ETV Bharat / sukhibhava

ತಾಪಮಾನ ಹೆಚ್ಚಿದಂತೆ ಸೊಳ್ಳೆಗಳ ಸ್ಥಳಾಂತರ: ಮಲೇರಿಯಾ ಪ್ರಕರಣಗಳು ಮತ್ತಷ್ಟು ಏರಿಕೆ

ಸೊಳ್ಳೆಗಳು ವಲಸೆ ಹೋದಂತೆ, ಸೊಳ್ಳೆಗಳಿಗೆ ಆಶ್ರಯವನ್ನೇ ಹೊಂದಿರದಂತಹ ಅನೇಕ ಪ್ರದೇಶದಲ್ಲೂ ಮಲೇರಿಯಾ ಹೆಚ್ಚಬಹುದು.

author img

By

Published : Jul 21, 2023, 5:10 PM IST

As temperatures rise, mosquitoes are also on move; Scienists worry that could mean more malaria

ಹೈದರಾಬಾದ್​: ಗ್ರಹಗಳು ಬೆಚ್ಚಗೆ ಆಗುತ್ತಿದ್ದಂತೆ ಸೊಳ್ಳೆಗಳು ಮೇಲಿನ ಪ್ರದೇಶಗಳಿಗೆ ವಲಸೆ ಹೋಗುತ್ತದೆ. ತಾಪಮಾನ ಹೆಚ್ಚಿದಂತೆ ಮಲೇರಿಯಾ ಪಸರಿಸುವ ಸೊಳ್ಳೆಗಳು ಎತ್ತರಕ್ಕೆ ಹೋಗುತ್ತಿದೆ ಎಂದು ಸಂಶೋಧನೆ ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ತಂಡ ದಕ್ಷಿಣ ಅಮೆರಿಕದ ಉಷ್ಣವಲಯದ ಎತ್ತರದ ಪ್ರದೇಶಗಳಿಂದ ಪರ್ವತಗಳವರೆಗೆ ವಿದ್ಯಮಾನ ಹೆಚ್ಚಿರುವ ಸಾಕ್ಷಿ ಮುಂದಿಟ್ಟಿದೆ. ಸದ್ಯ ಇದೀಗ ವಿಜ್ಞಾನಿಗಳು ಈ ಪ್ರದೇಶದಲ್ಲಿ ವಾಸಿಸುತ್ತಿರುವ​ ಬಗ್ಗೆ ಚಿಂತಿತರಾಗಿದ್ದಾರೆ. ಪೂರ್ವ ಇಥಿಯೋಪಿಯಾ ಸೇರಿದಂತೆ ಮೌಂಟ್​ ಕಿಲಿಮಜರೊ ದಂತಹ ಕೀಟಗಳಿಗೆ ಆಶ್ರಯವೇ ಇಲ್ಲದಿರುವ ದೇಶಗಳು ಇದೀಗ ಈ ರೋಗಕ್ಕೆ ತೆರೆದುಕೊಳ್ಳುತ್ತಿದೆ.

ಹವಾಮಾನ ಬದಲಾವಣೆಯಿಂದಾಗಿ ಬಿಸಿ ಹೆಚ್ಚಾಗಿ ಹೆಚ್ಚಿನ ಉಷ್ಣಾಂಶದ ವಾತಾವರಣಗಳು ರೂಪುಗೊಳ್ಳುತ್ತಿದೆ. ಈ ಹಿನ್ನೆಲೆ ಸೊಳ್ಳೆಗಳು ಬದುಕುಳಿಯಲು ಎತ್ತರದ ಬೆಟ್ಟಗುಡ್ಡಗಳಿಗೆ ಹೋಗುತ್ತಿದೆ ಎಂದು ಒಟ್ಟಾವಾ ಯುನಿವರ್ಸಿಟಿಯ ಪ್ರೊ ಮನೀಶ್​ ಕುಲಕರ್ಣಿ ತಿಳಿಸಿದ್ದಾರೆ. 2016ರಲ್ಲಿ ಈ ಸಂಬಂಧ ಅಧ್ಯಯನ ನಡೆಸಲಾಗಿದ್ದು, ಮಲೇರಿಯಾ ರೋಗ ತರುವ ಸೊಳ್ಳೆಗಳು ರೀತಿ ಅತಿ ಎತ್ತರದ ಮೌಂಟ್​ ಕಿಲಿಮಂಜಾರೊ ಪ್ರದೇಶಗಳಿಗೆ ಆವಾಸಸ್ಥಾನವಾಗಿದೆ.

ಇದೆ ರೀತಿಯ ಪ್ರಕರಣಗಳು 2015ರಲ್ಲಿ ಕಂಡು ಬಂದಿತು. ಹವಾಲಿನ್​ ಪಕ್ಷಿಗಳು ಮಲೇರಿಯಾ ತರುವ ಸೊಳ್ಳೆಗಳಿಂದ ನಿಧಾನವಾಗಿ ಎತ್ತರದ ಪ್ರದೇಶಗಳಿಗೆ ವಲಸೆ ಹೋದವು. 2021ರಲ್ಲಿ ಶೇ 96ರಷ್ಟು ಮಲೇರಿಯಾ ಸಾವುಗಳು ಆಫ್ರಿಕಾದಲ್ಲಿ ವರದಿ ಆಗಿದೆ ಅನೇಕ ಸಂಶೋಧಕರು ಇದನ್ನು ಪತ್ತೆ ಮಾಡಿದ್ದಾರೆ. ತಾಂಜೇನಿಯಾ ಮತ್ತು ಕೀನ್ಯಾ ದೇಶಗಳಲ್ಲಿ 2021ರಲ್ಲಿ ಮಾಡಲಾದ ವರದಿಯಂತೆ ಜಾಗತಿಕ ಮಲೇರಿಯಾ ಸಾವಿನಲ್ಲಿ 6ರಷ್ಟು ಪಾಲು ಹೊಂದಿದೆ.

2002ರಿಂದ 2021ರವರೆಗೆ ಮಲೇರಿಯಾದಿಂದ ಜಾಗತಿಕ ಸಾವಿನ ಸಂಖ್ಯೆ ಶೇ 29ರಷ್ಟು ಇಳಿಕೆ ಆಗಿದೆ. ದೇಶಗಳು ಇವುಗಳ ವಿರುದ್ಧ ಕಠಿಣ ನೀತಿ ಕೈಗೊಂಡ ಹಿನ್ನೆಲೆ ಇದು ಸಂಭವಿಸಿದೆ. ಆದಾಗ್ಯೂ ಆಫ್ರಿಕಾ ದೇಶದಲ್ಲಿ 5 ವರ್ಷದೊಳಗಿನ ಶೇ 80ರಷ್ಟು ಮಕ್ಕಳು ಮಲೇರಿಯಾದಿಂದ ಸಾವನ್ನಪ್ಪಿದ್ದಾರೆ. ಇತ್ತೀಚಿನ ವಿಶ್ವ ಮಲೇರಿಯಾ ವರದಿಯಲ್ಲಿ ಡಬ್ಲ್ಯೂಎಚ್​ಇಒ ವರದಿಯಂತೆ 2021ರಲ್ಲಿ 247 ಮಿಲಿಯನ್​ ಸಾವಿನ ಪ್ರಕರಣ ನೈಜೀರಿಯಾ, ದಿ ಡೆಮೊಕ್ರಟಿಕ್​ ರಿಪಬ್ಲಿಕ್​ ಆಫ್​ ದಿ ಕಾಂಗೋ, ಉಂಗಡಾ, ಮೊಹಾಂಬಿಕ್ಯೂನಲ್ಲಿ ಕಂಡು ಬಂದಿದೆ.

ಹವಾಮಾನ ಬದಲಾವಣೆಗೂ ಸೊಳ್ಳೆಗಳ ಆವಾಸಸ್ಥಾನ ಬದಲಾವಣೆಗೂ ಸಂಬಂಧ: ಹವಾಮಾನ ಬದಲಾವಣೆಯಿಂದಾಗಿ ಸೊಳ್ಳೆಗಳ ಆವಸಾಸ್ಥಾನ ಸಹ ಬದಲಾವಣೆ ಆಗಿದೆ ಎಂದು ಜಾನ್​ ಹಾಪ್ಕಿನ್ಸ್​ ಬ್ಲೂಬರ್ಗ್​​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​​ನ ಸ್ಪೆಷಲಿಸ್ಟ್​ ಡೊಗ್​ ನೊರ್ರಿಸ್​ ತಿಳಿಸಿದ್ದಾರೆ. ಅವರು ಕೂಡ ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನಿಶ್ಚತತೆ ಹೆಚ್ಚಿದ್ದು, ಈ ಸೊಳ್ಳೆಗಳ ಸಂಖ್ಯೆ ಸ್ಥಳಾಂತರ ಭವಿಷ್ಯದಲ್ಲಿ ಜನರಿಗೆ ಪರಿಣಾಮ ಬೀರಲಿದೆ. ಉಪ ಸಹಾರನ್ ಆಫ್ರಿಕಾದಾದ್ಯಂತ ಸೊಳ್ಳೆಗಳ ಚಲನೆಯು ವಾಹಕಗಳು ಕಳೆದೊಂದು ವರ್ಷದಿಂದ 6.5 ಮೀಟರ್ ಎತ್ತರದಲ್ಲಿ ಮೇಲ್ಮುಖವಾಗಿ ಚಲಿಸಿರುವುದನ್ನು ಕಂಡು ಬಂದಿದೆ.

ಸೊಳ್ಳೆಗಳು ತಮ್ಮ ಆವಾಸಸ್ಥಾನ ಬಗ್ಗೆ ಹೆಚ್ಚು ಸೂಕ್ಷ್ಮವಾಗಿದೆ. ಅನೇಕ ಮಲೇರಿಯಾ ತರುವ ತಳಿಗಳು ತಾಪಮಾನದಲ್ಲಿನ ವಿಭಿನ್ನ ಆಯ್ಕೆ ಹೊಂದಿರುತ್ತದೆ. ಅಂದರೆ ತಾಪಮಾನ, ಆರ್ದ್ರತೆ ಮತ್ತು ಮಳೆ ಹೀಗೆ. ಹವಾಮಾನ ಬದಲಾವಣೆಗಳು ಈಗಾಗಲೇ ಸೊಳ್ಳೆಗಳ ಸಂಖ್ಯೆಗಳ ಮೇಲೆ ಪರಿಣಾಮ ಬೀರಿದೆ. ಆದರೂ ಮಲೇರಿಯ ಎಲ್ಲಿ ಹರಡಲಿದೆ ಎಂದು ಅಂದಾಜಿಸುವುದು ಕಷ್ಟವಾಗಲಿದೆ. ಮಲೇರಿಯಾ ಸೊಳ್ಳೆಗಳಲ್ಲಿ ಅಗಾಧ ಸ್ಥಳಾಂತರವಾಗಿದೆ. ಕೀನ್ಯಾದಲ್ಲಿ ಹೆಚ್ಚು ಇದ್ದು ಮಲೇರಿಯಾ ಸೊಳ್ಳೆ ಪತ್ತೆ ಮಾಡುವುದು ಕಷ್ಟವಾಗಿದೆ. ಆದರೆ, ಇದು ಪರಿಸರ ಬದಲಾವಣೆಗಳು ಹವಾಮಾನದಿಂದ ಅಲ್ಲ. ಸೊಳ್ಳೆಗಳು ಬಿಸಿ ಪರಿಸ್ಥಿತಿಗಳಲ್ಲೂ ಬದುಕುತ್ತದೆ. ಮಾನವ ಕಾರಣವಾದ ಪರಿಸರ ಬದಲಾವಣೆಯಿಂದಾಗಿ ಸೊಳ್ಳೆಗಳು ಹೊರದೂಡುತ್ತಿದೆ ಎಂದರು.

ದೀರ್ಘ ಮಳೆಗಾಲವೂ ಸೊಳ್ಳೆಗಳಿಗೆ ಆವಾಸಸ್ಥಾನವಾಗಿದ್ದು, ನೀರಿನಲ್ಲಿ ಅದು ಸಂತಾನೋತ್ಪತ್ತಿ ಮಾಡುತ್ತದೆ. ಆದರೆ, ಬರ ಪ್ರದೇಶಗಳಲ್ಲಿ ಜನರು ಕಂಟೈನರ್​ ಸಹಾಯದಿಂದ ನೀರು ಶೇಖರಣೆ ಮಾಡುವುದರಿಂದ ಇದು ಸಂತಾನೋತ್ಪತ್ತಿ ಮಾಡುತ್ತದೆ. ಇದರಿಂದ 2004 ಮತ್ತು 2005ರಲ್ಲಿ ಕೀನ್ಯಾದ ಕರಾವಳಿ ಭಾಗದಲ್ಲಿ ಚಿಕನ್​ಗುನ್ಯಾ, ಸೊಳ್ಳೆ ಆಧಾರಿತ ರೋಗ ಹೆಚ್ಚಾಯಿತು.

ತಾಪಮಾನವೂ 2000ನೆ ಇಸುವಿಯ ಮಧ್ಯಭಾಗದಲ್ಲಿ ಹೆಚ್ಚು ಬಿಸಿಯಾಯಿತು. ಆದರೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಆ ಸಮಯದಲ್ಲಿ ಇಥಿಯೋಪಿಯಾದ ಎತ್ತರದ ಪ್ರದೇಶದಲ್ಲಿ ಮಲೇರಿಯಾವನ್ನು ನಿಯಂತ್ರಿಸುವ ಪ್ರಯತ್ನಗಳನ್ನು ಹೆಚ್ಚಿಸಿದರು. ಇದರಿಂದ ಪ್ರಕರಣಗಳಲ್ಲಿ ನಿರಂತರ ಕುಸಿತಕ್ಕೆ ಕಾರಣವಾಯಿತು. ಆದರೆ ಇಥಿಯೋಪಿಯನ್ ಆರೋಗ್ಯ ಸಚಿವಾಲಯವು 2030 ರ ವೇಳೆಗೆ ಮಲೇರಿಯಾವನ್ನು ತೊಡೆದುಹಾಕಲು ಯೋಜನೆಯನ್ನು ರೂಪಿಸಿದಾಗಲೂ ಜನಸಂಖ್ಯೆಯ ಬದಲಾವಣೆಗಳು, ಹಣಕಾಸಿನ ಕೊರತೆ, ಹೊಸ ಸೊಳ್ಳೆ ಪ್ರಭೇದಗಳ ಆಕ್ರಮಣ ಮತ್ತು ಹವಾಮಾನ ಬದಲಾವಣೆಯ ಬೆದರಿಕೆ ವ್ಯಕ್ತವಾದವು.

ಇದನ್ನೂ ಓದಿ: ಬೆಂಗಳೂರಿನಲ್ಲಿ 11 ದಿನದಲ್ಲಿ 178 ಡೆಂಘೀ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.