ETV Bharat / sukhibhava

2028ರ ಹೊತ್ತಿಗೆ ಪ್ರಯೋಗಾಲಯಗಳಲ್ಲಿಯೇ ಮಗು ಅಭಿವೃದ್ಧಿ: ಜಪಾನ್​ ಸಂಶೋಧನೆ - ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯನ್ನು

9 ತಿಂಗಳ ಕಾಲ ಮಗುವನ್ನು ಹೊರುವ ಸಮಸ್ಯೆ ಅಥವಾ ಬಂಜೆತನ ಮತ್ತಿತ್ತರ ಸಮಸ್ಯೆಯಿಂದ ಬಳಲುವವರಿಗೆ ಇದು ವರದಾನವಾಗಲಿದೆ.

Child development in laboratories by 2028; Research in Japan

author img

By

Published : May 27, 2023, 1:01 PM IST

ಟೊಕಿಯೋ: ಇಂದು ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಸಾಧಿಸಿದ್ದೇವೆ. ಇದೇ ಹೊತ್ತಿನಲ್ಲಿ ಆರೋಗ್ಯ ಎಂಬುದು ದುಬಾರಿಯಾಗಿದೆ. ಒತ್ತಡ, ಅಶಿಸ್ತಿನ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಪ್ರಮುಖವಾಗಿ ಕಾಡುತ್ತಿವೆ. ಅದರಲ್ಲಿ ಒಂದು ಮಕ್ಕಳ ಕೊರತೆ ಎಂದರೆ ತಪ್ಪಾಗಲಾರದು. ಇಂದು ಬಹುತೇಕರು ಬಂಜೆತನ ಮತ್ತು ಇತರೆ ಸಮಸ್ಯೆಗಳಿಂದ ಮಗುವನ್ನು ಪಡೆಯಲಾಗದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಜೊತೆಗೆ ಮಗುವನ್ನು ಹೇರುವುದು ಬಲು ಕಷ್ಟ ಎಂಬ ಮನೋಭಾವ ತಾಳುತ್ತಿದ್ದಾರೆ. ಇಂತಹವರಿಗೆ ವರದಾನ ನೀಡಲು ಇದೀಗ ಜಪಾನಿನ ಸಂಶೋಧಕರು ಮುಂದಾಗಿದ್ದಾರೆ. ಈಗಾಗಲೇ ಪ್ರಯೋಗಾಲಯಗಳಲ್ಲಿ ಶಿಶುಗಳನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದು, 2023ರಲ್ಲಿ ಪ್ರಯೋಗಾಲಯದಲ್ಲಿ ಮಗುವನ್ನು ಅಭಿವೃದ್ಧಿ ಪಡಿಸುವ ವಿಧಾನವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಕ್ಯುಶು ವಿಶ್ವವಿದ್ಯಾಲಯದ ಸಂಶೋಧಕರು ಈ ರೀತಿಯ ಅಭಿವೃದ್ಧಿಗೆ ಮುಂದಾಗಿದ್ದಾರೆ. ವ್ಯಕ್ತಿಯ ಕೋಶಗಳಿಂದ ಪ್ರಯೋಗಾಲಯದಲ್ಲಿ ಮೊಟ್ಟೆ ಮತ್ತು ವೀರ್ಯವನ್ನು ಉತ್ಪಾದನೆ ಮಾಡುವ ಗುರಿಯನ್ನು ಇವರು ಹೊಂದಿದ್ದಾರೆ.

ಈ ಅಧ್ಯಯನವನ್ನು ಜರ್ನಲ್​ ನೇಚರ್​ನಲ್ಲಿ ಪ್ರಕಟಿಸಲಾಗಿದೆ. ಗಂಡು ಇಲಿಗಳ ಚರ್ಮದ ಕೋಶವನ್ನು ಪ್ಲುರಿಪೊಟೆಂಟ್ ಕಾಂಡಕೋಶಗಳಾಗಿ ಪರಿವರ್ತಿಸುವ ವಿಧಾನವನ್ನು ವಿವರಿಸಿದೆ, ಇದು ವಿವಿಧ ರೀತಿಯ ಜೀವಕೋಶಗಳು ಅಥವಾ ಅಂಗಾಂಶಗಳಾಗಿ ಬೆಳೆಯಬಹುದು. ಈ ಕೋಶದಲ್ಲಿ ಔಷಧಿಯೊಂದಿಗೆ ಬೆಳೆದಾಗ ಅವು ಪುರುಷ ರೊಡೆಂಟ್​ ಕಾಂಡ ಕೋಶ ಗಳನ್ನು ಹೆಣ್ಣು ಜೀವಕೋಶಗಳಾಗಿ ಪರಿವರ್ತಿಸಲು ಬೆಳೆಸಿದರು. ಈ ಮೊಟ್ಟೆಗಳನ್ನು ನವಜಾತ ಶಿಶುಗಳ ಉತ್ಪಾದನೆ ಮಾಡಿತು.

ಲೈಂಗಿಕ ಕ್ರೋಮೊಸೋಮ್​ ಅಥವಾ ಆಟೋಸೋಮಲ್​ ಅಸ್ವಸ್ಥತೆಗಳಿಂದ ಉಂಟಾಗುವ ಬಂಜೆತನ ಹೋಗಲಾಡಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಇದು ದ್ವಿಪಕ್ಷೀಯ ಸಂತಾನೋತ್ಪತ್ತಿಯ ಸಾಧ್ಯತೆಗೆ ಸಹಾಯವಾಗುತ್ತದೆ ಎಂದು ಪ್ರೊಫೆಸರ್​ ಕಟ್ಸುಹಿಕೊ ಹಯಾಶಿ ತಿಳಿಸಿದ್ದಾರೆ.

ಈ ಹಿಂದೆ ಇವರ ತಂಡ ಎರಡು ಗಂಡು ರೊಡೆಂಡ್ಸ್​ ಬಳಕೆ ಮಾಡಿ ಸಿಂಥೆಟಿಕ್​ ಸರೋಗೆಸಿ ಮಾದರಿಯ ಮೂಲಕ ನವಜಾತ ಇಲಿಗಳ ಸೃಷ್ಟಿಗೆ ಮುಂದಾಗಿತ್ತು. ಹೊಸ ಅಧ್ಯಯನದಲ್ಲಿ ಕೇವಲಲ 630 ಭ್ರೂಣಗಳಲ್ಲಿ 7 ಇಲಿ ಮಾದರಿಗಳು ಬೆಳೆದವು. ಈ ಪ್ರಯೋಗವು ಮಾನವ ಸಂತಾನೋತ್ಪತ್ತಿಯಲ್ಲಿ ಎದುರಾಗುವ ಪರಿಣಾಮಗಳನ್ನು ಎದುರಿಸಲು ಬಳಕೆ ಮಾಡಲಾಗುವುದು. ಇದು ಅತ್ಯಂತ ಬುದ್ಧಿವಂತ ತಂತ್ರವಾಗಿದೆ ಎಂದು ಡಕೋಶ ಮತ್ತು ಸಂತಾನೋತ್ಪತ್ತಿ ತಜ್ಞರಾದ ಡಯಾನಾ ಲೈರ್ಡ್ ತಿಳಿಸಿದ್ದಾರೆ.

ಕಾಂಡಕೋಶ ಮತ್ತು ಸಂತಾನೋತ್ಪತ್ತಿ ಜೀವಶಾಸ್ತ್ರ ಪ್ರಮುಖವಾಗಿದೆ. ಪ್ಲುರಿಪೊಟೆಂಟ್ ಕಾಂಡಕೋಶಗಳ ಮೂಲಕ ಮೊಟ್ಟೆಯಿಡುವ ಭ್ರೂಣಗಳನ್ನು ಹೆಣ್ಣು ಗರ್ಭಕ್ಕೆ ಸೇರಿಸಬಹುದಾಗಿದೆ.

ಮಾನವನಲ್ಲಿನ ಮೊಟ್ಟೆಯ ರೀತಿಯ ಕೋಶ ಉತ್ಪಾದನೆ ಪುನರಾವರ್ತಿಸಲು ಅರ್ಧ ದಶಕದ ಸಮಯ ಬೇಕಾಗುತ್ತದೆ. 10-20 ವರ್ಷಗಳ ಪರೀಕ್ಷೆ ಮೂಲಕ ಕೃತಕ ಸಂತಾನೋತ್ಪತ್ತಿ ವಿಧಾನವನ್ನು ಕ್ಲಿನಿಕ್‌ಗಳಲ್ಲಿ ಬಳಸಲು ಸುರಕ್ಷಿತವಾಗಿದೆ. ಇದು ಸಂಪೂರ್ಣವಾಗಿ ತಂತ್ರಜ್ಞಾನವಾಗಿದ್ದು, ಇದು ಮನುಷ್ಯರಲ್ಲಿ 10 ವರ್ಷದಲ್ಲಿ ಸಾಧ್ಯವಾಗಲಿದೆ. ಪುನರ್​ ಉತ್ಪಾದನೆಗೆ ಇದು ಲಭ್ಯವಿದೆ ಎಂಬುದು ನನಗೆ ತಿಳಿದಿಲ್ಲ. ಇದು ಕೇವಲ ತಂತ್ರಜ್ಞಾನಕ್ಕೆ ಮಾತ್ರವಲ್ಲ ಸಮಾಜಕ್ಕೂ ಪ್ರಶ್ನೆಯಾಗಿದೆ ಎಂದು ಲೇಖಕರು ತಿಳಿಸಿದ್ದಾರೆ.

ಇದನ್ನೂ ಓದಿ: ಆತಂಕ ನೀಗಿಸಲು ಜಪಾನಿನ ಜನಪ್ರಿಯ ಆಹಾರ ನ್ಯಾಟೋ ಪರಿಣಾಮಕಾರಿ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.