ನ್ಯೂಯಾರ್ಕ್( ಅಮೆರಿಕ): ಕೋವಿಡ್ ಲಸಿಕೆ ಪಡೆದಿದ್ದರೂ ಹಲವು ಬಾರಿ ರೂಪಾಂತರ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆ ಈ ವೈರಸ್ಗಳ ಎದುರಿಸುವಲ್ಲಿ ರೋಗ ನಿರೋಧಕ ಶಕ್ತಿ ಜೊತೆಗೆ ಪ್ರತಿಕಾಯದ ಅವಶ್ಯಕತೆ ಇದೆ. ಈ ಕಾರಣದಿಂದ ಕೋವಿಡ್ಗೆ ಟಿ ಸೆಲ್ ಆಧಾರಿತ ಲಸಿಕೆ ಉತ್ತಮ ಪರಿಹಾರವಾಗಲಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಟಿ ಸೆಲ್ ಆಧಾರಿತ ಕೋವಿಡ್ ಲಸಿಕೆಗಳು ಪ್ರಸ್ತುತ ಲಸಿಕೆಗಳಿಂದ ಹೆಚ್ಚು ಕಾಲ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ.
ಇದು ಋತುಮಾನದ ಜ್ವರ ಸೇರಿದಂತೆ ಇನ್ನಿತರ ಮಾದರಿಗಳಿಗೆ ದೀರ್ಘಕಾಲಿಕ ರೋಗ - ನಿರೋಧಕ ಶಕ್ತಿ ಉಂಟು ಮಾಡುತ್ತದೆ ಎಂದು ಭಾರತೀಯ ಅಮೆರಿಕನ್ ಸಂಶೋಧಕರು ತಿಳಿಸಿದ್ದಾರೆ. ಪ್ರಸ್ತುತ ಕೋವಿಡ್ ಲಸಿಕೆಗಳನ್ನು ಸಾರ್ಸ್-ಕೋವ್-2 ಸ್ಪೈಕ್ ಪ್ರೊಟೀನ್ ವಿರುದ್ಧದ ರೋಗ ನಿರೋಧಕ ಶಕ್ತಿಯಾಗಿ ಬಳಕೆ ಮಾಡಲಾಗುತ್ತಿದೆ. ಈ ಸಾರ್ಸ್-ಕೋವ್-2 ಹೆಚ್ಚು ರೂಪಾಂತರಿಯಾಗಿದ್ದು, ಒಂದು ಅವಧಿ ಮುಗಿದ ಬಳಿಕ ಲಸಿಕೆ ಪರಿಣಾಮ ಕಡಿಮೆಯಾಗಿತ್ತದೆ.
ಇಲಿಗಳ ಮೇಲೆ ಪ್ರಯೋಗ: ಅಮೆರಿಕದ ಸಹಾಭಾಗಿತ್ವದ ಎವಕ್ಸಿನ್ ಬಯೋಟೆಕ್ನೊಂದಿಗೆ ಪೆನ್ಸೆಲ್ವಿನಿಯಾ ಸ್ಟೇಟ್ ಯುನಿವರ್ಸಿಟಿ ಅಧ್ಯಯನ ನಡೆಸಿದೆ. ಇದರಲ್ಲಿ ಮೊದಲ ಬಾರಿಗೆ ಲೈವ್ ವೈರಲ್ ಚಾಲೆಂಜ್ ಮಾದರಿಯಲ್ಲಿ ಎಐ (ಕೃತಕ ಬುದ್ದಿಮತ್ತೆ) ಆಧಾರಿತ ಲಸಿಕೆ ಪರಿಣಾಮಕಾರಿಯನ್ನು ಪ್ರದರ್ಶಿಸಲಾಗಿದೆ. ಈ ಅಧ್ಯಯನವನ್ನು ಇಲಿಗಳ ಮೇಲೆ ನಡೆಸಲಾಗಿದ್ದು, ಇಲಿಗಳಿಗೆ ಟಿ ಸೆಲ್ ಲಸಿಕೆ ಪ್ರಯೋಗ ಮಾಡಿದಾಗ ಶೇ 87.5 ರಷ್ಟು ಇಲಿಗಳು ಸಾವನ್ನಪ್ಪಿದೆ. ಇನ್ನು ನಿಯಂತ್ರಣ ಗುಂಪಿನ ಇಲಿಗಳಲ್ಲಿ ಒಂದು ಮಾತ್ರ ಬದುಕಿದೆ.
ಹೆಚ್ಚುವರಿಯಾಗಿ, ಉಳಿದಿರುವ ಎಲ್ಲಾ ಲಸಿಕೆ ಹಾಕಿದ ಬಳಿಕ ಇಲಿಗಳು 14 ದಿನಗಳಲ್ಲಿ ಸೋಂಕು ಮುಕ್ತವಾಗಿದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್ ಫ್ರಂಟಿಯರ್ಸ್ ಇಮ್ಯೂನೊಲೊಜಿಯಲ್ಲಿ ಪ್ರಕಟಿಸಲಾಗಿದೆ. ನಮ್ಮ ಜ್ಞಾನಕ್ಕೆ ಈ ಅಧ್ಯಯನವನ್ನು ಮೊದಲ ಬಾರಿಗೆ ಎಐ-ವಿನ್ಯಾಸಗೊಳಿಸಿದ ಟಿ-ಸೆಲ್ ಲಸಿಕೆಯಿಂದ ತೀವ್ರವಾದ ಕೋವಿಡ್ -19 ವಿರುದ್ಧ ವಿವೋ ರಕ್ಷಣೆಯನ್ನು ತೋರಿಸಲಾಯಿತು ಎಂದು ಅಸೋಸಿಯೇಟ್ ಪ್ರೊಫೆಸರ್ ಗಿರೀಶ್ ಕಿರಿಮಂಜೇಶ್ವರ್ ತಿಳಿಸಿದ್ದಾರೆ.
ಲಸಿಕೆ ಪರಿಣಾಮಕಾರಿ: ಇಲಿಗಳ ಮೇಲೆ ಕೋವಿಡ್ 19 ಸೋಂಕು ತಡೆಯುವಲ್ಲಿ ನಮ್ಮ ಲಸಿಕೆ ಪರಿಣಾಮಕಾರಿಯಾಗಿದೆ. ಇದನ್ನು ಸುಲಭವಾಗಿ ಮಾನವರ ಬಳಕೆ ಮೇಲಿನ ಪರೀಕ್ಷೆಗೆ ಶಿಫಾರಸ್ಸು ಮಾಡಬಹುದು ಎಂದಿದ್ದಾರೆ. ಇನ್ಫ್ಲುಯೆಂಜಾ ಸೇರಿದಂತೆ ಇನ್ನಿತರ ಋತುಮಾನದ ಸೋಂಕು ಅನ್ನು ತಡೆಗಟ್ಟುವಲ್ಲಿ ಟಿ ಸೆಲ್ ಲಸಿಕೆ ಪರಿಣಾಮಕಾರಿಯಾಗಿ ವಿನ್ಯಾಸ ಮಾಡಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸಾರ್ಸ್-ಕೋವ್-2ನ ಸ್ಪೈಕ್ ಪ್ರೊಟೀನ್ ವೈರಸ್ ಹೆಚ್ಚಿನ ಒತ್ತಡ ವಲಯ ಹೊಂದಿರುತ್ತದೆ. ಇದರ ಪರಿಣಾಮವಾಗಿ ಹೊಸ ರೂಪಾಂತರಗಳು ಹೊಂದಿ ಹೊಸ ತಳಿಗೆ ಹೊರಬರುತ್ತದೆ. ಈ ಲಸಿಕೆ ಇಂತಹ ಹೊಸ ತಳಿಗಳನ್ನು ಗುರಿಯಾಗಿಸಿ ಮಾಡಲಾಗಿದೆ. ಜನರು ಈ ಹೊಸ ಲಸಿಕೆಯನ್ನು ಪಡೆಯುತ್ತಲೇ ಇರಬೇಕಾಗುತ್ತದೆ.
ಟಿ ಸೆಲ್ ಮಧ್ಯವರ್ತಿ ರೋಗನಿರೋಧಕ ಶಕ್ತಿಯು ಸಾಮಾನ್ಯವಾಗಿ ದೀರ್ಘಕಾಲ ಇರುತ್ತದೆ, ಆದ್ದರಿಂದ ನಿಮಗೆ ಪುನರಾವರ್ತಿತ ಬೂಸ್ಟರ್ ಡೋಸ್‌ಗಳ ಅಗತ್ಯವಿಲ್ಲ ಎಂದು ಕಿರಿಮಂಜೇಶ್ವರ ವಿವರಿಸಿದ್ದಾರೆ.
ಇದನ್ನೂ ಓದಿ: ಒಂದೇ ಹನಿ ರಕ್ತದಲ್ಲಿ ಎಚ್ಐವಿ, ಹೆಪಟೈಟಸ್ ಬಿ ಮತ್ತು ಸಿ ಪತ್ತೆ