ETV Bharat / sukhibhava

Lung cancer: ಬೆಂಗಳೂರಿನ ಮಹಿಳೆಯರಲ್ಲಿ ಹೆಚ್ಚುತ್ತಿದೆ ಶ್ವಾಸಕೋಶದ ಕ್ಯಾನ್ಸರ್​​.. ವೈದ್ಯರು ಏನಂತಾರೆ? - ಸಾಮಾನ್ಯವಾಗಿ ಧೂಮಪಾನಿಗಳಲ್ಲಿ ಹೆಚ್ಚು

rising trend of lung cancer cases among women: ಇತ್ತೀಚಿನ ವರ್ಷದಲ್ಲಿ ಬೆಂಗಳೂರಿನಲ್ಲಿ ಮಹಿಳೆಯರಲ್ಲೂ ಶ್ವಾಸಕೋಶ ಪ್ರಕರಣಗಳು ಹೆಚ್ಚುತ್ತಿದ್ದು, ಇದೊಂದು ಎಚ್ಚರಿಕೆಯ ಮತ್ತು ಕಾಳಜಿ ವಿಚಾರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Bengaluru witnesses rising trend of lung cancer cases among women non smokers

author img

By

Published : Aug 1, 2023, 5:01 PM IST

ಬೆಂಗಳೂರು: ಶ್ವಾಸಕೋಶದ ಕ್ಯಾನ್ಸರ್​ ಎಂದರೆ ಸಾಮಾನ್ಯವಾಗಿ ಧೂಮಪಾನ ಮಾಡುವ ಪುರುಷರಲ್ಲಿ ಹೆಚ್ಚು ಎಂಬ ಕಲ್ಪನೆ ಇದೆ. ಆದರೆ ಧೂಮಪಾನಿಗಳಲ್ಲವರಲ್ಲಿ ಹಾಗೇ ಮಹಿಳೆಯರಲ್ಲಿ ಈ ಪ್ರಕರಣಗಳ ವರದಿ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ.

ಈ ಕುರಿತು ಮಾತನಾಡಿರುವ ಬನ್ನೇರುಘಟ್ಟದ ಫೋರ್ಟಿಸ್​ ಆಸ್ಪತ್ರೆಯ ಪಾಲ್ಮೊನಾಲೊಜಿ ನಿರ್ದೇಶಕ ಡಾ ವಿವೇಕ್​ ಆನಂದ್​ ಪದೆಗಲ್​ ಮಾತನಾಡಿ, ಬೆಂಗಳೂರಿನಲ್ಲಿ ಇತ್ತೀಚಿನ ದಿನದಲ್ಲಿ ಮಹಿಳೆಯರಲ್ಲಿ ಈ ಪ್ರಕರಣ ಹೆಚ್ಚುತ್ತಿದೆ. ಭಾರತೀಯ ಕ್ಯಾನ್ಸರ್​​ ಸೊಸೈಟಿ ಸಂಶೋಧನೆ ವರದಿ ತಿಳಿಸುವಂತೆ ಕಳೆದ ಐದು ತಿಂಗಳಲ್ಲಿ ಶೇ 20ರಷ್ಟು ಮಹಿಳೆಯರಲ್ಲಿ ಕ್ಯಾನ್ಸರ್​​ ಕಂಡು ಬರುತ್ತಿದೆ.

ಈ ವಿಚಾರವು ಕಾಳಜಿದಾಯಕವಾಗಿದೆ. ಕಾರಣ ಭಾರತದಲ್ಲಿ ಶ್ವಾಸಕೋಶ ಕ್ಯಾನ್ಸರ್​ ಪ್ರಕರಣಗಳು ಹೆಚ್ಚುತ್ತಿದ್ದು, ಸಾವಿಗೆ ಇದು ಕೂಡ ಕಾರಣವಾಗಿದೆ. ಮಹಿಳೆಯರಲ್ಲಿ ಶ್ವಾಸಕೋಶ ಹೆಚ್ಚಳಕ್ಕೆ ಕಾರಣವಾಗುವ ಅನೇಕ ಅಂಶಗಳಿವೆ. ಇದರಲ್ಲಿ ಪ್ರಮುಖವಾಗಿರುವುದು ಧೂಮಪಾನ. ಇತ್ತೀಚಿನ ವರ್ಷದಲ್ಲಿ ಮಹಿಳಾ ಧೂಮಪಾನಿಗಳ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚುತ್ತಿದ್ದು, ಇದರ ಜೊತೆಗೆ ಪರೋಕ್ಷ ಮತ್ತು ಧೂಮಪಾನಿಗಳಲ್ಲದವರೂ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ ಎಂದಿದ್ದಾರೆ ವೈದ್ಯರು.

ಮತ್ತೊಂದು ಪ್ರಮುಖ ಕಾರಣ ಎಂದರೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ, ಬೆಂಗಳೂರಿನ ವಾಯುಗುಣಮಟ್ಟ ಕಳಪೆಯಾಗುತ್ತಿದ್ದು, ಇದು ಕೂಡ ಶ್ವಾಸಕೋಶ ಕ್ಯಾನ್ಸರ್​ಗೆ ಪ್ರಮುಖ ಕಾರಣವಾಗಿದೆ. ಇದು ನಗರದಲ್ಲಿನ ಮಹಿಳೆಯರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಹಿಳೆಯರಲ್ಲಿ ಶ್ವಾಸಕೋಶ ಕ್ಯಾನ್ಸರ್​ ಪ್ರಕರಣಗಳು ಹೆಚ್ಚುತ್ತಿರುವುದು ಕಾಳಜಿ ವಿಷಯವಾಗಿದೆ. ಈ ಬಗ್ಗೆ ಗಂಭೀರ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಈ ಸಂಬಂಧ ಮುಂಜಾಗ್ರತ ಕ್ರಮವಹಿಸಬೇಕಿದೆ. ಇದರಲ್ಲಿ ಧೂಮಪಾನದಿಂದ ದೂರ ಇರುವುದು, ಪರೋಕ್ಷ ಧೂಮಪಾನಕ್ಕೆ ಒಳಗಾಗದಂತೆ ಮತ್ತು ವಾಯುಗುಣಮಟ್ಟದ ಕಡಿಮೆ ಪರಿಣಾಮಕ್ಕೆ ಒಳಗಾಗುವಂತೆ ನೋಡಿಕೊಳ್ಳಬೇಕು. ಜನರು ಆರೋಗ್ಯ ಮತ್ತು ಸುರಕ್ಷತೆ ವಿಚಾರದಲ್ಲಿ ಈ ಸಂಬಂಧ ಮುನ್ನೆಚ್ಚರಿಕೆ ಪಡೆಯುವುದು ಅವಶ್ಯ ಎಂದಿದ್ದಾರೆ.

ಮತ್ತೊಬ್ಬ ವೈದ್ಯ ಡಾ ನಿತಿನ್​ ಕೃಷ್ಣ ರೈಜಾದ್​ ಮಾತನಾಡಿ, ಮಹಿಳೆಯರಲ್ಲಿ ಗಮನಾರ್ಹವಾಗಿ ಶ್ವಾಸಕೋಶ ಕ್ಯಾನ್ಸರ್​ ಹೆಚ್ಚಳ ಆಗುತ್ತಿದೆ. ಹಲವು ಪ್ರಕರಣದ ಧೂಮಪಾನ ಮಾಡದ ಮಹಿಳೆಯರಲ್ಲೂ ಇದು ಕಂಡು ಬರುತ್ತಿದೆ. ಪರೋಕ್ಷ ಧೂಮಪಾನ ಅನೇಕ ಪ್ರಕರಣದಲ್ಲಿ ಕ್ಯಾನ್ಸರ್​ಗೆ ಪ್ರಮುಖ ಕಾರಣವಾಗಿದೆ.

ಜೊತೆಗೆ ಮನೆಯ ಒಳಗಿನ ಮತ್ತು ಮನೆಯ ಹೊರಗಿನ ಮಾಲಿನ್ಯ ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿಂದೆಗೆ ಹೋಲಿಕೆ ಮಾಡಿದರೆ, ಕ್ಯಾನ್ಸರ್​ ಪ್ರಕರಣಗಳ ಸಂಖ್ಯೆ ಇದೀಗ ಹೆಚ್ಚಿದೆ. ಜೊತೆಗೆ ಯುವ ಜನತೆ ಮತ್ತು ಮಹಿಳೆಯರಲ್ಲೀ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಶೇ 50ರಷ್ಟು ಆಕ್ಷನಬಲ್​ ಮ್ಯೂಟೆಷನ್​ ಇದಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ.

ಇತ್ತೀಚಿನ ದಿನದಲ್ಲಿ ಏರಿಕೆಯಾಗುತ್ತಿರುವ ಫಿಲ್ಟರ್​ ಮಾಡಿದ ಸಿಗರೇಟ್​ ಜನಪ್ರಿಯತೆ ಕೂಡ ಮಹಿಳೆಯರಲ್ಲಿ ಈ ಪ್ರಕರಣ ಹೆಚ್ಚಲು ಕಾರಣವಾಗಿದೆ. ಇದರಿಂದ ಅಡೆನೊಕಾರ್ಸಿನೋಮಾದ ಉಲ್ಬಣವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು. ಶ್ವಾಸಕೋಶ ಕ್ಯಾನ್ಸರ್​ ಬಾರದಂತೆ ತಡೆಗಟ್ಟಲು ವಾಯುಮಾಲಿನ್ಯಕ್ಕೆ ಕಡಿಮೆ ಒಳಗೊಳ್ಳುವ ಜೊತೆಗೆ ಧೂಮಪಾನ ಮತ್ತು ಪರೋಕ್ಷ ಧೂಮಪಾನದಿಂದ ದೂರ ಇರುವಂತೆ ನೋಡಿಕೊಳ್ಳಬೇಕು

ಇದನ್ನೂ ಓದಿ: Lung cancer: ಭಾರತದಲ್ಲಿ ಸಾವಿನ ದರ ಹೆಚ್ಚಿಸುತ್ತಿದೆ ಶ್ವಾಸಕೋಶದ ಕ್ಯಾನ್ಸರ್​: ಆರಂಭದಲ್ಲೇ ಮಾಡಬೇಕಿದೆ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.