ನವದೆಹಲಿ: 2023ರಲ್ಲಿ ಭಾರತದಲ್ಲಿ ಇಂಗಾಲದ ಹೊರಸೂಸುವಿಕೆ ಪ್ರಮಾಣ ಶೇ 8.2ರಷ್ಟು ಹೆಚ್ಚಾಗಲಿದ್ದು, ಚೀನಾದಲ್ಲಿ ಶೇ 4ರಷ್ಟು ಏರಿಕೆ ಕಾಣಲಿದೆ ಎಂದು ಅಂತಾರಾಷ್ಟ್ರೀಯ ಸಂಶೋಧನೆ ತಿಳಿಸಿದೆ. ಕಲ್ಲಿದ್ದಲು, ತೈಲ ಮತ್ತು ಗ್ಯಾಸ್ನಿಂದ ಕ್ರಮವಾಗಿ 1.1, 1.5 ಮತ್ತು 0.5ರಷ್ಟು ಜಾಗತಿಕ ಹೊರಸೂಸುವಿಕೆ ಪ್ರಮಾಣ ಹೆಚ್ಚಾಗಲಿದೆ. ಇದೇ ವೇಳೆ, ಇಯು ಮತ್ತು ಅಮೆರಿಕದಲ್ಲಿ 7.4 ಮತ್ತು 3ರಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇಂಗ್ಲೆಂಡ್ನ ಎಕ್ಸಿಟರ್ ಯುನಿವರ್ಸಿಟಿ ಮತ್ತು ಜಾಗತಿಕ 90 ಇತರ ಸಂಸ್ಥೆಗಳು ಈ ಅಧ್ಯಯನ ನಡೆಸಿದೆ ಎಂದು ವರದಿ ತಿಳಿಸಿದೆ.
ಗ್ಲೋಬಲ್ ಕಾರ್ಬನ್ ಬಡ್ಜೆಟ್ ವರದಿ ತಿಳಿಸುವಂತೆ 120ಕ್ಕೂ ಹೆಚ್ಚು ವಿಜ್ಞಾನಿಗಳು ವಾರ್ಷಿಕವಾಗಿ ತಮ್ಮ ವಿಶ್ಲೇಷಣಾ ಮಾಹಿತಿ ನೀಡಿದ್ದು, ಸ್ಥಾಪಿತ ವಿಧಾನಗಳನ್ನು ಆಧರಿಸಿ ಸಂಶೋಧನೆ ನಡೆಸಲಾಗಿದೆ ಎಂದು ಸಂಶೋಧಕರು ಹೇಳಿದರು. ವರದಿಯಲ್ಲಿ ತಿಳಿಸಿದಂತೆ ಇಂಗಾಲದ ಡೈ ಆಕ್ಸೆಡ್ (ಸಿಒ2) ಹೊರಸೂಸುವಿಕೆ ಪಳೆಯುಳಿಕೆ ಇಂಧನ ಮತ್ತು ಭೂಮಿ ಬಳಕೆ ಬದಲಾವಣೆಯಿಂದ ಹೆಚ್ಚಿದ್ದು, 2023ರಲ್ಲಿ 20.9 ಮಿಲಿಯನ್ ಟನ್ ಹೆಚ್ಚಾಗಿದೆ. ಇದರಲ್ಲಿ 36.8 ಬಿಲಿಯನ್ ಟನ್ ಪಳೆಯುಳಿಕೆ ಇಂಧನವಾಗಿದೆ.
ವಾಯುಮಂಡಲದ ಸಿಒ2 ಮಟ್ಟವೂ 2023ರಲ್ಲಿ ಪ್ರತಿ ಮಿಲಿಯನ್‌ಗೆ 419.3 ಭಾಗಗಳಾಗಿದೆ. ಶೇ 50ರಷ್ಟು ಪೂರ್ವ ಕೈಗಾರಿಕ ಮಟ್ಟದ್ದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಕುರಿತು ವರದಿಯನ್ನು ಜರ್ನಲ್ ಅರ್ಥ್ ಸಿಸ್ಟಂ ಸೈನ್ಸ್ ಡೇಟಾದಲ್ಲಿ ಪ್ರಕಟಿಸಲಾಗಿದೆ. ತಂತ್ರಜ್ಞಾನ - ಆಧಾರಿತ ಇಂಗಾಲದ ಡೈಆಕ್ಸೈಡ್ ತೆಗೆಯುವಿಕೆಯ ಪ್ರಸ್ತುತ ಮಟ್ಟಗಳು, ಮರು ಅರಣ್ಯೀಕರಣದಂತಹ ಪ್ರಕೃತಿ ಆಧಾರಿತ ವಿಧಾನಗಳನ್ನು ಹೊರತುಪಡಿಸಿ, ಸುಮಾರು 0.01 ಮಿಲಿಯನ್ ಟನ್ಗಳಷ್ಟು ಕಾರ್ಬನ್ ಡೈ ಆಕ್ಸೆಡ್ ಪ್ರಸ್ತತ ಪಳೆಯುಳಿಕೆ ಇಂಗಾಲದ ಡೈ ಆಕ್ಎಡ್ ಹೊರಸೂಸುವಿಕೆಗಿಂತ ಮಿಲಿಯನ್ ಪಟ್ಟು ಚಿಕ್ಕದಾಗಿದೆ.
ಇಂಗಾಲದ ಡೈ ಆಕ್ಸೆಡ್ ಹೊರಸೂಸುವಿಕೆಯಲ್ಲಿ ಅರ್ಧದಷ್ಟು ಭೂಮಿ ಮತ್ತು ಸಾಗರ ಮುಳುಗುವಿಕೆಯ್ಲಿ ಹೀರಿದರೆ, ಉಳಿದವರು ವಾತಾವರಣದಲ್ಲಿ ಉಳಿದು ಹವಾಮಾನ ಬದಲಾವಣೆ ಉಂಟು ಮಾಡುತ್ತದೆ.
ಪ್ರಸ್ತುತ ಹೊರಸೂಸುವಿಕೆಗಳು ಮುಂದುವರಿದರೆ, ಸುಮಾರು ಏಳು ವರ್ಷಗಳಲ್ಲಿ ಸ್ಥಿರವಾಗಿ 1.5 ಡಿಗ್ರಿ ಸೆಲ್ಸಿಯಸ್ ಅನ್ನು ಮೀರುವ ಸಾಧ್ಯತೆಯ ಶೇ 50ರಷ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಸಿಒಪಿ28 ಹವಾಮಾನ ಶೃಂಗಸಭೆಯಲ್ಲಿ 2 ಡಿಗ್ರಿ ಸೆಲ್ಸಿಯಸ್ ಗುರಿಯನ್ನು ಜೀವಂತವಾಗಿರಿಸಲು ಪಳೆಯುಳಿಕೆ ಇಂಧನ ಹೊರಸೂಸುವಿಕೆ ಕಡಿತ ಮಾಡಬೇಕಿದೆ ಎಂದು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ: ಈ ವರ್ಷದ ಮೊದಲ 9 ತಿಂಗಳು ಪ್ರತಿನಿತ್ಯ ಹವಾಮಾನ ವೈಪರೀತ್ಯ ಅನುಭವಿಸಿದ ಭಾರತ!