ETV Bharat / sukhibhava

ಇ ಸಿಗರೇಟ್​ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ ಭಾರತದ ಶೇ 60ರಷ್ಟು ಯುವ ಜನತೆ.. ಕಾದಿದೆ ಗಂಡಾಂತರ!

ಯುವ ಜನತೆ ಮೇಲೆ ಇ ಸಿಗರೇಟ್​ ಪ್ರಭಾವವೂ ಪ್ರಮುಖ ಆರೋಗ್ಯ ಕಾಳಜಿ ವಿಷಯವಾಗಿದೆ. ಈ ಹಿನ್ನೆಲೆ ಈ ಸಂಬಂಧ ಮುನ್ನೆಚ್ಚರಿಕೆ ವಹಿಸಬೇಕಿದೆ.

60% of India's youth are under the influence of e-cigarettes

author img

By

Published : Jun 14, 2023, 4:17 PM IST

ನವದೆಹಲಿ: ಈ ಮೊದಲು ಇ ಸಿಗರೇಟ್​​ ಬಳಕೆ ಮಾಡದ ಶೇ 30ರಷ್ಟು ಭಾರತದ ಯುವಜನತೆ ಭವಿಷ್ಯದಲ್ಲಿ ಇದರ ಪ್ರಭಾವಕ್ಕೆ ಒಳಗಾಗಬಹುದು ಎಂದು ಹೊಸ ಸಂಶೋಧನೆ ಎಚ್ಚರಿಸಿದೆ. 15ರಿಂದ 30 ವರ್ಷದ ಯುವಜನತೆ ಮೇಲೆ ಇದರ ಪ್ರಭಾವ ಹೆಚ್ಚಲಿದೆ ಎಂದು ತಿಳಿಸಿದೆ.

ಅಂತಾರಾಷ್ಟ್ರೀಯ ಸಮೀಕ್ಷೆ ಆಧರಿಸಿ ನಡೆಸಿದ ಈ ಅಧ್ಯಯನದಲ್ಲಿ ಭಾರತದ 456 ಮಂದಿ ಸೇರಿದಂತೆ 4,007 ಜನರು ಭಾಗಿಯಾಗಿದ್ದಾರೆ. ಪ್ರಸ್ತುತ ತಂಬಾಕು ಅಥವಾ ಈ ಹಿಂದೆ ತಂಬಾಕು ಬಳಕೆ ಮಾಡುತ್ತಿದ್ದ ಯುವ ಜನತೆ ಇ ಸಿಗರೇಟ್​ ಜಾಹೀರಾತಿಗೆ ಒಳಗಾಗುತ್ತಿದ್ದಾರೆ. ಇವರ ಮೇಲೆ ಇದು ಎರಡನೇ ಅತಿ ಹೆಚ್ಚು ಪ್ರಭಾವ ಬೀರುತ್ತಿರುವ ಅಂಶವಾಗಿದೆ ಎಂದು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಅನುಸಾರ, ಯುವ ಜನತೆ ಮೇಲೆ ಇ ಸಿಗರೇಟ್​ ಪ್ರಭಾವವೂ ಪ್ರಮುಖ ಆರೋಗ್ಯ ಕಾಳಜಿ ವಿಷಯವಾಗಿದೆ. ಕಾರಣ ಇ ಸಿಗರೇಟ್​ನಲ್ಲಿ ನಿಕೋಟಿನ್​ ಪರಿಣಾಮ ಹೆಚ್ಚಿದ್ದು, ಇದು ಮೆದುಳಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕತೆ ಉಂಟಾಗುತ್ತದೆ. ಈ ಸಾಧನದಲ್ಲಿ ಹೆಚ್ಚಿನ ರಾಸಾಯನಿಕಗಳಿವೆ ಎಂದು ತಿಳಿಸಿದೆ.

ಆರೋಗ್ಯ ಕಾಳಜಿ ವಿಷಯ: ಭಾರತದಲ್ಲಿ ಯುವ ಜನತೆಯಲ್ಲಿ ಇ ಸಿಗರೇಟ್​ ಪ್ರಭಾವ ಹೆಚ್ಚುತ್ತಿರುವುದು ಹೆಚ್ಚಿನ ಕಾಳಜಿ ವಿಚಾರವಾಗಿದೆ. ಈ ಸಂಬಂಧ ತತ್​ಕ್ಷಣದ ಹಸ್ತಕ್ಷೇಪ ಮತ್ತು ವ್ಯವಸ್ಥಿತ ಪ್ರಚಾರ ನಡೆಸಬೇಕಿದ್ದು, ಇ ಸಿಗರೇಟ್​ ಸೇವನೆ ಯಾವ ಮಟ್ಟದ ಅಪಾಯ ತಂದೊಡ್ಡಲಿದೆ ಎಂಬುದನ್ನು ತಿಳಿಸಬೇಕಿದೆ ಎಂದು ಭಾರತದ ಸಂಶೋಧಕ ಸುಧೀರ್​ ರಾಜ್​ ಥೌಟ್​ ತಿಳಿಸಿದ್ದಾರೆ.

ಈ ಮೊದಲು ಇ ಸಿಗರೇಟ್​ ಬಳಕೆ ಮಾಡದ ಅನೇಕರಲ್ಲಿ ಇದರ ಕುರಿತಾದ ಕುತೂಹಲ ಇದೆ. ಇದನ್ನು ಬಳಕೆಗೆ ಅವಕಾಶ ನೀಡಿದರೆ ಶೇ 49 ಮಂದಿ ಸಿದ್ಧವಿದ್ದರೆ, ಶೇ 44 ಮಂದಿ ಇದನ್ನು ಮುಂದಿನ ವರ್ಷ ಬಳಕೆ ಮಾಡುವ ಇರಾದೆ ವ್ಯಕ್ತಪಡಿಸಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.

ಭಾರತದ ಶೇ ಅರ್ಧದಷ್ಟು ಮಂದಿ ಅಂದರೆ ಶೇ 47ರಷ್ಟು ಮಂದಿ ಈ ಇ- ಸಿಗರೇಟ್​ ಜಾಹೀರಾತಿನ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಫಲಿತಾಂಶವನ್ನು ಯುಕೆ(ಶೇ 63 ಪ್ರತಿಶತ) ಚೀನಾ ಶೇ 51ರಷ್ಟು ಪ್ರತಿಶತ ಮತ್ತು ಆಸ್ಟ್ರೇಲಿಯಾ ಶೇ 30ರಷ್ಟು ಪ್ರತಿಶತದೊಂದಿಗೆ ಹೋಲಿಕೆ ಮಾಡಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನವನ್ನು ಜರ್ನಲ್​ ಡ್ರಗ್​ ಅಂಡ್​​ ಅಲ್ಕೋಹಾಲ್​ ಡೆಪೆಂಡೆನ್ಸಿಯಲ್ಲಿ ಪ್ರಕಟಿಸಲಾಗಿದೆ.

ಇನ್ನು ಭಾರತದಲ್ಲಿ ಈ ಸಂಬಂಧ ಪ್ರತಿಕ್ರಿಯೆ ನೀಡಿದವರು ಉನ್ನತ ಶಿಕ್ಷಣ ಮತ್ತು ಅಧಿಕಾ ಆದಾಯದ ಗುಂಪಿನ ವರ್ಗದವರು ಎಂಬುದು ಗಮನಾರ್ಹವಾಗಿದೆ. ಆದಾಗ್ಯೂ ಆಸ್ಟ್ರೇಲಿಯಾ ಸೇರಿದಂತೆ ಇತರೆ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತೀಯ ಯುವ ಜನತೆ ಈ ಇ ಸಿಗರೇಟ್​ ಚಟ ಅಥವಾ ಹಾನಿಕಾರ ಎಂಬುದನ್ನು ಕಡಿಮೆ ಮಂದಿ ನಂಬುತ್ತಾರೆ. ಸಂಶೋಧಕರು ಈ ಇ ಸಿಗರೇಟ್​ ಜಾಹೀರಾತಿನ ಕುರಿತು ಎಚ್ಚರಿಕೆ ನೀಡುವ ಜೊತೆಗೆ ಇದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇದು ಹಾನಿಕಾರಕ ಪರಿಣಾಮ ಹೊಂದಿದೆ ಎನ್ನುತ್ತಾರೆ.

ಭಾರತದಲ್ಲಿನ ತಂಬಾಕು ಮಾರುಕಟ್ಟೆ ಜಗತ್ತಿನಲ್ಲಿಯೇ ದೊಡ್ಡ ಮಾರುಕಟ್ಟೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಅನುಸಾರ ಶೇ 27ರಷ್ಟು ಭಾರತೀಯ ಜನಸಂಖ್ಯೆ ತಂಬಾಕನ್ನು ಒಂದಲ್ಲಾ ಒಂದು ವಿಧದಲ್ಲಿ ಸೇವಿಸುತ್ತಿದ್ದಾರೆ.

2019ರಲ್ಲಿ ಭಾರತ ಇ ಸಿಗರೇಟ್​ ನಿಷೇಧದ ಕಾಯ್ದೆಯನ್ನು ಪರಿಚಯಿಸುವ ಮೂಲಕ ಯುವ ಜನತೆಯನ್ನು ಇದರಿಂದ ರಕ್ಷಣೆಗೆ ಮುಂದಾಗಿತ್ತು. ಆದಾಗ್ಯೂ ಯುವ ಜನತೆ ಯಾವುದೇ ಆರೋಗ್ಯ ಮುನ್ಸೂಚನೆ ಹೊಂದಿರದ ಅನುವರ್ತನೆಯಲ್ಲದ ಚಿಲ್ಲರೆ ವ್ಯಾಪಾರಿಗಳಿಂದ ಇದನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಇ ಸಿಗರೇಟ್​ಗಳ ಬಳಕೆ ಉತ್ತೇಜನ ಬೇಡ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.