ಶರೀರದ ಮೇಲಾಗುವ ದದ್ದುಗಳು, ಶರೀರ ದ್ರವಗಳು (ದ್ರವ, ಕೀವು, ಅಥವಾ ಗಾಯಗಳಿಂದ ಸೋರುವ ರಕ್ತ), ಮತ್ತು ಮಾಗುತ್ತಿರುವ ಗಾಯಗಳು ಬಹುತೇಕ ಸಾಂಕ್ರಾಮಿಕವಾಗಿರುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ವೈರಸ್ಗಳು ಉಗುಳಿನ ಮೂಲಕವೂ ಹರಡಬಹುದಾಗಿದ್ದರಿಂದ ಹುಣ್ಣು ಮತ್ತು ಗಾಯಗಳು ಸಹ ಸಾಂಕ್ರಾಮಿಕವಾಗಬಹುದು. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ವಸ್ತುಗಳು - ಉದಾಹರಣೆಗೆ ಬಟ್ಟೆ, ಹಾಸಿಗೆ, ಟವೆಲ್‌ಗಳು - ಅಥವಾ ಆಹಾರ ಸೇವಿಸಲು ಉಪಯೋಗಿಸುವ ಪಾತ್ರೆಗಳಂಥ ವಸ್ತುಗಳು ಸಹ ಸೋಂಕಿನ ಮೂಲವಾಗಿರಬಹುದು.
ದೈಹಿಕ ಸಂಪರ್ಕದ ಮೂಲಕ ರೋಗಗಳು ಹರಡುವುದು ತಿಳಿದಿರುವುದರಿಂದ, ಲೈಂಗಿಕವಾಗಿ ಹರಡುವ ರೋಗಗಳು ಲೈಂಗಿಕ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಈಗ ಸಂಶೋಧನೆಗಳು ನಡೆದಿವೆ.
ವ್ಯಕ್ತಿಯೊಬ್ಬರಿಗೆ ಯಾವುದೇ ರೋಗವಿದ್ದು, ಅದರ ಲಕ್ಷಣಗಳು ಕಾಣಿಸಿಕೊಂಡಿದ್ದರೆ ಅಂಥ ರೋಗ ಸಾಂಕ್ರಾಮಿಕವೂ ಆಗಿರಬಹುದು (ಸಾಮಾನ್ಯವಾಗಿ ಮೊದಲ ಎರಡರಿಂದ ನಾಲ್ಕು ವಾರಗಳು). ಇನ್ನು ರೋಗಲಕ್ಷಣಗಳಿಲ್ಲದ ವ್ಯಕ್ತಿಗಳಿಂದ ಸೋಂಕು ಹರಡುತ್ತದಾ ಅಥವಾ ಇಲ್ಲವಾ ಎಂಬುದು ಸ್ಪಷ್ಟವಾಗಿಲ್ಲ.
ಲೈಂಗಿಕ ಸಂಪರ್ಕದಿಂದ ಮಂಕಿಪಾಕ್ಸ್ ಹರಡುವಿಕೆ: ಸರ್ ಗಂಗಾ ರಾಮ್ ಆಸ್ಪತ್ರೆಯ ತೀವ್ರ ರೋಗ ತಜ್ಞ ಮತ್ತು ಹಿರಿಯ ಸಮಾಲೋಚಕರಾದ ಡಾ. ಧೀರೇನ್ ಗುಪ್ತಾ ಹೇಳುವ ಪ್ರಕಾರ, "ಲೈಂಗಿಕ ಸಂಪರ್ಕದ ಸಮಯದಲ್ಲಿ ಮಂಕಿಪಾಕ್ಸ್ ಹರಡುವಿಕೆಯ ಸಾಧ್ಯತೆಗಳು ತುಂಬಾ ಹೆಚ್ಚಾಗುತ್ತವೆ.
ಮುಖಾಮುಖಿ ಸಂಪರ್ಕ ಈ ರೋಗ ತರಬಹುದು: ಮಂಕಿಪಾಕ್ಸ್ ಹೊಂದಿರುವ ವ್ಯಕ್ತಿಯೊಂದಿಗೆ ಮೌಖಿಕ ಸೆಕ್ಸ್, ಗುದ ಮತ್ತು ಯೋನಿ ಸಂಭೋಗ ಅಥವಾ ಜನನಾಂಗಗಳನ್ನು (ಶಿಶ್ನ, ವೃಷಣಗಳು ಮತ್ತು ಯೋನಿ) ಅಥವಾ ಆ ವ್ಯಕ್ತಿಯ ಗುದದ್ವಾರಗಳನ್ನು ಮುಟ್ಟುವುದರಿಂದ ಸೋಂಕು ಇನ್ನೊಬ್ಬರಿಗೆ ಹರಡಬಹುದು. ತಬ್ಬಿಕೊಳ್ಳುವುದು, ಮಸಾಜ್ ಮಾಡುವುದು, ಚುಂಬಿಸುವುದು ಮತ್ತು ದೀರ್ಘಾವಧಿಯವರೆಗೆ ಮುಖಾಮುಖಿ ಸಂಪರ್ಕವು ವೈರಸ್‌ನ ಹರಡುವಿಕೆಗೆ ಕಾರಣವಾಗಬಹುದು ಎಂದು ಡಾ ಗುಪ್ತಾ ಹೇಳಿದರು.
ಸೆಕ್ಸ್ ಮಾಡುವ ಸಮಯದಲ್ಲಿ ಮಂಕಿಪಾಕ್ಸ್ ಹೊಂದಿರುವ ವ್ಯಕ್ತಿಯು ಬಳಸಿದ ಸೋಂಕು ರಹಿತವಾಗಿಸದ ಹಾಸಿಗೆ, ಟವೆಲ್ ಮತ್ತು ಲೈಂಗಿಕ ಆಟಿಕೆಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಸಂಪರ್ಕ ಮಾಡುವುದರಿಂದಲೂ ಒಬ್ಬ ವ್ಯಕ್ತಿಯು ರೋಗಕ್ಕೆ ತುತ್ತಾಗಬಹುದು. ಒಬ್ಬರಿಗಿಂತ ಹೆಚ್ಚು ಸೆಕ್ಸ್ ಪಾರ್ಟನರ್ಗಳನ್ನು ಹೊಂದಿರುವರಿಗೆ ಕೂಡ ಮಂಕಿಪಾಕ್ಸ್ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಹೀಗಾಗಿ ಸೆಕ್ಸ್ ಪಾರ್ಟನರ್ಗಳ ಸಂಖ್ಯೆಯನ್ನು ಕಡಿಮೆ ಮಾಡುವುದರಿಂದ ಸೋಂಕು ಹರಡುವುದನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು. ವೀರ್ಯ, ಯೋನಿ ದ್ರವ ಹಾಗೂ ಇತರ ದೇಹದ ದ್ರವಗಳಲ್ಲಿ ಮಂಕಿಪಾಕ್ಸ್ ಬದುಕಿರುತ್ತದೆಯಾ ಎಂಬುದನ್ನು ತಿಳಿಯಲು ಸಂಶೋಧನೆಗಳು ನಡೆದಿವೆ.
ಕಾಂಡೋಮ್ ಬಳಕೆಯಿಂದ ಮಂಕಿಪಾಕ್ಸ್ ಹರಡದಂತೆ ತಡೆಯಬಹುದಾ? :ತಬ್ಬಿಕೊಳ್ಳುವುದು, ಚುಂಬಿಸುವುದು ಅಥವಾ ಸೋಂಕಿತ ವ್ಯಕ್ತಿ ಬಳಸುವ ಹಾಸಿಗೆ, ಬಟ್ಟೆ ಅಥವಾ ವಸ್ತುಗಳ ಸಂಪರ್ಕದಿಂದಲೂ ಮಂಕಿಪಾಕ್ಸ್ ವೈರಸ್ ಹರಡಬಹುದಾಗಿದ್ದರಿಂದ ಕಾಂಡೋಮ್ ಬಳಸುವಂಥ ತಡೆ ವಿಧಾನಗಳು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಡಾ. ಶರ್ಮಾ ಹೇಳುತ್ತಾರೆ.
ಹಿರಿಯ ಚರ್ಮರೋಗ ತಜ್ಞೆ ಡಾ.ದೀಪಾಲಿ ಭಾರದ್ವಾಜ್ ಹೇಳುವ ಪ್ರಕಾರ, "ಮಂಕಿಪಾಕ್ಸ್ ಲೈಂಗಿಕತೆಯ ಮೂಲಕ ಹರಡಬಹುದು. ಆದ್ದರಿಂದ ಎಲ್ಲಾ ರೀತಿಯ ಸ್ಪರ್ಶಗಳಿಂದ ಕಟ್ಟುನಿಟ್ಟಾಗಿ ಪ್ರತ್ಯೇಕತೆಯಾಗಿರುವುದು ಅಗತ್ಯ. ನಾವು ಮತ್ತೊಮ್ಮೆ ಜಾಗರೂಕರಾಗಿರಬೇಕಾದ ಮತ್ತು ಹೆಚ್ಚು ಆರೋಗ್ಯವಂತರಾಗಿರಬೇಕಾದ ಸಮಯ ಇದಾಗಿದೆ.
ಆರೋಗ್ಯ ವ್ಯವಸ್ಥೆಯು ಕುಸಿದು ಬೀಳದಂತೆ ನೋಡಿಕೊಳ್ಳಬೇಕಿದೆ. ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಿ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಕಾಣಬೇಕು. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು."
ಸಲಿಂಗ ಸೆಕ್ಸ್ನಿಂದ ಮಂಕಿಪಾಕ್ಸ್ ಬರುತ್ತದಾ?: ಸಲಿಂಗ ಲೈಂಗಿಕ ಸಂಪರ್ಕದಿಂದ ಮಂಕಿಪಾಕ್ಸ್ ಹರಡುತ್ತದೆ ಎಂದು ಕೆಲವೆಡೆ ವರದಿಯಾಗಿದೆ. ಆದರೆ, ಮಂಕಿಪಾಕ್ಸ್ ಸಲಿಂಗಿಗಳಿಗೆ ಮಾತ್ರ ಸೀಮಿತವಲ್ಲ. ಯಾರೇ ಆದರೂ ಮಂಕಿಪಾಕ್ಸ್ ಸೋಂಕು ತಗುಲಿರುವ ಇನ್ನೊಬ್ಬರೊಂದಿಗೆ ದೈಹಿಕ ಸಂಪರ್ಕ ಮಾಡಿದಲ್ಲಿ, ಸೋಂಕು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
ಲೈಂಗಿಕ ರೋಗಲಕ್ಷಣಗಳಿಗೆ ಸಾಮ್ಯತೆ: ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಮಂಕಿಪಾಕ್ಸ್ ದದ್ದುಗಳು ಹರ್ಪಿಸ್ ಮತ್ತು ಸಿಫಿಲಿಸ್‌ನಂತಹ ಕೆಲವು ಲೈಂಗಿಕವಾಗಿ ಹರಡುವ ರೋಗಗಳನ್ನು ಹೋಲುತ್ತವೆ. ಒಟ್ಟಾರೆಯಾಗಿ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ದೈಹಿಕ ಸಂಪರ್ಕ ಹೊಂದಿರುವ ಯಾರೇ ಆದರೂ ಸೋಂಕು ತಗಲುವ ಅಪಾಯದಲ್ಲಿರುತ್ತಾರೆ.
ಇದನ್ನು ಓದಿ:ಪುರುಷರು ಎದುರಿಸುವ ನಾಲ್ಕು ಸಾಮಾನ್ಯ ಲೈಂಗಿಕ ಆರೋಗ್ಯ ಸಮಸ್ಯೆಗಳಿವು: ಚಿಂತೆ ಬೇಡ