ETV Bharat / sukhibhava

ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಜಪಾನ್​ನ ಒಕಿನಾವಾ ಸಮುದಾಯದ 6 ರಹಸ್ಯ.. - ಒಕಿನಾವಾನ್ಸ್

ಒಕಿನಾವಾನ್ಸ್( ದೀರ್ಘಕಾಲ ಬದುಕುವ ಮಹಿಳೆಯರು) ದೇಹವನ್ನು ದೇವಸ್ಥಾನವೆಂದು ನಂಬುತ್ತಾರೆ. ಅವರ ಪ್ರಕಾರ, ನಾವು ದೇಹವನ್ನು ಕಲುಷಿತಗೊಳಿಸಬಾರದು. ಅವರು ಮದ್ಯವನ್ನು ಮಿತವಾಗಿ ಕುಡಿಯುತ್ತಾರೆ. ಅಲ್ಲದೇ, ಸಾಮಾನ್ಯವಾಗಿ ಧೂಮಪಾನ ಮಾಡುವುದಿಲ್ಲ..

Okinawans
ಒಕಿನಾವಾ ಜನರು
author img

By

Published : Oct 1, 2021, 8:22 PM IST

'ನೀವು ಒಂದು ರಸ್ತೆಯಲ್ಲಿ ಓಡದೆ ನಡೆಯಲು ಸಾಧ್ಯವಿಲ್ಲ' ಎಂದು ವೃದ್ಧಾಪ್ಯ ತಜ್ಞ ಡಾ. ಬ್ರಾಡ್ಲಿ ವಿಲ್ಕಾಕ್ಸ್ ಹೇಳುತ್ತಾರೆ. ಇವರು ಮಾನವಶಾಸ್ತ್ರಜ್ಞ ಕ್ರೇಗ್ ಅವರೊಂದಿಗೆ 20 ವರ್ಷಗಳಿಗಿಂತ ಹೆಚ್ಚು ಕಾಲ ಶತಾಯುಷಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇವರು ಇಲ್ಲಿ ಸುದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸುವ ಕೆಲ ರಹಸ್ಯಗಳನ್ನು ವಿವರಿಸಿದ್ದಾರೆ.

‘ಹರ ಹಚಿ ಬು’ ಅಭ್ಯಾಸ ಮಾಡಿ(ಆರೋಗ್ಯ ಮತ್ತು ವ್ಯಾಯಾಮಕ್ಕಾಗಿ ತಿನ್ನಿರಿ)

ಒಕಿನಾವಾನ್ಸ್( ಜಪಾನ್​ನಲ್ಲಿ ದೀರ್ಘಕಾಲ ಬದುಕುವ ಮಹಿಳೆಯರು) ದೇಹವನ್ನು ದೇವಸ್ಥಾನವೆಂದು ನಂಬುತ್ತಾರೆ. ಅವರ ಪ್ರಕಾರ, ನಾವು ದೇಹವನ್ನು ಕಲುಷಿತಗೊಳಿಸಬಾರದು. ಅವರು ಮದ್ಯವನ್ನು ಮಿತವಾಗಿ ಕುಡಿಯುತ್ತಾರೆ. ಅಲ್ಲದೇ, ಸಾಮಾನ್ಯವಾಗಿ ಧೂಮಪಾನ ಮಾಡುವುದಿಲ್ಲ.

ಅಲ್ಲದೆ, ಅವರು ತುಂಬಾ ಕ್ರಿಯಾಶೀಲ ಜನರಾಗಿದ್ದಾರೆ. ಅವರ ಕ್ಯಾಲೋರಿ ಸೇವನೆಯು ಯಾವಾಗಲೂ ಸಮತೋಲನದಲ್ಲಿರುತ್ತದೆ. ಆಹಾರದಲ್ಲಿ ಸಸ್ಯದ ಬಳಕೆ ಅಧಿಕ. ಆದ್ದರಿಂದ, ಕ್ಯಾಲೋರಿ-ದಟ್ಟವಾಗಿರುವುದಿಲ್ಲ.

ದಿನವೊಂದಕ್ಕೆ ಅವರು ಒಂದು ಕಿಲೋಗ್ರಾಂನಷ್ಟು ತರಕಾರಿ, ಹಣ್ಣುಗಳು ಮತ್ತು ದ್ವಿದಳ ಧಾನ್ಯಗಳನ್ನು ತಿನ್ನುತ್ತಾರೆ. ಉದಾಹರಣೆಗೆ ; ಸೋಯಾ ಬೀನ್ಸ್. ಇದು ಪ್ರತಿ ಊಟದ ಭಾಗವಾಗಿದೆ. ಬ್ರೆಡ್ ಬದಲಿಗೆ, ಮುಖ್ಯ ಕಾರ್ಬೋಹೈಡ್ರೇಟ್ ಸಿಹಿ ಆಲೂಗಡ್ಡೆ ಬಳಕೆ ಮಾಡುತ್ತಾರೆ.

ಇದು ಕಡಿಮೆ ಗ್ಲೈಸೆಮಿಕ್ ಲೋಡ್ ಮತ್ತು ಸಾಕಷ್ಟು ಸಸ್ಯ ಸಂಯುಕ್ತಗಳನ್ನು ಹೊಂದಿದೆ. ವಿಶೇಷವಾಗಿ ವರ್ಣರಂಜಿತ ಫ್ಲೇವೊನೈಡ್ ಸಂಯುಕ್ತಗಳು ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಇದರಿಂದ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. 80ರ ವಯಸ್ಸಿನವರೆಗೂ ಅವರು 'ಹರಾ ಹಚಿ ಬು' ಕ್ರಮವನ್ನು ಅಭ್ಯಾಸ ಮಾಡುತ್ತಾರೆ.

ಸಕಾರಾತ್ಮಕತೆ ಮತ್ತು ನಿಮ್ಮ 'ಇಕಿಗೈ' ಉದ್ದೇಶದ ಅರ್ಥ ಕಂಡುಕೊಳ್ಳಿ

ನಾವು ಭೇಟಿಯಾದ ಎಲ್ಲಾ ಶತಾಯುಷಿಗಳು ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ. ಅವರು ಸಾಮಾನ್ಯವಾಗಿ ಆಶಾವಾದಿಗಳು. ಅವರು ವಿನೋದ-ಪ್ರೀತಿಯ ಜನರು. ವಯಸ್ಸಾದಂತೆ ಜೀವನವನ್ನು ಅವರು ಆನಂದಿಸುತ್ತಾರೆ. ಅವರನ್ನು ನಾವು ಇಕಿಗೈ ಎಂದು ಕರೆಯುತ್ತೇವೆ.

ಮಾನಸಿಕವಾಗಿ ತೊಡಗಿಸಿಕೊಳ್ಳಿ

ಜಪಾನಿಯರ ಭಾಷೆಯಲ್ಲಿ ನಿವೃತ್ತಿಗೆ ಯಾವುದೇ ಪದವಿಲ್ಲ. ಆದ್ದರಿಂದ, ಇತ್ತೀಚಿನವರೆಗೂ ಇದು ಕೇವಲ ಒಂದು ಪರಿಕಲ್ಪನೆಯಾಗಿಲ್ಲ. ನೀವು ಯಾವಾಗಲೂ ಏನು ಮಾಡುತ್ತಿದ್ದೀರೋ ಅದನ್ನು ನೀವು ಮಾಡಿದ್ದೀರಿ. ನೀವು ಕೃಷಿಕರಾಗಿದ್ದರೆ, ನೀವು ಇನ್ನೂ ಕೃಷಿ ಮಾಡುತ್ತಿದ್ದೀರಿ.

ಒಮ್ಮೆ ನೀವು ಮಾಡಿದ ಕೆಲಸವನ್ನು ನಿಲ್ಲಿಸಿದರೆ, ವಿಶೇಷವಾಗಿ ನೀವು ಅದನ್ನು ಆನಂದಿಸುತ್ತಿದ್ದರೆ ಮತ್ತು ಅದು ನಿಮಗೆ ಉದ್ದೇಶದ ಅರ್ಥವನ್ನು ನೀಡಿದ್ದರೆ, ಈಗ ಆ ಕೆಲಸ ನಿಲ್ಲಿಸಿದ ಕೂಡಲೇ ನಿಮಗೆ ಬೇಸರವಾಗಬಹುದು. ಆದ್ದರಿಂದ ಮಾನಸಿಕವಾಗಿ ತೊಡಗಿಕೊಂಡರೆ ಜೀವನ ತೃಪ್ತಿಗೆ ಸಹಾಯಕವಾಗುತ್ತದೆ. ಇದು ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಕಾರಣ, ಜನರು ತಮ್ಮ ಜೀವನದುದ್ದಕ್ಕೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಕ್ರಿಯರಾಗಿರುತ್ತಾರೆ ಎಂಬುದನ್ನು ಅವರು ಬಲವಾಗಿ ನಂಬುತ್ತಾರೆ.

'ಮೊವಾಯಿ' ಸಾಮಾಜಿಕ ಗುಂಪಿಗೆ ಸೇರಿ

ಒಕಿನಾವಾನ್ಸ್( ದೀರ್ಘಕಾಲ ಬದುಕುವ ಮಹಿಳೆಯರು) ಸಾಮಾನ್ಯವಾಗಿ ದೊಡ್ಡ ಕುಟುಂಬ ಮತ್ತು ಸ್ನೇಹಿತರ ಜಾಲಗಳನ್ನು ಹೊಂದಿರುತ್ತಾರೆ. ಅವರ ಸಮುದಾಯಗಳು ನಿಜವಾಗಿಯೂ ನಿಕಟ ಸಂಬಂಧ ಹೊಂದಿರುತ್ತವೆ. ಇಲ್ಲಿ ಪ್ರತಿಯೊಬ್ಬರ ವಿಷಯ ಎಲ್ಲರಿಗೂ ತಿಳಿದಿರುತ್ತದೆ.

ಅವರು 'ಮೊವಾಯಿ' ಎಂದು ಕರೆಯಲ್ಪಡುವ ಗುಂಪುಗಳಲ್ಲಿ ಸಾಮಾಜಿಕ ಕೂಟಗಳನ್ನು ನಡೆಸುತ್ತಾರೆ. ಮಹಿಳೆಯರು ಗ್ರೀನ್ ಟೀ ಕುಡಿಯುತ್ತ ಸಾಮಾನ್ಯ ವಿಷಯದ ಕುರಿತು ಚರ್ಚಿಸುತ್ತಾರೆ. ಅದೇ ರೀತಿ ಪುರುಷರು ಸಿಗರೇಟ್ ಸೇದುತ್ತಾರೆ. ಮದ್ಯಪಾನ ಮಾಡುತ್ತಾರೆ. ಇದೊಂದೇ ವಿಷಯ ಮಹಿಳೆಯರಷ್ಟು ದೀರ್ಘ ಕಾಲ ಪುರುಷರೇಕೆ ಬದುಕುವುದಿಲ್ಲ ಎಂಬುದನ್ನು ವಿವರಿಸುತ್ತದೆ. ಆದರೆ, ಸಾಮಾನ್ಯವಾಗಿ ಅವರು ಒಟ್ಟಿಗೆ ಸೇರಲು ಇಷ್ಟಪಡುತ್ತಾರೆ.

ಕಡಿಮೆ ಒತ್ತಡ ಮತ್ತು ಸಮಯದೊಂದಿಗೆ ನಿಮ್ಮ ಸಂಬಂಧ ಪುನರ್ವಿಮರ್ಶಿಸಿ

ನಾವೆಲ್ಲರೂ ಸಮಯದ ಬೆನ್ನನ್ನು ಹತ್ತಿದ್ದೇವೆ. ಆದರೆ, ಒಕಿನಾವಾನ್‌ಗಳು ಸಮಯದ ನಿಧಾನ ಪ್ರಜ್ಞೆಯನ್ನು ಹೊಂದಿದ್ದಾರೆ. ಅವರು ಸಮಯದ ಗಡುವನ್ನು ಹಾಕಿಕೊಳ್ಳದಿದ್ದರೂ ಪ್ರಜ್ಞಾಪೂರ್ವಕವಾಗಿ ಕೆಲಸವನ್ನು ಅಂತಿಮಗೊಳಿಸುತ್ತಾರೆ. ಅದೇ ಸಮಯದಲ್ಲಿ ಅವರು ಒತ್ತಡ ನಿರೋಧಕ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ. ಅಲ್ಲದೇ, ಖಿನ್ನತೆ ಹಾಗೂ ದುರಂತವನ್ನು ಎದುರಿಸುವ ಕಲೆ ಹೊಂದಿದ್ದಾರೆ.

ಹವಾಯಿಯಲ್ಲಿ ನಡೆಸಿದ ಸಂಶೋಧನೆಯಲ್ಲಿ ನಾವು ಇತ್ತೀಚೆಗೆ ಕಂಡುಕೊಂಡಿರುವ ಪ್ರಕಾರ, ಒತ್ತಡ-ಸ್ಥಿತಿಸ್ಥಾಪಕತ್ವ ಎಂಬ ಜೀನ್ (FOXO3A) ಮಾನವ ದೀರ್ಘಾಯುಷ್ಯಕ್ಕೆ ಸಂಬಂಧಿಸಿದೆ. ಇದು ನಿಮ್ಮ ತಾಯಿ ಅಥವಾ ತಂದೆಯಿಂದ ನೀವು ಕೇವಲ ಒಂದು ಧಾತು(ಜೀನ್​)ವಿನ ಅಂಶವನ್ನು ಹೊಂದಿದ್ದರೆ, ನೀವು 100 ವರ್ಷ ಬದುಕುವ ಅವಕಾಶವನ್ನು ಹೊಂದಿರುತ್ತೀರಿ. ಇದರರ್ಥ, ನಿಮ್ಮ ದೇಹಕ್ಕೆ ಬರಬಹುದಾದ ರೋಗಗಳ ಕೆಟ್ಟ ಪರಿಣಾಮಗಳಿಂದ ಅದು ರಕ್ಷಿಸುವ ಕೆಲಸವನ್ನು ಮಾಡುತ್ತದೆ. ಹೀಗಾಗಿ, ದೀರ್ಘಾಯುಷಿಗಳಾಗಬಹುದು.

ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಿ

ಒಕಿನಾವಾನ್‌ಗಳು ಅತ್ಯಂತ ಆಧ್ಯಾತ್ಮಿಕ ಜನರು. ಅವರು ಆಧ್ಯಾತ್ಮಿಕತೆ ಅಥವಾ ಧರ್ಮದ ವಿಷಯದಲ್ಲಿ ಹೆಚ್ಚಿನ ನಂಬಿಕೆ ಹೊಂದಿರುತ್ತಾರೆ. ಪ್ರತಿ ವರ್ಷವೂ ಅವರು ತಮ್ಮ ಪೂರ್ವಜರ ಕುರಿತು ಪ್ರಾರ್ಥನೆ ಸಲ್ಲಿಸುತ್ತಾರೆ. ಇದನ್ನು ಅವರು ತಲೆಮಾರುಗಳಿಂದ ನಿರ್ವಹಿಸುತ್ತಾರೆ. ಆದ್ದರಿಂದ, ಅಲ್ಲಿ ನಿರಂತರತೆಯ ಭಾವನೆ ಇದೆ. ಅವರು ತಮ್ಮದೇ ಆದ ಸ್ಥಳೀಯ ಧರ್ಮವನ್ನು ಹೊಂದಿರುತ್ತಾರೆ. ಅವರು ಎಲ್ಲದರಲ್ಲೂ ಆಧ್ಯಾತ್ಮಿಕ ಶಕ್ತಿಯಿದೆ ಎಂಬುದನ್ನು ನಂಬುತ್ತಾರೆ.

ಸಾಮಾನ್ಯವಾಗಿ ಈ ದೀರ್ಘಾಯುಷಿ ಮಹಿಳೆಯರು ಸಾಂಪ್ರದಾಯಿಕವಾಗಿ ಧರ್ಮವನ್ನು ನಡೆಸುತ್ತಿದ್ದರು. ಅವರು ಪುರೋಹಿತರಾಗಿದ್ದರು. ಒಕಿನಾವಾ ಸುತ್ತಲೂ ಪವಿತ್ರ ತೋಪುಗಳಿವೆ. ಅಲ್ಲಿ ಮಹಿಳೆಯರು ಧ್ಯಾನ ಮಾಡುತ್ತಾರೆ. ಶಾಂತಿ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಅಲ್ಲಿನ ಮಹಿಳೆಯರು ಪ್ರಕೃತಿಯೊಂದಿಗೆ ಹೊಂದಿಕೊಳ್ಳುತ್ತಾರೆ. ಹಾಗಾಗಿ, ಆನಂದಭರಿತ ದೀರ್ಘಾಯುಷಿಗಳಾಗಿದ್ದಾರೆ.

ಓದಿ: World Vegetarian Day: ಸಸ್ಯಾಹಾರ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.