ETV Bharat / sukhibhava

ಜೈವಿಕ ಚಿಕಿತ್ಸೆ ಮೂಲಕ ತೀವ್ರತರದ ಆಸ್ತಮಾ ನಿಯಂತ್ರಿಸಬಹುದು; ಅಧ್ಯಯನ

author img

By ETV Bharat Karnataka Team

Published : Dec 11, 2023, 2:25 PM IST

ಹೆಚ್ಚಿನ ಸ್ಟಿರಾಯ್ಡ್​ ಚಿಕಿತ್ಸೆಗಳಿಂದ ಆಗುವ ಅಪಾಯವನ್ನು ಈ ಚಿಕಿತ್ಸೆ ಮೂಲಕ ತಡೆಯಬಹುದು ಎಂದು ಅಧ್ಯಯನ ತೋರಿಸಿದೆ.

asthma can be controlled using biologic therapies

ಲಂಡನ್​​: ತೀವ್ರವಾದ ಆಸ್ತಮಾ ಪ್ರಕರಣಗಳನ್ನು ಹೆಚ್ಚುವರಿಯಾಗಿ ಅಧಿಕ ಡೋಸ್​ ಇನ್ಹೇಲ್ಡ್​​​​ ಸ್ಟಿರಾಯ್ಡ್​​​​​ ಬಳಕೆ ಮಾಡದೆ ಜೈವಿಕ ಚಿಕಿತ್ಸೆಯ ಮೂಲಕ ನಿಯಂತ್ರಣ ಮಾಡಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ.

ದಿ ಲ್ಯಾನ್ಸೆಟ್​ ಜರ್ನಲ್​ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಬಯೋಲಾಜಿಕಲ್​ ಥೆರಪಿ ಬೆನ್ರಾಲಿಜುಮಾಬ್ (ಆಸ್ತಮ ರೋಗಕ್ಕೆ ನೀಡುವ ಚಿಕಿತ್ಸೆ) ಇನ್ಹೇಲ್ಡ್ ಸ್ಟಿರಾಯ್ಡ್​​​ ಡೋಸ್​ ಅನ್ನು ಸುರಕ್ಷಿತವಾಗಿ ಕಡಿಮೆ ಮಾಡುತ್ತದೆ. ಹಾಗೇ ಶೇ 60ರಷ್ಟು ಬಳಕೆಯನ್ನು ನಿಲ್ಲಿಸುತ್ತದೆ ಎಂದು ತಿಳಿಸಿದೆ.

ಬೆನ್ರಾಲಿಜುಮಾಬ್ ಎಂಬ ಬಯೋಲಾಜಿಕಲ್​ ಥೆರಪಿಯು ಹಲವು ವಿಧದಲ್ಲಿ ಆಸ್ತಮಾ ಕಾಳಜಿಯನ್ನು ಕ್ರಾಂತಿಕಾರಿಗೊಳಿಸುತ್ತದೆ. ಅಲ್ಲದೇ ಹೆಚ್ಚಿನ ಸ್ಟಿರಾಯ್ಡ್​ ಚಿಕಿತ್ಸೆಗಳಿಂದ ಆಗುವ ಅಪಾಯವನ್ನು ವನ್ನು ಈ ಚಿಕಿತ್ಸೆ ಮೂಲಕ ತಡೆಯಬಹುದು ಎಂದು ಅಧ್ಯಯನ ತೋರಿಸಿದೆ ಎಂದು ಅಧ್ಯಯನ ನಡೆಸಿದ ಲಂಡನ್​ನ ಕಿಂಗ್ಸ್​ ಕಾಲೇಜ್​ನ ಪ್ರೊ ಡೇವಿಡ್​ ಜಾಕ್ಸನ್ ತಿಳಿಸಿದ್ದಾರೆ.

ಈ ಬಯೋಲಾಜಿಕಲ್​ ಥೆರಪಿ ಅನೇಕ ರೋಗಿಗಳಲ್ಲಿ ಇನ್ಹೇಲ್ಡ್​​ ಸ್ಟಿರಾಯ್ಡ್​​ಗಳು ಬಳಕೆಯಿಂದ ಆಗುವ ಅಡ್ಡ ಪರಿಣಾಮವನ್ನು ಕಡಿಮೆ ಮಾಡುವ ಮತ್ತು ತೊಡೆದು ಹಾಕುವುದನ್ನು ಕಾಣಬಹುದು. ಇದು ಅಸ್ಟಿಯೊಪೊರೊಸಿಸ್​​, ಮಧುಮೇಹ, ಕ್ಯಾಟರಾಕ್ಟ್ಸ್​​​ ಅಪಾಯವನ್ನು ಹೆಚ್ಚಿಸಬಹುದು.

ಜಾಗತಿನಾದ್ಯಂತ ಇರುವ ಸಾಮಾನ್ಯ ಶ್ವಾಸಕೋಶ ರೋಗದಲ್ಲಿ ಆಸ್ತಮಾವೂ ಒಂದಾಗಿದೆ. ಇದರಿಂದ 300 ಮಿಲಿಯನ್​ ಮಂದಿ ಪರಿಣಾಮಕ್ಕೆ ಒಖಗಾಗುತ್ತಿದ್ದಾರೆ. ಇದರಲ್ಲಿ ಶೇ 3 ರಿಂದ 5 ಮಂದಿ ಗಂಭೀರ ಆಸ್ತಮಾದ ಪರಿಣಾಮಕ್ಕೆ ಒಳಗಾಗಿದ್ದಾರೆ.

ಯುಕೆ, ಫ್ರಾನ್ಸ್​, ಇಟಲಿ ಮತ್ತು ಜರ್ಮನಿಯಂತಹ ನಾಲ್ಕು ದೇಶದಲ್ಲಿ ಈ ಅಧ್ಯಯನವನ್ನು ನಡೆಸಲಾಗಿದೆ. ಅಧ್ಯಯನದಲ್ಲಿ 208 ರೋಗಿಗಳನ್ನು 32 ವಾರಗಳ ಕಾಲ ಅಧಿಕ ಡೋಸ್​ನ ಇನ್​ಹೇಲ್ಡ್​​ ಸ್ಟಿರಾಯ್ಡ್​ಗಳನ್ನು ನೀಡಲಾಗಿದ್ದು, 16 ವಾರಗಳ ಅವಧಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಶೇ 90ರಷ್ಟು ರೋಗಿಗಳ ಆರೋಗ್ಯವೂ ಇದರಿಂದ ಹೆಚ್ಚು ಬಿಗಡಾಯಿಸಿದೆ ಎಂದು ಅಧ್ಯಯನ ತಿಳಿಸಿದೆ

ಬೆನ್ರಾಲಿಜುಮಾಬ್ ಜೈವಿಕ ಚಿಕಿತ್ಸೆಯು ಇಸಿನೊಫಿಲ್​ ಎಂದು ಕರೆಯುವ ಉರಿಯೂತದ ಕೋಶವನ್ನು ಕಡಿಮೆ ಮಾಡಿದೆ. ಈ ಪ್ರಕ್ರಿಯೆಯು ತೀವ್ರತರದ ಆಸ್ತಮಾ ರೋಗಿಗಳ ವಾಯುಮಾರ್ಗದಲ್ಲಿ ಅಸಹಜ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತದೆ.

ಏನಿದು ಇನ್ಹೇಲ್ಡ್ ಸ್ಟಿರಾಯ್ಡ್​​​: ಅಸ್ತಮಾ ನಿಯಂತ್ರಿಸುವಲ್ಲಿ ಇನ್ಹಲೇಷನ್ ಚಿಕಿತ್ಸೆ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಶ್ವಾಸಕೋಶಕ್ಕೆ ನೇರವಾಗಿ ಔಷಧ ಪೂರೈಸುವಲ್ಲಿ ಇನ್ಹಲೇಷನ್ ಚಿಕಿತ್ಸೆ ಉಪಯುಕ್ತ. ಆದರೆ, ರೋಗಿಗಳು ನಿಯಮಿತವಾಗಿ ಔಷಧ ತೆಗೆದುಕೊಳ್ಳಬೇಕಾಗುತ್ತದೆ. ರೋಗದ ಶಕ್ತಿ ಮೇಲೆ ಪ್ರತಿರೋಧಕವಾಗಿ ವರ್ತಿಸುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ : ಕೋವಿಡ್​ನಿಂದ ಚೇತರಿಕೆ ಕಂಡರೂ 2ವರ್ಷಗಳ ಕಾಲ ಶ್ವಾಸಕೋಶದಲ್ಲೇ ಇರುತ್ತೆ ಸೋಂಕು; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.