯುತ್ತದೆ ಎಂದು ಮನಶಾಸ್ತ್ರಜ್ಞರು ತಿಳಿಸಿದ್ದಾರೆ.

ಎಂಬಿಬಿಎಸ್​ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲು ತಾವು ಉತ್ತಮ ಪ್ರದರ್ಶನ ನೀಡಬೇಕು ಎಂಬ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಈ ಮಾನಸಿಕ ಸಮಸ್ಯೆ ಕಾಡುತ್ತದೆ ಎನ್ನುತ್ತಾರೆ ತಜ್ಞರು. ಮನೋವೈದ್ಯಕೀಯ ತಜ್ಞರ ಪ್ರಕಾರ, ಸರಿ ಸುಮಾರು ಶೇ 30ರಷ್ಟು ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯ ಆತಂಕ ಮತ್ತು ಒತ್ತಡದಿಂದ ತಮ್ಮ ಬಳಿಕ ಸಮಾಲೋಚನೆಗೆ ಆಗಮಿಸುತ್ತಾರೆ. ಇದರಲ್ಲಿ ಶೇ 20ರಷ್ಟು ಬಾಲಕಿರಯರಿದ್ದರೆ, ಶೇ 10ರಷ್ಟು ಬಾಲಕರು ಇದ್ದಾರೆ.

ಅಧ್ಯಯನದ ಮೇಲೆ ತೀವ್ರ ಪರಿಣಾಮ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನ ಒತ್ತಡಕಾರಿಯಾಗಿದೆ. ಸ್ಪರ್ಧೆಗಳು ಹೆಚ್ಚುತ್ತಿದ್ದಂತೆ ಅಂಕಗಳ ಪೈಪೋಟಿ ಆರಂಭವಾಗಿದೆ. ಅಂಕಗಳ ಸಲುವಾಗಿ ಪೋಷಕರರ ಜೊತೆಗೆ ಶಿಕ್ಷಕರು ಒತ್ತಡವೂ ಅವರ ಅಧ್ಯಯನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಈಗಾಗಲೇ ಅನೇಕ ಅಧ್ಯಯನಗಳು ತಿಳಿಸಿವೆ. ವಿದ್ಯಾರ್ಥಿಗಳನ್ನು ಅಂಕಗಳ ಪೈಪೋಟಿಗೆ ಒಳಗಾಗದಂತೆ, ಸಜಹ ಮತ್ತು ಕ್ರಿಯಾತ್ಮಕ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ತಜ್ಞರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬ್ರೈನ್​ವೇವ್​ ಚಕ್ರಕ್ಕೆ ತರಬೇತಿ ನೀಡುವ ಮೂಲಕ ಕಲಿಕೆ ಸಾಮರ್ಥ್ಯ ಹೆಚ್ಚಿಸಬಹುದು: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.