ಮಗುವಿನ ಬೆಳವಣಿಗೆಯಲ್ಲಿ ಎಣ್ಣೆ ಮಸಾಜ್ ಅತ್ಯಗತ್ಯವಾಗಿದೆ. ಇದರಿಂದ ಮಗುವಿನ ಸ್ನಾಯು ಮತ್ತು ಮೂಳೆಗಳ ಅಭಿವೃದ್ಧಿ ಜೊತೆಗೆ ರಕ್ತ ಸಂಚಾರಕ್ಕೆ ಇದು ಸಹಾಯ ಮಾಡುತ್ತದೆ. ಈ ಬೇಬಿ ಆಯಿಲ್ಗಳು ಮಗುವಿನ ಚರ್ಮದ ಆರೈಕೆಗೆ ಅವಶ್ಯಕವಾದ ಮೃದು ಮತ್ತು ಸೌಮ್ಯವಾಗಿಸುತ್ತದೆ. ಇದರಲ್ಲಿ ಹಾನಿಕಾರಕವಲ್ಲದ ಅಂಶಗಳಿದ್ದು, ಇವು ತ್ವಚೆಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಈ ಬೇಬಿ ಆಯಿಲ್ ಅನ್ನು ದೊಡ್ಡವರ ಬಳಕೆಗೂ ಅನೇಕ ಬಾರಿ ಸಲಹೆ ನೀಡಲಾಗುವುದು.
ವಯಸ್ಕರ ಚರ್ಮದ ಹೊಳಪಿಗೆ ಈ ಬೇಬಿ ಆಯಿಲ್ ಸಹಾಯ ಮಾಡುತ್ತದೆ. ಮಗುವಿನ ಆರೈಕೆಗೆ ಇರುವ ಈ ಬೇಬಿ ಆಯಿಲ್ಗಳು ದೊಡ್ಡವರ ತ್ವಚೆ ಸಮಸ್ಯೆ ಪರಿಹಾರವನ್ನು ಹೊಂದಿದೆ. ಈ ಕುರಿತ ಕೆಲವು ಸರಳ ಸಲಹಾ ಮಾಹಿತಿ ಇಲ್ಲಿದೆ.
ಮಗುವಿನ ಚರ್ಮ ಒಣ ಮತ್ತು ಕಾಂತಿ ಕಳೆದುಕೊಂಡಾಗ ಬೇಬಿ ಆಯಿಲ್ನಿಂದ ಪ್ರತಿನಿತ್ಯ ಅರ್ಧಗಂಟೆ ಮಸಾಜ್ ಮಾಡಿ. ಈ ವಿಟಮಿನ್ ಎಣ್ಣೆ ಚರ್ಮವನ್ನು ಪುನರುಜ್ಜೀವನಗೊಳಿಸುತ್ತದೆ. ಹಾಗೇ ತ್ವಚೆ ತಾಜಾತನದಿಂದ ಕಾಣುವಂತೆ ಮಾಡುತ್ತದೆ. ಆದಾಗ್ಯೂ ಎಣ್ಣೆಯನ್ನು ಹಾಕಿದ ಅರ್ಧಗಂಟೆ ಬಳಿಕ ತಕ್ಷಣಕ್ಕೆ ಸ್ನಾನ ಮಾಡಿಸುವುದು ಅಗತ್ಯವಾಗಿದೆ.
ಕಾಲ್ಬೆರಳುಗಳ ರಕ್ಷಣೆಗೆ ಹೀಗೆ ಮಾಡಿ: ಅನೇಕ ಮಂದಿಯ ಕಾಲ್ಬೆರಳುಗಳಲ್ಲಿ ಒಡಗಿನ ಸಮಸ್ಯೆ ಕಾಡುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ನಿತ್ಯ ರಾತ್ರಿ ಕಾಲಿನ ಬೆರಳಿಗೆ ಬೇಬಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿ. 20 ನಿಮಿಷ ಇದನ್ನು ಮಾಡುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
ಉರಿಯೂತ ನಿವಾರಣೆಗೆ ಸಹಾಯಕ: ವಾಕ್ಸಿಂಗ್ ಬಳಿಕ ಆಗುವ ಊರಿಯುತ ನಿವಾರಣೆಯಲ್ಲೂ ಬೇಬಿ ಆಯಿಲ್ ಸಹಾಯ ಮಾಡುತ್ತದೆ. ನಿಮ್ಮ ತ್ವಚೆಯನ್ನು ಇದು ಸೌಮ್ಯ ಜೊತೆಗೆ ತಾಜಾತನಗೊಳಿಸುತ್ತದೆ. ಇದನ್ನು ಮೇಕಪ್ ತೆಗೆಯಲು ಕೂಡ ರಾಸಾಯನಿಕಗಳ ಬದಲಾಗಿ ಬಳಕೆ ಮಾಡಬಹುದು.
ಕಪ್ಪು ವರ್ತುಲಗಳು ನಿಮ್ಮ ಕಣ್ಣಿನ ಅಂದವನ್ನು ಹಾಳು ಮಾಡುತ್ತಿದ್ದರೆ, ಎರಡು ಡ್ರಾಪ್ ಬೇಬಿ ಆಯಿಲ್ ಅನ್ನು ಆ ಪ್ರದೇಶದಲ್ಲಿ ಹಾಕಿ ವೃತ್ತಾಕಾರ ಮತ್ತು ವಿರುದ್ಧ ವೃತ್ತಾಕಾರದಲ್ಲಿ ಕೆಲ ಕಾಲ ಮಸಾಜ್ ಮಾಡಿ. ಹವಾಮಾನ ಬದಲಾವಣೆಯಿಂದ ನಿರ್ಜಲೀಕರಣ ಮತ್ತು ತುಟಿ ಒಡೆಯುವುದು ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ಎರಡು ಹನಿ ಬೇಬಿ ಆಯುಲ್ಗೆ ಒಂದು ಚಿಟಿಕಿ ಸಕ್ಕರೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ಹಚ್ಚಿ. ಅರ್ಧಗಂಟೆ ಬಳಿಕ ಇದನ್ನು ನೀರಿನಿಂದ ತೊಳಿಯುವುದರಂದ ತ್ವಚೆ ಮೃದುಗೊಳ್ಳುತ್ತದೆ.
(ಸೂಚನೆ: ಸಾಮಾನ್ಯ ತಿಳಿವಳಿಕೆ ಆಧರಿಸಿದ್ದು, ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನ ಸಂಪರ್ಕಿಸಿ)
ಇದನ್ನೂ ಓದಿ: ಮನೆಯಲ್ಲೇ ಸಿಗುವ ಈ ನೈಸರ್ಗಿಕ ವಸ್ತುಗಳಿಂದ ಕೂದಲಿಗೆ ಮಾಡಿ ನಿಮಿಷ್ಟದ ಕಲರ್!