ನವದೆಹಲಿ: ಭಾರತದಲ್ಲಿನ ಶೇ 52ರಷ್ಟು ಕುಟುಂಬಗಳಲ್ಲಿನ ಕನಿಷ್ಠ ಒಬ್ಬ ಸದಸ್ಯರು ತಮಗರಿವಿಲ್ಲದಂತೆಯೇ ಔಷಧಗಳ ಅಡ್ಡ ಪರಿಣಾಮಕ್ಕೆ ಒಳಗಾಗುತ್ತಿರುತ್ತಾರೆ ಎಂದು ವರದಿ ತಿಳಿಸಿದೆ.
ಆನ್ಲೈನ್ ಕಮ್ಯೂನಿಟಿ ಫ್ಲಾಟ್ಫಾರ್ಮ್ ಲೋಕಲ್ ಸರ್ಕಲ್ನಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿದೆ. ವರದಿಯಲ್ಲಿ ದೇಶದ 341 ಜಿಲ್ಲೆಯ 22 ಸಾವಿರ ಮಂದಿಯನ್ನು ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಕಳೆದ 5 ವರ್ಷದಲ್ಲಿ ಶೇ 18ರಷ್ಟು ಕುಟುಂಬದ ಒಬ್ಬ ಅಥವಾ ಅನೇಕ ಮಂದಿ ಗೊತ್ತಿಲ್ಲದ ಔಷಧ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ ಎಂದು ಬಯಲಾಗಿದೆ.
ರೋಗಿಗಳು ನಿರ್ಧಿಷ್ಟ ಔಷಧಗಳನ್ನು ತೆಗೆದುಕೊಂಡಾಗ ಆಗುವ ಅಡ್ಡ ಪರಿಣಾಮದ ಬಗ್ಗೆ ತಿಳಿಯುವುದು ಅವಶ್ಯವಾಗಿದೆ ಎಂದು ಒತ್ತಿ ಹೇಳಿದ್ದಾರೆ. ಅಲ್ಲದೇ ಶೇ 85ರಷ್ಟು ಭಾರತೀಯರು, ಔಷಧಗಳ ಮೇಲೆ ಇದರ ಸೇವನೆಯಿಂದ ಆಗುವ ಅಡ್ಡ ಪರಿಣಾಮಗಳ ಕುರಿತು ಔಷಧ ತಯಾರಕರು ನಮೂದಿಸಬೇಕು ಎನ್ನುತ್ತಾರೆ.
ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಜಿಸಿಐ), ಸುರಕ್ಷತಾ ದೃಷ್ಟಿಯಿಂದಾಗಿ ರೋಗಿಗಳು ಮತ್ತು ಆರೋಗ್ಯ ವೃತ್ತಿಪರರು ಅಬಾಟ್‌ನ ಡೈಜೆನ್ ಜೆಲ್ ಅನ್ನು ಬಳಸುವುದನ್ನು ನಿಲ್ಲಿಸಲು ಸಲಹೆ ನೀಡಿದೆ.
ಈ ಡಿಜಿಲ್ ಸೆಲ್ ಆಂಟಾಸಿಡ್ ಪುದೀನ ಸುವಾಸನೆ ಸಾಮಾನ್ಯ ಸಿಹಿ ರುಚಿ ಹೊಂದಿರುವ ತಿಳಿ ಗುಲಾಬಿ ಬಣ್ಣದ್ದಾಗಿದ್ದು, ಮತ್ತೊಂದು ಇದಕ್ಕೆ ವಿರುದ್ಧವಾಗಿ ಕಹಿ ರುಚಿ ಮತ್ತು ಗಾಟು ವಾಸನೆಯ ಹೊಂದಿರುವ ಬಿಳಿ ಬಣ್ಣದ್ದಾಗಿದೆ.
ನಿಯಂತ್ರಣ ಮಂಡಳಿ ಹೇಳುವಂತೆ, ಗೋವಾದಲ್ಲಿ ನಿರೋಧಕ ಉತ್ಪನ್ನವನ್ನು ತಯಾರಿಸಲಾಗುತ್ತದೆ. ಇದು ಅಸುರಕ್ಷವಾಗಿದ್ದು, ಪರಿಣಾಮವಾಗಿ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಅಬಾಟ್ ಔಷಧ ತಯಾರಕರು ಉತ್ಪನ್ನವನ್ನು ಮರಳಿಸುವಂತೆ ತಿಳಿಸಿದರು.
ಡೈಜಿನ್ ಜೆಲ್ ಅನ್ನು ಸಾಮಾನ್ಯವಾಗಿ ಸುರಕ್ಷಿತ ಔಷಧಿಯಾಗಿ ಪರಿಗಣಿಸಲಾಗಿದ್ದು, ಬಹು ವರ್ಷದಿಂದ ಇಲ್ಲಿಯವರೆಗೆ ಬಳಕೆ ಮಾಡಲಾಗುತ್ತಿದೆ. ಅಬೋಟ್ ಔಷಧಿಯನ್ನು ಹಿಂಪಡೆದಿರುವ ಹಿನ್ನೆಲೆ ಯಾವುದೇ ಆತಂಕ ಬೇಡ. ಕೆಲವು ನಿರ್ಧಿಷ್ಟ ಬ್ಯಾಚ್ನಲ್ಲಿ ಉತ್ಪಾದನೆ ವೇಳೆ ಉಂಟಾದ ತೊಡಕಿನಿಂದ ಇದನ್ನು ಹಿಂಪಡೆಯಲಾಗಿದೆ.
ಇಂತಹ ಮೆಡಿಸಿನ್ಗಳನ್ನು ಸದಾ ತಜ್ಞರ ಮಾರ್ಗದರ್ಶನ ಅನುಸಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ ಎಂದು ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಗ್ಯಾಸ್ಟ್ರೋಎಟರ್ನೊಲಾಜಿಯ ಮುಖ್ಯ ಕನ್ಸಲ್ಟೆಂಟ್ ಡಾ ಅನುಕಲ್ಪ ಪ್ರಕಾಶ್ ತಿಳಿಸಿದ್ದಾರೆ
ವೈದ್ಯರು ಸಲಹೆ ನೀಡಿದ ಡೋಸೆಜ್ನಲ್ಲಿ ಔಷಧಗಳನ್ನು ಸೇವಿಸುವುದು ಯಾವಾಗಲೂ ಸುರಕ್ಷಿತ. ಜನರು ವೈದ್ಯರನ್ನು ಸಂಪರ್ಕಿಸದೇ ಅದನ್ನು ಸೇವಿಸಿದಾಗ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ಅರಿವನ್ನು ಹೊಂದಿರುವುದಿಲ್ಲ.
ಔಷಧ ಹಿಂಪಡೆದಿರುವ ಕುರಿತು ತಿಳಿಸಿರುವ ಅಬೋಟ್, ಇದರ ರುಚಿ ಮತ್ತು ವಾಸನೆ ಬಗ್ಗೆ ಗ್ರಾಹಕರು ದೂರಿದ ಹಿನ್ನೆಲೆ ಗೋವಾದಲ್ಲಿ ಉತ್ಪಾದನೆಯಾಗುತ್ತಿರುವ ಅಬೋಟ್ ಸ್ವಯಂ ಆಗಿ ಡೈಜಿನ್ ಜೆಲ್ ಅಂಟಾಸಿಕ್ ಮೆಡಿಸಿನ್ ಅನ್ನು ಹಿಂಪಡೆದಿದೆ. ರೋಗಿಗಳ ಆರೋಗ್ಯದ ಕಾರಣದಿಂದ ಅಲ್ಲ ಎಂದು ಸ್ಪಷ್ಟನೆ ನೀಡಿದೆ.
ಕಳೆದ ಜುಲೈನಲ್ಲಿ ಸೆಂಟ್ರಲ್ ಡ್ರಗ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (ಸಿಡಿಎಸ್ಸಿಒ) ಗುಣಮಟ್ಟ ಪೂರೈಕೆ ಮಾಡದ 51 ಮೆಡಿಸಿನ್ಗಳ ಪಟ್ಟಿ ಮಾಡಿತ್ತು.
ಈ ಮುಂಚೆ ಜೂನ್ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಭಾರತ ತಯಾರಿಸಿದ ಏಳು ಕೆಮ್ಮಿನ ಸಿರಪ್ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿವೆ ಎಂದು ತಿಳಿಸಿತ್ತು. ಈ ಸಂಬಂಧ ವಿಶ್ವ ಸಂಸ್ಥೆ ಕೂಡ ತನಿಖೆಗೆ ಮುಂದಾಗಿತು. ಇದೆ ತಿಂಗಳಲ್ಲಿ ಸರ್ಕಾರ 14 ಫಿಕ್ಸ್ಡ್ ಡೋಸ್ ಕಾಬಿನೇಷನ್ ಮೆಡಿಸಿನ್ಗೆ ನಿಷೇಧ ಹೇರಿತು. (ಐಎಎನ್ಎಸ್)
ಇದನ್ನೂ ಓದಿ: ರೆಟಿನಾದಲ್ಲಿ ಕೊಲೆಸ್ಟ್ರಾಲ್ಗೆ ಕಾರಣವಾಗುತ್ತೆ ಮಧುಮೇಹ; ಇದರಿಂದ ದೃಷ್ಟಿಗೆ ಹಾನಿ ಎನ್ನುತ್ತಿದೆ ಅಧ್ಯಯನ