ETV Bharat / sukhibhava

ಕ್ಯಾನ್ಸರ್​ ಚಿಕಿತ್ಸೆಯಲ್ಲಿ ಆಯುರ್ವೇದ ಪದ್ಧತಿ ಸಹಾಯಕ: ತಜ್ಞರು

author img

By ETV Bharat Karnataka Team

Published : Dec 4, 2023, 2:26 PM IST

ಕ್ಯಾನ್ಸರ್​ ಚಿಕಿತ್ಸೆಗಳಾದ ರೇಡಿಯೇಷನ್​ ಮತ್ತು ಕಿಮೋಥೆರಪಿಯ ಅಡ್ಡ ಪರಿಣಾಮದಿಂದ ಬಳಲುವ ರೋಗಿಗಳಿಗೆ ಆಯುರ್ವೇದ ಪದ್ಧತಿ ಸಹಾಯಕವಾಗಬಲ್ಲದು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

Ayurveda can help in improving the quality of life for cancer patients

ತಿರುವನಂತರಪುರಂ: ಸಾಂಪ್ರದಾಯಿಕ ಬುದ್ದಿವಂತಿಕೆ ಮತ್ತು ಆಧುನಿಕ ವಿಜ್ಞಾನ ಒಟ್ಟಿಗೆ ಅಸ್ತಿತ್ವದಲ್ಲಿದೆ. ಕ್ಯಾನ್ಸರ್​ ರೋಗಿಗಳ ಚಿಕಿತ್ಸಾ ಅಭಿವೃದ್ಧಿಯಲ್ಲಿ ಆಯುರ್ವೇದ ಪ್ರಯೋಜನವನ್ನು ಅಳವಡಿಸಿಕೊಳ್ಳಬಹುದು ಎಂದು ಜಾಗತಿಕ ಖ್ಯಾತ ಆಂಕಲಾಜಿಸ್ಟ್​​, ನ್ಯೂಯಾರ್ಕ್​ನ ಮೆಮೋರಿಯಲ್​ ಸ್ಲೊನ್​ ಕೆಟ್ಟೆರಿಂಗ್​ ಕ್ಯಾನ್ಸರ್​ ಸೆಂಟರ್​ನ ಡಾ.ಜೂನ್​ ಮೌ ತಿಳಿಸಿದ್ದಾರೆ.

ಡಿಸೆಂಬರ್​ 1ರಿಂದ 5ರವರಗೆ ದಿ ಗ್ಲೋಬಲ್​ ಆಯುರ್ವೇದ ಫೆಸ್ಟಿಫಲ್​ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಗಳನ್ನು ಪರಿಹರಿಸಲು ಆಯುರ್ವೇದ ಮತ್ತು ಆಧುನಿಕ ಔಷಧವನ್ನು ಸಂಯೋಜಿಸುವ ಕುರಿತು ಚರ್ಚೆಗಳನ್ನು ನಡೆಸಲಾಗಿದೆ. ಈ ಸಮಾವೇಶದಲ್ಲಿ ಮಾತನಾಡಿದ ಮೌ, ಆಯುರ್ವೇದ ಸಮಾವೇಶಕ್ಕೆ ಇಲ್ಲಿಗೆ ಬಂದಿಳಿದ ಬಳಿಕ ಆಯುರ್ವೇದ ಮಸಾಜ್​ ಮತ್ತು ತೈಲ ಮಸಾಜ್​ ಪ್ರಯೋಜನ ಪಡೆದಿದ್ದಾಗಿ ಹೇಳಿದರು.

ಚಿಕಿತ್ಸೆಯಲ್ಲಿ ಆಯುರ್ವೇದದ ಪ್ರಭಾವಶಾಲಿ ತಂತ್ರದಿಂದ ಪ್ರಭಾವಿತನಾದೆ. ಕ್ಯಾನ್ಸರ್​ ಚಿಕಿತ್ಸೆಗಳಾದ ರೇಡಿಯೇಷನ್​ ಮತ್ತು ಕಿಮೋಥೆರಪಿಯ ಅಡ್ಡ ಪಡಿಣಾಮದಿಂದ ಬಳಲುವ ರೋಗಿಗಳಿಗೆ ಆಯುರ್ವೇದ ಪ್ರಯೋಜನವೂ ಸಹಾಯಕವಾಗಬಲ್ಲದು ಎಂದರು. ಆಯುರ್ವೇದಂತಹ ಪರ್ಯಾಯ ಚಿಕಿತ್ಸೆಯು ಕ್ಯಾನ್ಸರ್​ ರೋಗಿಗಳ ಜೀವನ ಗುಣಮಟ್ಟ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.

ಸಾಂಪ್ರದಾಯಿಕ ಬುದ್ದಿವಂತಿಕೆ ಮತ್ತು ಆಧುನಿಕ ಚಿಕಿತ್ಸೆ ಒಟ್ಟಿಗೆ ಅಸ್ತಿತ್ವದಲ್ಲಿರಬಹುದು. ಇವರೆಡನ್ನೂ ಸಮತೋಲನ ಮಾಡಬೇಕಿದೆ. ಈ ಕ್ಷೇತ್ರಗಳಲ್ಲಿ ಸಾಮರಸ್ಯ ಮೂಡಿಸಬೇಕಿದೆ ಎಂದರು. ಅಲ್ಲದೇ ತಮ್ಮ ಸಂಶೋಧನಾ ಕೇಂದ್ರವೂ ಕ್ಯಾನ್ಸರ್​ ಚಿಕಿತ್ಸೆಯಲ್ಲಿ ಯೋಗ, ಚೀನಾದ ಚಿಕಿತ್ಸೆ ಮತ್ತು ಅಕ್ಯುಪಂಕ್ಚರ್​ ಸಂಯೋಜಿತ ಅಂಶಗಳಿಂದ ಕೂಡಿದೆ.

ಭಾರತದಲ್ಲಿ ಆಯುರ್ವೇದ ಸಾಕಷ್ಟು ಬುದ್ದಿವಂತಿಕೆ ಮತ್ತು ಅನುಭವ ಹೊಂದಿದ್ದು, ಶತಮಾನಗಳಿಂದ ಅಭ್ಯಾಸ ಮಾಡುತ್ತಿರುವ ಇದರಿಂದ ಜಗತ್ತು ಸಾಕಷ್ಟು ಕಲಿಯಬಹುದಾಗಿದೆ. ಸಮಾವೇಶದಲ್ಲಿ ಮಾತನಾಡಿದ ಟೆಕ್ಸಾಸ್ ಯುನಿವರ್ಸಿಟಿಯ ಅಸೋಸಿಯೇಟ್​​ ಪ್ರೋಫೆಸರ್​ ಮತ್ತು ಆ್ಯಡ್ರೆಸನ್​ ಕ್ಯಾನ್ಸರ್​ ಸೆಂಟರ್​ನ ಎಂಡಿ ಡಾ.ಸಂತೋಷಿ ನಾರಾಯಣ್​​ ಮತ್ತು ಅವರ ತಂಡ, ರೋಗಿಗಳು ಮತ್ತು ಆಂಕೋಲಾಜಿಸ್ಟ್​​​ ಇದೇ ರೀತಿಯ ಮಾಹಿತಿಯಲ್ಲಿ ಚಿಕಿತ್ಸೆಯನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಕ್ಯಾನ್ಸರ್​ ರೋಗಿಗಳ ಆಹಾರ ಪದ್ಧತಿ, ನೀವು ನಿರ್ವಹಣೆ ಮತ್ತು ಆರೋಗ್ಯಯುತ ಜೀವನಶೈಲಿಗೆ ಗಮನಹರಿಸಿದ್ದಾಗಿ ಹೇಳಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಹೊರಾಂಗಣ ವಾಯು ಮಾಲಿನ್ಯದಿಂದ ಭಾರತದಲ್ಲಿ ಪ್ರತಿ ವರ್ಷ 2.18 ಮಿಲಿಯನ್​ ಸಾವು; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.