ETV Bharat / sukhibhava

ಅಲ್ಝೈಮರ್​ ಪ್ರೋಟಿನ್​ ಮಟ್ಟ ಕುಗ್ಗಿಸುತ್ತದೆ ನಿದ್ರೆ ಮಾತ್ರೆ; ಅಧ್ಯಯನದಲ್ಲಿ ಪತ್ತೆ - ಸ್ಮರಣಾಶಕ್ತಿ ನಷ್ಟ ಮತ್ತು ಗೊಂದಲದಂತಹ

ನಿದ್ರೆ ಹೀನತೆ ಅಲ್ಝೈಮರ್​ನೊಂದಿಗೆ ಸಂಬಂಧ ಹೊಂದಿರುವ ಹಿನ್ನೆಲೆ ಈ ಅಲ್ಝೈಮರ್​ ಪ್ರೋಟಿನ್​ ಉತ್ಪಾದನೆಯನ್ನು ನಿದ್ರೆ ಮಾತ್ರೆ ಕಡಿಮೆ ಮಾಡುತ್ತದೆ.

A sleeping pill lowers Alzheimer's protein levels; Findings in the study

author img

By

Published : Apr 21, 2023, 4:38 PM IST

ವಾಷಿಂಗ್ಟನ್​​: ಅಲ್ಝೈಮರ್ ರೋಗದ ಮೊದಲ ಸೂಚನೆ ಎಂದರೆ ನಿದ್ರೆ ಸಮಸ್ಯೆ. ಅನೇಕರಲ್ಲಿ ಅಲ್ಝಮೈರಾ ಸಮಸ್ಯೆ ಪತ್ತೆ ಆಗುವ ಮುಂಚೆ ಅವರಲ್ಲಿ ನಿದ್ರೆ ಸಮಸ್ಯೆ, ಸ್ಮರಣಶಕ್ತಿ ನಷ್ಟ ಮತ್ತು ಗೊಂದಲದಂತಹ ಸಮಸ್ಯೆಗಳು ಕಾಡಿರುತ್ತದೆ. ಅಲ್ಝೈಮರ್ ರೋಗ ನಿದ್ರೆಗೆ ಭಂಗ ತಂದು ಅದು ಮಿದುಳಿನ ಬದಲಾವಣೆಗೆ ಕಾರಣವಾಗುತ್ತದೆ. ಕಳಪೆ ನಿದ್ದೆ ಮಿದುಳಿನ ಬದಲಾವಣೆಗೆ ಹಾನಿ ಮಾಡುತ್ತದೆ.

ಸೆಂಟ್​ ಲೂಯಿಸ್​ನಲ್ಲಿ ವಾಷಿಂಗ್ಟನ್​ ಯುನಿವರ್ಸಿಟಿ ಸ್ಕೂಲ್​ ಆಫ್​ ಮೆಡಿಸಿನ್​ ಈ ಸಂಬಂಧ ಅಧ್ಯಯನ ನಡೆಸಿದ್ದು, ಈ ಚಕ್ರವನ್ನು ಕಡಿತ ಮಾಡಲು ಇರುವ ಅನೇಕ ಸಾಧ್ಯತೆಗಳನ್ನು ಹುಡುಕಿದೆ. ಎರಡು ರಾತ್ರಿಗಳ ಸಣ್ಣ ಅಧ್ಯಯನದಲ್ಲಿ, ನಿದ್ರೆ ಮಾತ್ರೆ ಸೇವಿಸುವವರಲ್ಲಿ ಈ ಅಲ್ಝೈಮರ್ ಪ್ರಮುಖ ಪ್ರೋಟಿನ್​ ಮಟ್ಟದಲ್ಲಿ ಇಳಿಕೆ ಕಂಡು ಬಂದಿದೆ. ಏಕೆಂದರೆ ಅಂತಹ ಪ್ರೋಟೀನ್‌ಗಳ ಹೆಚ್ಚಿನ ಮಟ್ಟವು ಹದಗೆಡುತ್ತಿರುವ ರೋಗವನ್ನು ಪತ್ತೆಹಚ್ಚುತ್ತದೆ.

ನಿದ್ದೆ ಪ್ರಕ್ರಿಯೆ ಮೇಲೆ ಅಧ್ಯಯನ: ನಿದ್ರಾಹೀನತೆಯಿಂದ ಬಳಲುವವರಿಗೆ ಎಫ್​ಡಿಎ ಈಗಾಗಲೇ ಸುವೊರೆಕ್ಸೆಂಟ್​ ಸೇವಿಸಲು ಅನುಮತಿ ನೀಡಿದೆ. ಇದು ನಿದ್ರೆ ಬರುವಿಕೆಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಅಥವಾ ಅಲ್ಝಮೈರಾ ರೋಗದ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ. ಆದಾಗ್ಯೂ, ಇದನ್ನು ಪತ್ತೆ ಮಾಡಲು ಮತ್ತಷ್ಟು ಕಾರ್ಯ ನಡೆಸಬೇಕಿದೆ. ಈ ಕುರಿತು ಅಧ್ಯಯನವನ್ನು ಅನ್ನಲ್ಸ್​ ಆಫ್​​ ನ್ಯೂರೋಲಾಜಿಯಲ್ಲಿ ಪ್ರಕಟಿಸಲಾಗಿದೆ.

ಇದು ಸಣ್ಣ, ಆಧಾರ ಕಲ್ಪನೆ ಅಧ್ಯಯನ. ಇದು ಆಲ್ಝೈಮರ್ನ ಬೆಳವಣಿಗೆಯ ಬಗ್ಗೆ ಚಿಂತಿತರಾಗಿರುವ ಜನರು ಅದನ್ನು ಪ್ರತಿ ರಾತ್ರಿ ಸುವೊರೆಕ್ಸೆಂಟ್ ತೆಗೆದುಕೊಳ್ಳಲು ಪ್ರಾರಂಭಿಸುವ ಕಾರಣವೆಂದು ಅರ್ಥೈಸಿಕೊಳ್ಳುವುದು ಅಕಾಲಿಕವಾಗಿದೆ ಎಂದು ಹಿರಿಯ ಲೇಖಕ ಬ್ರೆಂಡನ್​ ಲುಸೆ ತಿಳಿಸಿದ್ದಾರೆ.

ಪ್ರೋಟಿನ್​ ಮಟ್ಟ ಕ್ಷೀಣ: ಪ್ರೋಟಿನ್​ ಮಟ್ಟ ತಗ್ಗ ಅರಿವಿನ ಕ್ಷೀಣತೆಯಲ್ಲಿ ಇದು ದೀರ್ಘಕಾಲದ ಪರಿಣಾಮ ಬೀರಲಿದೆಯಾ ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ. ಹಾಗಾದರೆ, ಎಷ್ಟು ಡೋಸ್​ ಯಾರಿಗೆ ನೀಡಬೇಕು ಎಂದು ತಿಳಿಯಬೇಕು. ಇನ್ನು ಈ ಫಲಿತಾಂಶ ಬಹಳ ಉತ್ತೇಜನಕಾರಿಯಾಗಿದೆ. ಈ ಔಷಧ ಈಗಾಗಲೇ ಸುರಕ್ಷಿತ ಎಂದು ಸಾಬೀತಾಗಿದೆ. ಈಗ ಅಲ್ಝಮೈರಾ ರೋಗಕ್ಕೆ ಕಾರಣವಾಗು ಪ್ರೋಟಿನ್​ ಮಟ್ಟವನ್ನು ತಗ್ಗಿಸಲಿದೆ ಎಂಬ ಸಾಕ್ಷ್ಯ ಇದೆ.

ಸುವೊರೆಕ್ಸೆಂಟ್ ನಿದ್ರಾಹೀನತೆ ತೊಂದರೆ ಅನುಭವಿಸುತ್ತಿರುವವರೆ ಔಷಧವಾಗಿದ್ದು ಓರೆಕ್ಸಿನ್ ಗ್ರಾಹಕ ವಿರೋಧಿಗಳು ಆಗಿದೆ. ಓರೆಕ್ಸಿನ್​ ನೈಸರ್ಗಿಕ ಬಯೋಮೊಲೆಕ್ಯೂಲ್​ ಎಚ್ಚರದಿಂದ ಇರುವಂತೆ ಪ್ರೇರೇಪಿಸುತ್ತದೆ. ಈ ಓರೆಕ್ಸಿನ್​ ನನ್ನು ಬ್ಲಾಕ್​ ಮಾಡಿ ನಿದ್ದೆ ಮಾಡುವಂತೆ ಮಾಡುತ್ತದೆ.

ಅಮಿಲಾಯ್ಡ್ ಬೀಟಾ ಪ್ರೋಟೀನ್‌ನ ಪ್ಲೇಕ್‌ಗಳು ಮೆದುಳಿನಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸಿದಾಗ ಅಲ್ಝೈಮರ್​ ಕಾಯಿಲೆ ಪ್ರಾರಂಭವಾಗುತ್ತದೆ. ಅಮಿಲಾಯ್ಡ್ ಶೇಖರಣೆಯ ವರ್ಷಗಳ ನಂತರ, ಎರಡನೇ ಮೆದುಳಿನ ಪ್ರೋಟೀನ್, ಟೌ, ನ್ಯೂರಾನ್‌ಗಳಿಗೆ ವಿಷಕಾರಿಯಾದ ಗೋಜಲುಗಳನ್ನು ರೂಪಿಸಲು ಪ್ರಾರಂಭಿಸುತ್ತದೆ. ಆಲ್ಝೈಮರ್ನ ಕಾಯಿಲೆಯಿರುವ ಜನರು ಟೌ ಟ್ಯಾಂಗಲ್ಗಳು ಪತ್ತೆಹಚ್ಚುವ ಸಮಯದಲ್ಲಿ ಮೆಮೊರಿ ನಷ್ಟದಂತಹ ಅರಿವಿನ ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.

ಕಳಪೆ ನಿದ್ರೆ ಮೆದುಳಿನಲ್ಲಿನ ಅಮಿಲಾಯ್ಡ್ ಮತ್ತು ಟೌ ಎರಡರ ಉನ್ನತ ಮಟ್ಟಗಳಿಗೆ ಸಂಬಂಧಿಸಿದೆ. ಉತ್ತಮ ನಿದ್ರೆಯು ವಿರುದ್ಧ ಪರಿಣಾಮವನ್ನು ಹೊಂದಿದೆಯೇ ಎಂಬ ಪ್ರಶ್ನೆ ಉಳಿದಿದೆ. ಅಮಿಲಾಯ್ಡ್ ಮತ್ತು ಟೌ ಮಟ್ಟಗಳಲ್ಲಿನ ಕಡಿತ, ಮತ್ತು ಆಲ್ಝೈಮರ್​ನ ಕಾಯಿಲೆಯ ಪ್ರಗತಿಯನ್ನು ನಿಲ್ಲಿಸುವುದು ಅಥವಾ ಹಿಮ್ಮುಖಗೊಳಿಸುವುದು ಎಂಬುದು ಇಲಿಗಳ ಮೇಲೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ ಎಂದಿದ್ದಾರೆ.

ಇದನ್ನೂ ಓದಿ: ರಕ್ತದ ಸಕ್ಕರೆ ಅಣುಗಳ ಮೂಲಕ ಅಲ್ಝೈಮರ್​ ಸಮಸ್ಯೆ ಪತ್ತೆ ಮಾಡಬಹುದು; ಅಧ್ಯಯನದಲ್ಲಿ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.