ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಚಿಕಿತ್ಸೆಗಳಿದ್ದರೂ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸೂಕ್ತ ಲಸಿಕೆ, ಅರಿವು ಹಾಗೂ ಆರಂಭಿಕ ಪತ್ತೆ ಕಾರ್ಯಗಳ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೇಶದಲ್ಲಿ ಐವರಲ್ಲಿ ಓರ್ವ ವ್ಯಕ್ತಿ ಕ್ಯಾನ್ಸರ್ ಹೊಂದಿದ್ದಾರೆ ಅಥವಾ ಇದರ ಪ್ರಮಾಣ ಶೇ.21ರಷ್ಟಿದೆ ಎಂದು ಇತ್ತೀಚಿಗೆ ಬಿಡುಗಡೆಯಾದ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ವರದಿ ಹೇಳುತ್ತದೆ.
ಗರ್ಭಕಂಠದ ಕ್ಯಾನ್ಸರ್ ಪ್ಯಾಪಿಕೋಮವೈರಸ್ (ಎಚ್ಪಿವಿ) ಎಂಬ ನಿರ್ದಿಷ್ಟ ತಳಿಯ ವೈರಸ್ನಿಂದ ಶೇ.95ರಷ್ಟು ಪ್ರಕರಣಗಳಲ್ಲಿ ಕಂಡುಬರುತ್ತದೆ. ಇದು ಎಚ್ಪಿವಿ ಲೈಂಗಿಕ ಚಟುವಟಿಕೆಯ ಮೂಲಕ ಹರಡುತ್ತದೆ. ಆದಾಗ್ಯೂ ಒಂದು ಸಣ್ಣ ಪ್ರಮಾಣದ ಶೇಖಡಾವಾರು ಮಾತ್ರ ಈ ಗರ್ಭಕಂಠದ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುತ್ತದೆ.
ಗರ್ಭಕಂಠದ ಕ್ಯಾನ್ಸರ್ ದೇಹದ ಕೋಶದಲ್ಲಿ ನಿಯಂತ್ರಣವಿಲ್ಲದೆ ಬೆಳೆಯುತ್ತದೆ. ಪ್ರಾಥಮಿಕವಾಗಿ ಇದು ವ್ಯಕ್ತಿಯ ಗರ್ಭಕಂಠದ ಮೇಲೆ ಪರಿಣಾಮ ಬೀರುತ್ತದೆ. ಆರಂಭಿಕ ಪತ್ತೆಯಲ್ಲಿ ಲಸಿಕೆ ಮೂಲಕ ತಡೆಯಬಹುದು ಮತ್ತು ಚಿಕಿತ್ಸೆ ನೀಡಬಹುದು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಬಗೆಯ ಕ್ಯಾನ್ಸರ್ ದೊಡ್ಡ ಸವಾಲು ಎಂದು ಪುಣೆಯ ರುಬಿ ಹಾಲ್ ಕ್ಲಿನಿಕ್ನ ಸ್ತ್ರೀರೋಗ ತಜ್ಞರಾದ ಡಾ.ಮನೀಶ್ ಮಚಾವೆ ತಿಳಿಸಿದರು.
ಅರಿವಿನ ಕೊರತೆ, ಲಸಿಕೆ ಅಪೂರ್ಣತೆ, ಪತ್ತೆಯಲ್ಲಿ ದೋಷ, ವೆಚ್ಚ, ಗುಣಮಟ್ಟದ ಚಿಕಿತ್ಸೆ, ಚಿಕ್ಕವಯಸ್ಸಿನಲ್ಲೇ ಮದುವೆ, ಅನೇಕ ಗರ್ಭಧಾರಣೆಗಳು ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳ ಏರಿಕೆಗೆ ಕಾರಣವಾಗಿವೆ.
ಚಿಕಿತ್ಸೆ: ಮಹಿಳೆಯರಿಗೆ ತಮ್ಮ 9ನೇ ವಯಸ್ಸಿನಿಂದ 22ರವರೆಗೆ ಸರಿಯಾಗಿ ಚಿಕಿತ್ಸೆ ನೀಡಿದ್ದಲ್ಲಿ ಈ ಎಚ್ಪಿವಿ ಸೋಂಕಿನಿಂದ ತಡೆಯಬಹುದು. ಚಿಕ್ಕ ವಯಸ್ಸಿನಲ್ಲೇ ಇದರ ಪತ್ತೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಸರ್.ಎಚ್.ಎನ್.ರಿಲಯನ್ಸ್ ಫೌಂಡೇಷನ್ ಹಾಸ್ಪಿಟಲ್ನ ಕನ್ಸಲ್ಟೆಂಟ್ ಮೆಡಿಕಲ್ ಆಂಕೊಲಜಿ ವಿಭಾಗದ ಡಾ.ಪ್ರೀತಂ ಕಟಾರಿಯಾ ತಿಳಿಸಿದ್ದಾರೆ.
ಪ್ಯಾಪ್ ಸ್ಮೀಯರ್ ಪರೀಕ್ಷೆಯು ಎಚ್ಪಿವಿ ಸೋಂಕು ಪತ್ತೆ ಮಾಡುತ್ತದೆ. ಮಹಿಳೆಯರು ಹೆಚ್ಚಿನ ರಕ್ತಸ್ರಾವ, ಶ್ರೋಣಿಯ ನೋವುಗಳ ಬಗ್ಗೆ ಗಮನಹರಿಸಬೇಕು ಎಂದು ಇದೇ ವೇಳೆ ಅವರು ಸಲಹೆ ನೀಡಿದ್ದಾರೆ. ನಿರಂತರ ರಕ್ತಸ್ರಾವ, ಮೆನೋಪಸ್ ಬಳಿಕ ಗರ್ಭಕಂಠದಲ್ಲಿ ಬೆಳೆಯುವ ಅಸಮಾನ್ಯ ಕೋಶ, ದೀರ್ಘದ ಋತುಚಕ್ರದ ರಸ್ತಸ್ರಾವ ಗರ್ಭಕಂಠ ಕ್ಯಾನ್ಸರ್ ಲಕ್ಷಣವಾಗಿದೆ. ಗರ್ಭಕಂಠ ಕ್ಯಾನ್ಸರ್ ಬೆನ್ನುಮೂಳೆಗೆ ಹರಡಬಹುದಾಗಿದ್ದು, ಇದು ಭಾರಿ ತೊಂದರೆಗೆ ಕಾರಣವಾಗಬಹುದು.
ಇದರ ತಡೆಗೆ ಯುವತಿಯರು 21ನೇ ವಯಸ್ಸಿನಲ್ಲಿ ಪ್ಯಾಪ್ ಸ್ಮೀಯರ್ ಪರೀಕ್ಷೆಗೆ ಒಳಗಾಗಬಹುದು. ಅಲ್ಲದೆ 9ರಿಂದ 12 ವರ್ಷದವರೆಗೆ ಲಸಿಕೆ ಪಡೆಯಬಹುದಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಲಸಿಕೆ ಪಡೆಯದವರು ತಮ್ಮ 26ನೇ ವಯಸ್ಸಿನಲ್ಲಿ ಪಡೆಯಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ದೇಶದಲ್ಲಿ 5 ವರ್ಷದ ಸ್ತನ ಕ್ಯಾನ್ಸರ್ ಉಳಿಯುವಿಕೆ ದರ ಶೇ.66: ಐಸಿಎಂಆರ್