ಸಿಡ್ನಿ: 2050ಕ್ಕೆ ಜಾಗತಿಕವಾಗಿ ಸುಮಾರು 800 ಮಿಲಿಯನ್ ಜನರು ಬೆನ್ನು ನೋವಿನ ಸಮಸ್ಯೆಗೆ ಗುರಿಯಾಗಬಹುದು. 2020ಕ್ಕೆ ಹೋಲಿಕೆ ಮಾಡಿದಾಗ ಈ ಸಂಖ್ಯೆ ಮೂರು ಪಟ್ಟು ಹೆಚ್ಚಲಿದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಈ ಕುರಿತು ಲ್ಯಾನ್ಸೆಟ್ ರಮಟೊಲೊಜಿ ಜರ್ನಲ್ನಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ಗ್ಲೋಬಲ್ ಬರ್ಡನ್ ಆಫ್ ಡೀಸಿಸ್ 2021ನಲ್ಲಿ ವಿಶ್ಲೇಷಣೆ ಅಧ್ಯಯನದಲ್ಲಿ 2017ರಿಂದ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅರ್ಧ ಬಿಲಿಯನ್ಗೂ ಹೆಚ್ಚು ಜನರು ಈ ಸಮಸ್ಯೆಗೆ ಒಳಗಾಗಿದ್ದಾರೆ. 2020ರಲ್ಲಿ ಸುಮಾರು 619 ಮಿಲಿಯನ್ ಜನರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂದಿತ್ತು.
ಇನ್ನು ಈ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿ ಕಂಡು ಬರುತ್ತಿದ್ದು, ಅಲ್ಲಿ ಪ್ರಕರಣಗಳ ಏರಿಕೆ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಸಿಡ್ನಿ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.
1990ರಿಂದ 2020ರ ವರೆಗೆ 204 ದೇಶಗಳ ದತ್ತಾಂಶದ ಆಧಾರದ ಮೇಲೆ ಈ ಬೆನ್ನು ನೋವಿನ ಸಂಖ್ಯೆ ರೋಗಿಗಳ ಸಂಖ್ಯೆಯಲ್ಲಿ ಬೆಳವಣಿಗೆ ಕಂಡಿದೆ. ಈ ಮಾದರಿಗಳು 2050ರಲ್ಲಿ 843 ಮಿಲಿಯನ್ ಜನರು ಇದರ ಸಮಸ್ಯೆಗೆ ಒಳಗಾಗಲಿದ್ದು, ಇದು ಜನಸಂಖ್ಯೆ ಮತ್ತು ವಯಸ್ಸಾಗುವಿಕೆಯ ಜನಸಂಖ್ಯೆ ಮೇಲೆ ಪ್ರಭಾವಿತವಾಗುತ್ತದೆ.
ಬೆನ್ನು ನೋವಿನ ಸಮಸ್ಯೆ ಅಂಗವೈಕಲ್ಯತೆಗೆ ಪ್ರಮುಖ ಕಾರಣವಾಗಬಹುದು. ಇದಕ್ಕೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಬೆನ್ನು ನೋವಿನ ಸಮಸ್ಯೆ ದೀರ್ಘ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ಮತ್ತು ಮಾನಸಿಕ ಆರೋಗ್ಯ ಪರಿಸ್ಥಿತಿ, ಗಮನಾರ್ಹ ಅಂಗವೈಕಲ್ಯತೆದಂತಹ ತೊಂದರೆಗಳಿಗೆ ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸಿದೆ.
ಬೆನ್ನು ನೋವಿನ ಸಮಸ್ಯೆ ಜಾಗತಿಕವಾಗಿ ಹೆಚ್ಚುತ್ತಿರುವ ಬಗ್ಗೆ ನಮ್ಮ ವಿಶ್ಲೇಷಣೆ ಒತ್ತು ನೀಡಿದೆ. ಇದು ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಹೇರಬಹುದು. ನಾವು ಬೆನ್ನು ನೋವಿನ ಸಮಸ್ಯೆ ನಿವಾರಣೆಗೆ ನಿರಂತರ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಅಧ್ಯಯನದ ಪ್ರಮುಖ ಲೇಖಕ ಪ್ರೊ. ಮನ್ಯೂಯಲ್ ಫೆರಾರಿಯಾ ಸಲಹೆ ನೀಡಿದ್ದಾರೆ.
ಮೂರನೇ ಒಂದು ಅಂಗವೈಕಲ್ಯವೂ ಬೆನ್ನು ನೋವಿನೊಂದಿಗೆ ಸಂಬಂಧ ಹೊಂದಿದೆ. ಇದು ಧೂಮಪಾನ ಮತ್ತು ಅಧಿಕ ತೂಕದಂತಹ ಕೊಡುಗೆಯನ್ನು ಹೊಂದಿದೆ ಎಂದರು. ಇನ್ನು ಈ ಬೆನ್ನು ನೋವಿನ ಬಗ್ಗೆ ಇರುವ ತಪ್ಪು ಕಲ್ಪನೆಗಳು ಎಂದರೆ, ಇದು ಕೇವಲ ಕೆಲಸ ನಿರ್ವಹಿಸುವ ವಯಸ್ಕರಲ್ಲಿ ಮಾತ್ರ ಪರಿಣಾಮ ಬೀರುತ್ತದೆ ಎಂಬುದು. ಆದರೆ, ಈ ಅಧ್ಯಯನದಲ್ಲಿ ಇದು ಹಿರಿಯ ವಯಸ್ಕರ ಮೇಲೂ ಪ್ರಭಾವ ಹೊಂದಿದೆ. ಇನ್ನು ಪುರುಷರಿಗೆ ಹೋಲಿಸಿದಾಗ ಇದು ಮಹಿಳೆಯರಲ್ಲಿ ಹೆಚ್ಚಿದೆ.
ಆರೋಗ್ಯ ಸಚಿವಾಲಯಗಳು ಕೂಡ ಈ ಸಮಸ್ಯೆ ತಡೆಗಟ್ಟುವ ಕುರಿತು ನಿರ್ಲಕ್ಷ್ಯ ಮುಂದುವರೆಸುವಂತಿಲ್ಲ. ಇದು ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ವಿಶೇಷವಾಗಿ ಇದರ ಕಾಳಜಿಯ ವೆಚ್ಚಗಳನ್ನು ಹೊಂದಿರುತ್ತದೆ. ಇದೀಗ ಅಧಿಕ ಹೊರೆ ಪರಿಹರಿಸಲು ಪರಿಣಾಮಕಾರಿ ತಂತ್ರಗಳ ಬಗ್ಗೆ ಕಲಿಯಲು ಸಮಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಅಧಿಕ ರಕ್ತದೊತ್ತ ನಿವಾರಿಸಲು ಸಹಾಯವಾಗಲಿದೆ ಈ ಐದು ಧ್ಯಾನದ ತಂತ್ರಗಳು