ನ್ಯೂಯಾರ್ಕ್: ಊಟದ ಮಧ್ಯೆ ಸ್ನಾಕ್ಸ್ ತಿನ್ನುವ ಬಯಕೆ ಹಲವು ಮಂದಿಗಿದೆ. ಬಿಸ್ಕೆಟ್, ಬ್ರೌನಿಗೆ ಬದಲಾಗಿ ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸುವುದರಿಂದ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಕಡಿಮೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.
ಅಮೆರಿಕನ್ ಹಾರ್ಟ್ ಅಸೋಸಿಯೇಟ್ ಹೇಳುವಂತೆ, ಮೆಟಾಬಾಲಿಕ್ ಸಿಂಡ್ರೋಮ್ ಎಂಬುದು ಐದು ಆರೋಗ್ಯ ಪರಿಸ್ಥಿತಿಗಳ ಸಂಯೋಜನೆ. ಅವುಗಳೆಂದರೆ ಮಧುಮೇಹ, ಹೃದಯ ರೋಗ, ಪಾರ್ಶ್ವವಾಯು ಮತ್ತು ಇತರೆ ಆರೋಗ್ಯ ಸಮಸ್ಯೆಗಳು.
ಜರ್ನಲ್ ನ್ಯೂಟ್ರಿಯೆಂಟ್ಸ್ನಲ್ಲಿ ಪ್ರಕಟವಾದಂತೆ ಪ್ರತಿನಿತ್ಯ ಟ್ರಿ ನಟ್ (ಬಾದಾಮಿ, ಬ್ರೆಸಿಲ್ ನಟ್ಸ್, ಬಾದಾಮಿ, ಹೆಜೆಲ್ನಟ್, ಮ್ಯಾಕಡಮಿಯಸ್, ಪಿಕಾನ್ಸ್, ಪೈನ್ಸ್ ನಟ್, ಪಿಸ್ತಾ ಮತ್ತು ವಾಲ್ನಟ್) ಸೇವನೆ ಮಾಡುವುದರಿಂದ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಕಡಿಮೆ ಮಾಡಬಹುದು. ಸೋಂಟದ ಸುತ್ತಳತೆ ಸುಧಾರಣೆಯೂ ಆಗುತ್ತದೆ. ಲಿಪಿಡ್ ಬಯೋಮಾರ್ಕ್ ಮತ್ತು ಇನ್ಸುಲಿನ್ ಮಟ್ಟ ತಗ್ಗಿಸಬಹುದು. ಸ್ನಾಕ್ಸ್ ಸೇವನೆಯಿಂದ ಶೇ 25ರಷ್ಟು ಕ್ಯಾಲೊರಿ ಹೆಚ್ಚುವರಿಯಾಗಿ ದೇಹಕ್ಕೆ ಸೇರುತ್ತದೆ ಎಂದು ಅಮೆರಿಕದ ವಂಡೆರ್ಬಿಲ್ಟ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್ ಪ್ರೊಫೆಸರ್ ಹೈಡಿ ಜೆ ಸಿಲ್ವರ್ ತಿಳಿಸಿದ್ದಾರೆ.
ಹೈ ಕಾರ್ಬೋಹೈಡ್ರೇಟ್ ಇರುವ ಸ್ನಾಕ್ಗಳ ಬದಲಾಗಿ ಟ್ರಿ ನಟ್ ಸೇವನೆಯಿಂದ ದೇಹದಲ್ಲಿ ಸಕಾರಾತ್ಮಕ ಪರಿಣಾಮ ಹೊಂದಬಹುದು. ಅಲ್ಲದೇ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಕಡಿಮೆ ಮಾಡಬಹುದು. ಇವುಗಳನ್ನು ಎಲ್ಲಾ ವಯೋಮಾನದವರೂ ಸೇವಿಸಬಹುದು.
ಈ ಅಧ್ಯಯನಕ್ಕಾಗಿ 22ರಿಂದ 36 ವರ್ಷದ 84 ಜನರನ್ನು ಭಾಗಿದಾರರನ್ನಾಗಿ ಮಾಡಲಾಗಿತ್ತು. ಇವರೆಲ್ಲಾ ಅಧಿಕ ತೂಕ ಉಳ್ಳವರಾಗಿದ್ದು, ಒಂದಲ್ಲೊಂದು ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಹೊಂದಿದ್ದರು. ಈ ಭಾಗಿದಾರರಲ್ಲಿ ಒಂದು ಗುಂಪು ಉಪ್ಪುರಹಿತ ಟ್ರಿನಟ್ ಸೇವನೆ ಮಾಡಿದರೆ ಮತ್ತೊಂದು ಗುಂಪು ಒಂದು ಔನ್ಸ್ನಷ್ಟು ಕಾರ್ಬೋಹೈಡ್ರೇಟ್ ಸಮೃದ್ಧ ಸ್ನಾಕ್ಸ್ ಅನ್ನು ದಿನದಲ್ಲಿ ಎರಡು ಬಾರಿ ಸೇವಿಸಬೇಕಿತ್ತು.
ಎರಡು ಸ್ನಾಕ್ಸ್ಗಳು ಒಂದೇ ಪ್ರಮಾಣದ ಕ್ಯಾಲೊರಿ, ಪ್ರೋಟಿನ್, ಫೈಬರ್ ಮತ್ತು ಸೋಡಿಯಂ ಹೊಂದಿತ್ತು. 16 ವಾರಗಳ ಕಾಲ ನಡೆದ ಅಧ್ಯಯನದಲ್ಲಿ ಅವರ ತೂಕ ನಿರ್ವಹಣೆಯನ್ನು ಪದೇ ಪದೇ ಗಮನಿಸಲಾಗಿದೆ. ಫಲಿತಾಂಶದಲ್ಲಿ ಟ್ರಿ ನಟ್ಸ್ ಸೇವಿಸಿದ ಮಹಿಳಾ ಬಳಕೆದಾರರಲ್ಲಿ ಸೊಂಟದ ಸುತ್ತಳತೆ ಕಡಮೆಯಾಗಿರುವುದನ್ನು ಗಮನಿಸಲಾಗಿದೆ. ಟ್ರಿ ನಟ್ಸ್ ಸೇವಿಸಿದ ಪುರುಷರಲ್ಲಿ ರಕ್ತದ ಇನ್ಸುಲಿನ್ ಮಟ್ಟ ಕಡಿಮೆಯಾಗಿದೆ.
ಕಾರ್ಬೋಹೈಡ್ರೆಟ್ ಸ್ನಾಕ್ಗೆ ಸೇವನೆ ಮಾಡುವವರಲ್ಲಿ ಹೋಲಿಕೆ ಮಾಡಿದಾಗ ಟ್ರಿನಟ್ಸ್ ಸೇವಿಸುವ ಪುರುಷ ಮತ್ತು ಮಹಿಳಾ ಭಾಗಿದಾರರಲ್ಲಿ ಟಿಜಿ/ಎಚ್ಡಿಲ್ ದರ ಕಡಿಮೆಯಾಗಿದೆ. ಇದು ಮಹಿಳೆಯರಲ್ಲಿ ಶೇ 67ರಷ್ಟು ಮತ್ತು ಪುರುಷರಲ್ಲಿ ಶೇ 42ರಷ್ಟು ಮೆಟಾಬಾಲಿಕ್ ಸಿಂಡ್ರೋಮ್ ಕಡಿಮೆ ಮಾಡಿದೆ ಎಂದು ಸಿಲ್ವರ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ನಿಮ್ಮ ಡಯಟ್ನಲ್ಲಿ ಸೇರಿಸಿ ಮೆಂತ್ಯೆ ಕಾಳಿನ ರಸ; ಆಮೇಲೆ ನೋಡಿ ಮ್ಯಾಜಿಕ್