ETV Bharat / sukhibhava

ಕೋವಿಡ್​ - ಅಲ್‌ಝೈಮರ್ ಅಪಾಯಗಳನ್ನು ಹೆಚ್ಚಿಸುವ ಜೀನ್​ ಒಂದೇ..

ಕೊರೊನಾ ಹಾಗೂ ಅಲ್‌ಝೈಮರ್ ಕಾಯಿಲೆಗೆ ಒಳಗಾದ ರೋಗಿಗಳ ಪ್ರತಿಕಾಯ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಉಂಟುಮಾಡಿ, ಅಪಾಯಗಳನ್ನು ಹೆಚ್ಚಿಸಲು ಕಾರಣವಾಗುವ ಜೀನ್​ ಅಥವಾ ವಂಶವಾಹಿ ಒಂದೇ ಆಗಿದೆ.

ಅಲ್‌ ಅಲ್‌ಝೈಮರ್ ಕಾಯಿಲೆಝೈಮರ್ ಕಾಯಿಲೆ
ಅಲ್‌ಝೈಮರ್ ಕಾಯಿಲೆ
author img

By

Published : Oct 8, 2021, 6:03 PM IST

'ಕೋವಿಡ್​-19' ಹಾಗೂ 'ಅಲ್‌ಝೈಮರ್' (Alzheimer's) ಎಂಬ ನೆನಪು ಮಾಸುವ ರೋಗದ ಅಪಾಯಗಳನ್ನು ಹೆಚ್ಚಿಸಲು ಕಾರಣವಾಗುವ ವಂಶವಾಹಿ ಒಂದೇ ಎಂಬುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.

'ಬ್ರೈನ್' (Brain) ಎಂಬ ಜರ್ನಲ್​ನಲ್ಲಿ ಲಂಡನ್​​ನ ಯುಸಿಎಲ್ ಕ್ವೀನ್ ಸ್ಕ್ವೇರ್ ಇನ್ಸ್ಟಿಟ್ಯೂಟ್ ಆಫ್ ನ್ಯೂರಾಲಜಿ ಮತ್ತು ಯುಕೆ ಡಿಮೆನ್ಶಿಯಾ ಸಂಶೋಧನಾ ಸಂಸ್ಥೆಯ ಪ್ರಮುಖ ಲೇಖಕ ಡಾ. ಡೆರ್ವಿಸ್ ಸಾಲಿಹ್ ಅವರು ಪ್ರಕಟಿಸಿದ ಅಧ್ಯಯನದ ವರದಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಏನಿದು ಅಲ್‌ಝೈಮರ್?

ಅಲ್‌ಝೈಮರ್, ಇದು ನರಕ್ಕೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ಮೆದುಳಿನ ಕೋಶಗಳು ಸಾಯಲು ಕಾರಣವಾಗುತ್ತದೆ. ಪರಿಣಾಮ ರೋಗಿಯ ಆಲೋಚನಾ ಸಾಮರ್ಥ್ಯ ಕುಂಠಿತವಾಗಿ ಮರೆವು, ಬುದ್ಧಿಮಾಂದ್ಯತೆಗೆ ಎಡೆ ಮಾಡಿಕೊಡುತ್ತದೆ.

'OAS1'

ಕೊರೊನಾ ಹಾಗೂ ಅಲ್‌ಝೈಮರ್ ಕಾಯಿಲೆಗೆ ಒಳಗಾದ ರೋಗಿಗಳ ಪ್ರತಿಕಾಯ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಉಂಟುಮಾಡಿ, ಅಪಾಯಗಳನ್ನು ಹೆಚ್ಚಿಸಲು ಕಾರಣವಾಗುವ ಜೀನ್​ ಅಥವಾ ವಂಶವಾಹಿ ಒಂದೇ ಆಗಿದೆ- ಅದುವೇ 'OAS1'. ಕೋವಿಡ್ ಸೋಂಕಿತರ ಮೆದುಳಿನಲ್ಲಿ ಉರಿಯೂತ ಕೂಡ ಉಂಟಾಗಬಹುದು.

ಇದನ್ನು ಖಚಿತಪಡಿಸಲು ಸಂಶೋಧನಾ ಸಂಸ್ಥೆಯ ತಂಡವು 2,547 ಜನರಿಂದ ಅನುವಂಶಿಕ ದತ್ತಾಂಶವನ್ನು ಸಂಗ್ರಹಿಸಿತು. ಇವರಲ್ಲಿ ಅರ್ಧದಷ್ಟು ಜನರು ಮೆದುಳು ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು.

ಇದನ್ನೂ ಓದಿ: ಕೋವಿಡ್​​​ನಿಂದ ಚೇತರಿಕೆ ಬಳಿಕ ಹೃದಯ ಸಮಸ್ಯೆ ಹೆಚ್ಚಾಗುತ್ತಾ?: ತಜ್ಞರು ಹೇಳುವುದೇನು?

OAS1 ವಂಶವಾಹಿಯ rs1131454 ಎಂದು ಕರೆಯಲ್ಪಡುವ ಒಂದು ನಿರ್ದಿಷ್ಟ ರೂಪಾಂತರ ಹೊಂದಿರುವ ಜನರು ಅಲ್‌ಝೈಮರ್ ಕಾಯಿಲೆಗೆ ಒಳಪಡುವ ಸಾಧ್ಯತೆಯಿದೆ OAS1 ವಂಶವಾಹಿಯು ನಾಲ್ಕು ರೂಪಾಂತರಗಳನ್ನು ಹೊಂದುತ್ತದೆ. ಅದರಲ್ಲಿ ಒಂದು rs1131454 ಆಗಿದೆ.

ಈ ರೂಪಾಂತರಗಳೊಂದಿಗೆ OAS1 ವಂಶವಾಹಿಯು ಅಲ್‌ಝೈಮರ್ ಜೊತೆಗೆ ಕೋವಿಡ್​ ಸೋಂಕಿನ ತೀವ್ರತೆಯನ್ನು ಶೇ.20ರಷ್ಟು ಹೆಚ್ಚಿಸುತ್ತದೆ ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ವೃದ್ಧರಿಗೇ ಅಪಾಯ ಹೆಚ್ಚು

ಮನುಷ್ಯರ ವಯಸ್ಸಿಗನುಗುಣವಾಗಿ OAS1 ಜೀನ್​ ತನ್ನ ಚಟುವಟಿಕೆಗಳನ್ನು ಬದಲಾಯಿಸುತ್ತದೆ. ವಯಸ್ಸಾದವರಲ್ಲಿಯೇ ಈ ಜೀನ್​ ಹೆಚ್ಚು ಪರಿಣಾಮ ಬೀರಲಿದೆ. ಹೀಗಾಗಿ ಕೋವಿಡ್ ಮತ್ತು ಅಲ್‌ಝೈಮರ್ ಕಾಯಿಲೆಗೆ ವೃದ್ಧರೇ ಹೆಚ್ಚು ತುತ್ತಾಗುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.