ETV Bharat / sukhibhava

ದೇಶದಲ್ಲಿ 10ರಲ್ಲಿ 6 ಮಂದಿ ಹದಿಹರೆಯದ ಹೆಣ್ಣುಮಕ್ಕಳನ್ನು ಕಾಡುತ್ತಿದೆ ರಕ್ತಹೀನತೆ; ಅಧ್ಯಯನ - ಭಾರತದ ಹೊಸ ಸಂಶೋಧನೆ

ರಕ್ತ ಹೀನತೆ ಎಂಬುದು ಸಾರ್ವಜನಿಕ ಆರೋಗ್ಯದ ಪ್ರಮುಖ ಕಾಳಜಿ ವಿಷಯವಾಗಿದೆ. ಇದರಿಂದ ಭಾರತದಲ್ಲಿ ಮಹಿಳೆಯರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ.

6 out of 10 teenage girls in India are anemic study revels

author img

By ETV Bharat Karnataka Team

Published : Sep 11, 2023, 12:07 PM IST

ನವದೆಹಲಿ: ಭಾರತದ 10ರಲ್ಲಿ 6 ಹದಿಹರೆಯದ ಹೆಣ್ಣುಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ದೇಶದ ಹೊಸ ಸಂಶೋಧನೆಯೊಂದು ತಿಳಿಸಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್​ಎಫ್​ಎಚ್​ಎಸ್​) ದತ್ತಾಂಶದ ಮೇಲೆ ಈ ಅಧ್ಯಯನ ನಡೆಸಲಾಗಿದೆ.

ಹದಿಹರೆಯದ ಹೆಣ್ಣುಮಕ್ಕಳ ಮದುವೆ ಮತ್ತು ತಾಯ್ತನ ಸೇರಿದಂತೆ ಕಳಪೆ ಪೋಷಣೆ ಮತ್ತು ಶಿಕ್ಷಣ ಹಾಗೂ ಹಣಕಾಸಿನಂತಹ ಸಾಮಾಜಿಕ ಆರ್ಥಿಕ ಸೇರಿದಂತೆ ಅನೇಕ ವಿಚಾರಗಳು ಈ ರಕ್ತ ಹೀನತೆ ಮೇಲೆ ನಿರ್ಣಯಕ ಅಂಶಗಳಾಗಿವೆ. ಭಾರತದ 15-19ರ ವಯೋಮಾನದ ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ ಎಂದು ಉತ್ತರ ಪ್ರದೇಶದ ಬನಾರಸ್​ ಹಿಂದೂ ಯುನಿವರ್ಸಿಟಿ ಮತ್ತು ಇತರೆ ಸಂಸ್ಥೆಗಳು ಪತ್ತೆ ಮಾಡಿವೆ.

ದುಪ್ಪಟ್ಟಾದ ಪ್ರಕರಣ: ಈ ರಕ್ತ ಹೀತನೆ ಪ್ರಕರಣಗಳು 2015-16ಕ್ಕೆ ಹೋಲಿಕೆ ಮಾಡಿದರೆ 2019-21ರಲ್ಲಿ ಶೇ 60ರಷ್ಟಿದ್ದು, ಇದು ದುಪ್ಪಟ್ಟು ಆಗಿದೆ ಎಂದು ಪಿಎಲ್​ಒಎಸ್​ ಗ್ಲೋಬಲ್​ ಪಬ್ಲಿಕ್​ ಹೆಲ್ತ್​ ಜರ್ನಲ್​ನಲ್ಲಿ ಪ್ರಕಟಗೊಂಡಿದೆ.

ರಕ್ತ ಹೀನತೆ ಎಂಬುದು ಸಾರ್ವಜನಿಕ ಆರೋಗ್ಯದ ಪ್ರಮುಖ ಕಾಳಜಿ ವಿಷಯವಾಗಿದ್ದು, ಭಾರತದಲ್ಲಿ ಮಹಿಳೆಯರು ಹೆಚ್ಚು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೆಂಪು ರಕ್ತಕಣಗಳ ಕೊರತೆಯಿಂದ ಅವರು ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ.

ಎಫ್​ಎಚ್​ಎಸ್​ (2015-16) ಮತ್ತು ಎನ್​ಎಫ್​ಎಚ್​ಎಸ್​-5 (2019-21)ರ ರಾಷ್ಟ್ರೀಯ ಸಮೀಕ್ಷೆಯ ದತ್ತಾಂಶವನ್ನು ನಾಲ್ಕು ಮತ್ತು ಐದು ಸುತ್ತು ಬಳಸಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಕ್ರಮವಾಗಿ 1,16,117 ಮತ್ತು 1,09,400 ಯುವತಿಯರು ಭಾಗಿಯಾಗಿದ್ದಾರೆ. ವಿಶ್ಲೇಷಣೆಯು ರಕ್ತಹೀನತೆ ತಡೆಯುವ ಮತ್ತು ರಕ್ತ ಹೀನತೆ ಅಪಾಯದ ಅಂಶ ಪತ್ತೆ ಮಾಡುವ ಕುರಿತು ತಿಳಿಸಿದೆ.

18 ವರ್ಷಕ್ಕಿಂತ ಮೊದಲು ವಿವಾಹವಾದ ಯುವತಿಯರಲ್ಲಿ ಹೆಚ್ಚಿನ ರಕ್ತ ಹೀನತೆ ಕಂಡು ಬಂದಿದೆ. ಎನ್​ಎಫ್​ಎಚ್​ಎಸ್​-4ರಲ್ಲಿ ಶೇ 10 ಮತ್ತು ಎಫ್​ಎಚ್​ಎಸ್​ನಲ್ಲಿ ಶೇ 8ರಷ್ಟು ಕ್ರಮವಾಗಿ ಮಾದರಿಗಳನ್ನು ಪಡೆಯಲಾಗಿದೆ. ಅಧ್ಯಯನದಲ್ಲಿ ಭಾಗಿಯಾದವರಲ್ಲಿ ಶೇ 70ರಷ್ಟು ಮಂದಿ ಗ್ರಾಮೀಣ ನಿವಾಸಿಗಳಾಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಎರಡು ಮಕ್ಕಳ ಹದಿಹರೆಯದ ತಾಯಂದಿರು ಹೆಚ್ಚು ರಕ್ತ ಹೀನತೆಗೆ ಒಳಗಾಗಿದ್ದು, ಹಾಲುಣಿಸುವ ತಾಯಂದಿರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡು ಬಂದಿದೆ.

ಬೇಕಿದೆ ಶಿಕ್ಷಣ: ಹದಿವಯಸ್ಸಿನ ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆ ಕುರಿತು ಹೆಚ್ಚಿನ ಶಿಕ್ಷಣ ನೀಡಬೇಕಿದೆ. ಈ ಶಿಕ್ಷಣವೂ ಪೋಷಣೆ ಮತ್ತು ಆರೋಗ್ಯ ಜೊತೆಗೆ ಆರೈಕೆ ಹಾಗೂ ಪೋಷಕಾಂಶದ ಆಹಾರಗಳ ಸೇವನೆ ಮೂಲಕ ಅವರ ಉದ್ಯೋಗದ ಅವಕಾಶ ಮತ್ತು ಆದಾಯ ಸುಧಾರಿಸುವ ಕುರಿತು ತಿಳಿಸಬೇಕಿದೆ ಎಂದು ಲೇಖಕರು ತಿಳಿಸಿದ್ದಾರೆ.

ಇತರೆ ಸಾಮಾಜಿಕ ಗುಂಪುಗಳಿಗೆ ಹೋಲಿಕೆ ಮಾಡಿದರೆ, ಪರಿಶಿಷ್ಟ ಜಾ ಮತ್ತು ಪರಿಶಿಷ್ಟ ಪಂಗಡದ ಸಾಮಾಜಿಕ ಆರ್ಥಿಕ ಅನಾನೂಕುಲದಿಂದಾಗಿ ಈ ಸಮುದಾಯಗಳ ಹದಿಹರೆಯದ ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಇದರಲ್ಲಿ ಅಪೋಷಣೆ ಮತ್ತು ನಿಯಮಿತ ಆರೋಗ್ಯ ಸೇವೆ, ಬೇಗ ಮಕ್ಕಳಾಗುವುದು ಮತ್ತು ತಾರತಮ್ಯ ಪ್ರಮುಖ ಅಂಶವಾಗಿದೆ ಎಂದಿದ್ದಾರೆ.

ಭಾರತದ ಇತರೆ ಪ್ರದೇಶಗಳಿಗೆ ಹೋಲಿಕೆ ಮಾಡಿದಾಗ ಈಶಾನ್ಯ ಪ್ರದೇಶದ ಹದಿಹರೆಯದ ತಾಯಂದಿರು ಈ ರಕ್ತ ಹೀನತೆಯ ಕಡಿಮೆ ಅಪಾಯವನ್ನು ಹೊಂದಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.

ಅವರಲ್ಲಿನ ವೈವಿದ್ಯ ಮತ್ತು ಪೋಷಕಾಂಶ ಆಹಾರ ಪದ್ಧತಿಯಲ್ಲಿ ಕಬ್ಬಿಣಾಂಶ ಸಮೃದ್ಧ ಕೆಂಪು ಅಕ್ಕಿ, ಸಾಂಪ್ರದಾಯಿಕವಾಗಿ ಸೇವನೆ ಮತ್ತು ಸ್ಥಳೀಯವಾಗಿ ಋತುಮಾನ ಆಧಾರಿತ ಆಹಾರ ಸೇವನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದರ ಜೊತೆಗೆ ಹೆಚ್ಚಿನ ಪ್ರಮುಖದ ಕೆಂಪು ಮಾಂಸ ಸೇವನೆ ಕೂಡ ಕಡಿಮೆ ರಕ್ತಹೀನತೆಯೊಂದಿಗೆ ಸಂಬಂಧ ಹೊಂದಿದೆ.

ಭಾರತದ ಒಟ್ಟಾರೆ 28 ರಾಜ್ಯದಲ್ಲಿ 21ರ;ಲ್ಲಿ ಈ ರಕ್ತ ಹೀನತೆ ಪ್ರಮಾಣ ವಿವಿಧ ಮಟ್ಟದಲ್ಲಿ ಕಂಡು ಬಂದಿದೆ.

ರಾಜ್ಯವಾರು ಅಂಕಿ-ಅಂಶ: ರಕ್ತ ಹೀನತೆ ಪ್ರಕರಣಗಳು ಅಸ್ಸೋಂ, ಚತ್ತೀಸ್​ಗಢ್​ ಮತ್ತು ತ್ರಿಪುರಾದಲ್ಲಿ ಶೇ 15ರಷ್ಟು ಸುಸ್ಥಿರ ಏರಿಕೆ ಕಂಡು ಬಂದಿದೆ. ಪಂಜಾಬ್​, ಕರ್ನಾಟಕ, ತೆಲಂಗಾಣ, ಬಿಹಾರ್​ ಮತ್ತು ಮಧ್ಯ ಪ್ರದೇಶದಲ್ಲಿ ಶೇ 5ರಷ್ಟು ಕನಿಷ್ಠ ಹೆಚ್ಚಳಗೊಂಡಿದೆ. ಅಧ್ಯಯನದ ವೇಳೆ ಉತ್ತರಾಖಂಡ್​ ಮತ್ತು ಕೇರಳದಲ್ಲಿ ರಕ್ತ ಹೀನತೆ ಪ್ರಕರಣಗಳು ಇಳಿಕೆ ಕಂಡು ಬಂದಿವೆ. ಹೆಚ್ಚಿನ ಅನ್ವೇಷಣೆಗಾಗಿ ಸಂಭಾವ್ಯ ಒಳನೋಟಗಳ ಅವಶ್ಯಕತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಭಾರತ ಸರ್ಕಾರ ಕಳೆದ ಐದು ದಶಕಗಳಿಂದ ಮಹಿಳೆ ಮತ್ತು ಮಕ್ಕಳಲ್ಲಿನ ರಕ್ತಹೀನತೆ ಹೋಗಲಾಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆದಾಗ್ಯೂ ರಕ್ತ ಹೀನತೆ ಪ್ರಕರಣ ವೇಗವಾಗಿ ಹೆಚ್ಚುತ್ತಿದೆ. ಅಸಮರ್ಪಕ ಅನುಷ್ಠಾನ, ನಡವಳಿಕೆ ಬದಲಾವಣೆಯ ಕೊರತೆ, ಅಸಮರ್ಪಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ಆಧಾರವಾಗಿರುವ ಅಪಾಯಕಾರಿ ಅಂಶಗಳ ನಿರಂತರತೆ ಮತ್ತು ಉತ್ತಮ ಆಹಾರ ಪದ್ಧತಿಗಳಿಗೆ ಪ್ರತಿರೋಧದಂತಹ ಅಂಶಗಳು ಏರಿಕೆಯಲ್ಲಿ ಕಾರಣವಾಗಿರಬಹುದು ಎಂದಿದ್ದಾರೆ.

ಹದಿಹರೆಯದ ಹೆಣ್ಣುಮಕ್ಕಳಲ್ಲಿನ ರಕ್ತ ಹೀನತೆ ಹೋಗಲಾಡಿಸುವ ನಿಟ್ಟಿನಲ್ಲಿ ತುರ್ತು ಕೆಲಸ ನಿರ್ವಹಿಸಬೇಕಿದ್ದು, ಸೂಕ್ತವಾದ ಮಧ್ಯಸ್ಥಿಕೆ ಮೂಲಕ ರಕ್ತಹೀನತೆಯ ಹರಡುವಿಕೆಯನ್ನು ಕಡಿಮೆ ಮಾಡುವ ಗುರಿ ಹೊಂದಬೇಕಿದೆ ಎಂದು ಸಂಶೋಧಕರು ಹೇಳಿದ್ದಾರೆ. (ಪಿಟಿಐ)

ಇದನ್ನೂ ಓದಿ: ನೀವು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ: ರಕ್ತಹೀನತೆ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.