ETV Bharat / sukhibhava

ಧೂಮಪಾನಕ್ಕಿಂತಲೂ ಅಪಾಯ ಬೈಪೋಲಾರ್​ ಸಮಸ್ಯೆ: ಅಧ್ಯಯನ

author img

By ETV Bharat Karnataka Team

Published : Jan 5, 2024, 8:48 PM IST

ಬೈಪೋಲಾರ್​ ಅಸ್ವಸ್ಥತೆ ಎಂಬುದು ಗಂಭೀರ ಮಾನಸಿಕ ಕಾಯಿಲೆ. ಇದಕ್ಕೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ ಎನ್ನುತ್ತದೆ ಅಧ್ಯಯನ.

bipolar disorder increases the risk of dying early

ನವದೆಹಲಿ: ಉನ್ಮಾದ ಮತ್ತು ಖಿನ್ನತೆಯಂತಹ ಗಂಭೀರ ಮಾನಸಿಕ ಗೊಂದಲದ ಲಕ್ಷಣ ಹೊಂದಿರುವ ಬೈಪೋಲಾರ್​​ ಸಮಸ್ಯೆ ಹೊಂದಿರುವವರು ಧೂಮಪಾನಿಗಳಿಗಿಂತಲೂ ಹೆಚ್ಚಿನ ಅಕಾಲಿಕ ಸಾವಿನ ಅಪಾಯ ಹೊಂದಿದ್ದಾರೆ ಎಂದು ಸಂಶೋಧನೆ ತಿಳಿಸಿದೆ. ಅಮೆರಿಕದ ಮಿಚಿಗನ್​ ಯೂನಿವರ್ಸಿಟಿ ಸಂಶೋಧಕರು, ಧೂಮಪಾನ ಮಾಡಿದವರು ಧೂಮಪಾನ ಮಾಡಿರದ ಬೈಪೋಲಾರ್​​ ಆರೋಗ್ಯ ಸಮಸ್ಯೆ ಹೊಂದಿರುವವರ ಸಾವಿನ ಕುರಿತು ದೊಡ್ಡ ಮಟ್ಟದಲ್ಲಿ ವಿಶ್ಲೇಷಣೆ ನಡೆಸಿದ್ದಾರೆ.

ಈ ಕುರಿತು ಜರ್ನಲ್​ ಸೈಕಿಯಾಟ್ರಿಕ್‌ನಲ್ಲಿ ವರದಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಬೈಪೋಲಾರ್​ ಸಮಸ್ಯೆ ಹೊಂದಿರುವವರು ಈ ಸಮಸ್ಯೆ ಹೊಂದಿರದವರಿಗಿಂತ ಅಕಾಲಿಕವಾಗಿ ಸಾವನ್ನಪ್ಪುವ ಪ್ರಮಾಣ ಆರು ಪಟ್ಟು ಹೆಚ್ಚಿದೆ ಎಂದಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ಧೂಮಪಾನ ಮಾಡುವವರು ಧೂಮಪಾನ ಮಾಡದವರಿಗಿಂತ ಅಕಾಲಿಕವಾಗಿ ಸಾವನ್ನಪ್ಪುವ ಸಂಖ್ಯೆ ಎರಡು ಪಟ್ಟು ಹೆಚ್ಚು ಎಂದು ಮಾಹಿತಿ ನೀಡಿದ್ದಾರೆ.

ಈ ಸಾವಿನಲ್ಲಿ ಸಂಪೂರ್ಣವಾಗಿ ವ್ಯತ್ಯಾಸ ಹೊಂದಿದ್ದು, ಆರೋಗ್ಯ ಮತ್ತು ಜೀವನಶೈಲಿಯೂ ಇದಕ್ಕೆ ಕೊಡುಗೆ ನೀಡುತ್ತದೆ. ಅಕಾಲಿಕ ಸಾವು ತಡೆಯಲಿ ಹೆಚ್ಚಿನ ಪ್ರಯತ್ನ ನಡೆಸಬೇಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಬೈಪೋಲಾರ್​ ಅಸ್ವಸ್ಥತೆಯಲ್ಲಿ ಸಾವಿನ ಅಪಾಯದ ಅಂಶಗಳು ದೀರ್ಘವಾಗಿ ಕಾಣಬಹುದಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಅನಸ್ಟಸಿಯಾ ಯೊಕುಮ್​ ತಿಳಿಸಿದ್ದಾರೆ. ಈ ಅಸ್ವಸ್ಥತೆಯನ್ನು ಹೋಲಿಕೆಯಲ್ಲಿ ಕಾಣಬೇಕಿದೆ ಮತ್ತು ಜೀವನಶೈಲಿ ನಡುವಳಿಕೆಗಳು ಹೆಚ್ಚಿನ ಅಕಾಲಿಕ ಸಾವಿನ ಅಪಾಯದ ದರಕ್ಕೆ ಸಂಬಂಧಿಸಿದೆ ಎಂದು ಎಚ್ಚರಿಸಿದ್ದಾರೆ.

ಸಂಶೋಧಕರ ತಂಡವು ಬೈಪೋಲಾರ್​​ ಸಮಸ್ಯೆ ಹೊಂದಿದ ಮತ್ತು ಹೊಂದಿರದ 1,128 ಮಂದಿಯ ಸಾವಿನ ಸಂಬಂಧಿ ಅಂಶಗಳ ಕುರಿತು ಪರಿಶೀಲನೆ ನಡೆಸಿದೆ. 2006ರಿಂದ ನಡೆಸಿದ ಅಧ್ಯಯನದಲ್ಲಿ 56 ಸಾವಿನಲ್ಲಿ 2 ಅನ್ನು ಹೊರತುಪಡಿಸಿ ಎಲ್ಲರೂ ಬೈಪೋಲಾರ್ ಡಿಸಾರ್ಡರ್ ಹೊಂದಿರುವರು ಎಂದು ತಂಡ ಕಂಡುಕೊಂಡಿದೆ.

ಸಂಶೋಧಕರು 18 ಸಾವಿರ ಮಂದಿ ಗೊತ್ತಿಲ್ಲದ ರೋಗಿಗಳ ದಾಖಲೆಗಳನ್ನು ವಿಶ್ಲೇಷಿಸಿದ್ದಾರೆ. ಇದರಲ್ಲಿ ಬೈಪೋಲಾರ್​ ಸಾವಿನ ಅಪಾಯವೂ ನಾಲ್ಕು ಪಟ್ಟು ಹೆಚ್ಚಿದೆ ಎಂಬುದು ತಿಳಿದು ಬಂದಿದೆ. ತಂಡವೂ ಬೈಪೋಲಾರ್ ಸಮಸ್ಯೆ ಹೊಂದಿರುವ 10,700ಕ್ಕೂ ಹೆಚ್ಚು ಜನರನ್ನು ಯಾವುದೇ ಮಾನಸಿಕ ಸಮಸ್ಯೆ ಹೊಂದಿರದ 7,800 ಮಂದಿಯೊಂದಿಗೆ ಹೋಲಿಕೆ ಮಾಡಿದ್ದಾರೆ. ಈ ವೇಳೆ ಪತ್ತೆಯಾದ ಒಂದೇ ಅಂಶ ಎಂದರೆ ರಕ್ತದೊತ್ತಡವಾಗಿದೆ. ಬೈಪೋಲಾರ್​ ಸಮಸ್ಯೆ ಹೊಂದಿರಲಿ ಹೊಂದಿರದೇ ಇರಲಿ ಅಧಿಕ ರಕ್ತದೊತ್ತಡ ಹೊಂದಿರುವವರು ಸಾಮಾನ್ಯ ರಕ್ತದೊತ್ತಡ ಹೊಂದಿರದವರಿಗಿಂತ ಸಾವಿನ ಸಾಧ್ಯತೆ ಐದು ಪಟ್ಟು ಹೆಚ್ಚಿದೆ. (ಐಎಎನ್​ಎಸ್​)

ಇದನ್ನೂ ಓದಿ: ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯಲ್ಲಿ ಎಡಿಎಚ್​ಡಿ ಅಪಾಯದ ಅಂಶಗಳು; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.