ಮಾನವನ ದೇಹದಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರವನ್ನು ವಹಿಸಲಿದ್ದು ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಯಥೇಚ್ಚ ಆರೋಗ್ಯ ಪ್ರಯೋಜನ ಹೊಂದಿರುವ ವಿಟಮಿನ್ ಸಿ ಕಿತ್ತಾಳೆ, ಸ್ಟ್ರಾಬೆರಿ, ಕಿವಿ, ಬೆಲ್ ಪೆಪ್ಪರ್, ಬ್ರಕೋಲಿ ಸೇರಿದಂತೆ ಅನೇಕ ಹಣ್ಣು-ತರಕಾರಿಗಳಲ್ಲಿದೆ. ಪ್ರತಿನಿತ್ಯ ಮಹಿಳೆಯರಿಗೆ 75 ಗ್ರಾಂನಷ್ಟು, ಪುರುಷರಿಗೆ 100 ಗ್ರಾಂನಷ್ಟು ಇದರ ಅಗತ್ಯವಿದೆ ಎಂದು ಪೋಷಕಾಂಶ ತಜ್ಞರು ಸಲಹೆ ನೀಡುತ್ತಾರೆ.
ಸಾಮಾನ್ಯವಾಗಿ ಅನೇಕರು ಹಣ್ಣುಗಳ ಮೂಲಕ ವಿಟಮಿನ್ ಸಿ ಪಡೆದರೆ ಮತ್ತಷ್ಟು ಮಂದಿ ತಮ್ಮ ನ್ಯೂಟ್ರಿಷಿಯನ್ ಅಗತ್ಯತೆಗೆ ತಕ್ಕಂತೆ ಪೂರಕ ಆಹಾರವಾಗಿ ಪಡೆಯುತ್ತಾರೆ. ಯಾವುದೇ ರೀತಿಯಲ್ಲಿ ವಿಟಮಿನ್ ಸಿ ಪೂರಕ ಪಡೆಯವ ಮುನ್ನ ಇವುಗಳ ವ್ಯತ್ಯಾಸ ತಿಳಿಯುವುದು ಅವಶ್ಯ.
ಕಾಲಜನ್ ಸಂಶ್ಲೇಷಣೆಗೆ ವಿಟಮಿನ್ ಸಿ ಬೇಕು. ಕಾಲಜನ್ ಸಂಯೋಜಕ ಅಂಗಾಂಶ, ರಕ್ತನಾಳಗಳು, ಸ್ನಾಯುರಜ್ಜುಗಳು, ಅಸ್ಥಿರಜ್ಜುಗಳು, ಕಾರ್ಟಿಲೆಜ್, ಒಸಡುಗಳು, ಚರ್ಮ, ಹಲ್ಲುಗಳು ಮತ್ತು ಮೂಳೆಗಳ ಅವಿಭಾಜ್ಯ ರಚನಾತ್ಮಕ ಅಂಶವಾಗಿದೆ. ಇದರ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಚರ್ಮ ಸುಕ್ಕು ಕಟ್ಟದಂತೆ ಯಂಗ್ ಆಗಿ ನಿಮ್ಮನ್ನು ಕಾಣಿಸುತ್ತದೆ. ನರಗಳ ಸಂಯೋಜನೆಯಲ್ಲೂ ವಿಟಮಿನ್ ಸಿ ಅಗತ್ಯವಾಗಿದೆ. ಮಿದುಳಿನ ಕಾರ್ಯನಿರ್ವಹಣೆ, ಪರಿಣಾಮ ಮತ್ತು ಸಂವೇದನೆ ತಿಳಿಯುವ ನೋರ್ಪೈನ್ಫ್ರಿನ್ನಲ್ಲಿ ಇದು ಪ್ರಧಾನ ಪಾತ್ರವಹಿಸುತ್ತದೆ.
ದೇಹಕ್ಕೆ ರೋಗ ಪ್ರತಿರಕ್ಷಣಾ ಹೆಚ್ಚಿಸುವಲ್ಲಿ ಕೂಡ ವಿಟಮಿನ್ ಸಿ ಅವಶ್ಯಕವಿದ್ದು, ಇದು ಪೋಷಕಾಂಶ ಕೊರತೆ ನಿವಾರಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ಹೊಂದಿದೆ. ಪ್ರೋಟಿನ್, ಲಿಪಿಡ್ಸ್, ಕಾರ್ಬೋಹೈಡ್ರೇಟ್ ಮತ್ತು ನ್ಯೂಕ್ಲಿಕ್ ಆ್ಯಸಿಡ್ ಹಾನಿಯಾಗದಂತೆ ತಡೆಯುವಲ್ಲಿ ಇದು ಪ್ರಯೋಜನಕಾರಿ.
ಇದನ್ನೂ ಓದಿ: ಕರುಳಿನ ಕ್ಯಾನ್ಸರ್ನ ಅಪಾಯ ಹೇಗೆ ಮತ್ತು ಯಾಕೆ ಕಾಡುತ್ತದೆ?.. ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ!