ETV Bharat / sukhibhava

2022ರಲ್ಲಿ ಜಾಗತಿಕವಾಗಿ 7.5 ಮಿಲಿಯನ್ ಜನರಲ್ಲಿ ಕ್ಷಯ ರೋಗ ಪತ್ತೆ: WHO

author img

By ETV Bharat Karnataka Team

Published : Nov 8, 2023, 2:09 PM IST

ಈ ಹಿಂದೆ ಕ್ಷಯ ಎಂಬುದು ಭೀಕರ ರೋಗವಾಗಿತ್ತು. ಆದರೀಗ ಸೂಕ್ತ ಚಿಕಿತ್ಸೆ ಮತ್ತು ಲಸಿಕೆ ಲಭ್ಯವಿದೆ.

7 5 mn people globally diagnosed with tuberculosis

ಜಿನೀವಾ: ಕಳೆದ ವರ್ಷ, 2022ರಲ್ಲಿ ಜಾಗತಿಕವಾಗಿ 7.5 ಮಿಲಿಯನ್​ ಜನರಲ್ಲಿ ಟಿಬಿ ರೋಗ ಪತ್ತೆ ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ. 2021ರಲ್ಲಿ 10.3 ಮಿಲಿಯನ್​ ಜನರು ಕ್ಷಯ ರೋಗಕ್ಕೆ ತುತ್ತಾಗಿದ್ದರು. ಇದೀಗ ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಚೇತರಿಕೆ ಪ್ರಮಾಣದಿಂದ ರೋಗ ನಿರ್ಣಯ ಮಾಡಲು ಸಾಧ್ಯವಾಗಿದೆ. ಇದರಿಂದ ಚೇತರಿಕೆ ಪ್ರಮಾಣ ಕೂಡ ಹೆಚ್ಚಾಗಿದೆ.

2020-201ರಲ್ಲಿ ಭಾರತ, ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್​ ದೇಶಗಳಲ್ಲಿ ಜಾಗತಿಕವಾಗಿ ಶೇ 60ರಷ್ಟು ರೋಗ ಪತ್ತೆಯಾಗಿದ್ದವು. ಈ ರೋಗದ ಬಗ್ಗೆ ಹೊಸ ಗುರಿಗಳನ್ನು ಸಾಧಿಸುವ ಪ್ರಯತ್ನಕ್ಕೆ ಕೂಡ ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ನಮ್ಮ ಪೂರ್ವಜರು ಕ್ಷಯರೋಗದಿಂದ ಬಳಲಿ, ಅದರಿಂದ ಸಾವನ್ನಪ್ಪಿದ್ದು, ಇದಕ್ಕೆ ನಿಖರ ಕಾರಣವೇನು? ರೋಗಕ್ಕೆ ಚಿಕಿತ್ಸೆ ಏನು ಎಂಬುದು ಇರಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್​ ಜನರಲ್​ ಟೆಡ್ರೊಸ್​ ಅಥನೊಮ್​ ಗೇಬ್ರೆಯೆಸಸ್​ ತಿಳಿಸಿದ್ದಾರೆ.

ಚಿಕಿತ್ಸೆಯ ಭರವಸೆ: ಇಂದು ನಾವು ಕಂಡ ಕನಸಿನಂತೆ ಜ್ಞಾನ ಮತ್ತು ಸಾಧನವನ್ನು ಹೊಂದಿದ್ದೇವೆ. ನಮಗೆ ರಾಜಕೀಯ ಬದ್ಧತೆ ಇದೆ. ಇಂದು ನಾವು ಯಾವುದೇ ಹಿಂದಿನ ಪೀಳಿಗೆ ಹೊಂದಿಲ್ಲದಂತಹ ಅವಕಾಶ ಹೊಂದಿದ್ದೇವೆ. ಈ ಅವಕಾಶದಿಂದ ಟಿಬಿಯ ಕಥೆಯ ಕೊನೆ ಅಧ್ಯಾಯವನ್ನು ಬರೆಯಬೇಕಿದೆ ಎಂದರು.

2022ರಲ್ಲಿ 10.6 ಮಿಲಿಯನ್​ ಮಂದಿ ಟಿಬಿಗೆ ತುತ್ತಾಗಿದ್ದರೆ, 2021ರಲ್ಲಿ 10.3 ಮಿಲಿಯನ್​ ಮಂದಿ ಕ್ಷಯ ರೋಗಕ್ಕೆ ಒಳಗಾಗಿದ್ದಾರು. ಭೌಗೋಳಿಕವಾಗಿ 2022ರಲ್ಲಿ ಆಗ್ನೇಯ ಏಷ್ಯ (46ರಷ್ಟು), ಆಫ್ರಿಕಾ (23ರಷ್ಟು) ಮತ್ತು ಪಾಶ್ಚಿಮಾತ್ಯ ಫೆಸಿಫಿಕ್​ (18ರಷ್ಟು) ಪೂರ್ವ ಮಡೆಟೇರಿಯನ್ (8.1ರಷ್ಟು) ಮತ್ತು ಅಮೆರಿಕ (2.1) ಮತ್ತು ಯುರೋಪ್​ (2.2ರಷ್ಟು) ಪ್ರಕರಣಗಳು ದಾಖಲಾಗಿದ್ದವು.

2022ರಲ್ಲಿ ಕ್ಷಯ ರೋಗ ಸಂಬಂಧಿ ಸಾವಿನ ಪ್ರಕರಣಗಳು (ಎಚ್​ಐವಿ ಹೊಂದಿರುವ ಜನ ಸೇರಿದಂತೆ) 1.3 ಮಿಲಿಯನ್​ ಆಗಿದೆ. 2021ಕ್ಕೆ ಹೋಲಿಕೆ ಮಾಡಿದಾಗ ಇದರ ಪ್ರಮಾಣ 1.4 ಮಿಲಿಯನ್​ ಆಗಿದೆ.

ಡಬ್ಲ್ಯೂಎಚ್​ಒ ಗುರಿ: ಆದಾಗ್ಯೂ 2020-2022ರ ಅವಧಿಯಲ್ಲಿ ಕೋವಿಡ್​ ಫಲಿತಾಂಶದೊಂದಿಗೆ ಅರ್ಧದಷ್ಟು ಮಿಲಿಯನ್​ಗೂ ಹೆಚ್ಚು ಮಂದಿ ಟಿಬಿಯಿಂದ ಸಾವನ್ನಪ್ಪಿದ್ದಾರೆ. ಎಚ್​ಐವಿ ಬಳಿಕ ಟಿಬಿಯು ಅನೇಕ ಜನರ ಸಾವಿಗೆ ಕಾರಣವಾಗುತ್ತಿರುವ ಅಂಶ. ಇಂದಿಗೂ ಮಲ್ಟಿಡ್ರಗ್​​-ರೆಸಿಸ್ಟಂಟ್​ ಟಿಬಿ(ಎಂಡಿಆರ್​- ಟಿಬಿ) ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿದೆ.

ಹೊಸ ಕ್ಷಯರೋಗ ಪತ್ತೆ, ಚಿಕಿತ್ಸೆ ಮತ್ತು ಲಸಿಕೆಯಲ್ಲಿ ಕೆಲವು ಬೆಳವಣಿಗೆಗಳು ಕಂಡುಬಂದಿದೆ. ಟಿವಿ ಸಂಬಂಧಿತ ಸಾವಿನ ಪ್ರಮಾಣದಲ್ಲಿ 2015ರಿಂದ 2022ರವರೆಗೆ ಶೇ 19ರಷ್ಟು ಇಳಿಕೆ ಕಂಡುಬಂದಿದೆ. ವಿಶ್ವ ಸಂಸ್ಥೆಯ ಟಿಬಿ ನಿರ್ಮೂಲನೆಯ ಮುಖ್ಯ ಗುರಿಯಲ್ಲಿ ಟಿಬಿ ತಡೆಗಟ್ಟುವಿಕೆ ಮತ್ತು ಆರೈಕೆ ಸೇವೆ ಲಭ್ಯತೆ ಇರುವ ಶೇ 90ರಷ್ಟು ಮಂದಿಗೆ ರೋಗ ಪತ್ತೆ ಮಾಡುವುದು. ಟಿಬಿ ಮೊದಲ ಪತ್ತೆಯನ್ನು ರ್ಯಾಪಿಡ್​ ಟೆಸ್ಟ್ ಮೂಲಕ ಪತ್ತೆ ಮಾಡುವುದನ್ನು ಡಬ್ಲ್ಯೂಎಚ್​ಒ ಶಿಫಾರಸು ಮಾಡಿದೆ. ಅಲ್ಲದೇ ಟಿಬಿ ಹೊಂದಿರುವ ಮಂದಿಗೆ ಆರೋಗ್ಯ ಮತ್ತು ಸಾಮಾಜಿಕ ಪ್ರಯೋಜನದ ಪ್ಯಾಕೇಜ್​ ನೀಡುವುದು, ಕನಿಷ್ಟ ಒಂದು ಲಸಿಕೆಯ ಲಭ್ಯತೆಯ ಭರವಸೆ ನೀಡುವುದಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ತಾಪಮಾನ ಏರಿಕೆಯಿಂದ ಯುರೋಪ್​, ಅಮೆರಿಕದಲ್ಲಿ ಡೆಂಗ್ಯೂ ಹೆಚ್ಚಳ: WHO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.