ETV Bharat / sukhibhava

ಮಧ್ಯಾಹ್ನದ ಕಿರು ನಿದ್ರೆಯಿಂದ ಆರೋಗ್ಯದ ಮೇಲಾಗುವ ಪರಿಣಾಮ ಗೊತ್ತೇ?

author img

By

Published : Mar 27, 2023, 1:20 PM IST

ರಾತ್ರಿ ಉತ್ತಮ ನಿದ್ದೆಯಾದ ಬಳಿಕ ಮಧ್ಯಾಹ್ನದ ಹೊತ್ತು ಮಲಗುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವಿದೆ ಎಂದು ತಜ್ಞರು ತಿಳಿಸಿದ್ದಾರೆ.

Afternoon nap has many health benefits
Afternoon nap has many health benefits

ಆರೋಗ್ಯದಿಂದಿರಲು ರಾತ್ರಿ ಹೊತ್ತು 8 ಗಂಟೆ ನಿದ್ದೆ ಸಾಕು ಎಂಬುದು ಅನೇಕರ ನಂಬಿಕೆ. ರಾತ್ರಿ ಉತ್ತಮ ನಿದ್ದೆಯ ಜೊತೆಗೆ ಮಧ್ಯಾಹ್ನ ಊಟವಾದ ಬಳಿಕವೂ ಸ್ವಲ್ಪ ಸಮಯ ಮಲಗುವುದು ಕೂಡ ಅತ್ಯವಶ್ಯಕ ಎಂದು ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್​​ ರುಜುತ ದಿವಾಕರ್​ ತಿಳಿಸಿದ್ದಾರೆ. ಉದ್ಯೋಗ ಮತ್ತು ವೈಯಕ್ತಿಕ ಕೆಲಸದಿಂದ ಅನೇಕ ಮಂದಿ ಮಧ್ಯಾಹ್ನದ ಈ ನಿದ್ದೆಯನ್ನು ತ್ಯಾಗ ಮಾಡುತ್ತಾರೆ. ಆದರೆ, ಎಲ್ಲಿ ಅಥವಾ ಏನು ಮಾಡುತ್ತಿದ್ದರೂ ಅದರಿಂದ ವಿರಾಮ ಪಡೆದು ಅರ್ಧಗಂಟೆ ಸಣ್ಣ ನಿದ್ದೆ ಮಾಡುವುದು ಅನೇಕ ಆರೋಗ್ಯಕರ ಲಾಭ ಹೊಂದಿದೆ ಎಂದಿದ್ದಾರೆ.

ರಾತ್ರಿಯೇ ಚೆನ್ನಾಗಿ ಮಲಗಿದ್ದಾಗ, ಈ ಮಧ್ಯಾಹ್ನದ ನಿದ್ದೆಯ ಪ್ರಯೋಜನ ಏನು? ಯಾವಾಗ ಮತ್ತು ಎಷ್ಟು ಗಂಟೆ ಮಧ್ಯಾಹ್ನದ ಹೊತ್ತು ಮಲಗಬೇಕು. ಮಧ್ಯಾಹ್ನದ ಹೊತ್ತು ಮಲಗುವಾಗ ಯಾವ ಮುನ್ನೆಚ್ಚರಿಕೆ ಪಾಲಿಸಬೇಕು ಎಂಬ ಅನೇಕ ಪ್ರಶ್ನೆಗಳು ಮೂಡುತ್ತದೆ.

  • ಈಗಾಗಲೇ ಕೆಲವು ಅಧ್ಯಯನಗಳು ಮಧ್ಯಾಹ್ನದ ಹೊತ್ತಿನ ಕಿರು ನಿದ್ದೆಗಳು ಮಧ್ಯ ವಯಸ್ಕರಿಗೆ ಹಲವು ಪ್ರಯೋಜನ ನೀಡುತ್ತದೆ. ಇದು ದೇಹಾಲಸ್ಯ ಕಡಿಮೆ ಮಾಡಿ ಕೆಲಸದ ಮೇಲೆ ಏಕಾಗ್ರತೆ ಮೂಡಿಸಲು ಸಹಾಯ ಮಾಡುತ್ತದೆ. ಮಧ್ಯಾಹ್ನದ ಹೊತ್ತು ತೆಗೆದುಕೊಳ್ಳುವ ನಿದ್ದೆಯಿಂದ ನೆನಪಿನ ಶಕ್ತಿ ವೃದ್ಧಿ ಜೊತೆಗೆ ಉತ್ಸಾಹದಿಂದ ಇದ್ದರೂ ಉತ್ತಮ ಗುಣಮಟ್ಟದ ಕೆಲಸ ನಿರ್ವಹಿಸಬಹುದು.
  • ಮಧ್ಯಾಹ್ನ ಊಟವಾದ ಬಳಿಕ ಮಾಡುವ ಸಣ್ಣ ನಿದ್ದೆ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತದೊತ್ತಡ, ಈಗಾಗಲೇ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿರುವವರಿಗೆ ಇದು ಉತ್ತಮ
  • ಪಿಸಿಒಎಸ್​, ಥೈರಾಯ್ಡ್​​, ಡಯಾಬಿಟಿಸ್​, ಸ್ಥೂಲಕಾಲ ಮುಂತಾದ ದೀರ್ಘಕಾಲದ ಸಮಸ್ಯೆಗಳು ದೇಹದ ಹಾರ್ಮೋನ್​ ಅಸಮಾತೋಲನದಿಂದ ಸಂಭವಿಸುತ್ತದೆ. ಇಂತಹ ಸಮಸ್ಯೆ ಹೊಂದಿರುವವರು ಮಧ್ಯಾಹ್ನ ಊಟದ ಬಳಿಕ ನಿದ್ದೆ ಮಾಡುವುದರಿಂದ ಹಾರ್ಮೋನ್​ ಸಮತೋಲನ ಸಾಧಿಸಬಹುದಾಗಿದ್ದು, ಅನೇಕ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತದೆ.
  • ಹೊಟ್ಟೆ ನೋವು, ಮಲಬದ್ದತೆ, ಗ್ಯಾಸ್ಟ್ರಿಕ್​ ಸಮಸ್ಯೆ ಮುಂದಾದವು ಆಹಾರದ ಸರಿಯಾದ ಜೀರ್ಣಕ್ರಿಯೆಯಿಂದ ಸಂಭವಿಸುತ್ತದೆ. ಜೀರ್ಣಕ್ರಿಯೆ ಸಾಮರ್ಥ್ಯ ಹೆಚ್ಚಳದಲ್ಲಿ ಮಧ್ಯಾಹ್ನದ ನಿದ್ದೆ ಪ್ರಮುಖ ಪಾತ್ರ ನಿರ್ವಹಿಸಲಿದೆ.
  • ವಿಶ್ರಾಂತಿ ಇಲ್ಲದೇ, ಮಧ್ಯಾಹ್ನದ ನಿದ್ದೆ ಬಿಟ್ಟು ಕೆಲಸ ಮಾಡುವುದರಿಂದ ಗೊತ್ತಿಲ್ಲದಂತೆ ಒತ್ತಡ ಹೆಚ್ಚುತ್ತದೆ. ಇದು ಆರೋಗ್ಯದ ಜೊತೆಗೆ ಅನೇಕ ನೋವುಗಳಿಗೆ ಕಾರಣವಾಗುತ್ತದೆ. ಇದರ ನಿವಾರಣಗೆ ಮಧ್ಯಾಹ್ನದ ನಿದ್ದೆ ಮದ್ದಾಗುತ್ತದೆ.
  • ಮಧ್ಯಾಹ್ನದ ನಿದ್ದೆ ಎಂದಿಗೂ ರಾತ್ರಿ ನಿದ್ದೆ ಮೇಲೆ ಪರಿಣಾಮ ಬೀರುವುದಿಲ್ಲ. ನಿದ್ರಾಹೀನತೆ, ಪದೇ ಪದೇ ಪ್ರಯಾಣ ನಡೆಸುವವರಿಗೆ ಈ ನಿದ್ದೆ ಹೆಚ್ಚು ಪ್ರಯೋಜನ ನೀಡುತ್ತದೆ.
  • ವ್ಯಾಯಾಮದಿಂದ ಅನೇಕ ಮಂದಿ ಬಳಲುತ್ತಾರೆ. ಮತ್ತಿತ್ತರರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಅಂತಹವರು ಮಧ್ಯಾಹ್ನದ ವೇಳೆ ನಿದ್ದೆ ಮಾಡುವುದರಿಂದ ಮತ್ತಷ್ಟು ದೇಹವನ್ನು ಉಲ್ಲಸಿತಗೊಳಿಸಬಹುದು.
  • ಮಧ್ಯಾಹ್ನದ ನಿದ್ದೆ ದೈಹಿಕ ಸಮಸ್ಯೆಯನ್ನು ಕಡಿಮೆ ಮಾಡಿ, ಮಾನಸಿಕ ಶಾಂತಿಯನ್ನು ನೀಡುತ್ತದೆ. ಅಲ್ಲದೆ ದೇಹದ ಕೊಬ್ಬಿನ ಅಂಶ ಕಡಿಮೆ ಮಾಡಲು ಇದು ಕಾರಣವಾಗುತ್ತದೆ.
  • ಕಚೇರಿಯಲ್ಲಿರಲಿ, ಮನೆಯಲ್ಲಿರಲಿ, ಮಧ್ಯಹ್ನಾದ ಹೊತ್ತು ಊಟವಾದ ಬಳಿಕ ಮಾಡುವ ನಿದ್ದೆ ಕೆಲಸದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಮಧ್ಯಾಹ್ನದ ಹೊತ್ತು ಮಲಗುವುದಾದರೂ ಮಲಗುವ ಸಮಯ, ದಿಕ್ಕಿನ ಕುರಿತು ನಿರ್ಧರಿಸಬೇಕು. ಇದ್ನು ಆಯುರ್ವೇದದಲ್ಲಿ ವಮಕುಕ್ಷಿ ಎನ್ನಲಾಗುವುದು.

  • ಮಧ್ಯಾಹ್ನದ ಹೊತ್ತು 1 ರಿಂದ 3 ಗಂಟೆಯೊಳಗೆ ಮಲಗುವುದು ಉತ್ತಮ.
  • ದೊಡ್ಡವರು 10 ರಿಂದ 30 ನಿಮಿಷ ಮಕ್ಕಳು, ಆರೋಗ್ಯ ಸಮಸ್ಯೆ ಹೊಂದಿರುವವರು ಮತ್ತು ಹಿರಿಯನಾಗರೀಕರು 90 ನಿಮಿಷ ಮಲಗಬೇಕು.
  • ಮನೆಯಲ್ಲಿ ಇರುವವರು ಆರಾಮವಾಗಿ ಮಲಗಬೇಕು, ಕಚೇರಿಯಲ್ಲಿ ಇರುವವರು ಬೇಕಾದಲ್ಲಿ ಡೆಸ್ಕ್​ಗೆ ಒರಗಿ, ಅಥವಾ ಆರಾಮದಾಯಕ ಚೆರ್​ನಲ್ಲೇ ನಿದ್ದೆ ಮಾಡಬಹುದು.
  • ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವವರು ಕಿಟಕಿಯಿಂದ ಆಕಾಶವನ್ನು ನೋಡುವ ಮೂಲಕ ಮನಸ್ಸಿನ ಚಿಂತನೆಗೆ ಬ್ರೇಕ್​ ಹಾಕಿ ಮಲಗಬಹುದು.
  • ಅನೇಕ ಮಂದಿ ಸಂಜೆ ಸಮಯದಲ್ಲಿ ಅಂದರೆ, 4-7 ಗಂಟೆ ಅವಧಿಯಲ್ಲಿ ನಿದ್ದೆ ಮಾಡುವುದು ಒಳ್ಳೆಯದಲ್ಲ.
  • ಮಧ್ಯಾಹ್ನ ಊಟವಾದ ಬಳಿಕ ಟೀ, ಕಾಫಿ ಅಥವಾ ಚಾಕೊಲೇಟ್​ ಸೇವನೆಯನ್ನು ಮಾಡದಿರುವುದು ಉತ್ತಮ.
  • ಟಿವಿ ಅಥವಾ ಮೊಬೈಲ್​ ಬಳಕೆ ಮಾಡುತ್ತಾ ಮಾಡುವ ನಿದ್ರೆಯಿಂದ ಒತ್ತಡ ಕೂಡ ಹೆಚ್ಚುತ್ತದೆ.

ಇದನ್ನೂ ಓದಿ: ಮನುಷ್ಯನ ಬುದ್ದಿವಂತಿಕೆ ಅಡಗಿರುವುದೇ ನಿದ್ದೆಯಲ್ಲಂತೆ; ಆಯುರ್ವೇದ ಹೇಳುವುದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.