ವಾಷಿಂಗ್ಟನ್, ಅಮೆರಿಕ: ಕೃತ್ತಕ ಬುದ್ಧಿಮತ್ತೆ (ಎಐ) ಈಗಾಗಲೇ ವಿಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿದ್ದು, ಈ ಎಐ ರೋಗ ನಿರ್ಣಯ ನಿಖರತೆ ಹೊಂದಿದೆ. ಇದು ಶ್ವಾಸಕೋಶದ ಕ್ಯಾನ್ಸರ್ಗಳನ್ನು ಪತ್ತೆಹಚ್ಚುವಲ್ಲಿ ಕಾರ್ಯಕ್ಷಮತೆಯನ್ನು ಸುಧಾರಿಸಿದೆ. ಈ ಎಐ ಸಲಹೆಗಳು ಸ್ವೀಕಾರರ್ಹತೆಯನ್ನು ಹೆಚ್ಚಿಸಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಕುರಿತು ಅಧ್ಯಯನವನ್ನು ರೆಡಿಯೋಲಾಜಿಕಲ್ ಸೊಸೈಟಿ ಆಫ್ ನಾರ್ಥ್ ಅಮೆರಿಕದಲ್ಲಿ ಪ್ರಕಟಿಸಲಾಗಿದೆ.
ಎಐ ಆಧಾರಿತ ಚಿತ್ರ ರೋಗನಿರ್ಣಯವು ವೈದ್ಯಕೀಯ ಕ್ಷೇತ್ರದಲ್ಲಿ ವೇಗವಾಗಿ ಮುಂದುವರೆದಿದೆ. ಎಐ ಸಹಾಯದ ಇಮೇಜ್ಗಳನ್ನು ತಿಳಿಯುವ ವಿಕಿರಣಶಾಸ್ತ್ರಜ್ಞರ ರೋಗನಿರ್ಣಯದ ನಿರ್ಣಯಗಳ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಪರಿಶೋಧಿಸಲಾಗಿದೆ. ಈ ಹಿನ್ನಲೆ ಎದೆಯ ಎಕ್ಸ್ರೇಗಳು ಎಐ ಸಹಾಯದಿಂದ ಮಾರಣಾಂತಿಕ ಶ್ವಾಸಕೋಶದ ಗಂಟುಗಳ ಪತ್ತೆಗೆ ಈ ಅಂಶಗಳು ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ನೋಡಲಾಗಿದೆ ಎಂದು ಸಿಯೋಲ್ ನ್ಯಾಶನಲ್ ಯೂನಿವರ್ಸಿಟಿಯ ಸಂಶೋಧಕರು ಹೇಳಿದ್ದಾರೆ.
ಈ ಹಿಂದಿನ ಅಧ್ಯಯನದಲ್ಲಿ, ಐದರಿಂದ 18 ವರ್ಷಗಳ ಅನುಭವ ಹೊಂದಿರುವ 20 ಥೋರಾಸಿಕ್ ರೇಡಿಯಾಲಜಿಸ್ಟ್‌ಗಳು ಮತ್ತು ಕೇವಲ ಎರಡರಿಂದ ಮೂರು ವರ್ಷಗಳ ಅನುಭವ ಹೊಂದಿರುವ 10 ರೇಡಿಯಾಲಜಿ ರೆಸಿಡೆಂಟ್ ಸೇರಿದಂತೆ 30 ಓದುಗರು, ಎಐ ಇಲ್ಲದೇ 120 ಎದೆಯ ಎಕ್ಸ್ರೇಗಳನ್ನು ನಿರ್ಣಯಿಸಿದ್ದಾರೆ. ಮೌಲ್ಯಮಾಪನ ಮಾಡಲಾದ 120 ಎದೆಯ ರೇಡಿಯೋಗ್ರಾಫ್‌ಗಳಲ್ಲಿ, 60 ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಂದ (32 ಪುರುಷರು) ಮತ್ತು 60 ನಿಯಂತ್ರಣಗಳು (36 ಪುರುಷರು) ಆಗಿದೆ.
ಎರಡನೇ ಸೆಷನ್ನಲ್ಲಿ ಪ್ರತಿ ಗ್ರೂಪ್ ಹೆಚ್ಚು ಅಥವಾ ಕಡಿಮೆ ನಿಖರಾರ್ಹವೇ ಎಂಬುದನ್ನು ಎಐ ಸಹಾಯದಿಂದ ಎಕ್ಸ್ರೇಯನ್ನು ಪರಿಶೋಧಿಸಿದೆ. ಎರಡು ವಿಭಿನ್ನ ಎಐಗಳನ್ನು ಬಳಸಲಾಗಿದೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ರೀಡರ್ಗಳು ಕುರುಡಾಗಿದ್ದರು. ಹೆಚ್ಚಿನ ನಿಖರತೆಯ ಎಐಬಳಕೆಯು ಕಡಿಮೆ - ನಿಖರತೆಯ ಎಐಗಿಂತ ಹೆಚ್ಚಿನ ಪ್ರಮಾಣದಲ್ಲಿ ಓದುಗರ ಪತ್ತೆ ಕಾರ್ಯವನ್ನು ಸುಧಾರಿಸಿದೆ. ಹೆಚ್ಚಿನ ನಿಖರತೆಯ ಎಐ ಬಳಕೆಯು ಓದುಗರ ನಿರ್ಣಯಗಳಲ್ಲಿ ಹೆಚ್ಚು ಆಗಾಗ್ಗೆ ಬದಲಾವಣೆಗಳಿಗೆ ಕಾರಣವಾಯಿತು.
ಈ ಅಧ್ಯಯನದಲ್ಲಿ ತುಲನಾತ್ಮಕವಾಗಿ ದೊಡ್ಡ ಮಾದರಿಯ ಗಾತ್ರವು ಎಐನ ಸಲಹೆಗಳಲ್ಲಿ ಓದುಗರ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಚಾಂಗ್ ಮಿನ್ ಪಾರ್ಕ್ ತಿಳಿಸಿದ್ದಾರೆ. ಅಧ್ಯಯನದಲ್ಲಿ ನಾವು ಸೂಕ್ಷ್ಮತೆಯನ್ನು ಗಮನಿಸಿದ್ದೇವೆ. ಎಐ ನಂಬಿಕೆ ಸಮಸ್ಯೆ ಹೊಂದಿದೆ. ಹೆಚ್ಚಿನ ರೋಗನಿರ್ಣಯದ ಕಾರ್ಯಕ್ಷಮತೆಯ ಎಐ ಅನ್ನು ಬಳಸುವಾಗ ಮಾನವರು ಎಐಗೆ ಹೆಚ್ಚು ಪ್ರಭಾವಿತರಾಗುತ್ತಾರೆ.
ಹೆಚ್ಚಿನ ರೋಗನಿರ್ಣಯದ ಕಾರ್ಯಕ್ಷಮತೆ ಎಐ ಕಾರ್ಯ ಮತ್ತು ಅದನ್ನು ಬಳಸಲಾಗುವ ಕ್ಲಿನಿಕಲ್ ಸಂದರ್ಭವನ್ನು ಅವಲಂಬಿಸಿ ನಿರ್ಣಯ ಬದಲಾಗಬಹುದು. ಉದಾಹರಣೆಗೆ, ಎದೆಯ ಎಕ್ಸ್ರೇ ಮೇಲಿನ ಎಲ್ಲಾ ಅಸಹಜತೆಗಳನ್ನು ಪತ್ತೆಹಚ್ಚುವ ಎಐ ಮಾದರಿಯು ಸೂಕ್ತವೆಂದು ತೋರುತ್ತದೆ. ಆದರೆ ಪ್ರಾಯೋಗಿಕವಾಗಿ, ಅಂತಹ ಮಾದರಿಯು ಪಲ್ಮನರಿ ಕ್ಷಯರೋಗ ಮಾಸ್ ಸ್ಕ್ರೀನಿಂಗ್ ಸೆಟ್ಟಿಂಗ್‌ನಲ್ಲಿ ಕೆಲಸದ ಹೊರೆ ಕಡಿಮೆ ಮಾಡುವಲ್ಲಿ ಸೀಮಿತ ಮೌಲ್ಯವನ್ನು ಹೊಂದಿದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
ಇದನ್ನೂ ಓದಿ: AI ಬಳಸಿ ಡಯಟ್ ಪ್ಲಾನ್ ಮಾಡುವ ಮುನ್ನ ಸುರಕ್ಷತೆ ಮತ್ತು ನಿಖರತೆ ಪರಿಶೀಲಿಸಿ..