ETV Bharat / sukhibhava

ಲೈಂಗಿಕ ಸಮಸ್ಯೆಯೇ?.. ನುಗ್ಗಿಕಾಯಿ ಅಲ್ಲ, ಮೆಂತ್ಯೆ ತಿನ್ನಿಸಿ ನೋಡಿ! - ಮೆಂತ್ಯ ಬೀಜಗಳ ಸುದ್ದಿ

ಸಂತಾನ ಸಮಸ್ಯೆಗಳನ್ನು ಎದುರಿಸುತ್ತಿರುವಿರಾ?.. ಆದರೆ ಅಂತಹ ಪುರುಷರು ಜಾಗರೂಕರಾಗಿರಬೇಕು. ಏಕೆಂದರೆ ಅವರು ಮಧುಮೇಹದಂತಹ ಜೀವಕ್ರಿಯೆಯ ಕಾಯಿಲೆಗಳು ಒಕ್ಕರಿಸುವ ಅಪಾಯವನ್ನು ಹೊಂದಿರುತ್ತಾರೆ. ಇದು ಸಂಶೋಧನೆಯೊಂದರಲ್ಲಿ ಬಹಿರಂಗವಾಗಿದೆ. ಕಡಿಮೆ ವೀರ್ಯಾಣು ಹೊಂದಿರುವ ಪುರುಷರನ್ನು ಆಯ್ಕೆ ಮಾಡಿ ಇತರರೊಂದಿಗೆ ಹೋಲಿಸಿದಾಗ ಕೆಲವು ಹೊಸ ವಿಷಯಗಳು ಬಹಿರಂಗಗೊಂಡಿವೆ.

Eat Fenugreek seeds for fertility  Fenugreek seeds and benefits  Fenugreek seeds news  Methi Benefits news  ಲೈಂಗಿಕ ವೃದ್ಧಿಯಾಗಲು ಮೆಂತ್ಯ ಬೀಜಗಳನ್ನು ತಿನ್ನಿರಿ  ಮೆಂತ್ಯ ಬೀಜಗಳು ಮತ್ತು ಪ್ರಯೋಜನಗಳು  ಮೆಂತ್ಯ ಬೀಜಗಳ ಸುದ್ದಿ  ಮೆಂತ್ಯ ಪ್ರಯೋಜನಗಳ ಸುದ್ದಿ
ನುಗ್ಗಿಕಾಯಿ ಅಲ್ಲ, ಮೆಂತ್ಯ ತಿನ್ನಿಸಿ ನೋಡಿ
author img

By

Published : Jul 30, 2022, 9:56 AM IST

Updated : Jul 30, 2022, 10:06 AM IST

ಸಂತಾನ ಸಮಸ್ಯೆ ಸರ್ವೇಸಾಮಾನ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂತಾನ ಸಂಬಂಧಿ ಸಮಸ್ಯೆಗಳನ್ನು ಪುರುಷರು ಎದುರಿಸುತ್ತಿದ್ದರೆ, ಅವರಿಗೆ ಮುಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂತಾನೋತ್ಪತ್ತಿ ಸಮಸ್ಯೆ ಎದುರಿಸುತ್ತಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಲೈಂಗಿಕತೆಗೆ ಅವಶ್ಯಕವಾಗಿರುವ ಶೇ.33ರಷ್ಟು ವ್ಯಕ್ತಿಗಳಲ್ಲಿ ಸಾಮಾನ್ಯ ವ್ಯಕ್ತಿಗಳಿಗಿಂತ ಏಳು ಪಟ್ಟು ಟೆಸ್ಟೋಸ್ಟಿರಾನ್ ಹಾರ್ಮೋನ್‌ಗಳ ಪ್ರಮಾಣ ಕಡಿಮೆ ಇರುತ್ತದೆ ಎಂದು ಕಂಡು ಬಂದಿದೆ. ಇಂತಹವರಲ್ಲಿ ಮೂಳೆಗಳಲ್ಲಿನ ಸಾಂದ್ರತೆಯೂ ಕಡಿಮೆ ಇರುತ್ತದೆ ಎಂಬುದು ಮತ್ತೊಂದು ವಿಚಾರ.

ಕಡಿಮೆ ಟೆಸ್ಟೋಸ್ಟಿರಾನ್ ಹಾರ್ಮೋನ್ ಮಟ್ಟವನ್ನು ಹೊಂದಿರುವವರಲ್ಲಿ ಮೂಳೆಗಳಲ್ಲಿ ಸಾಂದ್ರತೆಯೂ ಕಡಿಮೆ ಇರುವುದು ವಿಶೇಷವಾಗಿ ಕಂಡು ಬರುತ್ತದೆ. ಇದರಿಂದ ಮೂಳೆಯ ಬಲ ಕಡಿಮೆಯಾಗಿದ್ದು, ಸುಲಭವಾಗಿ ಮುರಿತಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಗ್ಲೂಕೋಸ್ ಮಟ್ಟವನ್ನು ಸೂಚಿಸುವ HbA1c ಕೂಡ ಅಧಿಕವಾಗಿರುತ್ತದೆ.

ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುವುದು ಇದರ ಕಾರ್ಯವಾಗಿದೆ. ಇದು ಮಧುಮೇಹದ ಅಪಾಯ ಹೆಚ್ಚಿಸುತ್ತವೆ ಎಂಬುದು ಗಮನಾರ್ಹ. ಆದ್ದರಿಂದ, ಲೈಂಗಿಕ ಚಿಕಿತ್ಸೆಗಳನ್ನು ತೆಗೆದುಕೊಳ್ಳುವ ಎಲ್ಲ ಪುರುಷರು ಲೈಂಗಿಕ ಹಾರ್ಮೋನ್ ಪರೀಕ್ಷೆಗೆ ಒಳಗಾಗುವುದು ಉತ್ತಮ ಎಂದು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ.

ಒಮ್ಮೊಮ್ಮೆ ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದೇ ಇರುವುದೂ ಸಂತಾನ ಸಮಸ್ಯೆಗೆ ಕಾರಣವಾಗಬಹುದು. ಇಂಥವರು ಲೈಂಗಿಕತೆಯ ಕುರಿತು ಆಸಕ್ತಿ ಹೆಚ್ಚಿಸಿಕೊಳ್ಳುವುದು ಅತ್ಯಂತ ಮುಖ್ಯ. ಕೆಲವರು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಬಾದಾಮಿಯಿಂದ ಹಿಡಿದು ನುಗ್ಗಿಕಾಯಿವರೆಗೆ ವಿವಿಧ ಪದಾರ್ಥಗಳನ್ನು ತಿನ್ನುತ್ತಾರೆ.

ಆದರೆ, ಈ ಆಹಾರಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತವೆ ಎಂಬುದು ಮಾತ್ರ ತಿಳಿದಿಲ್ಲ. ಅವುಗಳ ಪರಿಣಾಮಗಳು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದರೆ, ಈ ನಿಟ್ಟಿನಲ್ಲಿ ಮೆಂತ್ಯ ಕಾಳುಗಳು ಹೊಸ ಭರವಸೆ ಮೂಡಿಸುತ್ತಿದೆ. ಏಕೆಂದರೆ ಮೆಂತ್ಯೆವನ್ನು ಸೇವಿಸುವ ಪುರುಷರು ಲೈಂಗಿಕತೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ.

ಕೆಲವರಿಗೆ ಆರು ವಾರಗಳ ಕಾಲ ಮೆಂತ್ಯ ಕಾಳುಗಳಿಂದ ಮಾಡಿದ ಆಹಾರವನ್ನು ನೀಡಲಾಯಿತು. ಅವರಲ್ಲಿ ಶೇ.82ರಷ್ಟು ಲೈಂಗಿಕ ಬಯಕೆ ಹೆಚ್ಚಾಗಿರುವುದು ಕಂಡು ಬಂದಿದೆ. ಇದಲ್ಲದೇ ಶೇ.63ರಷ್ಟು ಜನರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತಿರುವುದರ ಬಗ್ಗೆಯೂ ತಿಳಿದು ಬಂದಿದೆ. ಮೆಂತ್ಯಯಲ್ಲಿ ಸಪೋನಿನ್ ಎಂಬ ಸಸ್ಯ ರಾಸಾಯನಿಕಗಳು ಸಮೃದ್ಧವಾಗಿರುತ್ತವೆ. ಇದು ಟೆಸ್ಟೋಸ್ಟೆರಾನ್ ನಂತಹ ಲೈಂಗಿಕ ಹಾರ್ಮೋನುಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ, ಮೆಂತ್ಯವು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ನಂಬುತ್ತಾರೆ.

ಓದಿ: ನೀವೂ ಮೊಟ್ಟೆ ತಿನ್ನುತ್ತೀರಾ? ಗುಣಮಟ್ಟದ ಮೊಟ್ಟೆಗಳಿಗೆ ಬಂದಿದೆ ಜಪಾನಿ ತಂತ್ರಜ್ಞಾನ!

Last Updated : Jul 30, 2022, 10:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.