ETV Bharat / sukhibhava

ಮಂಕಿಪಾಕ್ಸ್ ದೇಹದಲ್ಲಿ10 ವಾರಗಳವರೆಗೂ ಇರುತ್ತದೆ! - ಮಂಕಿಪಾಕ್ಸ್ ಒಂದು ಡಜನ್‌ಗಿಂತಲೂ ಹೆಚ್ಚು ದೇಶಗಳಲ್ಲಿ ಹರಡಿದೆ

ಮಂಕಿಪಾಕ್ಸ್ ಒಂದು ಡಜನ್‌ಗಿಂತಲೂ ಹೆಚ್ಚು ದೇಶಗಳಲ್ಲಿ ಹರಡಿದೆ. ಇದು ಲೈಂಗಿಕವಾಗಿ ಹರಡುವ ಸೋಂಕಲ್ಲವಾದರೂ ಸಾಮಾನ್ಯವಾಗಿ ವೀರ್ಯ ಮತ್ತು ಯೋನಿ ದ್ರವಗಳ ಮೂಲಕ ಹರಡುತ್ತದೆ ಎನ್ನಲಾಗಿದೆ. ಈ ಪ್ರಕರಣಗಳಲ್ಲಿ ಇತ್ತೀಚಿನ ಉಲ್ಬಣವು ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಇತರೆ ಪುರುಷರಲ್ಲಿ ಕಂಡುಬಂದಿದೆ ಎಂದು ಗಮನಿಸಿದಲಾಗಿದೆ..

ಮಂಕಿಪಾಕ್ಸ್ ದೇಹದಲ್ಲಿ10 ವಾರಗಳವರೆಗೂ ಇರುತ್ತದೆ!

author img

By

Published : May 27, 2022, 3:44 PM IST

ಲಿವರ್‌ಪೂಲ್ ಯೂನಿವರ್ಸಿಟಿ ಹಾಸ್ಪಿಟಲ್ಸ್‌ನ ಸಂಶೋಧಕರ ತಂಡದ ನೇತೃತ್ವದ ಸಂಶೋಧನೆಯು 2018 ಮತ್ತು 2021ರ ನಡುವೆ ನಡೆದ ಯುಕೆಯ ಏಳು ಹಿಂದಿನ ಪ್ರಕರಣಗಳ ವಿಶ್ಲೇಷಣೆಯನ್ನು ಆಧರಿಸಿದೆ. ಈ ಪ್ರಮುಖ ಸಂಶೋಧನೆಯ ಪ್ರಕಾರ, ಯುಕೆಯ ಹಿಂದಿನ ಏಳು ಪ್ರಕರಣಗಳಲ್ಲಿ ಒಬ್ಬರು ತಮ್ಮ 40ರ ಹರೆಯದಲ್ಲಿ ಆಸ್ಪತ್ರೆಗೆ ದಾಖಲಾಗುವ ಮೊದಲು ನೈಜೀರಿಯಾದಲ್ಲಿ ಮಂಕಿಪಾಕ್ಸ್‌ಗೆ ತುತ್ತಾಗಿದ್ದರು. ಅನಾರೋಗ್ಯಕ್ಕೆ ಒಳಗಾದ 76 ದಿನಗಳ ನಂತರವೂ ಪರೀಕ್ಷೆ ನಡೆಸಿದಾಗ ಪಾಸಿಟಿವ್​ ಇತ್ತು ಎಂದು ಸಂಶೋಧನೆಯ ವರದಿಯನ್ನು ಡೈಲಿ ಮೇಲ್ ವರದಿ ಮಾಡಿದೆ.

ಆ ವ್ಯಕ್ತಿಯನ್ನು ಚಿಕಿತ್ಸೆಗೆ ಒಳಪಡಿಸಿ ಕೆಲವು ವಾರಗಳ ನಂತರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ಇದಾದ ಆರು ವಾರಗಳ ನಂತರ ಮೊದಲ ಬಾರಿಗೆ ಸೆಕ್ಸ್​ ಮಾಡಿದ್ದಾರೆ. ಪರಿಣಾಮ ಈ ವೈರಸ್​ ಮತ್ತೆ ವಕ್ಕರಿಸಿದೆ. ಬಳಿಕ ಆತ ವೈದ್ಯರ ಬಳಿ ಹೋಗಿ ದುಗ್ಧರಸ ಗ್ರಂಥಿಗಳು ಊದಿಕೊಂಡಿರುವುದರ ಬಗ್ಗೆ ತಿಳಿಸಿದ್ದಾನೆ. ಇದರಿಂದ ಸ್ವಲ್ಪ ತಲೆಕೆಸಿಕೊಂಡ ವೈದ್ಯರಿಗೆ ಕಂಡು ಬಂದಿದ್ದೇ ಇದು ಮಂಕಿಪಾಕ್ಸ್‌ನ ಲಕ್ಷಣವಾಗಿದೆ ಎಂದು.

ಈ ಎಲ್ಲಾ ಘಟನೆಯ ನಂತರ ವ್ಯಕ್ತಿಗೆ PCR ಪರೀಕ್ಷೆ ನಡೆಸಲಾಗಿ ಪಾಸಿಟಿವ್​ ಬಂದಿದೆ. ಆದರೆ, ವ್ಯಕ್ತಿಗೆ ಯಾವುದೇ ಗಂಭೀರ ಸಮಸ್ಯೆಗಳ ಲಕ್ಷಣ ಮೊದಲಿನಂತೆ ಕಂಡು ಬರಲಿಲ್ಲ. ರಕ್ತ ಮತ್ತು ಗಂಟಲಿನ ಸ್ವ್ಯಾಬ್‌ಗಳಲ್ಲಿ ಮಂಕಿಪಾಕ್ಸ್ ವೈರಸ್ ಪತ್ತೆಯಾಗಿದೆ ಎಂದು ಅಧ್ಯಯನವು ವರದಿ ಮಾಡಿದ್ದರೂ ಸಹ ಆಸ್ಪತ್ರೆಯ ಪ್ರಮುಖ ಲೇಖಕ ಡಾ. ಹಗ್ ಆಡ್ಲರ್ ಅವರು ಅಷ್ಟು ಸಮಯದವರೆಗೆ ವೈರಸ್ ಗಂಟಲು ಮತ್ತು ರಕ್ತದಲ್ಲಿ ಇರಬಹುದೇ ಎಂದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

ಗುಣಲಕ್ಷಣ
ಗುಣಲಕ್ಷಣ

ಸಾಂಪ್ರದಾಯಿಕವಾಗಿ ಮಂಕಿಪಾಕ್ಸ್ ರೋಗವನ್ನು ಸಾಂಕ್ರಾಮಿಕ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದಕ್ಕೆ ಒಳಗಾದ ವ್ಯಕ್ತಿಗಳಲ್ಲಿ ವಿಶಿಷ್ಟವಾದ ದದ್ದು ಮತ್ತು ಗಾಯ ಉಂಟಾಗಲಿದೆ. ಇದು ಕೆಲವು ವಾರಗಳ ನಂತರ ಗುಣವಾಗುತ್ತದೆ. ಆದರೆ, ಈ ವ್ಯಕ್ತಿಗೆ ಎರಡನೇ ಬಾರಿಗೂ ದದ್ದು ಇತ್ತು, ಇದರರ್ಥ ಆತ ಮತ್ತೇ ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರಬಹುದು ಎಂದು ವರದಿ ಹೇಳಿದೆ.

ಇತರ ರೋಗಿಗಳಲ್ಲಿ ತಮ್ಮ ತುರಿಕೆ ಕಣ್ಮರೆಯಾದ ನಂತರವೂ ನಾಲ್ಕು ವಾರಗಳವರೆಗೆ PCR ಪರೀಕ್ಷೆಗಳಲ್ಲಿ ಮಂಕಿಪಾಕ್ಸ್‌ ಪಾಸಿಟಿವ್​ ವರದಿ ಬಂದಿದೆ. ಆದರೆ, ಇತರೆ ರೋಗಿಗಳು ಈ ರೋಗಿಯ ಹಾಗೆ ಮತ್ತೇ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿಲ್ಲ.

ಗುಣಲಕ್ಷಣ
ಗುಣಲಕ್ಷಣ

ತುರಿಕೆ ಕಣ್ಮರೆಯಾದ ನಂತರ ವೈರಸ್ ಹರಡಬಹುದೇ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಡಾ ಆಡ್ಲರ್ ಅಭಿಪ್ರಾಯಿದ್ದಾರೆ ಎಂಬ ಬಗ್ಗೆ ವರದಿ ಉಲ್ಲೇಖಿಸಿದೆ. ಮಂಕಿಪಾಕ್ಸ್ ಮೊದಲ ಬಾರಿಗೆ ದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ, ಇದು ಸಾಮಾನ್ಯವಾಗಿ ಕಂಡು ಬರುವುದಿಲ್ಲ. ಪ್ರಸ್ತುತ ಏಕಾಏಕಿ ಸುಮಾರು 300 ಜನರ ಮೇಲೆ ಪರಿಣಾಮ ಬೀರಿದೆ.

ಒಂದು ಡಜನ್‌ಗಿಂತಲೂ ಹೆಚ್ಚು ದೇಶಗಳಲ್ಲಿ ಹರಡಿದೆ. ಇದು ಲೈಂಗಿಕವಾಗಿ ಹರಡುವ ಸೋಂಕಲ್ಲವಾದರೂ ಸಾಮಾನ್ಯವಾಗಿ ವೀರ್ಯ ಮತ್ತು ಯೋನಿ ದ್ರವಗಳ ಮೂಲಕ ಹರಡುತ್ತದೆ ಎನ್ನಲಾಗಿದೆ. ಈ ಪ್ರಕರಣಗಳಲ್ಲಿ ಇತ್ತೀಚಿನ ಉಲ್ಬಣವು ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಇತರೆ ಪುರುಷರಲ್ಲಿ ಕಂಡು ಬಂದಿದೆ ಎಂದು ಗಮನಿಸಿದಲಾಗಿದೆ.

ಇದನ್ನೂ ಓದಿ: ಆರ್​ಎಸ್​ಎಸ್​​ನವರೇನು ಮೂಲ ಭಾರತೀಯರಾ?: ಸಿದ್ದರಾಮಯ್ಯ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.