ಸಿಂಗಾಪೂರ: ಏಷ್ಯಾದ ಜನರು ತಡವಾಗಿ ನಿದ್ದೆಗೆ ಜಾರುವ ಜೊತೆಗೆ ಕಡಿಮೆ ನಿದ್ದೆ ಮಾಡುತ್ತಾರೆ. ಜಗತ್ತಿನ ಬೇರೆ ದೇಶದ ಜನರಿಗೆ ಹೋಲಿಸಿದಾಗ ಅವರ ನಿದ್ದೆ ಮಟ್ಟ ಕಳಪೆಯಾಗಿದೆ ಎಂದು ಅಧ್ಯಯನ ಪತ್ತೆ ಮಾಡಿದೆ.
ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪೂರ ಸಂಶೋಧಕರು ಈ ಸಂಬಂಧ ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನವೂ ಏಷ್ಯಾ ಜನರು ಕಡಿಮೆ ನಿದ್ದೆ ಅವಧಿ ಹೊಂದಿದ್ದಾರೆ. ಅಷ್ಟೇ ಅಲ್ಲದೇ, ವಾರಾಂತ್ಯದ ಮತ್ತು ವಾರದ ದಿನಗಳ ನಿದ್ದೆ ಅವಧಿಯಲ್ಲಿ ಅನೇಕ ವ್ಯತ್ಯಾಸವಿದೆ. ಯುರೋಪ್, ಒಸೆನಿಒಯಾ ಮತ್ತು ನಾರ್ಥ ಅಮೆರಿಕ ಜನರಿಗೆ ಹೋಲಿಕೆ ಮಾಡಿದಾಗ ಅವರು ತಡವಾಗಿ ನಿದ್ದೆ ಮಾಡುತ್ತಾರೆ. ಅಲ್ಲದೇ, ಅವರ ನಿದ್ದೆ ಅವಧಿಯನ್ನು ವಾರಾಂತ್ಯದಲ್ಲಿ ವಿಸ್ತರಣೆ ಕೂಡ ಮಾಡುವುದಿಲ್ಲ. ವಾರದಲ್ಲಿ ಕಡಿಮೆ ನಿದ್ದೆ ಮಾಡಿ ವಾರಾಂತ್ಯದಲ್ಲಿ ಹೆಚ್ಚಿನ ನಿದ್ದೆ ಅವಧಿಯನ್ನು ಹೊಂದುವುದು ನಿದ್ದೆ ವಿಸ್ತರಣೆ ಎಂದು ಕರೆಯಲಾಗುವುದು.
ವಾರದಲ್ಲಿನ ಕಡಿಮೆ ನಿದ್ದೆ ಮತ್ತು ವಾರಾಂತ್ಯದ ದೀರ್ಘ ನಿದ್ದೆ ವಿಸ್ತರಣೆ ನಡುವೆ ಸ್ಪಷ್ಟವಾದ ಸಂಬಂಧವಿದೆ. ಏಷ್ಯಾದ ಜನರು ವಾರಾಂತ್ಯದಲ್ಲಿ ನಿದ್ದೆ ವಿಸ್ತರಣೆ ಮಾಡಿದರು. ಈ ವಿಸ್ತರಣೆ ನಿದ್ದೆ ಅವಧಿ ಕೂಡ ಕಡಿಮೆಯಾಗಿದೆ ಎಂದಿದ್ದಾರೆ.
ಯುರೋಪ್ನಲ್ಲಿ ಸಾಮಾನ್ಯವಾಗಿ ವಾರಾಂತ್ಯ ಎಂದರೆ ವಿಶ್ರಾಂತಿ ಮತ್ತು ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಎಂದು ಪರಿಗಣಿಸಲಾಗುತ್ತದೆ. ಆದರೆ, ಏಷ್ಯಾದಲ್ಲಿ ಜನರು ವಾರಾಂತ್ಯವನ್ನು ಕೆಲಸಕ್ಕೆ ಹಾಗೂ ವಾರದಲ್ಲಿ ಮಾಡಲು ಸಾಧ್ಯವಾಗದ ಕೆಲಸಗಳ ಪೂರ್ಣಗೊಳಿಸಲು ಅಥವಾ ಕುಟುಂಬದ ಜವಾಬ್ದಾರಿ ನಿರ್ವಹಣೆಗೆ ಮೀಸಲಿಡಲಾಗಿದೆ ಎಂದು ಎನ್ಯುಎಸ್ ಮೆಡಿಸಿನ್ ಸೆಂಟರ್ ಫಾರ್ ಸ್ಲಿಪ್ ಅಂಡ್ ಕಾಂಗ್ನಿಷನ್ನ ಹಿರಿಯ ಸಂಶೋಧಕ ಆಡ್ರಿಯನ್ ವಿಲ್ಲೋಬಿ ತಿಳಿಸಿದ್ದಾರೆ.
ಏಷ್ಯಾದಲ್ಲಿನ ದೀರ್ಘ ಕೆಲಸದ ಸಮಯ ಮತ್ತು ಕೆಲಸದ ಸಂಸ್ಕೃತಿ ವಿಭಿನ್ನತೆಯಿಂದಾಗಿ ಜನರು ವಾರಾಂತ್ಯದಲ್ಲಿ ನಿದ್ದೆ ಹೊಂದಲು ಸಾಧ್ಯವಿಲ್ಲ. ಆದರೆ, ಅವರು ವಾರದ ದಿನದಲ್ಲಿ ಅವಕಾಶ ಸಿಕ್ಕಾಗ ನಿದ್ದೆಯನ್ನು ಪೂರೈಸಿಕೊಳ್ಳುತ್ತಾರೆ ಎಂದು ವಿಲ್ಲೋಬಿ ಹೇಳಿದ್ದಾರೆ.
ಈ ಅಧ್ಯಯನವನ್ನು ಸೈಂಟಿಫಿಕ್ ಜರ್ನಲ್ ಸ್ಲಿಪ್ ಮೆಡಿಸಿನ್ನಲ್ಲಿ ಪ್ರಕಟಿಸಲಾಗಿದೆ. 35 ದೇಶಗಳ 30 ರಿಂದ 55 ವರ್ಷದ ವಯೋಮಾನದ 2,20,000 ಜನರ ನಿದ್ರೆ ದತ್ತಾಂಶದ ಆಧಾರದ ಮೇಲೆ ಈ ಅಧ್ಯಯನ ರೂಪಿಸಲಾಗಿದೆ.
ಹಿಂದಿನ ಅಧ್ಯಯನದಲ್ಲಿ ಕಡಿಮೆ ನಿದ್ದೆ ಅವಧಿಯು ಹೆಚ್ಚಿನ ನಿದ್ದೆಯ ದಕ್ಷತೆಗೆ ಸಂಬಂಧಿಸಿದೆ ಎಂದು ತೋರಿಸಿತು. ಕಾರಣ ಜನರು ತಮ್ಮ ನಿದ್ದೆಯ ಅವಕಾಶವನ್ನು ಹೆಚ್ಚು ಮಾಡಲು ಪ್ರಯತ್ನಿಸುತ್ತಾರೆ. ಆದಾಗ್ಯೂ ಅಧ್ಯಯನ ತಿಳಿಸುವಂತೆ ಕಡಿಮೆ ನಿದ್ದೆಯು ಅವಧಿಯು ಏಷ್ಯಾ ಜನರ ಕಡಿಮೆ ನಿದ್ದೆ ಸಾಮರ್ಥ್ಯವನ್ನು ತೋರಿಸುತ್ತದೆ.
ಇದಕ್ಕೆ ಕಡಿಮೆ ನಿದ್ದೆ ಅವಧಿಯ ಹಿಂದೆ ಕೆಲಸ ಸೇರಿದಂತೆ ಇತರೆ ಆತಂಕಗಳಿದ್ದು, ಇವು ಕಡಿಮೆ ನಿದ್ದೆ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ: 2030ರ ಹೊತ್ತಿಗೆ 50 ವರ್ಷದೊಳಗಿನವರಲ್ಲಿ ಕ್ಯಾನ್ಸರ್ ಸಂಬಂಧಿ ಸಾವಿನ ಪ್ರಮಾಣ ಏರಿಕೆ: ಅಧ್ಯಯನ