ETV Bharat / sukhibhava

ಮಕ್ಕಳಲ್ಲಿನ ಆಟಿಸಂ ಆರಂಭಿಕ ಲಕ್ಷಣ ಮತ್ತು ಸಲಹೆಗಳ ಬಗ್ಗೆ ತಿಳಿಯಿರಿ.. - ಆಟಿಸಂ ಜಾಗೃತಿ

ಆಟಿಸಂಗೆ ಆರಂಭಿಕ ಚಿಕಿತ್ಸೆ ನೀಡಿದಲ್ಲಿ, ಮಕ್ಕಳು ತಮ್ಮ ಬೆಳವಣಿಗೆಯಲ್ಲಿ ಪ್ರಗತಿ ಸಾಧಿಸಬಹುದು. ಹೀಗಾಗಿ, ಇದರ ಆರಂಭಿಕ ಲಕ್ಷಣ ಕುರಿತು ಪೋಷಕರು ಹಾಗೂ ಶಿಕ್ಷಕರು ಅಗತ್ಯವಾಗಿ ತಿಳಿದಿರಬೇಕು.

Catch the Early Signs of Autism
Catch the Early Signs of Autism
author img

By

Published : Apr 3, 2021, 6:23 PM IST

ಹೈದರಾಬಾದ್: ಬೆಳವಣಿಗೆಯ ಅಸ್ವಸ್ಥತೆಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಸರಿಯಾದ ಚಿಕಿತ್ಸೆ ನೀಡುವುದು ಮಗುವಿನ ಭವಿಷ್ಯಕ್ಕೆ ನಿರ್ಣಾಯಕವಾಗಿದೆ. ಅನೇಕ ಬಾರಿ ಸೂಕ್ಷ್ಮ ಚಿಹ್ನೆಗಳು ಬಹಳ ಸಮಯದವರೆಗೆ ಗೋಚರಿಸದೇ ಇರಬಹದು.

'ಈಟಿವಿ ಭಾರತ' ಸುಖೀಭವ ತಂಡವು ಗೋವಾದ ಸಾಲಿಗಾವೊದ ಸೇತು ಸೆಂಟರ್ ಫಾರ್ ಚೈಲ್ಡ್ ಡೆವಲಪ್​ಮೆಂಟ್​ ಆ್ಯಂಡ್ ಫ್ಯಾಮಿಲಿ ಗೈಡೆನ್ಸ್​ನ ಶಿಶುವೈದ್ಯ ಮತ್ತು ನಿರ್ದೇಶಕಿ ಡಾ.ನಂದಿತಾ ಡಿ ಸೋಜಾ ಅವರೊಂದಿಗೆ ಸಂವಾದ ನಡೆಸಿದೆ.

ಪ್ರತಿ ವರ್ಷ ಏಪ್ರಿಲ್‌ನಲ್ಲಿ ವಿಶ್ವ ಆಟಿಸಂ ಜಾಗೃತಿ ತಿಂಗಳನ್ನು ಏಕೆ ಆಚರಿಸುತ್ತೇವೆ?

ಆಟಿಸಂ ಎಂಬುದು ಸಂವಹನ ಮತ್ತು ನಡವಳಿಕೆಯನ್ನು ನಿಯಂತ್ರಿಸುವಲ್ಲಿನ ತೊಂದರೆಗಳಿಂದ ವ್ಯಕ್ತವಾಗುತ್ತದೆ. ಪ್ರಪಂಚದಾದ್ಯಂತ ಆಟಿಸಂ ಪ್ರಮಾಣವು ಸ್ಥಿರವಾಗಿ ಏರುತ್ತಿದೆ. ಭಾರತದಲ್ಲಿ ಆಟಿಸಂ ಹೊಂದಿರುವ 2 ದಶಲಕ್ಷಕ್ಕೂ ಹೆಚ್ಚು ಜನರಿದ್ದಾರೆ ಎಂದು ಅಂದಾಜಿಸಲಾಗಿದೆ.

ಆರಂಭಿಕ ಚಿಕಿತ್ಸೆಯೊಂದಿಗೆ ಆಟಿಸಂ ಹೊಂದಿರುವ ಮಕ್ಕಳು ತಮ್ಮ ಬೆಳವಣಿಗೆಯಲ್ಲಿ ಪ್ರಗತಿ ಸಾಧಿಸಬಹುದು. ಹೀಗಾಗಿ, ಇದರ ಆರಂಭಿಕ ಚಿಹ್ನೆಗಳ ಕುರಿತು ಪೋಷಕರು, ಶಿಕ್ಷಕರು ಮತ್ತು ಮಕ್ಕಳನ್ನು ನೋಡಿಕೊಳ್ಳುವ ಎಲ್ಲರಿಗೂ ಶಿಕ್ಷಣ ನೀಡಲು ಏಪ್ರಿಲ್ ಸೂಕ್ತ ಸಮಯ.

ಆಟಿಸಂನ ಆರಂಭಿಕ ಲಕ್ಷಣಗಳು ಯಾವುವು?

ಆಟಿಸಂನ ಆರಂಭಿಕ ಚಿಹ್ನೆಗಳ ಕುರಿತು ಕುಟುಂಬಗಳು, ಶಿಕ್ಷಕರು ಮತ್ತು ವೈದ್ಯರು ತಿಳಿದಿರಬೇಕು. ಆ ಚಿಹ್ನೆಗಳನ್ನು ಇಲ್ಲಿ ನೀಡಲಾಗಿದೆ.

6 ತಿಂಗಳ ಹೊತ್ತಿಗೆ: ದೊಡ್ಡ ನಗು ಅಥವಾ ಇತರ ಸಂತೋಷದಾಯಕ ಅಭಿವ್ಯಕ್ತಿಗಳು ಇರುವುದಿಲ್ಲ.

9 ತಿಂಗಳ ಹೊತ್ತಿಗೆ: ಶಬ್ದಗಳು, ನಗು ಅಥವಾ ಇತರ ಮುಖದ ಅಭಿವ್ಯಕ್ತಿಗಳನ್ನು ಹಂಚಿಕೊಳ್ಳುವುದಿಲ್ಲ.

12 ತಿಂಗಳ ಹೊತ್ತಿಗೆ: ಹೆಸರಿಗೆ ಪ್ರತಿಕ್ರಿಯೆಯ ಕೊರತೆ.

12 ತಿಂಗಳ ಹೊತ್ತಿಗೆ: ತೊದಲು ನುಡಿ ಇರುವುದಿಲ್ಲ.

12 ತಿಂಗಳ ಹೊತ್ತಿಗೆ: ತೋರಿಸುವುದು, ತಲುಪುವುದು ಮುಂತಾದ ಯಾವುದೇ ಸನ್ನೆಗಳು ಇಲ್ಲ.

16 ತಿಂಗಳ ಹೊತ್ತಿಗೆ: ಮಾತನಾಡಲು ಪದಗಳಿಲ್ಲ.

24 ತಿಂಗಳ ಹೊತ್ತಿಗೆ: ಅನುಕರಿಸುವ ಅಥವಾ ಪುನರಾವರ್ತಿಸುವುದನ್ನು ಒಳಗೊಂಡಿರದ ಅರ್ಥಪೂರ್ಣವಾದ ಎರಡು ಪದಗಳ ನುಡಿಗಟ್ಟುಗಳಿಲ್ಲ.

ಮಗುವಿನ ಬೆಳವಣಿಗೆಯನ್ನು ಹೇಗೆ ಮೇಲ್ವಿಚಾರಣೆ ಮಾಡಬಹುದು?

ಪೋಷಕರು ತಮ್ಮ ಮಗುವಿನ ಬೆಳವಣಿಗೆಯ ಮೈಲಿಗಲ್ಲುಗಳನ್ನು ಪತ್ತೆಹಚ್ಚಬೇಕು ಮತ್ತು ಅವರು ಮಕ್ಕಳ ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡಬೇಕು. ಆಟಿಸಂ ಸ್ಕ್ರೀನಿಂಗ್ 18 ತಿಂಗಳ ಮತ್ತು 24 ತಿಂಗಳುಗಳಲ್ಲಿ ಮಕ್ಕಳ ಆರೈಕೆಯ ಅತ್ಯಗತ್ಯ ಭಾಗವಾಗಿದೆ.

ಮಗು ಅಂಬೆಗಾಲಿಡುವ ಹಂತದಿಂದ ಆಟಿಸಂ ಲಕ್ಷಣಗಳು ಗೋಚರಿಸುತ್ತವೆ. ಮೇಲೆ ತಿಳಿಸಿದ ಯಾವುದೇ ಲಕ್ಷಣ ಕಂಡುಬಂದಲ್ಲಿ, ತಕ್ಷಣ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಲಕ್ಷಣಗಳ ಆಧಾರದ ಮೇಲೆ ಮಗುವನ್ನು ಕಡಿಮೆ ಅಪಾಯ, ಮಧ್ಯಮ ಅಪಾಯ ಮತ್ತು ಹೆಚ್ಚಿನ ಅಪಾಯ ಎಂದು ವರ್ಗೀಕರಿಸಲಾಗಿದೆ.

ಮಧ್ಯಮ ಅಥವಾ ಹೆಚ್ಚಿನ ಅಪಾಯದಲ್ಲಿರುವ ಎಲ್ಲಾ ಮಕ್ಕಳು ಸಾಧ್ಯವಾದಷ್ಟು ಬೇಗ ಚಿಕಿತ್ಸೆಗೆ ಒಳಗಾಗಬೇಕು. ಆಟಿಸಂ ಅನುಮಾನಾಸ್ಪದವಾಗಿದ್ದರೆ, ಕಾಯೋಣ, ಮುಂದೆ ನೋಡೋಣ ಎಂದುಕೊಳ್ಳದೇ, ತುರ್ತಾಗಿ ವೈದ್ಯರ ಸಲಹೆ ಪಡೆಯಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.