ETV Bharat / sukhibhava

ಕೋವಿಡ್​ನಿಂದ ಗುಣಮುಖರಾದ ಬಳಿಕ ಉತ್ತಮ ಚೇತರಿಕೆ ಹೇಗೆ ಸಾಧ್ಯ?

ನೀವು ಆಲ್ಕೊಹಾಲ್​​ಯುಕ್ತ ಪಾನೀಯಗಳನ್ನು ಸೇವಿಸುವ ಅಭ್ಯಾಸದಲ್ಲಿದ್ದರೆ, ನಿದ್ರೆಗೆ ಹೋಗುವ ಮೊದಲು ಅದನ್ನು ಎಂದಿಗೂ ಸೇವಿಸಬೇಡಿ. ಆಹಾರದಲ್ಲಿ ಸಾಕಷ್ಟು ನೀರು ಮತ್ತು ಫೈಬರ್ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ..

aiding
aiding
author img

By

Published : Jun 25, 2021, 11:06 PM IST

ಹೈದರಾಬಾದ್ : ಸೂಕ್ತವಾದ ಫಿಸಿಯೋಥೆರಪಿ ಮತ್ತು ಉಸಿರಾಟದ ವ್ಯಾಯಾಮವು ಕೋವಿಡ್ ನಂತರ ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಯಂತ್ರಿತ ಉಸಿರಾಟವು ವಿಶ್ರಾಂತಿ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಉಸಿರಾಡಲು ಸಾಧ್ಯವಾದಷ್ಟು ಕಡಿಮೆ ಪ್ರಯತ್ನವನ್ನು ಬಳಸಲು ಪ್ರಯತ್ನಿಸಿ ಮತ್ತು ನಿಮ್ಮ ಉಸಿರಾಟವನ್ನು ನಿಧಾನ, ಶಾಂತ ಮತ್ತು ಸುಗಮಗೊಳಿಸಲು ಪ್ರಯತ್ನಿಸಿ.

ಹೆಚ್ಚಿನ ಶ್ರಮವನ್ನು ತೆಗೆದುಕೊಳ್ಳುವಂತಹ ಚಟುವಟಿಕೆಗಳನ್ನು ನಿರ್ವಹಿಸುವಾಗ ವೇಗದ ಉಸಿರಾಟವು ಉಪಯುಕ್ತವಾಗಿರುತ್ತದೆ. ನಿರ್ವಹಿಸಲು ಸುಲಭವಾಗುವಂತೆ ಚಟುವಟಿಕೆಯನ್ನು ಸಣ್ಣ ಭಾಗಗಳಾಗಿ ಮಾಡಿರಿ. ನೀವು ನಡೆದಾಗಲೆಲ್ಲಾ, ನಿಮ್ಮ ಶ್ವಾಸಕೋಶವೂ ಸಹ ನೀವು ವ್ಯಾಯಾಮಕ್ಕೆ ಒಳಪಡುತ್ತದೆ.

ಸಾಮಾನ್ಯವಾಗಿ, ನೀವು ಮನೆಯಲ್ಲಿ ಸ್ಪಿರೋಮೆಟ್ರಿ ಮಾಡಬೇಕೆಂದು ವೈದ್ಯರು ಸೂಚಿಸುತ್ತಾರೆ. ಇದು ನಿಮ್ಮ ಶ್ವಾಸಕೋಶದ ಕಾರ್ಯವನ್ನು ಮರಳಿ ಪಡೆಯುವ ಒಂದು ಮಾರ್ಗವಾಗಿದೆ. ಇದು ಶ್ವಾಸಕೋಶದ ಚೇತರಿಕೆಗೆ ಸಹಾಯ ಮಾಡುತ್ತದೆ. ಈ ಎಲ್ಲಾ ಅಭ್ಯಾಸಗಳು ಆಮ್ಲಜನಕೀಕರಣವನ್ನು ಸುಧಾರಿಸಲು ಮತ್ತು ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಅಂಶಗಳು:

ರಾತ್ರಿಯಲ್ಲಿ ನಿಮಗೆ ಹಗಲಿನ ಸಮಯಕ್ಕಿಂತ ಹೆಚ್ಚಿನ ಆಮ್ಲಜನಕದ ಸಾಮರ್ಥ್ಯದ ಅಗತ್ಯವಿರುತ್ತದೆ. ನಿಮ್ಮ ಊಟವಾದ ತಕ್ಷಣ ಅಥವಾ ಹೊಟ್ಟೆ ತುಂಬಿದ ನಂತರ, ತಕ್ಷಣವೇ ಮಲಗಬಾರದು. ಹೊಟ್ಟೆಯಲ್ಲಿ ಆಹಾರ ಸ್ವಲ್ಪ ಜೀರ್ಣವಾದ ಬಳಿಕ ನೀವು ಮಲಗಬಹುದು.

ಯಾವುದೇ ಸ್ಥಾನವನ್ನು ಪಡೆದುಕೊಳ್ಳುವಾಗ ಆರಾಮ ಕಾಪಾಡಿಕೊಳ್ಳಿ:

ತಿಂದ ಕೂಡಲೇ ಮಲಗಬೇಡಿ. ತಿಂದ ನಂತರ ಕನಿಷ್ಠ 2ರಿಂದ 2ವರೆ ಗಂಟೆಗಳ ಕಾಲ ಪೂರ್ವಭಾವಿ ಸ್ಥಾನದಲ್ಲಿರಿ. ಬ್ಯಾಕ್ ಸಪೋರ್ಟ್ ಹೊಂದಿರುವುದು ಆಸಿಡ್ ರಿಫ್ಲಕ್ಸ್ ಸಮಸ್ಯೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಡೆಯಲು ಸಹಾಯ ಮಾಡುತ್ತದೆ. ಉಸಿರಾಟ ಮತ್ತು ಕೆಮ್ಮು ಕಡಿಮೆಯಾಗುತ್ತದೆ, ಶ್ವಾಸಕೋಶವು ಗಾಳಿಯನ್ನು ಹೆಚ್ಚು ಆರಾಮವಾಗಿ ಸೆಳೆಯಬಲ್ಲದು, ಆಮ್ಲಜನಕದ ಸಾಮರ್ಥ್ಯವು ಉತ್ತಮಗೊಳ್ಳುತ್ತದೆ.

ನಿಯಂತ್ರಿತವಾಗಿ ತಿನ್ನಿ:

ಬೆಳಗಿನ ಉಪಾಹಾರ ಮತ್ತು ಭೋಜನಕ್ಕೆ ಹೋಲಿಸಿದರೆ ರಾತ್ರಿಯ ಭೋಜನ ಸ್ವಲ್ಪ ಕಡಿಮೆ ಇರಬೇಕು ಮತ್ತು ಹಗುರವಾದ ಹಾಗೂ ಜೀರ್ಣಿಸಿಕೊಳ್ಳಲು ಸುಲಭವಾಗಬೇಕು. ಹೆಚ್ಚಿನ ಪ್ರೋಟೀನ್​ಗಳು, ಕಡಿಮೆ ಪ್ರಮಾಣದ ಕೊಬ್ಬಿನ ಎಣ್ಣೆಯುಕ್ತ ಜಿಡ್ಡಿನ ವಸ್ತುಗಳು, ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬೇಕು.

ನಿಮ್ಮ ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು:

ಆಮ್ಲಜನಕದ ಮಟ್ಟವು 95%ದಷ್ಟಿದ್ದಲ್ಲಿ ಅದು ಸ್ಥಿರವಾಗಿದ್ದು, ರೋಗಿಗೆ ಸಾಮಾನ್ಯವಾಗಿ ಡಿಸ್ಚಾರ್ಜ್ ನೀಡಲಾಗುತ್ತದೆ. ಆದ್ದರಿಂದ ಈ ಮಟ್ಟವನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೆ, ಆಮ್ಲಜನಕ ಮಟ್ಟವು ಒಂದು ಕ್ಷಣಕ್ಕೆ ಕಡಿಮೆಯಾದರೆ ಹೆದರಬಾರದು. ಇದು ನಿರಂತರವಾಗಿ ಕಡಿಮೆಯಾಗಿದ್ದರೆ ಮಾತ್ರ ನೀವು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.

ಸಾಮಾನ್ಯ ಸಲಹೆ:

ನೀವು ಆಲ್ಕೊಹಾಲ್​​ಯುಕ್ತ ಪಾನೀಯಗಳನ್ನು ಸೇವಿಸುವ ಅಭ್ಯಾಸದಲ್ಲಿದ್ದರೆ, ನಿದ್ರೆಗೆ ಹೋಗುವ ಮೊದಲು ಅದನ್ನು ಎಂದಿಗೂ ಸೇವಿಸಬೇಡಿ. ಆಹಾರದಲ್ಲಿ ಸಾಕಷ್ಟು ನೀರು ಮತ್ತು ಫೈಬರ್ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಮರುಸೋಂಕು ಹೊಂದುವುದು:

3 ತಿಂಗಳ ಅವಧಿಯಲ್ಲಿ ಮರು ಸೋಂಕಿಗೆ ಒಳಗಾಗುವುದು ಬಹಳ ಅಪರೂಪ. ರೋಗಿಗಳಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು, ಕೈ ನೈರ್ಮಲ್ಯ, ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಅಲ್ಲದೆ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳಿವೆ ಸುಮಾರು 3 ತಿಂಗಳುಗಳವರೆಗೆ ಸಾಕಾಗುತ್ತದೆ. ಮರು ಸೋಂಕಿಗೆ ತುತ್ತಾದರೂ ಅದರಿಂದ ಉಂಟಾಗುವ ಹಾನಿಯ ತೀವ್ರತೆಯು ಕಡಿಮೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.