ETV Bharat / sukhibhava

ಬೇಸಿಗೆಯಲ್ಲಿ ತಂಪಾಗಿರಲು ಕಲ್ಲಂಗಡಿ ಪಾನೀಯಗಳು..

ಈ ಬೇಸಿಗೆ ಕಾಲದಲ್ಲಿ ನೀವು ತಂಪಾಗಿರಲು ಮನೆಯಲ್ಲೇ ತಯಾರಿಸಬಹುದಾದ ಕೆಲವು ಕಲ್ಲಂಗಡಿ ಪಾನೀಯಗಳು ಇಲ್ಲಿವೆ.

Watermelon drinks
ಕಲ್ಲಂಗಡಿ ಪಾನೀಯಗಳು
author img

By

Published : Apr 15, 2023, 2:28 PM IST

ಹೈದರಾಬಾದ್: ಈಗ ಬೇಸಿಗೆ ಕಾಲ. ಹೀಗಾಗಿ ಈ ಋತುವಿನಲ್ಲಿ ನೀವು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಬಿಸಿಲು ಮತ್ತು ಏರುತ್ತಿರುವ ತಾಪಮಾನದಲ್ಲಿ, ನಾವು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅವಶ್ಯಕವಾಗಿದೆ. ಬಿಸಿಲ ತಾಪ, ಆಹಾರ ಸರಿಯಾಗಿ ಜೀರ್ಣವಾಗದೇ ನಿರ್ಜಲೀಕರಣದಂತಹ ಹಲವಾರು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ದೇಹವನ್ನು ಹೈಡ್ರೀಕರಿಸಿದ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.

ಈ ಅವಧಿಯಲ್ಲಿ ನಮ್ಮ ದೇಹವನ್ನು ತಂಪಾಗಿ ಮತ್ತು ತೇವಾಂಶದಿಂದ ಇಡುವುದು ಮುಖ್ಯ. ವರ್ಷದ ಈ ಸಮಯದಲ್ಲಿ, ಅತಿಯಾದ ನಿರ್ಜಲೀಕರಣ ಮತ್ತು ಬೆವರುವಿಕೆಯಿಂದಾಗಿ ನಾವು ದಣಿವು ಮತ್ತು ಆಯಾಸವನ್ನು ಅನುಭವಿಸುತ್ತೇವೆ.ನಮ್ಮ ದೇಹವನ್ನು ಪುನಃ ಶಕ್ತಿಯುತಗೊಳಿಸಲು ನೀರಿನ ಅಂಶವನ್ನು ಹೊಂದಿರುವ ಹಣ್ಣುಗಳ ಸೇವನೆ ಉತ್ತಮ ಮಾರ್ಗ. ಹೆಚ್ಚಿನ ನೀರಿನ ಅಂಶವನ್ನು ಹೊಂದಿರುರುವ ಹಣ್ಣುಗಳಲ್ಲಿ ಕಲ್ಲಂಗಡಿ ಕೂಡ ಒಂದಾಗಿದೆ. ಇದನ್ನು ಬೇಸಿಗೆಯ ಶಾಖವನ್ನು ಎದುರಿಸಲು ವಿವಿಧ ವಿಧಾನಗಳಲ್ಲಿ ಬಳಸಲಾಗುತ್ತದೆ. ಈ ಬೇಸಿಗೆಯಲ್ಲಿ ನೀವು ಮನೆಯಲ್ಲಿ ಆನಂದಿಸಬಹುದಾದ ತಂಪಾದ ಕಲ್ಲಂಗಡಿ ಪಾನೀಯಗಳ ಪಟ್ಟಿ ಹೀಗಿದೆ..

ಕಲ್ಲಂಗಡಿ - ಸ್ಟ್ರಾಬೆರಿ ಸ್ಮೂಥಿ: ಬೇಸಿಗೆಯ ದಿನದಂದು ಈ ಸ್ಮೂಥಿಯು ರಿಫ್ರೆಶ್ ಆಗಿರುತ್ತದೆ ಮತ್ತು ಇಡೀ ದಿನ ಶಕ್ತಿಯುತವಾಗಿರಲು ನಿಮಗೆ ಸಹಾಯ ಮಾಡುತ್ತದೆ. ಕಲ್ಲಂಗಡಿ-ಸ್ಟ್ರಾಬೆರಿ ಸ್ಮೂಥಿ ಆರೋಗ್ಯಕರ ಪೋಷಕಾಂಶಗಳಿಂದ ತುಂಬಿರುತ್ತದೆ ಮತ್ತು ತಾಜಾ ಸ್ಟ್ರಾಬೆರಿಗಳು, ಕಲ್ಲಂಗಡಿ, ಚಿಯಾ ಬೀಜಗಳು, ಜೇನುತುಪ್ಪ ಮತ್ತು ಕಡಿಮೆ - ಕೊಬ್ಬಿನ ಮೊಸರುಗಳಿಂದ ತಯಾರಿಸಲಾಗುತ್ತದೆ. ಇದು ರುಚಿಕರ ಮಾತ್ರವಲ್ಲದೇ ನಿಮ್ಮ ದೇಹಕ್ಕೆ ಉತ್ತಮವಾದ ಮಿಟಮಿನ್‌ಗಳು ಮತ್ತು ಪೋಷಕಾಂಶಗಳನ್ನು ನೀಡುತ್ತದೆ.

ಕಲ್ಲಂಗಡಿ ಮೊಜಿಟೊ: ಬಬ್ಲಿ, ರಿಫ್ರೆಶ್ ಸುವಾಸನೆಯೊಂದಿಗೆ, ಮಿಂಟಿ ಮೊಜಿಟೊ ಬೇಸಿಗೆ ಕಾಲಕ್ಕೆ ಸೂಕ್ತವಾಗಿದೆ. ತಾಜಾ ಕಲ್ಲಂಗಡಿ, ಪುದೀನ ವನ್ನು ಮೊಜಿಟೊ ಮಾಡಲು ಬಳಸಲಾಗುತ್ತದೆ. ಇದು ನೈಸರ್ಗಿಕವಾಗಿ ಸಿಹಿಯಾಗಿರುವುದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

ಕಲ್ಲಂಗಡಿ ತುಳಸಿ ಕೂಲರ್: ಕಲ್ಲಂಗಡಿ ತುಂಡುಗಳು, ನಿಂಬೆ ರಸ ಮತ್ತು ತಾಜಾ ತುಳಸಿ ಎಲೆಗಳನ್ನು ನಯವಾದ ತನಕ ಮಿಶ್ರಣ ಮಾಡಿ. ದೊಡ್ಡ ಗ್ಲಾಸ್‌ನಲ್ಲಿ ಅರ್ಧದಷ್ಟು ಕ್ಲಬ್ ಸೋಡಾವನ್ನು ಹಾಕಿ ಕುಡಿಯಿರಿ. ಈ ಕಲ್ಲಂಗಡಿ ತುಳಸಿ ಕೂಲರ್ ಬೇಸಿಗೆಗೆ ರಿಫ್ರೆಶ್ ಪಾನೀಯವಾಗಿದೆ.

ಕಲ್ಲಂಗಡಿ ನಿಂಬೆ ಪಾನಕ: ನೀವು ಸರಳ ನಿಂಬೆ ಪಾನಕ ಕುಡಿದು ಬೇಸರವಾಗಿದ್ದರೆ, ರುಚಿಕರವಾದ ಈ ಕಲ್ಲಂಗಡಿ ನಿಂಬೆ ಪಾನಕ ಪಾಕವಿಧಾನವನ್ನು ಪ್ರಯತ್ನಿಸಿ. ಕಲ್ಲಂಗಡಿ ತುಂಡುಗಳು, ಸಕ್ಕರೆ, ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿದರೆ ಕಲ್ಲಂಗಡಿ ಪಾನೀಯ ಕುಡಿಯಲು ಸಿದ್ಧ.

ಕಲ್ಲಂಗಡಿ ಮಿಲ್ಕ್ ಶೇಕ್: ಮಿಲ್ಕ್‌ಶೇಕ್ ಬೇಸಿಗೆಯಲ್ಲಿ ಸುಲಭವಾದ ಪಾನೀಯಗಳಲ್ಲಿ ಒಂದಾಗಿದೆ. ಈ ಸರಳ ಮಿಲ್ಕ್‌ಶೇಕ್ ತಯಾರಿಸಲು, ತಾಜಾ ಕಲ್ಲಂಗಡಿ, ಹಾಲು ಮತ್ತು ಒಂದು ಚಮಚ ಸಕ್ಕರೆಯನ್ನು ಸೇರಿಸಿ. ಕೆಲವು ನಿಮಿಷಗಳ ಕಾಲ ಮಿಶ್ರಣ ಮಾಡಿ ನಂತರ ಸೇವಿಸಿ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೇಸಿಗೆಯಲ್ಲಿ ಹೆಚ್ಚಿನ ಜನರು ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡುತ್ತಾರೆ. ಇದು ನಮ್ಮ ದೇಹದಲ್ಲಿ ನೀರಿನಾಂಶವನ್ನು ಹೆಚ್ಚಿಸುವುದರ ಜತೆಗೆ ತಂಪಾಗಿರಿಸುತ್ತದೆ. ಆದರೆ ಈ ಕಲ್ಲಂಗಡಿ ಹಣ್ಣನ್ನು ಸರಳವಾಗಿ ಕತ್ತರಿಸಿ ತಿನ್ನುವುದಕ್ಕಿಂತ ಸರಳವಾಗಿ ಆ ಹಣ್ಣಿನಿಂದ ವಿಶಿಷ್ಟ ಪಾಕವಿಧಾನವನ್ನು ಮಾಡಿ ಸವಿಯಬಹುದು.

ಇದನ್ನೂ ಓದಿ: ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಇಲ್ಲಿವೆ ತಜ್ಞರ ಸಲಹೆಗಳು...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.