ನ್ಯೂಯಾರ್ಕ್: ಪ್ರಸವ ಪೂರ್ವ ಮಲ್ಟಿವಿಟಮಿನ್‌ಗೆ ಹೋಲಿಸಿದರೆ ಗರ್ಭಾವಸ್ಥೆ ಸಮಯದಲ್ಲಿ ತೆಗೆದುಕೊಳ್ಳುವ ವಿಟಮಿನ್ ಡಿ ಪೂರಕಗಳು ಮಗುವಿನಲ್ಲಿ ಅಸ್ತಮಾ ಮತ್ತು ವೀಜಿಂಗ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ವಿಟಮಿನ್ ಡಿಯು ನೇರವಾಗಿ ಸೂರ್ಯನಿಂದ ಸಿಗುವ ಪೋಷಕಾಂಶವಾಗಿದ್ದು, ಆಹಾರ ಪದ್ದತಿ ಅಥವಾ ಪೂರಕಗಳಿಂದಲೂ ಪಡೆಯಬಹುದಾಗಿದೆ. ಮೂಳೆಗಳ ಆರೋಗ್ಯಕ್ಕೆ ಇದು ಅಗತ್ಯವಾಗಿದೆ. ಆದರೆ, ಇದು ಸ್ವಯಂ ನಿರೋಧಕ ಮತ್ತು ಇತರ ಅನಾರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.
2016ರ ಅಧ್ಯಯನ ಆಧರಿಸಿ ಈ ಅಧ್ಯಯನ ವಿಶ್ಲೇಷಿಸಲಾಗಿದ್ದು, ಮಕ್ಕಳಲ್ಲಿ ವಿಟಮಿನ್ ಡಿ ಕೊರತೆ ಅಸ್ತಮಾ ಮತ್ತು ವಿಜೀಂಗ್ನೊಂದಿಗೆ ಸಂಬಂಧ ಹೊಂದಿದ್ದು, ಮಕ್ಕಳಲ್ಲಿ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ. ಶೇ 40 ರಷ್ಟು ಮಕ್ಕಳು ತಮ್ಮ ಮೂರನೇ ವಯಸ್ಸಿಗೆ ವಿಜೀಂಗ್ಗೆ ಒಳಗಾಗುತ್ತಿದ್ದಾರೆ. ಆರನೇ ವಯಸ್ಸಿನಲ್ಲಿ ಶೇ 20ರಷ್ಟ ಮಕ್ಕಳಲ್ಲಿ ಅಸ್ತಮಾ ಪ್ರಕರಣಗಳು ಕಂಡು ಬರುತ್ತಿದೆ.
ವಿಟಮಿನ್ ಕೊರತೆ: ವಿಟಮಿನ್ ಡಿ ಕೊರತೆ ಸಾಮಾನ್ಯವಾಗಿದೆ. ವಿಶೇಷವಾಗಿ ಗರ್ಭಿಣಿಯರು ವಿಟಮಿನ್ ಡಿ ಪೂರಕವನ್ನು ತೆಗೆದುಕೊಳ್ಳದೇ ಇದರ ಕೊರತೆ ಕಾಡುತ್ತದೆ ಎಂದು ಬ್ರಿಗ್ಹ್ಯಾಮ್ ವುಮೆನ್ಸ್ ಆಸ್ಪತ್ರೆಯ ಸ್ಕಾಟ್ ಟಿ ವೆಸ್ ಮತ್ತು ಹಾರ್ವಡ್ ಮೆಡಿಕಲ್ ಸ್ಕೂಲ್ನ ಪ್ರೊಫೆಸರ್ ತಿಳಿಸಿದ್ದಾರೆ.
ನಮ್ಮ ಅಧ್ಯಯನದ ಫಲಿತಾಂಶದ ಆಧಾರದ ಮೇಲೆ ನಾವು ಎಲ್ಲ ಗರ್ಭಿಣಿಯರಿಗೆ ನಿತ್ಯ ಕಡೆ ಪಕ್ಷ 4400 ಐಯು ವಿಟಮಿನ್ ಡಿ3 ಅನ್ನು ತಮ್ಮ ಸಂಪೂರ್ಣ ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳುವಂತೆ ಶಿಫಾರಸು ಮಾಡುತ್ತೇವೆ ಎಂದಿದ್ದಾರೆ.
ಈ ಅಧ್ಯಯನವನ್ನು ಜರ್ನಲ್ ಆಫ್ ಅಲರ್ಜಿ ಅಂಡ್ ಕ್ಲಿನಿಕಲ್ ಇಮ್ಯೂನೊಲಾಜಿಯಲ್ಲಿ ಪ್ರಕಟಿಸಲಾಗಿದೆ. ಈ ಹಿಂದಿನ ಅಧ್ಯಯನಗಳನ್ನು ಸಾರಾಂಶಗೊಳಿಸಿದೆ. ಜೊತೆಗೆ ವಿಟಮಿನ್ ಡಿ ಮತ್ತು ಅಸ್ತಮಾದ ನಡುವಿನ ಸಾಂದರ್ಭಿಕ ಸಂಬಂಧದ ಸಾಧ್ಯತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಅನುಸರಣಾ ಅಧ್ಯಯನವನ್ನು ಯೋಜಿಸಲು ಹಲವಾರು ಪರಿಗಣನೆಗಳನ್ನು ಸೂಚಿಸುವ ತಳಿಯ ಸಂಶೋಧನೆಗಳನ್ನು ಇದು ಒಳಗೊಂಡಿದೆ.
ಮುಂದಿನ ಕ್ಲಿನಿಕಲ್ ಟ್ರಯಲ್ಗಳಲ್ಲಿ ಗರ್ಭಾವಸ್ಥೆ ಆರಂಭದಲ್ಲೇ ವಿಟಮಿನ್ ಡಿಯು 6000 ಐಯು ಪೂರಕ ಆರಂಭಿಸುವಂತೆ ಶಿಫಾರಸು ಮಾಡುತ್ತೇವೆ. ಈ ರೀತಿಯ ಅಧ್ಯಯನಗಳು ವಿಟಮಿನ್ ಡಿಯ ಪೂರಕಗಳು ಗರ್ಭಾವಸ್ಥೆ ಮೇಲೆ ಬೀರುವ ಸಾರ್ಮರ್ಥ್ಯದ ಪರಿಣಾಮ ಮತ್ತು ಅಸ್ತಮಾದ ಆರಂಭಿಕ ಜೀವನದ ಬಗ್ಗೆ ತಿಳಿಯಲು ಸಹಾಯಕವಾಗಿದೆ ಎಂದು ಅಧ್ಯಯನದ ಲೇಖಕರು ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: ಊರಿಯುತದ ವಿರುದ್ಧ ಹೋರಾಡಬಲ್ಲದು ಬ್ರೊಕೊಲಿ; ಅಧ್ಯಯನದಲ್ಲಿ ಬಹಿರಂಗ