ಬೆಂಗಳೂರು: ಅಪರೂಪದ ಮತ್ತು ಜೀವಕ್ಕೆ ಕುತ್ತು ತರುವಂತಹ ಆಸ್ಟಿಯೋಪೆಟ್ರೋಸಿಸ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದು, ಪಾಕಿಸ್ತಾನದ ಐದು ತಿಂಗಳ ಮಗುವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆಯನ್ನು ನೀಡಿದ್ದಾರೆ. ಇದೀಗ ಮಗು ಆರೋಗ್ಯಯುತವಾಗಿದ್ದು, ತನ್ನ ದೇಶಕ್ಕೆ ಮರಳಲು ಸಜ್ಜಾಗಿದೆ.
ಇನ್ಫಾನ್ಟೈಲ್ ಆಸ್ಟಿಯೋಪೆಟ್ರೋಸಿಸ್ ಎಂಬುದು ಮಾರ್ಬಲ್ ಮೂಳೆ ರೋಗವಾಗಿದೆ. ಈ ಸಮಸ್ಯೆಗೆ ತುತ್ತಾದವರು ಅನೇಕ ಮೂಳೆಗಳ ಬಿಗಿತನ, ದೃಷ್ಟಿ ಹೀನತೆ ಮತ್ತು ಕೀವಿ ಕೇಳದಿರುವಿಕೆ ಮತ್ತು ಅಸ್ಥಿಮಜ್ಜೆ ಸಮಸ್ಯೆಗೆ ಒಳಗಾಗಿ ಅವರ ಜೀವಿತಾವಧಿಯೇ ಕುಗ್ಗುತ್ತದೆ. ಇಂತಹ ಮಗುವಿಗೆ ಹೊಸ ರೀತಿಯ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಟೆಕ್ನಿಕ್ ಮೂಲಕ ಚಿಕಿತ್ಸೆ ನೀಡಲಾಗಿದೆ.
ಕರಾಚಿ ಮೂಲದ ದಂಪತಿಗಳಿಗೆ ದಶಕಗಳ ಬಳಿಕ ಸಮವೀಯ ಎಂಬ ಮಗು ಜನಿಸಿದೆ. ಮಗುವಿಗೆ ಎರಡು ತಿಂಗಳಿದ್ದಾಗ ಅದಕ್ಕೆ ತಿನ್ನಿಸುವುದು ಕಷ್ಟವಾಗುತ್ತಿದೆ ಎಂದು ಪಾಕಿಸ್ತಾನದ ಆಸ್ಪತ್ರೆಗೆ ಪೋಷಕರು ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗು ವಿಶೇಷವಾದ ಅನುವಂಶಿಕ ಪರಿಸ್ಥಿತಿಯಿಂದ ಬಳಲುತ್ತಿರುವುದು ಕಂಡು ಬಂದಿದೆ.
ಆಕೆಯ ಸಮಸ್ಯೆ ಕಣ್ಣು, ಕಿವಿ ಮತ್ತು ಆಕೆಯ ಮೆದುಳಿನ ಮೇಲೆ ಪರಿಣಾಮ ಬೀರಿತು ಹಲವು ಚಿಕಿತ್ಸೆಗಳ ಬಳಿಕ ಪೋಷಕರು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ಮಗುವನ್ನು ಕರೆ ತಂದಿದ್ದಾರೆ.
ಮಾರ್ಚ್ನಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರಿಗೆ ದೃಷ್ಟಿ ಕಳೆದುಕೊಳ್ಳುತ್ತಿರುವುದಾಗಿ ಪತ್ತೆಯಾಗಿದೆ. ಆಕೆಯ ದೃಷ್ಟಿಯನ್ನು ಸುರಕ್ಷೆ ಮಾಡುವ ನಿಟ್ಟಿನಲ್ಲಿ ತುರ್ತು ಕ್ರನಿಯಲ್ ಡೆಕಂಪ್ರೆಷನ್ ಪ್ರಕ್ರಿಯೆ ನಡೆಸಿದ್ದಾರೆ. ಇದರ ಜೊತೆಗೆ ಮೆಟಿಕ್ಯಲೊಸ್ ಪ್ರಿ ಟ್ರಾನ್ಸ್ಪ್ಲಾಂಟ್ ಅನ್ನು ಸಿದ್ಧತೆ ಮಾಡಿದ್ದು, ಆಕೆಯ ತಂದೆಯಿಂದ ಅರ್ಧ ಹೋಲಿಕೆಯಾದ ಕಾಂಡ ಕೋಶವನ್ನು ಮೇ 16ರಂದು ಬಳಸಿಕೊಳ್ಳಲಾಗಿದೆ.
ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ನಿಂದ ಇದು ಗುಣಮುಖವಾಗಿತ್ತದೆ ಎಮದು ನಿರೀಕ್ಷಿಸಲಾಗಿದೆ. ಆದರೆ, ಈ ಚಿಕಿತ್ಸೆಯನ್ನು ದೇಹ ತಿರಸ್ಕರಿಸಿದೆ. ಈ ವೇಳೆ ವೈದ್ಯರು ಟಿಸಿಆರ್ ಅಲ್ಫಾ ಬೆಟಾ ಮತ್ತು ಸಿಡಿ 45 ಆರ್ಎ ಡೆಪ್ಲೆಟಿಯನ್ ಟೆಕ್ನಿಕ್ ಬಳಕೆ ಮಾಡಿದ್ದಾರೆ. ಸಂಪೂರ್ಣ ಹೊಂದಾಣಿಕೆಯ ದಾನಿಗಳಿಲ್ಲದ ರೋಗಿಗಳಿಗೆ ಅನುಗುಣವಾಗಿ ಅತ್ಯಾಧುನಿಕ ವಿಧಾನವು ಗಮನಾರ್ಹ ಯಶಸ್ಸನ್ನು ತೋರಿಸಿದೆ.
ಇನ್ಫಾನ್ಟೈಲ್ ಆಸ್ಟಿಯೋಪೆಟ್ರೋಸಿಸ್ ಅಪರೂಪದ ಅನುವಂಶಿಕತೆ ಸಮಸ್ಯೆ ಆಗಿದ್ದು, ಮೂಳೆ, ದೃಷ್ಟಿ ಮತ್ತು ಕೇಳುವಿಕೆ ಸಮಸ್ಯೆ ಮತ್ತು ಬೋನ್ ಮ್ಯಾರೋ ವಿಫಲತೆಯಂತಹ ಅನೇಕ ಸಮಸ್ಯೆಗೆ ಕಾರಣವಾಗಿತ್ತದೆ. ಇದು ಕೆಲವೇ ವರ್ಷದಲ್ಲಿ ಜೀವಕ್ಕೆ ಮಾರಣಾಂತಿಕವಾಗಲಿದೆ. ಬೋನ್ ಮ್ಯಾರೋ ಟ್ರಾನ್ಸ್ಪ್ಲಾಟ್ ತಂತ್ರಜ್ಞಾನವೂ ಇದರ ಚಿಕಿತ್ಸಕ ಆಯ್ಕೆ ಆಗಿದ್ದು ಈ ತಂತ್ರವು ಸವಾಲಿನಿಂದ ಕೂಡಿದೆ ಎಂದು ನಾರಾಯಣ ಹೆಲ್ತ್ ಸಿಟಿಯ ಆನ್ಕಾಲಾಜಿ ವೈಸ್ ಚೆರ್ಮನ್ ಮತ್ತು ಪಿಡಿಯಾಟ್ರಿಕ್ ಹೆಮೆಟೊಲಾಜಿ ಆನ್ಕೊಲಾಜಿ ನಿರ್ದೇಶಕ ಸುನೀಲ್ ಭಟ್ ತಿಳಿಸಿದ್ದಾರೆ.
ನಾಲ್ಕು ತಿಂಗಳ ಟ್ರಾನ್ಸ್ಪ್ಲಾಂಟೇಷನ್ ಬಳಿಕ ಮಗುವು ಶೇ 100ರಷ್ಟು ದಾನಿಗಳ ಕೋಶದಿಂದ ರೋಗ ಮುಕ್ತವಾಗಿದೆ ಎಂದು ವೈದ್ಯರು ತಿಳಿಸಿದ್ದು, ಗುಣಮುಖ ಹಾದಿಯಲ್ಲಿದೆ. ಆಕೆಯ ಮೂಳೆಗಳು ಪುನರ್ ಮಾದರಿಯತ್ತ ಸಕಾರಾತ್ಮಕ ಪ್ರಕ್ರಿಯೆ ತೋರುತ್ತಿವೆ.
ಮಗುವು ಇದೀಗ ಎಲ್ಲರಂತೆ ಸಾಮಾನ್ಯವಾಗಲಿದ್ದು, ಅಪರೂಪದ ಕಾಯಿಲೆಯಿಂದ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಗುವಿನ ತಂದೆ ಜುನೈದ್ ಅಲಿ ಮಾತನಾಡಿ, ವೈದ್ಯರಿಗೆ ಮತ್ತು ತಜ್ಞರಿಗೆ ಧನ್ಯವಾದ ಅರ್ಪಿಸಿದ್ದಾರೆ. ಮಗಳನ್ನು ಕೇವಲ ಕಾಳಜಿ ತೋರಿ ಅವರ ಕೇವಲ ವೈದ್ಯಕೀಯ ಪರಿಹಾರ ನೀಡಲಿಲ್ಲ. ಈ ಸಮಯದಲ್ಲಿ ಅವರು ತಮ್ಮ ಕುಟುಂಬದ ಭಾಗವಾದರು ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಅಪೌಷ್ಟಿಕತೆಯಿಂದ ಮಗುವಿನ ಬೆಳವಣಿಗೆ ಕುಂಠಿತ... ಸಾವಿನ ಅಪಾಯವೂ ಹೆಚ್ಚು..