ETV Bharat / sukhibhava

ಜಗತ್ತಿನ ಬೇರೆ ದೇಶಗಳಿಂದ ಭಾರತೀಯರಿಗೆ ಹೆಚ್ಚು ಮಾರಣಾಂತಿಕವಾಗುತ್ತಿರುವ ವಾಯು ಮಾಲಿನ್ಯ; ಅಧ್ಯಯನ - ಮಾನಸಿಕ ಆರೋಗ್ಯದ ಮೇಲೆ ಹಾನಿ ಬೀರುತ್ತಿರುವ

ಜಗತ್ತಿನ ಇತರ ಪ್ರದೇಶಗಳಿಗಿಂತ ಭಾರತದ ಜನರು ಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ತೋರಿಸಿದೆ.

Air pollution from other countries of the world is becoming more deadly for Indians

author img

By ETV Bharat Karnataka Team

Published : Nov 4, 2023, 2:50 PM IST

ನವದೆಹಲಿ: ಕಡಿಮೆ ತೂಕದ ಮಕ್ಕಳ ಜನನ, ಕಣ್ಣು, ಶ್ವಾಸಕೋಶ, ಚರ್ಮ ಮತ್ತು ಹೃದಯ ಸೇರಿದಂತೆ ಮಾನಸಿಕ ಆರೋಗ್ಯದ ಮೇಲೆ ಹಾನಿ ಬೀರುತ್ತಿರುವ ವಿಷಪೂರಿತ ಗಾಳಿ ನಿಧಾನವಾಗಿ ಸ್ಲೋ ಪಾಯ್ಸನ್​ ಆಗುತ್ತಿದ್ದು, ಭಾರತದಲ್ಲಿ ಸಾವು ಮತ್ತು ರೋಗಗಳ ಏರಿಕೆಗೆ ಕಾರಣವಾಗುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಲ್ಯಾನ್ಸೆಟ್​ ಪ್ಲಾನೆಟರಿ ಹೆಲ್ತ್​ ಪಲ್ಯೂಷನ್​ ಇನ್​ 2020ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಮಾಲಿನ್ಯವೂ ಮನುಷ್ಯರಿಗೆ ಅತಿ ದೊಡ್ಡ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಬೆದರಿಕೆಯಾಗಿದ್ದು, ಜಾಗತಿಕವಾಗಿ 9 ಮಿಲಿಯನ್​ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದೆ. ಅದಕ್ಕಿಂತ ಮುಖ್ಯವಾಗಿ ಜಗತ್ತಿನ ಇತರ ಪ್ರದೇಶಗಳಿಗಿಂತ ಭಾರತದ ಜನರು ಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ತೋರಿಸಿದೆ. 2019ರಲ್ಲಿ ಭಾರತದಲ್ಲಿ 1.67 ಮಿಲಿಯನ್​ ಜನರು ಸಾವನ್ನಪ್ಪಿದ್ದು, ಇದರಲ್ಲಿ ಮಾಲಿನ್ಯದಿಂದ ಸಾವನ್ನಪ್ಪಿದವರ ಸಂಖ್ಯೆ 17.8ರಷ್ಟಿದೆ.

ವಿಷವಾಗುತ್ತಿರುವ ಮಾಲಿನ್ಯ: 2023ರಲ್ಲಿ ಈ ಮಾಸದಲ್ಲಿ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವೂ (ಎಕ್ಯೂಐ) 500ಕ್ಕೆ ಏರಿದ್ದು, ಇದು ವಿಶ್ವ ಆರೋಗ್ಯ ಸಂಘಟನೆ ಆರೋಗ್ಯಕರ ಎಂದು ಪರಿಗಣಿಸಿದ ಮಿತಿಗಿಂತ 100 ಪಟ್ಟು ಹೆಚ್ಚಿದೆ. ದೆಹಲಿಯಲ್ಲಿ ವಾಯುಗುಣಮಟ್ಟ ಅಪಾಯಕಾರಿ ಮಟ್ಟ ತಲುಪಿದ್ದು, ಪಿಎಂ 2.5 ಮತ್ತು ಪಿಎಂ10ಗೆ ತಲುಪಿದೆ. ಇದರಿಂದ ಹೊಗೆಯ ದಟ್ಟತೆ ಆವರಿಸಿದೆ. ಇದರಿಂದ ಹಲವೆಡೆ ವೀಕ್ಷಣೆಯು 500 ಮೀಟರ್​​ಗೂ ಕೆಳಗೆ ಕುಗ್ಗಿದೆ

ದೇಶದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾದಲ್ಲಿ ಮಾತ್ರ ಸಾವಿನ ಸಂಖ್ಯೆ ಕೂಡ ಹೆಚ್ಚಲಿದೆ. ವಿಶೇಷವಾಗಿ ಇಂಡೋ - ಗಂಗಾ ಪ್ರದೇಶದಲ್ಲಿ ಈ ಏರಿಕೆ ಕಾಣಬಹುದಾಗಿದೆ. ಇದನ್ನು ನಾವು ಈ ವರ್ಷ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಸಾಕೇತ್​ನ ಮಾಕ್ಸ್​​ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯ ಪಲ್ಮನೊಲೊಜಿ ವೈದ್ಯ ವಿವೇಕ್​ ನಂಗಿಯಾ ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ 2023ರ ವಾಯು ಗುಣಮಟ್ಟ ಜೀವನ ಸೂಚ್ಯಂಕ (ಎಕ್ಯೂಎಲ್​ಐ) ವರದಿ ಅನುಸಾರ ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯವೂ ಇಲ್ಲಿ ವಾಸಿಸುವರ ಜೀವಿತಾವಧಿಯನ್ನು 11.9ರಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ.

ಹೆಚ್ಚುತ್ತಿರುವ ಆರೋಗ್ಯ ಅಪಾಯ: ಜೀವತಾವಧಿಯ ಮಾಪನದಲ್ಲಿ ಸಂಶೋಧಕರು ಪಿಎಂ2.5 ಮಾಲಿನ್ಯವೂ ಭಾರತದಲ್ಲಿ ಮಾನವನ ಆರೋಗ್ಯಕ್ಕೆ ಮಾರಕವಾಗಲಿದೆ ಎಂದಿದೆ. ಹೃದಯರಕ್ತನಾಳದ ಖಾಯಿಲೆಗಳಿಗೆ 4.5 ವರ್ಷಗಳು ಮಗು ಮತ್ತು ತಾಯಿಯ ಅಪೌಷ್ಟಿಕತೆಗೆ 1.8 ವರ್ಷಗಳು ಹೋಲಿಸಿದರೆ ಇದು ಸರಾಸರಿ ಭಾರತೀಯರ ಜೀವನದಲ್ಲಿ 5.3 ವರ್ಷಗಳನ್ನು ಕಡಿಮೆ ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸರ್ ಗಂಗಾ ರಾಮ್ ಆಸ್ಪತ್ರೆಯ ಮಕ್ಕಳ ವಿಭಾಗದ ಹಿರಿಯ ಸಲಹೆಗಾರರಾದ ಡಾ. ಧೀರೇನ್ ಗುಪ್ತಾ ಕೂಡ ಈ ಮಾಲಿನ್ಯ ನಿಧಾನ ವಿಷ ಎಂದಿದ್ದಾರೆ. ಇದು ಜನಿಸಲಿರುವ ಮಗು, ನವಜಾತ ಶಿಶು ಸೇರಿದಂತೆ ಎಲ್ಲ ವಯೋಮಾನದವರ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳಲ್ಲಿ ಕಳಪೆ ಜನನ ತೂಕ್ಕೆ ಕಾರಣವಾಗುತ್ತದೆ. ಅಲರ್ಜಿ, ಶ್ವಾಸಕೋಶಮ ವೈರಲ್​ ಸೋಂಕಿಗೆ ಕಾರಣವಾಗುತ್ತದೆ. ಶ್ವಾಸಕೋಶದ ಶಾಶ್ವತ ಹಾನಿಗೆ ಕಾರಣವಾಗುತ್ತದೆ. ಅಲ್ಲದೇ ಆಸ್ತಮಾ ಮತ್ತಿತ್ತರ ಕೆಮ್ಮು ಕೂಡ ಕಾಡಲಿದ್ದು, ಕಣ್ಣುಗಳು, ಮೆದುಳು, ಚರ್ಮ, ಹೃದಯದ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಮಕ್ಕಳ ಮೇಲೆ ಗಂಭೀರ ಪರಿಣಾಮ: ಈ ವಾಯು ಮಾಲಿನ್ಯವೂ ಮಕ್ಕಳ ಎತ್ತರದ ಮೇಲೆ ಪರಿಣಾಮ ಬೀರಿದ್ದು, ವಯಸ್ಕರರಗಿಂತ ವೇಗದ ಉಸಿರಾಟವನ್ನು ಅವರು ಹೊಂದಿದ್ದಾರೆ. ಡಬ್ಲ್ಯೂಎಚ್​ಒ ವರದಿಯಂತೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೆಟ್ಟ ಗಾಳಿಯನ್ನು ಉಸಿರಾಡುವುದು ಮಾರಕವಾಗಿದೆ.

2016ರಲ್ಲಿ ಮನೆಯ ಹೊರಗೆ ಮತ್ತು ಮನೆಯೊಳಗಿನ ವಾಯು ಮಾಲಿನ್ಯದಿಂದ 1,01,788 ಮಕ್ಕಳು ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಹೊರಾಂಗಾಣ ವಾಯು ಮಾಲಿನ್ಯದಿಂದ ಪ್ರತಿ ಗಂಟೆಗೆ ಸುಮಾರು 7 ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಇತ್ತೀಚಿನ ಅಧ್ಯಯನಗಳು ವಾಯು ಮಾಲಿನ್ಯವನ್ನು ಮಧುಮೇಹ ಮತ್ತು ಪ್ರತಿಜೀವಕ ನಿರೋಧಕತೆಯೊಂದಿಗೆ ಸಂಬಂಧಿಸಿವೆ. ದುರ್ಬಲ ಗುಂಪುಗಳು 60 ವರ್ಷಕ್ಕಿಂತ ಮೇಲ್ಪಟ್ಟ ಜನರು, ಶ್ವಾಸನಾಳದ ಅಸ್ತಮಾ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ತೆರಪಿನ ಶ್ವಾಸಕೋಶದ ಕಾಯಿಲೆ, ಅಲರ್ಜಿಗಳಂತಹ ಅನೇಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ.

ವಾಯು ಮಾಲಿನ್ಯಕ್ಕೆ ಪ್ರತಿ ವರ್ಷ ನಿರ್ಮಾಣ ಕಾರ್ಯಗಳನ್ನು ಮುಂದೂಡುವುದು, ಶಾಲೆಗಳನ್ನು ಮುಚ್ಚುವುದು, ಇತ್ಯಾದಿಗಳಂತಹ ಅಲ್ಪಾವಧಿಯ ಪರಿಹಾರಗಳಾಗಿದೆ. ಇದಕ್ಕೆ ದೃಢವಾದ ಪರಿಹಾರವನ್ನು ಅಭಿವೃದ್ಧಿ ಮಾಡಬೇಕಿದೆ. ಉದಾಹರಣೆ ಕೃಷಿ ತ್ಯಾಜ ಸುಡುವಿಕೆಗೆ ಕಡಿವಾಣ. ಕೈಗಾರಿಕೆಗಳಲ್ಲಿ ಶುದ್ದ ಇಂಧನ ಮೂಲ ಅಳವಡಿಕೆಯಂತಹ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರುವುದು ಅವಶ್ಯವಾಗಿದೆ.

ಮಾಲಿನ್ಯ ಪ್ರದೇಶದಲ್ಲಿ ಹೊರಗೆ ಹೋಗುವಾಗ ಎನ್​ 95 ಮಾಸ್ಕ್​ ಧರಿಸುವುದು. ಔಷಧಗಳ ಸೇವನೆ. ಗರಿಷ್ಠ ಮಾಲಿನ್ಯದಲ್ಲಿ ಹೊರಾಂಗಾಣ ಚಟುವಟಿಕೆ ತಪ್ಪಿಸುವುದು. ಸಮತೋಲಿತ ಆಹಾರ ಸೇವಿಸುವುದು, ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯವಾಗಿದೆ ಎಂದು ಗುರುಗ್ರಾಮ್​ನ ವೈದ್ಯರಾದ ಡಾ ಅರುಣೇಶ್​ ಕುಮಾರ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ದೆಹಲಿ ವಾಯು ಗುಣಮಟ್ಟ ಕಳಪೆ; ಮಕ್ಕಳು, ಹಿರಿಯ ನಾಗರಿಕರಲ್ಲಿ ಶ್ವಾಸಕೋಶ ಸಮಸ್ಯೆ ಉಲ್ಬಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.