ETV Bharat / sukhibhava

ಕ್ಯಾರೆಟ್​​, ಪಾಲಕ್​, ಮಾವಿನ ಹಣ್ಣು, ಪಪ್ಪಾಯ ತಿನ್ನೋದರಿಂದ ಆಗುವ ಲಾಭಗಳೇನು? ಹೃದಯ ಆರೋಗ್ಯಕ್ಕೆ ಇವು ಬೇಕೇಬೇಕು!

author img

By

Published : Jun 24, 2023, 10:53 AM IST

ಹಣ್ಣು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಆಹಾರವು ಕ್ಯಾರೋಟಿನ್​ಗಳಲ್ಲಿ ಹೃದಯರಕ್ತನಾಳದ ಕಾಯಿಲೆಗಳಿಂದ ಆಗುವ ಅಪಾಯ ಕಡಿಮೆ ಮಾಡುತ್ತದೆ.

Carrot, Spinach, Mango, Papaya are good for heart health

ಬೆಂಗಳೂರು: ಕ್ಯಾರೋಟಿನ್​ ಸಮೃದ್ಧವಾಗಿರುವ ಹಳದಿ, ಕಿತ್ತಳೆ ಮತ್ತು ಹಸಿರು ಹಣ್ಣು ಮತ್ತು ತರಕಾರಿಗಳಲ್ಲಿ ಕಂಡು ಬರುವ ಜೈವಿಕ ಸಕ್ರಿಯ ಸಂಯುಕ್ತಗಳು ಹೃದಯದ ಆರೋಗ್ಯಕ್ಕೆ ಹೆಚ್ಚಿನ ಲಾಭ ನೀಡುತ್ತದೆ. ಅವುಗಳೆಂದರೆ ಕ್ಯಾರೆಟ್​, ಲೆಟ್ಯೂಸ್​, ಟೊಮೇಟೊ, ಬ್ರಾಕೋಲಿ, ಬೆಲ್​ ಪೆಪ್ಪರ್​, ಮಾವಿನ ಹಣ್ಣು, ಪಪ್ಪಾಯ, ಏಪ್ರಿಕಾಟ್​ ಮುಂತಾದವು ಆಗಿದೆ. ಇವು ಅಪಧಮನಿಯಲ್ಲಿನ ಕೊಬ್ಬನ್ನು ಕಡಿಮೆ ಮಾಡುವ ಜೊತೆಗೆ ಬ್ಲಾಕೇಜ್​ ಅನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ರಕ್ತದಲ್ಲಿನ ಹೆಚ್ಚಿನ ಮಟ್ಟದ ಕ್ಯಾರೋಟಿನ್‌ಗಳು ಅಪಧಮನಿಗಳಲ್ಲಿನ ಕಡಿಮೆ ಮಟ್ಟದ ಕೊಬ್ಬಿನೊಂದಿಗೆ ಸಂಬಂಧ ಹೊಂದಿದೆ. ಇದು ಹೃದಯರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಪಧಮನಿ ಕಾಠಿಣ್ಯ ರಕ್ತನಾಳಗಳ ಒಳಗಿನ ಗೋಡೆಗಳ ಮೇಲೆ ಕೊಬ್ಬು, ಸಾಮಾನ್ಯವಾಗಿ ಎಲ್ಡಿಎಲ್ ಅಥವಾ ಕೆಟ್ಟ ರೀತಿಯ ಕೊಲೆಸ್ಟ್ರಾಲ್ ಉತ್ಪತ್ತಿಗೆ ಕಾರಣವಾಗುತ್ತದೆ. ಅಪಧಮನಿಕಾಠಿಣ್ಯದ ಪ್ಲೇಕ್‌ಗಳ ರೂಪದಲ್ಲಿ ಸಂಗ್ರಹವಾಗುವ ಕೊಬ್ಬು ರಕ್ತ ಪರಿಚಲನೆಗೆ ಅಡ್ಡಿಯಾಗುತ್ತದೆ. ಅಲ್ಲದೇ, ಈ ಫ್ಲೇಕ್​ಗಳು ಒಡೆದು ಹೋಗಬಹುದು.

ಇದು ರಕ್ತದ ಹರಿವು ಹೆಪ್ಪುಗಟ್ಟುವಂತೆ ಮಾಡುತ್ತದೆ. ಇದರಿಂದ ಹೃದಯ ಸ್ನಾಯುವಿನ ಊತದಿಂದ ಹೃದಯಾಘಾತ ಸಂಭವಿಸಬಹುದು. ರಕ್ತವು ಹೃದಯ ತಲುಪದಿದ್ದಾಗ ಅಥವಾ ಮಿದುಳಿಗೆ ರಕ್ತದ ಸಂಚಾರ ಆಗದಿದ್ದಾಗ ವ್ಯಕ್ತಿ ಇದು ಪಾರ್ಶ್ವವಾಯುಗೆ ಕಾರಣವಾಗುತ್ತದೆ. ಈ ಕುರಿತು ಅಧ್ಯಯನಕ್ಕಾಗಿ 50ರಿಂದ 70 ವರ್ಷ ವಯೋಮಾನದ 200 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಕುರಿತು ಅಧ್ಯಯನವನ್ನು ಕ್ಲಿನಿಕಲ್​ ನ್ಯೂಟ್ರಿಷಿಯನ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಈ ಅಧ್ಯಯನದಲ್ಲಿ ಭಾಗಿಯಾದ ಸ್ವಯಂ ಭಾಗಿದಾರರನ್ನು ಎರಡು ಪ್ಯಾರಾಮೀಟರ್​ನಲ್ಲಿ ವಿಶ್ಲೇಷಣೆ ನಡೆಸಲಾಗಿದೆ. ಮೊದಲನೇ ಭಾಗದಲ್ಲಿ ರಕ್ತದ ಕ್ಯಾರೆಟಿನ್ ಸಾಂದ್ರತೆ ಮತ್ತು ಅಲ್ಟ್ರಾಸೌಂಡ್​ ಇಮೇಜ್​ಗಳ ಮೂಲಕ ಬಗ್ಗೆ ಗಮನ ಕೇಂದ್ರೀಕರಿಸಲಾಗಿದೆ. ಎರಡನೆಯದರಲ್ಲಿ ಅಪಧಮನಿಕಾಠಿಣ್ಯದ ಪ್ಲೇಕ್​​ಗಳ ಇರುವಿಕೆ ಗಮನಿಸಲಾಗಿದೆ.

ರಕ್ತದಲ್ಲಿನ ಕ್ಯಾರೋಟಿನ್‌ಗಳ ಸಾಂದ್ರತೆಯು ಹೆಚ್ಚು, ವಿಶೇಷವಾಗಿ ಮಹಿಳೆಯರಲ್ಲಿ ಅಪಧಮನಿಕಾಠಿಣ್ಯದ ಹೊರೆ ಕಡಿಮೆಯಾಗುತ್ತದೆ ಎಂದು ಅಧ್ಯಯನಕಾರ ಗೆಮ್ಮಾ ಚಿವಾ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಣ್ಣು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಆಹಾರವು ಕ್ಯಾರೋಟಿನ್​ಗಳಲ್ಲಿ ಹೃದಯರಕ್ತನಾಳದ ಕಾಯಿಲೆಗಳಿಂದ ಆಗುವ ಅಪಾಯ ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಇನ್ನು ಯಾವ ಹಣ್ಣುಗಳು ಹೇಗೆ ಪ್ರಯೋಜನ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.

ಕ್ಯಾರೆಟ್​​: ಕ್ಯಾರೆಟ್​ನಲ್ಲಿರುವ ಎಲ್ಲ ಆ್ಯಂಟಿ ಆಕ್ಸಿಡಂಟ್​ಗಳು ಹೃದಯಕ್ಕೆ ಒಳ್ಳೆಯದು. ಕ್ಯಾರೆಟ್​ನಲ್ಲಿರುವ ಪೋಟ್ಯಾಷಿಯಂ ರಕ್ತದದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಇದರಲ್ಲಿನ ಫೈಬರ್​ ತೂಕ ನಿರ್ವಹಣೆ ಮಾಡಿ, ಹೃದಯ ಸಮಸ್ಯೆ ಅಪಾಯ ಕಡಿಮೆ ಮಾಡುತ್ತದೆ.

ಮಾವಿನ ಹಣ್ಣು: ಮಾವಿನ ಹಣ್ಣಿನಲ್ಲಿ ಪೋಷಕಾಂಶಗಳು, ಮೆಗ್ನಿಶಿಯಂ, ಪೋಟಾಶಿಯಂ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ರಕ್ತದ ಪರಿಚಲನೆಗೆ ಇದು ಸಹಾಯಕವಾಗಿದೆ.

ಪಪ್ಪಾಯ: ಪಪ್ಪಾಯದಲ್ಲಿ ವಿಟಮಿನ್​ ಎ, ವಿಟಮಿನ್​ ಸಿ ಮತ್ತು ವಿಟಮಿನ್​ ಇ ಇದ್ದು ಹೆಚ್ಚಿನ ಮಟ್ಟದ ಆ್ಯಂಟಿ ಆಕ್ಸಿಡೆಂಟ್​ಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಇವು ಹೆಚ್ಚಿನ ಅಪಾಯಗಳ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ತಿನ್ನುವ ಪ್ರೋಟಿನ್​ ಬೆಸ್ಟೇ​ ಅಥವಾ ಕುಡಿಯುವುದಾ; ತಜ್ಞರು ಹೇಳುವುದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.