ನವದೆಹಲಿ: ಚೀನಾದ ಬಳಿಕ ಇದೀಗ ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ನ ಮಕ್ಕಳಲ್ಲಿ ಹೆಚ್ಚು ನ್ಯೂಮೋನಿಯಾ ಪ್ರಕರಣಗಳು ದಾಖಲಾಗುತ್ತಿವೆ. ಏವಿಯನ್ ಫ್ಲೂ ಡೈರಿ ಪೋಸ್ಟ್ನಂತೆ, ಮೈಕೋಪ್ಲಾಸ್ಮಾ ನ್ಯೂಮೋನಿಯಾ ಸೋಂಕುಗಳು ಸಾಂಕ್ರಾಮಿಕ ಮಟ್ಟಕ್ಕೆ ತಲುಪಿದೆ. ಬೇಸಿಗೆಯಿಂದಲೇ ಇದು ಏರಿಕೆ ಕಂಡಿದೆಯಾದರೂ ಕಳೆದ ಐದು ವಾರದಿಂದ ಗಮನಾರ್ಹವಾಗಿ ಹೆಚ್ಚಳಗೊಂಡಿದೆ. ಇದೀಗ ಅದರ ಸಂಖ್ಯೆ ಸಾಂಕ್ರಾಮಿಕತೆಯಷ್ಟೇ ಹೆಚ್ಚಾಗಿದೆ ಎಂದು ಡೆನ್ಮಾರ್ಕ್ನ ಸ್ಟೇಟನ್ ಸೆರಂ ಇನ್ಸುಟಿಟ್ಯೂಟ್ ತಿಳಿಸಿದೆ.
ಕಳೆದ ಐದು ವಾರದಲ್ಲಿ ಹೊಸ ಪ್ರಕರಣಗಳು ಗಮನಾರ್ಹವಾಗಿ ಏರಿಕೆ ಕಂಡಿದೆ. ಇದೀಗ ನಾವು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಕಾಣುತ್ತಿದ್ದೇವೆ. ದೇಶದೆಲ್ಲೆಡೆ ಸೋಂಕಿನ ಹರಡುವಿಕೆ ಕಾಣುತ್ತಿದ್ದೇವೆ ಎಂದು ಸ್ಟೇಟನ್ ಸೆರಂ ಇನ್ಸುಟಿಟ್ಯೂಟ್ನ ಹಿರಿಯ ಸಂಶೋಧಕ ಹನ್ನೆ ಡೊರ್ಥೆ ತಿಳಿಸಿದ್ದಾರೆ.
ವಾರದಲ್ಲಿ 47,541 ಹೊಸ ಮೈಕೊಪ್ಲಾಸ್ಮಾ ನ್ಯೂಮೋನಿಯಾ ಸೋಂಕು ಪತ್ತೆಯಾಗಿದೆ. ಇದು 42 ವಾರದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಆರಂಭದಲ್ಲಿ ಕೇವಲ 168 ಪ್ರಕರಣಗಳು ಕಂಡು ಬಂದಿತ್ತು. ಸೌಮ್ಯ ಲಕ್ಷಣ ಹೊಂದಿರುವವರನ್ನು ಪರೀಕ್ಷಿಸದೇ ಇರುವುದರಿಂದ ಪ್ರಕರಣದ ನೈಜ ಸಂಖ್ಯೆ ಇನ್ನು ಹೆಚ್ಚಿರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ನಾಲ್ಕು ವರ್ಷಕ್ಕೆ ಒಮ್ಮೆ ಕಾಣುವ ಸೋಂಕು: ಆದಾಗ್ಯೂ ಡೆನ್ಮಾರ್ಕ್ನಲ್ಲಿ ಈ ಪ್ರಕರಣಗಳು ಸಾಮಾನ್ಯದಂತೆ ಇಲ್ಲ. ಕಾರಣ ಇಲ್ಲಿ ಪ್ರತಿ ನಾಲ್ಕು ವರ್ಷಕ್ಕೆ ಒಮ್ಮೆ ಮೈಕೊಪ್ಲಾಸ್ಮಾ ನ್ಯೂಮೋನಿಯಾ ಸೋಂಕಿನ ಸಾಂಕ್ರಾಮಿಕತೆ ದೇಶಾದ್ಯಂತ ಕಂಡು ಬರುತ್ತದೆ. ಈ ಬಾರಿ ಚಳಿಗಾಲದ ಆರಂಭದಲ್ಲಿ ಮತ್ತು ವಸಂತ ಋತುವಿನಲ್ಲಿ ಹೆಚ್ಚಿರುತ್ತದೆ.
ಕಳೆದ ನಾಲ್ಕು ವರ್ಷದ ಹಿಂದೆ ಈ ಮೈಕೋಪ್ಲಾಸ್ಮಾ ಸೋಂಕಿನ ಪ್ರಕರಣ ತೀರಾ ಕಡಿಮೆ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಅಸಾಮಾನ್ಯವಾಗಿದ್ದು, ಇದು ಸಾಂಕ್ರಾಮಿಕವಾಗಿದೆ. ಕೋವಿಡ್ 19 ಸಾಂಕ್ರಾಮಿಕತೆಯಿಂದ ಲಾಕ್ಡೌನ್ ಜಾರಿಯಾದ ಬಳಿಕ ಇದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಎಂಬೊರ್ಗ್ ತಿಳಿಸಿದ್ದಾರೆ.
ಸೋಂಕಿನ ಲಕ್ಷ್ಮಣ: ಈ ಸಮಸ್ಯೆ ಸಣ್ಣ ಜ್ವರ, ಆಯಾಸ, ತಲೆ ನೋವು, ಗಂಟಲು ನೋವು ಮತ್ತು ದೀರ್ಘಾವಧಿಯ ಒಣ ಕೆಮ್ಮಿನಂತಹ ಲಕ್ಷಣವನ್ನು ಹೊಂದಿರುತ್ತದೆ. ಹೆಚ್ಚಿನ ಜನರು ಜ್ವರವನ್ನು ಹೊಂದಿರುತ್ತಾರೆ. ಆದರೆ ಇನ್ಫುಯೆಂಜಾ ಜ್ವರದ ರೀತಿ ಹೊಂದಿರುವುದಿಲ್ಲ. ಈ ಹಿನ್ನೆಲೆ ಇದನ್ನು ಕೋಲ್ಡ್ ನ್ಯೂಮೋನಿಯಾ ಎಂದು ಕರೆಯಲಾಗುವುದು. ಈ ಸೋಂಕಿನ ಸಾಮಾನ್ಯ ಪೆನ್ಸಿಲಿನ್ ಲಸಿಕೆ ಕಾರ್ಯ ನಿರ್ವಹಿಸುವುದಿಲ್ಲ.
ಕಳೆದ ವರ್ಷ ಆಗಸ್ಟ್ನಿಂದ ನೆದರ್ಲ್ಯಾಂಡ್ ಕೂಡ ನ್ಯೂಮೋನಿಯಾ ಪ್ರಕರಣದಲ್ಲಿ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ಸರ್ಕಾರ ಈ ಜ್ವರದ ಪತ್ತೆಗೆ ಕಣ್ಗಾವಲು ಇರಿಸಿದೆ ಎಂದು ನ್ಯೂ ಮೆಸೇಜ್ ಬೋರ್ಡ್ ವರದಿ ತಿಳಿಸಿದೆ.
ನೆದರ್ಲ್ಯಾಂಡ್ ಇನ್ಸುಟಿಟ್ಯೂಟ್ ಫಾರ್ ಹೆಲ್ತ್ ಸರ್ವೀಸ್ ರಿಸರ್ಚ್ (ಎನ್ಐವಿಇಎಲ್) ಕಳೆದ ವಾರ ವರದಿ ಮಾಡಿದಂತೆ 5 ರಿಂದ 14 ವರ್ಷದ 1,00,000 ಮಕ್ಕಳು ನ್ಯೂಮೋನಿಯಾದಿಂದ ಬಳಲಿದ್ದಾರೆ. ಇದು ಇತ್ತೀಚಿನ ದಿನದಲ್ಲಿ ಅಧಿಕ ಮಟ್ಟದಲ್ಲಿ ನ್ಯೂಮೋನಿಯಾ ಪ್ರಕರಣದ ಉಲ್ಬಣವಾಗಿದೆ. 2022ರಲ್ಲಿ ವಾರದಲ್ಲಿ ಸರಸಾರಿ 58 ಮಕ್ಕಳು ನ್ಯುಮೋನಿಯಾಗೆ ತುತ್ತಾಗಿದ್ದರು. ಇದೀಗ 124 ರಿಂದ 145 ಪಟ್ಟು ಪ್ರಕರಣದ ಹೆಚ್ಚಳ ಕಂಡಿದೆ ಎಂದು ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಚೀನಾದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ: ಕಾರಣವೇನು?