ETV Bharat / sukhibhava

ಕೇವಲ ಜಿಮ್‌ಗೆ ಸೀಮಿತವಾಗಿರದ ಕಾರ್ಡಿಯೋ ವ್ಯಾಯಾಮಗಳು!

author img

By

Published : Mar 22, 2022, 4:05 PM IST

ಯೋಗ, ಏರೋಬಿಕ್ಸ್, ಈಜು ಅಥವಾ ಸರಳವಾದ ನಡಿಗೆ ಈ ರೀತಿಯ ವ್ಯಾಯಾಮಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿವೆ. ನಾವು ಕಾರ್ಡಿಯೋ ವ್ಯಾಯಾಮಗಳ ಬಗ್ಗೆ ಮಾತನಾಡುವುದಾದ್ರೆ, ಅವು ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿವೆ..

ಕಾರ್ಡಿಯೋ ವ್ಯಾಯಾಮ
ಕಾರ್ಡಿಯೋ ವ್ಯಾಯಾಮ

ಹೃದಯದ ಆರೋಗ್ಯಕ್ಕೆ ಕಾರ್ಡಿಯೊ (ಏರೋಬಿಕ್ಸ್‌) ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಹೃದಯಾಘಾತದಂತಹ ಕಾರ್ಡಿಯಾಕ್ ಘಟನೆಯ ಬಳಿಕ ಇಲ್ಲವೇ ನಿಮಗೆ ಹೃದ್ರೋಗ ಇದ್ದರೆ, ವ್ಯಾಯಾಮ ಮಾಡಲು ಹೆದರಿಕೆ ಆಗುವುದು ಸಹಜ. ಆದರೆ, ಹೃದ್ರೋಗಿಗಳು ಭಾರ ಎತ್ತುವ ವ್ಯಾಯಾಮದಿಂದ ಪ್ರಯೋಜನಗಳನ್ನು ಪಡೆಯಬಹುದು ಎಂದು ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ.

ಅನೇಕ ಜನರು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಮಹಿಳೆಯರು ವ್ಯಾಯಾಮ ಮಾಡಲು ಸ್ವಲ್ಪ ಸಮಯವನ್ನೂ ಮೀಸಲಿಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ, ಕೆಲವು ಮೂಲಭೂತ ಕಾರ್ಡಿಯೋ ವ್ಯಾಯಾಮಗಳು ಉತ್ತಮ ಸಹಾಯ ಮಾಡಬಹುದು.

ಕಾರ್ಡಿಯೋ ವ್ಯಾಯಾಮ ಎಂದರೇನು? : ಈ ವ್ಯಾಯಾಮದ ಪ್ರಯೋಜನಗಳ ಬಗ್ಗೆ ಮಾತನಾಡುವ ಮೊದಲು, ಕಾರ್ಡಿಯೋ ವ್ಯಾಯಾಮಗಳು ಏನೆಂದು ತಿಳಿಯುವುದು ಮುಖ್ಯ. ಹೃದಯದ ಬಡಿತ ಮತ್ತು ಉಸಿರಾಟದ ವೇಗವನ್ನು ಹೆಚ್ಚಿಸುವ ವ್ಯಾಯಾಮಗಳು ಕಾರ್ಡಿಯೋ ವ್ಯಾಯಾಮ ಎಂದು ವರ್ಗೀಕರಿಸಲಾಗಿದೆ. ಈ ವ್ಯಾಯಾಮಗಳು ಹೃದಯ ಮತ್ತು ಒಟ್ಟಾರೆ ಎಲ್ಲಾ ರೀತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ವ್ಯಾಯಾಮ ಮಾಡಲು ಜಿಮ್‌ಗೆ ಸೇರುವ ಅಗತ್ಯವಿಲ್ಲ. ಏಕೆಂದರೆ, ಕೆಲವು ಕಾರ್ಡಿಯೋ ವ್ಯಾಯಾಮಗಳನ್ನು ಮನೆಯಲ್ಲಿ ಅಥವಾ ಹೊರಾಂಗಣದಲ್ಲಿ ಮಾಡಬಹುದಾಗಿದೆ. ಅವುಗಳೆಂದರೆ ಸ್ಕಿಪ್ಪಿಂಗ್, ಸೈಕ್ಲಿಂಗ್, ಓಟ ಇತ್ಯಾದಿ.

ಸರಳ ಕಾರ್ಡಿಯೋ ವ್ಯಾಯಾಮಗಳು :

ಈಜು : ಇದನ್ನು ಸಹ ಒಂದು ಉತ್ತಮ ಕಾರ್ಡಿಯೋ ವ್ಯಾಯಾಮ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಇದು ಕ್ಯಾಲೋರಿಗಳನ್ನು ತ್ವರಿತವಾಗಿ ಸುಡುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ಆಕಾರದಲ್ಲಿಡುತ್ತದೆ. ನಿಯಮಿತವಾಗಿ ಅಥವಾ ವಾರಕ್ಕೊಮ್ಮೆ ಎರಡು ಬಾರಿ ಈಜುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅಲ್ಲದೆ ತೂಕ ಇಳಿಸಿಕೊಳ್ಳಲು ಇದು ತುಂಬಾ ಒಳ್ಳೆಯ ಮಾರ್ಗವಾಗಿದೆ.

ಓಟ : ಓಟವನ್ನು ಅತ್ಯಂತ ಪ್ರಮುಖವಾದ ಕಾರ್ಡಿಯೋ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಇದು ತೂಕವನ್ನು ಕಡಿಮೆ ಮಾಡಲು, ಸ್ನಾಯುಗಳನ್ನು ಬಲಪಡಿಸಲು ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಕೊಬ್ಬು ಮತ್ತು ಕ್ಯಾಲೋರಿಗಳನ್ನು ಸುಡುತ್ತದೆ.

ಸೈಕ್ಲಿಂಗ್ : ಸೈಕ್ಲಿಂಗ್ ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ನೀವು ಕ್ರೀಡೆಯ ಮೂಲಕ ತೂಕ ಇಳಿಸಿಕೊಳ್ಳಲು ಬಯಸಿದರೆ, ಸೈಕ್ಲಿಂಗ್ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೆ, ನೀವು ಹೊರಾಂಗಣದಲ್ಲಿ ಸೈಕಲ್ ಮಾಡಲು ಸಾಧ್ಯವಾಗದಿದ್ದರೆ, ಜಿಮ್‌ನಲ್ಲಿ ಅಥವಾ ಮನೆಯಲ್ಲಿ ಯಂತ್ರದಲ್ಲಿ ಸೈಕ್ಲಿಂಗ್ ಮಾಡುವುದು ಸಹ ಸಹಾಯಕವಾಗಿದೆ.

ಇದನ್ನೂ ಓದಿ: ತೂಕ ಕಡಿಮೆ ಮಾಡಲು ಈ ಮೂರು ಡಯೆಟ್‌ಗಳು ಮಹಿಳೆಯರಿಗೆ ಪ್ರಯೋಜನವಿಲ್ಲ..!

ಸ್ಕಿಪ್ಪಿಂಗ್ : ಹಗ್ಗವನ್ನು ಜಂಪಿಂಗ್ ಮಾಡುವುದರಿಂದ ಸ್ನಾಯುಗಳು ಬಲಗೊಳ್ಳಲು ಮತ್ತು ಹೃದಯ ಹಾಗೂ ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಮೆಟ್ಟಿಲುಗಳನ್ನು ಹತ್ತುವುದು : ತೂಕವನ್ನು ಕಳೆದುಕೊಳ್ಳಲು ಸುಲಭವಾದ ಮಾರ್ಗವೆಂದರೆ ಮೆಟ್ಟಿಲುಗಳನ್ನು ಹತ್ತುವುದು. ಮೆಟ್ಟಿಲುಗಳನ್ನು ಹತ್ತುವುದು ಮತ್ತು ಇಳಿಯುವುದು ದೇಹದಲ್ಲಿ ಬಹಳಷ್ಟು ಕ್ಯಾಲೋರಿಗಳನ್ನು ದಹಿಸಲು ಸಹಾಯ ಮಾಡುತ್ತದೆ. ಒಂದು ದಿನದಲ್ಲಿ ನೀವು ಸುಮಾರು 600-700 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಇದು ದೇಹದ ಕೆಳಭಾಗವನ್ನು ಬಲಪಡಿಸುತ್ತದೆ ಮತ್ತು ತ್ವರಿತವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪ್ರಯೋಜನಗಳೇನು ?

  • ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
  • ಕಾರ್ಡಿಯೋ ವ್ಯಾಯಾಮಗಳು ಕ್ಯಾಲೋರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅಲ್ಲದೇ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
  • ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
  • ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಕಾರ್ಡಿಯೋ ವ್ಯಾಯಾಮಗಳು ನಮ್ಮ ಮನಸ್ಸು ಮತ್ತು ದೇಹ ಎರಡರ ಮೇಲೂ ಕೆಲಸ ಮಾಡುತ್ತವೆ. ಇದರಿಂದ ನಮ್ಮ ಸ್ಮರಣಾ ಶಕ್ತಿಯನ್ನು ಸುಧಾರಿಸಲು ಸಹಾಯವಾಗುತ್ತದೆ.
  • ಈ ವ್ಯಾಯಾಮಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ.
  • ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.
  • ಚರ್ಮದ ರಚನೆಯನ್ನು ಸುಧಾರಿಸಿ ಹೊಳೆಯುವಂತೆ ಮಾಡುತ್ತದೆ.
  • ಕಾರ್ಡಿಯೋ ನಮ್ಮ ದೇಹದಲ್ಲಿ ಸಂತೋಷದ ಹಾರ್ಮೋನ್‌ಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಕಾರ್ಡಿಯೋ ವ್ಯಾಯಾಮಗಳ ನಿಯಮಿತ ಅಭ್ಯಾಸವು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
  • ಕಾರ್ಡಿಯೋ ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ, ಅದರ ನಿಯಮಿತ ಅಭ್ಯಾಸವು ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.