ETV Bharat / sukhibhava

ಆತಂಕ ಒತ್ತಡ ನಿವಾರಣೆಗೆ ಆಯುರ್ವೇದದಲ್ಲಿ ಪರಿಹಾರ.. ಗಿಡಮೂಲಿಕೆ ಔಷಧ ನಿದ್ರೆಗೆ ಒಳ್ಳೆ ರಹದಾರಿ! - ಆಯುರ್ವೇದ ಚಹಾ ಮತ್ತು ಕಷಾಯಗಳಿಂದ ಆತಂಕಕ್ಕೆ ಪರಿಹಾರ

ನಿಮಗೆ ಗೊತ್ತೇ.. ಆಯುರ್ವೇದ ಮತ್ತು ಗಿಡಮೂಲಿಕೆ ಔಷಧ ಪದ್ಧತಿಯಲ್ಲಿ ಹಲವಾರು ಔಷಧಿಗಳು ಮತ್ತು ಗಿಡಮೂಲಿಕೆಗಳನ್ನು ಉಲ್ಲೇಖಿಸಲಾಗಿದೆ. ಮಾನಸಿಕ ಒತ್ತಡಗಳಿಗೆ ಪರಿಹಾರ ನೀಡುವುದು ಮಾತ್ರವಲ್ಲದೇ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಸಮಸ್ಯೆಗೆ ಪರಿಹಾರ ನೀಡುತ್ತವೆ.

Ayurvedic and herbal medicine for anxiety and stress relief
ಆತಂಕ ಒತ್ತಡ ನಿವಾರಣೆಗೆ ಆಯುರ್ವೇದ ಮತ್ತು ಗಿಡಮೂಲಿಕೆ ಔಷಧ ಪದ್ಧತಿ
author img

By

Published : Sep 24, 2022, 7:27 PM IST

ಪ್ರಸ್ತುತ ದಿನಮಾನದಲ್ಲಿ ಒತ್ತಡ, ಆತಂಕದಲ್ಲಿ ಜೀವಿಸುವುದು ಸಾಮಾನ್ಯ. ಈ ಒತ್ತಡದಲ್ಲೇ ದಿನ ದೂಡುವ ಜಾಯಮಾನ ವ್ಯಕ್ತಿಯ ಆರೋಗ್ಯದ ಮೇಲೆ ಮಾತ್ರವಲ್ಲದೇ ಆತನ ದಿನಚರಿಯ ಮೇಲೂ ಪರಿಣಾಮ ಬೀರುತ್ತದೆ. ಈ ರೀತಿಯ ಸಮಸ್ಯೆ ಮುಂದುವರಿಯುತ್ತಲೇ ಇದೆ ಎಂದಾದರೆ ಅಂತಹವರಿಗೆ ಆ್ಯಂಟಿ ಆ್ಯಂಕ್ಷೈಟಿ ಔಷಧ ಸೇವಿಸಲು ಸಹಲೆ ನೀಡಲಾಗುತ್ತದೆ. ಆದರೆ, ಈ ರೀತಿಯ ಔಷಧಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಿ ಇನ್ನೋಮದು ಸಮಸ್ಯೆಗೆ ದಾರಿ ಮಾಡಿಕೊಡುತ್ತವೆ. ಅಂತಹ ಔಷಧಗಳನ್ನು ಸೇವಿಸುವ ಬದಲು ಆಯುರ್ವೇದದ ಕಡೆ ಗಮನ ಹರಿಸುವುದು ಉತ್ತಮ.

ನಿಮಗೆ ಗೊತ್ತೇ.. ಆಯುರ್ವೇದ ಮತ್ತು ಗಿಡಮೂಲಿಕೆ ಔಷಧ ಪದ್ಧತಿಯಲ್ಲಿ ಇಂತಹ ಹಲವಾರು ಔಷಧಗಳು ಮತ್ತು ಗಿಡಮೂಲಿಕೆಗಳನ್ನು ಉಲ್ಲೇಖಿಸಲಾಗಿದೆ. ಮಾನಸಿಕ ಒತ್ತಡಗಳಿಗೆ ಪರಿಹಾರ ನೀಡುವುದು ಮಾತ್ರವಲ್ಲದೇ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಸಮಸ್ಯೆಗೆ ಪರಿಹಾರ ನೀಡುತ್ತವೆ.

ಗಿಡಮೂಲಿಕೆ, ಆಯುರ್ವೇದ ಚಹಾ ಮತ್ತು ಕಷಾಯಗಳಿಂದ ಆತಂಕಕ್ಕೆ ಪರಿಹಾರ: ಇತ್ತೀಚಿನ ಕೆಲವು ವರ್ಷಗಳಲ್ಲಿ, ಸಾಮಾನ್ಯ ಜನರಲ್ಲಿ ಆತಂಕ, ಒತ್ತಡ ಮತ್ತು ಇತರ ಮಾನಸಿಕ ಮತ್ತು ನಡವಳಿಕೆಯ ಸಮಸ್ಯೆಗಳ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಇಂದಿನ ವೇಗದ ಜೀವನದಲ್ಲಿ, ಕೆಲಸದ ಒತ್ತಡ, ಅಧ್ಯಯನದ ಒತ್ತಡ, ಸಂಬಂಧಗಳಲ್ಲಿ ಉದ್ಭವಿಸುವ ಸಮಸ್ಯೆಗಳು ಅಥವಾ ಒತ್ತಡ ಮತ್ತು ಭವಿಷ್ಯದ ಆತಂಕಗಳು ಹಾನಿಕಾರಕ ಪರಿಣಾಮವನ್ನು ಬೀರುತ್ತವೆ. ಈ ಸಮಸ್ಯೆ ಅಲ್ಲಿಗೆ ನಿಲ್ಲದಿದ್ದರೆ, ಮನೋವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗುತ್ತದೆ.

ಸಮಸ್ಯೆ ಆರಂಭಗೊಂಡಾಗಲೇ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ವಿಶೇಷವಾಗಿ ಗಿಡಮೂಲಿಕೆ ಚಹಾಗಳು ಮತ್ತು ಡಿಕಾಕ್ಷನ್​ಗಳ ಸಹಾಯದಿಂದ ಅವುಗಳು ಬೀರುವ ಪರಿಣಾಮವನ್ನು ಕಡಿಮೆ ಮಾಡುವ ಶಕ್ತಿ ನಮ್ಮ ಕೈಯ್ಯಲ್ಲಿಯೇ ಇದೆ. ನಿಮ್ಮ ನಿಯಮಿತ ಆಹಾರದಲ್ಲಿ ಕೆಲವು ಗಿಡಮೂಲಿಕೆಗಳು ಮತ್ತು ಆಯುರ್ವೇದ ಗಿಡಮೂಲಿಕೆಗಳು ಒತ್ತಡದ ಸಂದರ್ಭಗಳಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ.

ತಜ್ಞರು ಏನು ಹೇಳುತ್ತಾರೆ?: ಮುಂಬೈನ ಆಯುರ್ವೇದ ವೈದ್ಯೆ ಡಾ.ಮನಿಶಾ ಕಾಳೆ ಅವರ ಪ್ರಕಾರ, ವಿವಿಧ ರೀತಿಯ ಮಾನಸಿಕ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಗಿಡಮೂಲಿಕೆಗಳ ಸಹಾಯದಿಂದ ಚಿಕಿತ್ಸೆ ನೀಡಬಹುದು. ಈ ಚಿಕಿತ್ಸೆಗಳಲ್ಲಿ ಬಳಸಲಾಗುವ ಗಿಡಮೂಲಿಕೆಗಳು ಸಮಸ್ಯೆಯ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಕಾಯಿಲೆಗಳು, ಅಸ್ವಸ್ಥತೆಗಳು ಮತ್ತು ಖಿನ್ನತೆ, ಒತ್ತಡ ಮತ್ತು ಆತಂಕದಂತಹ ಪರಿಸ್ಥಿತಿಗಳಂತಹ ಸಮಸ್ಯೆಗಳನ್ನು ಪ್ರಚೋದಿಸುವ ಹಾರ್ಮೋನುಗಳನ್ನು ಸಕ್ರಿಯಗೊಳಿಸುವಿಕೆಯಲ್ಲಿ ಬಹಳ ಪರಿಣಾಮಕಾರಿ.

ಚಹಾ ಅಥವಾ ಡಿಕಾಕ್ಷನ್‌ಗೆ ಕೆಲವು ಗಿಡಮೂಲಿಕೆಗಳನ್ನು ಸೇರಿಸುವುದರಿಂದ ಮಾನಸಿಕ ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಅಶ್ವಗಂಧ, ತುಳಸಿ, ದಾಲ್ಚಿನ್ನಿ, ಗೋಟು ಕೋಲ, ಬ್ರಾಹ್ಮಿ ಮತ್ತು ಜಟಮಾನ್ಸಿ ಕೆಲವು ನೈಸರ್ಗಿಕ ಗಿಡಮೂಲಿಕೆಗಳು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಅವರು.

ಅಶ್ವಗಂಧ: ಆಯುರ್ವೇದ ಔಷಧ ಅಶ್ವಗಂಧವನ್ನು ಅನೇಕ ರೀತಿಯ ದೈಹಿಕ ಮತ್ತು ಆತಂಕ, ಖಿನ್ನತೆ ಮತ್ತು ನಿದ್ರೆಯ ಸಮಸ್ಯೆಗಳು ಮತ್ತು ಇತರ ಮಾನಸಿಕ ಸಮಸ್ಯೆಗಳಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 2019 ರಲ್ಲಿ, ಅದರ ಪ್ರಯೋಜನಗಳ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಒತ್ತಡ ಮತ್ತು ಆತಂಕ ಸಮಸ್ಯೆ ಉಳ್ಳವರು ಈ ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸಿದ್ದರು.

8 ವಾರಗಳ ಅವಧಿಯ ಈ ಅಧ್ಯಯನದಲ್ಲಿ, ಮೂರು ಗುಂಪುಗಳಲ್ಲಿ ಭಾಗವಹಿಸುವವರಿಗೆ ಮೂರು ರೀತಿಯ ಚಿಕಿತ್ಸೆಯನ್ನು ನೀಡಲಾಯಿತು. ಇವುಗಳಲ್ಲಿ, ಎರಡು ಗುಂಪುಗಳಿಗೆ ನಿತ್ಯ 250 ಮತ್ತು 600 ಮಿಗ್ರಾಂ ಅಶ್ವಗಂಧ ಸಾರವನ್ನು ನೀಡಲಾಯಿತು. ಮತ್ತು ಮೂರನೇ ಗುಂಪಿಗೆ ಪ್ಲಸೀಬೊ (ಔಷಧಿ) ಡೋಸ್ ನೀಡಲಾಯಿತು.

ಸಂಶೋಧನೆಯಲ್ಲಿ ಅಶ್ವಗಂಧವನ್ನು ತೆಗೆದುಕೊಂಡವರು ಪ್ಲಸೀಬೊ ತೆಗೆದುಕೊಂಡ ಗುಂಪಿಗಿಂತ ಕಡಿಮೆ ಪ್ರಮಾಣದಲ್ಲಿ "ಕಾರ್ಟಿಸೋಲ್" (ಒತ್ತಡಕ್ಕೆ ಕಾರಣವಾಗುವ ಹಾರ್ಮೋನ್) ಅನ್ನು ಹೊಂದಿರುವುದು ಕಂಡುಬಂದಿದೆ. ಅದೇ ಸಮಯದಲ್ಲಿ, ಈ ಸಂಶೋಧನೆಯಲ್ಲಿ ಭಾಗವಹಿಸಿದವರ ನಿದ್ರೆಯ ಗುಣಮಟ್ಟ ಕೂಡ ಸುಧಾರಿಸಿರುವುದು ಕಂಡುಬಂದಿದೆ. ಪ್ರಯೋಗದಲ್ಲಿ, 600 ಮಿಗ್ರಾಂ ಅಶ್ವಗಂಧವನ್ನು ತೆಗೆದುಕೊಂಡವರ ಒತ್ತಡದ ಮಟ್ಟದಲ್ಲಿ ಗಮನಾರ್ಹವಾದ ಇಳಿಕೆಯಾಗಿರುವುದು ಬಹಿರಂಗವಾಗಿದೆ.

ಕ್ಯಾಮೊಮೈಲ್: ಇದು ಹೂವಿನಿಂದ ತಯಾರಿಸಿದ ಗಿಡಮೂಲಿಕೆಯಾಗಿದ್ದು, ಇದು ಅನೇಕ ಔಷಧೀಯ ಪ್ರಯೋಜನಗಳನ್ನು ಹೊಂದಿದೆ. 2013 ರಲ್ಲಿ ಮಾಡಿದ ಅಧ್ಯಯನವೊಂದು ಎಂಟು ವಾರಗಳ ಕಾಲ ಕ್ಯಾಮೊಮೈಲ್ ಗಿಡಮೂಲಿಕೆಗಳನ್ನು ಸೇವಿಸುವುದರಿಂದ ಆತಂಕದ ವಿವಿಧ ಲಕ್ಷಣಗಳನ್ನು ಕಡಿಮೆ ಮಾಡಬಹುದು ಎಂಬುದನ್ನು ಕಂಡುಹಿಡಿದಿದೆ.

ಅದೇ ಸಮಯದಲ್ಲಿ, 2016 ರಲ್ಲಿ ನಡೆಸಲಾದ ತುಲನಾತ್ಮಕ ಅಧ್ಯಯನದಲ್ಲಿ ಸಾಮಾನ್ಯ ಆತಂಕದ ಅಸ್ವಸ್ಥತೆಗಳಲ್ಲಿ (GAD) ಇದರ ದೀರ್ಘಕಾಲೀನ ಪ್ರಯೋಜನಗಳು ಕಂಡುಬಂದಿವೆ. ಕೆಲವು ಜನರಿಗೆ ಕ್ಯಾಮೊಮೈಲ್​ ಅಲರ್ಜಿಯಾಗಬಹುದು ಎಂಬುದನ್ನು ಕೂಡ ಗಮನಿಸಬೇಕು. ಇದರ ಹೊರತಾಗಿ, ವೈದ್ಯಕೀಯ ಸಲಹೆಯ ನಂತರವೇ ಕ್ಯಾಮೊಮೈಲ್ ಚಹಾ ಅಥವಾ ಪೂರಕಗಳನ್ನು ಸೇವಿಸಬೇಕು.

ನಿಂಬೆ ಚಹಾ: ನಿಂಬೆ ಚಹಾವನ್ನು ಸ್ಟ್ರೆಸ್ ಬಸ್ಟರ್ ಎಂದೂ ಕರೆಯುತ್ತಾರೆ. ಇದು ಒತ್ತಡ ಮತ್ತು ಆತಂಕ ನಿವಾರಣೆಗೆ ಮಾತ್ರವಲ್ಲ, ಇದರ ನಿಯಮಿತ ಸೇವನೆ ನಮ್ಮ ಮೂಡ್​ ಅನ್ನು ಕೂಡ ಫ್ರೆಶ್​ ಆಗಿರಿಸಲು ಸಹಾಯ ಮಾಡುತ್ತದೆ. 2004 ರಲ್ಲಿ ನಡೆಸಿದ ತುಲನಾತ್ಮಕ ಕ್ಲಿನಿಕಲ್ ಪ್ರಯೋಗದಲ್ಲಿ, ಮಾನಸಿಕ ಒತ್ತಡ ಹೊಂದಿರುವವರ ಮೇಲೆ ಅಧ್ಯಯನ ಮಾಡಲಾಯಿತು. ನಿಗದಿತ ಅವಧಿಗೆ ನಿಯಮಿತವಾಗಿ 600 ಮಿಗ್ರಾಂ ನಿಂಬೆ ಚಹಾವನ್ನು ಕುಡಿಯಲು ಅವರಲ್ಲಿ ಹೇಳಲಾಗಿತ್ತು, ಅದರ ಫಲಿತಾಂಶ ತುಂಬಾ ಸಕಾರಾತ್ಮಕವಾಗಿ ಬಂದಿತ್ತು.

ಲ್ಯಾವೆಂಡರ್ ಟೀ ಮತ್ತು ರೋಸ್ ಟೀ: ಲ್ಯಾವೆಂಡರ್ ಮತ್ತು ಗುಲಾಬಿ ಸಾರಭೂತ ತೈಲಗಳ ಪ್ರಯೋಜನಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಅದರ ಜೊತೆಗೆ ಲ್ಯಾವೆಂಡರ್​ ಹಾಗೂ ರೋಸ್​ ಘಮ ಹಾಗೂ ಅದರ ಔಷಧೀಯ ಗುಣಗಳಿಂದಾಗಿ ಇದರಿಂದ ತಯಾರಿಸಿದ ಚಹಾವು ಒತ್ತಡ, ಆತಂಕ ಮತ್ತು ಇತರ ಪರಿಸ್ಥಿತಿಗಳಲ್ಲಿ ಪ್ರಯೋಜನಕಾರಿಯಾಗಿದೆ.

ಪ್ಯಾಶನ್ ಫ್ಲವರ್​: ಪ್ಯಾಶನ್ ಫ್ರುಟ್​ ಮತ್ತು ಪ್ಯಾಶನ್ ಫ್ಲವರ್​ ಒಂದೇ ಸಸ್ಯದ ವಿವಿಧ ಭಾಗಗಳು. ನಮ್ಮ ದೇಶದಲ್ಲಿ ಪ್ಯಾಶನ್ ಹೂವನ್ನು ಕಮಲ ಎಂದೂ ಕರೆಯುತ್ತಾರೆ. ಇವುಗಳು ಕೂಡ ನಮ್ಮ ಒತ್ತಡ ನಿವಾರಣೆಗೆ ಉಪಯೋಗಕಾರಿಯಾಗಿವೆ.

ಇದನ್ನೂ ಓದಿ: ನಿಮಗೆ ನಿದ್ರಾಹೀನತೆಯೇ... ಹಾಗಾದರೆ ಈ ಸಾಂಪ್ರದಾಯಿಕ ತೈಲ ಚಿಕಿತ್ಸೆಗಳನ್ನು ಪಡೆದುಕೊಳ್ಳಿ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.