ETV Bharat / sukhibhava

ಬೇಸಿಗೆ ಬೇಗೆಯನ್ನು ಈ ಪಾನೀಯದೊಂದಿಗೆ ಹೊಡೆದೋಡಿಸಿ!

author img

By

Published : Apr 17, 2023, 11:39 AM IST

Updated : Apr 17, 2023, 12:22 PM IST

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಾಪಾಡುವ ಜೊತೆಗೆ ನಿರ್ಜಲೀಕರಣಗೊಳ್ಳದಂತೆ ತಡೆಯಲು ಸಹಾಯ ಮಾಡುತ್ತವೆ ಈ ಪಾನೀಯಗಳು

Beat the summer heat with this drink!
Beat the summer heat with this drink!

ನವದೆಹಲಿ: ಬೇಸಿಗೆ ಬಂತೆಂದರೆ ಸಾಕು ದೇಹಕ್ಕೆ ತಂಪು ನೀಡುವ ಪಾನೀಯಗಳನ್ನು ಮನಸು ಬಯಸುತ್ತದೆ. ಈ ಸಮಯದಲ್ಲಿ ದೇಹ ನಿರ್ಬಲೀಕರಣಗೊಳ್ಳದಂತೆ, ರುಚಿಕರ ತಂಪಾಗಿರುವ ಈ ಪಾನೀಯಗಳು ನಿಮ್ಮನ್ನು ತಾಜಾತನದಿಂದ ಇರುವಂತೆ ಕಾಪಾಡುತ್ತದೆ. ಈ ಋತುಮಾನದಲ್ಲಿ ಹೆಚ್ಚಾಗಿ ಬಳಕೆಯಾಗುವ ಕೆಲವು ಪಾನೀಯಗಳನ್ನು ಒಮ್ಮೆ ಸವಿಯಲೇ ಬೇಕು.

ಆಮ್​ ಪನ್ನಾ
ಆಮ್​ ಪನ್ನಾ

ಆಮ್​ ಪನ್ನಾ: ಬೇಸಿಗೆ ಎಂದರೆ ಅದು ಹಣ್ಣುಗಳ ರಾಜ ಮಾವಿನ ಸಮಯ. ಅದರಲ್ಲೂ ಮಾವು ಮಾಗುವ ಮೊದಲೇ ಅದರ ಹುಳಿ ಸಿಹಿ ತಿರಳಿನೊಂದಿಗೆ ಈ ಪಾನೀಯ ತಯಾರಿಸಬಹುದು. ಮಾವಿನ ತಿರುಳಿಗೆ, ಜೀರಿಗೆ, ಪುದಿನಾ ಎಲೆಗಳನ್ನು ಮಿಶ್ರಣ ಮಾಡಿ ಜ್ಯೂಸ್​ ಮಾಡಿ ಕುಡಿಯಬಹುದು. ಪಕ್ಕಾ ಭಾರತೀಯ ಶೈಲಿಯ ಈ ಪಾನೀಯ ಮನತಣಿಸುವುದು ಮಾತ್ರವಲ್ಲದೇ ದೇಹಕ್ಕೂ ಶಕ್ತಿಯನ್ನು ನೀಡುತ್ತದೆ. ಇದು ದೇಹವನ್ನು ಹೈಡ್ರೇಟ್​ ಆಗಿಡಲು ಸಹಾಯ ಮಾಡುತ್ತದೆ.

ಬೇಕಾಗುವ ಸಾಮಗ್ರಿ: ಹಸಿರು ಭರಿತ ಕಚ್ಛಾ ಮಾವು 500 ಗ್ರಾಂ, ಸಕ್ಕರೆ ಅರ್ಧ ಕಪ್​, ಉಪ್ಪು 2 ಸ್ಪೂನ್​, ಕಪ್ಪು ಉಪ್ಪು ರುಚಿಗೆ, ಉರಿದು ಪುಡಿ ಮಾಡಿದ ಜೀರಿಗೆ 2 ಟಿ. ಸ್ಪೂನ್​, ಚೆನ್ನಾಗಿ ಹೆಚ್ಚಿದ ಪುದಿನಾ 2 ಟಿ. ಸ್ಪೂನ್​, ನೀರು 2 ಕಪ್​.

ಮಾಡುವ ವಿಧಾನ: ಮಾವಿನ ಹಣ್ಣನ್ನು ಮೃದುವಾಗುವಂತೆ ಬೇಯಿಸಿ, ಅದರ ಸಿಪ್ಪೆ ಬಣ್ಣ ಬದಲಾಯಿಸಿದ ಬಳಿಕ ಅದನ್ನು ತಣ್ಣಾಗಲು ಬಿಡಿ. ಸಿಪ್ಪೆ ತೆಗೆದು ಅದರ ತಿರುಳನ್ನು ಮೇಲೆ ಹೇಳಿದ ಪಾದಾರ್ಥಗಳೊಂದಿಗೆ ಹೆಚ್ಚಾಗಿ ರುಚ್ಚಿ. ಇದಕ್ಕೆ ಬೇಕಾದಲ್ಲಿ ಐಸನ್ನು ಸೇರಿಸಬಹುದು.

ಐಸ್ಡ್​ ಜಲ್​ಜೀರಾ
ಐಸ್ಡ್​ ಜಲ್​ಜೀರಾ

ಐಸ್ಡ್​ ಜಲ್​ಜೀರಾ: ಶಕ್ತಿಯುತವಾದ ಈ ಪಾನೀಯ ಚಯಪಚಯನಕ್ಕೂ ಸಹಾಯ ಮಾಡುತ್ತದೆ.

ಬೇಕಾಗುವ ಸಾಮಗ್ರಿಗಳು: ಹುಣಸೆಹಣ್ಣಿನ ತಿರುಳು 125 ಗ್ರಾಂ, ಪುದಿನಾ ಎಲೆ 3 ಟಿ. ಸ್ಪೂನ್​, ಜೀರಿಗೆ ಪುಡಿ ಅರ್ಥ ಟಿ. ಸ್ಪೂನ್​, ಬೆಲ್ಲ 50 ಗ್ರಾಂ, ಕಪ್ಪು ಉಪ್ಪು 4 ಸ್ಪೂನ್​, ಶುಂಠಿ ಮಿಶ್ರಿತ ಉಪ್ಪು, ನಿಂಬೆ ರಸ 3-4 ಟಿ. ಸ್ಪೂನ್​, ಚಿಟಿಕೆ ಖಾರದ ಪುಡಿ, ಗರಂ ಮಸಾಲ ಅರ್ಧ ಟಿ.ಸ್ಪೂನ್​ ನೀರು ಅರ್ಧ ಲೀಟರ್​.

ಮಾಡುವ ವಿಧಾನ: ಮೇಲೆ ತಿಳಿಸಿದ ಎlfl ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಮಿಕ್ಸಿ ಮಾಡಿ. ರಾತ್ರಿ ಇಡೀ ಹಾಗೇ ಬಿಡಿ. ಅದನ್ನು ನಂತರ ಸೋಸಿಕೊಳ್ಳಿ. ಅದನ್ನು ಸೇವಿಸಿ.

ಸತ್ತು ಶರಬತ್​​
ಸತ್ತು ಶರಬತ್​​

ಸತ್ತು ಶರಬತ್​​: ಬಿಹಾರದಲ್ಲಿ ಖ್ಯಾತಿ ಪಡೆದಿರುವ ಈ ಪಾನೀಯ ಬೇಸಿಗೆಯ ರುಚಿ ಹೆಚ್ಚಿಸುತ್ತದೆ. ಬಹುತೇಕರಿಗೆ ತಿಳಿದಿರುವ ಈ ಪಾನೀಯ ಮಾಡುವ ವಿಧಾನ ಕೂಡ ಸುಲಭ.

ಬೇಕಾಗುವ ಸಾಮಗ್ರಿಗಳು: ಚನ ಸತ್ತು- 4ಕಪ್​​, ತಂಪು ನೀರು- 4 ಕಪ್​, ನಿಂಬೆ ಜ್ಯೂಸ್​- 2 ಟೀ. ಸ್ಪೂನ್​, ಹುರಿದ ಜೀರಿಗೆ ಪುಡಿ ಅರ್ಧ ಟಿ. ಸ್ಪೂನ್​, ಪುದಿನಾ ಎಲೆ 2 ಟಿ. ಸ್ಪೂನ್​, ಕಪ್ಪು ಉಪ್ಪು ರುಚಿಗೆ, ಹಸಿರುವ ಮೆಣಸಿನಕಾಯಿ 1, ಕಚ್ಚಾ ಮಾವು 2 ಟಿ. ಸ್ಪೂನ್​.

ವಿಧಾನ: ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಹಾಕಿ ಮಿಶ್ರಣ ಮಾಡಿ, ರುಬ್ಬಬೇಕು. ಬಳಿಕ ಐಸ್​ ಕ್ಯೂಬ್​ನೊಂದಿಗೆ ಸೇವಿಸಹುದು.

ಮ್ಯಾಂಗೋ ಲಸ್ಸಿ
ಮ್ಯಾಂಗೋ ಲಸ್ಸಿ

ಮ್ಯಾಂಗೋ ಲಸ್ಸಿ: ಸಂಪದ್ಬರಿತ ಗುಣಗಳನ್ನು ಹೊಂದಿರುವ ಲಸ್ಸಿ ಉತ್ತಮ ಆಯ್ಕೆ. ಮಾವಿನ ತಿರುಳು ಮತ್ತು ಯೋಗರ್ಟ್​​ ಜೊತೆಗೆ ಐಸ್​ ಇದರ ರುಚಿ ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿ: 125 ಎಂಎಲ್​ ಮೊಸರು, ಐಸ್ಡ್​ ವಾಟರ್​ 200 ಮಿಲಿ, ಐಸ್​ ಕ್ಯೂಬ್​ 8, ಹೆಚ್ಚಿನ ಮಾವು 1, ಸಕ್ಕರೆ 1 ಟಿ.ಸ್ಪೂನ್​, ಒಣ ಪುದಿನಾ ಪುಡಿ. ಇವೆಲ್ಲಾವನ್ನು ಮಿಶ್ರಣ ಮಾಡಿ ರುಬ್ಬಿ, ಚಿಲ್​ ಆಗಿ ಸೇವಿಸಬಹುದು.

ಬಾರ್ಲಿ ನೀರು
ಬಾರ್ಲಿ ನೀರು

ಬಾರ್ಲಿ ನೀರು: ದೇಹವನ್ನು ನಿರ್ಜಲೀಕರಣಗೊಳ್ಳದಂತೆ ಕಾಪಾಡುವ ಈ ನೀರು ಸಂಪ್ರದಾಯಿಕ ಪಾನೀಯವಾಗಿದೆ. ಆರೋಗ್ಯ ಜೊತೆಗೆ ಪೌಷ್ಟಿಕಾಂಶ ಹೊಂದಿದೆ.

ಬೇಕಾಗುವ ಸಾಮಗ್ರಿ: ಬಾರ್ಲಿ ಕಾಲು ಕಪ್​, ನೀರು 4 ಕಪ್​, ಉಪ್ಪು ರುಚಿಗೆ ತಕ್ಕಷ್ಟು, ಜೇನು ತುಪ್ಪ (ಬೇಕಾದಲ್ಲಿ) ನಿಂಬೆ ಹುಳಿ (ಬೇಕಾದಲ್ಲಿ)

ಮಾಡುವ ವಿಧಾನ: ಬಾರ್ಲಿಯನ್ನು ನೀರಿನಲ್ಲಿ ಚೆನ್ನಾಗಿ 30 ನಿಮಿಷಗಳ ಕಾಲ ಸಣ್ಣ ಹುರಿಯಲ್ಲಿ ಕುದಿಸಿ. ಇದನ್ನು ಶೋಧಿಸಿ, ಇದಕ್ಕೆ ನಿಂಬೆ ರಸ, ಬೇಕಾದಲ್ಲಿ ಜೇನುತುಪ್ಪ ಸೇರಿಸಿ, ತಣ್ಣಗಾಗಲು ಬಿಡಿ. ಇದನ್ನೂ ಬೇಕಾದಲ್ಲಿ ಫ್ರಡ್ಜ್​ನಲ್ಲಿಟ್ಟು ಕುಡಿಯಬಹುದು.

ಇದನ್ನೂ ಓದಿ: ಬೇಸಿಗೆಯಲ್ಲಿ ತಂಪಾಗಿರಲು ಕಲ್ಲಂಗಡಿ ಪಾನೀಯಗಳು..

Last Updated : Apr 17, 2023, 12:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.