ETV Bharat / sukhibhava

ಹೃದಯಾಘಾತದ ಬೆದರಿಕೆ ಗ್ರಹಿಸುವ ಬನಿಯನ್​ - ಹಠಾತ್​ ಹೃದಯಾಘಾತ ಪತ್ತೆ ಸಾಧನ

ಇಸಿಜಿಯಂತೆ ಕೆಲಸ ಮಾಡುವ ಈ ಬನಿಯನ್ ಹೃದಯಾಘಾತದ ಮುನ್ಸೂಚನೆ ನೀಡುತ್ತದಂತೆ.

a-bunion-that-senses-the-threat-of-a-heart-attack

author img

By ETV Bharat Karnataka Team

Published : Dec 27, 2023, 4:11 PM IST

ಇತ್ತೀಚಿನ ದಿನಗಳಲ್ಲಿ ಅನೇಕರು ದಿಢೀರ್​ ಕುಸಿದು ಬಿದ್ದು ವೈದ್ಯಕೀಯ ಸಹಾಯ ಪಡೆಯುವ ಮುನ್ನವೇ ಸಾವನ್ನಪ್ಪುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಅದರಲ್ಲೂ ಯುವ ಜನತೆ ಈ ರೀತಿ ಪ್ರಾಣ ಕಳೆದುಕೊಳ್ಳುತ್ತಿರುವುದು ಸಾಕಷ್ಟು ಆತಂಕ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಬನಿಯನ್‌ವೊಂದನ್ನು ಬ್ರಿಟಿಷ್​ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಬನಿಯನ್​ ಸಾವಿಗೆ ಕಾರಣವಾಗುವ ದಿಢೀರ್​ ಹೃದಯಾಘಾತದ ಬೆದರಿಕೆಯನ್ನು ಗ್ರಹಿಸುತ್ತದಂತೆ.

ಹೃದಯ ಎಂಬ ದೇಹದ ಎಂಜಿನ್.​ 24 ಗಂಟೆಗಳ ಕಾಲವೂ ಕೆಲಸ ಮಾಡಿದರೆ ಮಾತ್ರ ನಾವು ಬದುಕಲು ಸಾಧ್ಯ. ಹಾಗಾಗಿ ಸಮರ್ಥ ಮತ್ತು ವಿಶ್ವಾಸಾರ್ಹವಾಗಿ ಕಾರ್ಯ ನಿರ್ವಹಿಸಲೇಬೇಕು. ಇದಕ್ಕಾಗಿ ಹೃದಯದ ವ್ಯವಸ್ಥೆಗೆ ಸೇರಿದ ವಿಶೇಷ ಕೋಶಗಳ ಜಾಲವನ್ನು ಅವಲಂಬಿಸಿದೆ. ಹೃದಯದ ಎಲೆಕ್ಟ್ರಿಕಲ್​ ವ್ಯವಸ್ಥೆ ಎಂದು ಇದನ್ನು ಕರೆಯಲಾಗುವುದು. ಇದರ ಕೋಶವ ಎಲೆಕ್ಟ್ರಿಕಲ್​ ಪ್ರಚೋದನೆ ಸೃಷ್ಟಿಸುತ್ತದೆ. ಈ ಅಲೆಗಳು ಹೃದಯದ ಬಡಿತ ನಿಯಂತ್ರಿಸುತ್ತದೆ. ಚಿಹ್ನೆಗಳಲ್ಲಿ ಉಂಟಾಗುವ ಅಡೆತಡೆಗಳು ಹೃದಯ ರಿಥಂ ಸಮಸ್ಯೆಗೆ ಕಾರಣವಾಗುತ್ತದೆ. ಇದೇ ಹಠಾತ್​ ಸಾವಿಗೆ ಕಾರಣ.

ಹೃದಯದ ಎಲೆಕ್ಟ್ರಿಕಲ್​ ಚಲನಚೀಲತೆಯ ಸಂಪೂರ್ಣ ಮ್ಯಾಪಿಂಗ್​​ ಪ್ರಸ್ತುತ ವಿರಳ. ಇದು ಹೃದಯಕ್ಕೆ ಕ್ಯಾತಿಟರ್ ಸೇರಿಸುವುದನ್ನು ಒಳಗೊಂಡಿರುತ್ತದೆ ಅಥವಾ ಬಳಕೆ ಮಾಡಿ ಬಿಸಾಡುವ ಸಾಧನ ಬಳಸುತ್ತದೆ. ಈ ಸಾಧನ ವೆಚ್ಚದಾಯಕ. ಈ ಪ್ರಕ್ರಿಯೆ ಕೂಡ ಹೆಚ್ಚಿನ ಸಮಯ ಬೇಡುತ್ತದೆ. ಇದಕ್ಕಿಂತ ಹೆಚ್ಚಾಗಿ ಈ ಪ್ರಕ್ರಿಯೆಗೆ ರೆಡಿಯೋಆ್ಯಕ್ಟಿವಿಟಿ ಬಳಕೆ ಬೇಕಾಗುತ್ತದೆ.

ಕಳೆದ ಕೆಲವು ದಶಕಗಳಲ್ಲಿ ಕಾರ್ಡಿಯಾಕ್ ಇಮೇಜಿಂಗ್ ಉತ್ತಮ ಪ್ರಗತಿ ಸಾಧಿಸಿದೆ. ಆದರೆ, ಅಂಗಾಂಗಗಳ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕಲ್​ ಸಿಸ್ಟಂ ಪರೀಕ್ಷೆ ವಿಧಾನದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಪ್ರಸ್ತುತ 12 ಪ್ರಮುಖ ಇಸಿಜಿಗಳನ್ನು ಬಳಕೆ ಮಾಡಲಾಗುತ್ತದೆ. ಕಳೆದ 50 ವರ್ಷದಿಂದ ಇದರ ಬದಲಾವಣೆಯಾಗಿದೆ.

ಕಡಿಮೆ ವೆಚ್ಚ, ಹೆಚ್ಚು ಸಾಮರ್ಥ್ಯ: ಯುನಿವರ್ಸಿಟಿ ಕಾಲೇಜ್​ ಲಂಡನ್​ ವಿಜ್ಞಾನಿಗಳು ಬನಿಯನ್​ನಲ್ಲಿ ಎಲೆಕ್ಟ್ರೋಕಾರ್ಡಿಗ್ರಾಪಿ ಇಮೇಜಿಂಗ್​​ (ಇಸಿಜಿಐ) ಅಭಿವೃದ್ಧಿಪಡಿಸಿದ್ದಾರೆ. ಇದು ಹೃದಯಾಘಾತದಿಂದ ಆಗುವ ಸಾವನ್ನು ಮುಂಚಿತವಾಗಿ ಅಂದಾಜಿಸುತ್ತದೆ. ಇದು ಸಾಮರ್ಥ್ಯದಾಯಕ ಮತ್ತು ಕಡಿಮೆ ವೆಚ್ಚದ್ದಾಗಿದೆ.

ಈ ಸಾಧನ 256 ಸೆನ್ಸಾರ್​ ಹೊಂದಿದೆ. ಹೃದಯದ ಬಗ್ಗೆ ಎಲೆಕ್ಟ್ರಿಕಲ್​ ದತ್ತಾಂಶವನ್ನು ಸಂಗ್ರಹಿಸುತ್ತದೆ. ಎಂಆರ್​​ಐ ಇಮೇಜ್​ಗಳ ಮೂಲಕ ಸಂಯೋಜಿಸಿ ಹೃದಯದ ಡಿಜಿಟಲ್​ ಮಾದರಿ ಮತ್ತು ಎಲೆಕ್ಟ್ರಿಕಲ್​ ಆ್ಯಕ್ಟಿವಿಟಿ ಅಲೆಗಳು ಪ್ರಯಾಣಿಸಿ ಇದನ್ನು ಸೃಷ್ಟಿಸುತ್ತದೆ.

ಎಂಆರ್​ಐ ಹೃದಯ ಸ್ನಾಯು ಟಿಶ್ಯೂ ಆರೋಗ್ಯವನ್ನು ಬಹಿರಂಗಪಡಿಸುತ್ತದೆ. ಇದು ಸತ್ತ ಸ್ನಾಯುಗಳ ಕೋಶಗಳನ್ನು ವಿವರಿಸುತ್ತದೆ. ಇಸಿಜಿ ಬನಿಯನ್​ನಿಂದ ಲಭ್ಯವಾದ ಮಾಹಿತಿಯನ್ನು ಇದರೊಂದಿಗೆ ಹೋಲಿಕೆ ಮಾಡಬಹುದು. ಹೃದಯದ ರಿದಂಗೆ ಅಡ್ಡಿಯಾಗುವ ಜೀವ ಬೆದರಿಕೆಯ ಅಪಾಯವನ್ನು ನಿರ್ಣಯಿಸುತ್ತದೆ.

ಸರಿಯಾದ ಅಪಾಯದ ಪತ್ತೆಯೂ ರೋಗಿಗಳಲ್ಲಿ ಅಳವಡಿಸಬಹುದಾದ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್ ಅನ್ನು ಸರಿಯಾಗಿ ಅಳವಡಿಸಲು ಸಹಾಯ ಮಾಡುತ್ತದೆ. ಇದು ಹೃದಯ ರಿದಂ ಮೇಲ್ವಿಚಾರಣೆ ಮಾಡುತ್ತದೆ. ಪರಿಣಾಮಕಾರಿ ಔಷಧಗಳ ಮೌಲ್ಯಮಾಪನಕ್ಕೆ ಬಳಕೆ ಮಾಡಲಾಗುವುದು. ಈ ಹೊಸ ಹೃದಯದ ಸಾಧನವೂ ಹೃದಯದ ಆರೋಗ್ಯದ ಜೀವನಶೈಲಿ ಬದಲಾವಣೆಯಾಗಿದೆ.

ಇದು ಪುನರ್​ಬಳಕೆಯ ಇಸಿಜಿ ಬನಿಯನ್. ಇದರಲ್ಲಿನ ಡ್ರೈ ಎಲೆಕ್ಟ್ರಾರ್ಡಸ್​​ ಇದಕ್ಕೆ ಕಾರಣ. ಇವುಗಳನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದು. ಮೆಟಲ್​ ಎಲೆಕ್ಟ್ರೊಡ್ಸ್​​ಗಿಂತ ಇವು ಉತ್ತಮವಾಗಿದೆ. ಇಸಿಜಿ ಬನಿಯನ್​ ಅನ್ನು 77 ರೋಗಿಗಳಿಗೆ ಪರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ: ಏಷ್ಯಾ, ಯುರೋಪ್​, ಆಫ್ರಿಕಾ, ಮಧ್ಯ ಪ್ರಾಚ್ಯದಲ್ಲಿ ಹೃದಯ ಸಂಬಂಧಿ ಸಾವಿನ ಅಪಾಯ ಹೆಚ್ಚು: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.