ನವದೆಹಲಿ: ಮಾನ್ಸೂನ್ ಆರಂಭವಾಗಿದ್ದು, ತಂಪಾದ ವಾತಾವರಣ, ಮೋಡಗಳು, ತಂಗಾಳಿ ನಿಮ್ಮ ಮನಸ್ಸಿಗೆ ಸಾಕಷ್ಟು ಮುದ ನೀಡುವುದು ಸುಳ್ಳಲ್ಲ. ಬಿಸಿಲಿನ ತಾಪದಿಂದ ಬಳಲಿದ ಜನರಿಗೆ ಮಾನ್ಸೂನ್ ಉತ್ತಮ ಸಂತೋಷದಾಯಕ ಕ್ಷಣಗಳು. ಇದು ಅತಿ ಹೆಚ್ಚಿನ ಮೋಜಿನ ದಿನವಾದರೂ ಈ ಸಮಯ ಎಣ್ಣೆ ತ್ವಚೆ ಹೊಂದಿರುವವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಕಾರಣ ಮುಗಿಯದ ಶುಷ್ಕತೆ. ಇದೆ ಕಾರಣಕ್ಕೆ ಮಳೆಗಾಲದಲ್ಲೂ ನಿಮ್ಮ ತ್ವಚೆಯ ಆರೈಕಗೆಗೆ ಗಮನ ನೀಡಬೇಕು ಎಂದು ಹೇಳಲಾಗುವುದು.
ಮಳೆಗಾಲದಲ್ಲಿ ರಾಸಾಯನಿಕ ಆಧಾರಿತ ಉತ್ಪನ್ನಗಳನ್ನು ತ್ವಚೆ ಆರೈಕೆಗೆ ಬಳಸುವ ಬದಲಾಗಿ ಮನೆಯಲ್ಲಿ ಸರಳವಾಗಿ ಸಿಗುವ ಉತ್ಪನ್ನಗಳಿಂದ ತ್ವಚೆಯ ಆರೈಕೆ ನಡೆಸಬಹುದಾಗಿದೆ. ಈ ಕುರಿತು ವೆಲ್ನೆಸ್ ಕ್ರಿಯೆಟರ್ ಆಗಿರುವ ತುಫಾನ್ ದಾಸ್ ಕೆಲವು ತ್ವಚೆ ಕಾಳಜಿ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಹಾಲು ಮತ್ತು ಜೇನುತುಪ್ಪದ ಫೇಸ್ವಾಶ್: ಬಿಸಿ ಮಾಡದ ಹಾಲಿಗೆ ಒಂದು ಸ್ಪೂನ್ ಜೇನುತುಪ್ಪ ಬೆರಸಿ, ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, 2-3 ನಿಮಿಷ ನಿಧಾನವಾಗಿ ಮಸಾಜ್ ಮಾಡಿ. ಬಳಿಕ ಮುಖವನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಈ ಜೇನು ಮಿಶ್ರಿತ ಹಾಲಿನ ಫೇಸ್ವಾಶ್ನಿಂದ ತ್ವಚೆ ಹೊಳೆಯುತ್ತದೆ ಜೊತೆಗೆ ಇದು ಮುಖದಲ್ಲಿನ ಅಧಿಕ ಎಣ್ಣೆ ಅಂಶವನ್ನು ತೆಗೆಯುತ್ತದೆ. ಸೂಕ್ಷ್ಮ ತ್ವಚೆಯನ್ನು ಹೊಂದಿರುವವರಿಗೆ ಇದು ಹೆಚ್ಚಿನ ಪರಿಣಾಮ ನೀಡಲಿದೆ.
ಮಸೂರ ಬೆಳೆ ಮತ್ತು ಹಾಲಿನ ಸ್ಕ್ರಬ್: ಮಸೂರ ಬೆಳೆಯನ್ನು ರಾತ್ರಿ ಇಡೀ ನೀರಿನಲ್ಲಿ ನೆನೆ ಹಾಕಿ. ಇದಾದ ಬಳಿಕ ಅದನ್ನು ತಣ್ಣಗಿನ ಹಾಲನ್ನು ಬೆರಸಿ ಚೆನ್ನಾಗಿ ರುಬ್ಬಿ. ಅದು ನುಣ್ಣಗೆ ಆದ ಬಳಿಕ ಆ ಪೇಸ್ಟ್ ಅನ್ನು ಮುಖ, ಕುತ್ತಿಗೆ ಭಾಗದಲ್ಲಿ ಚೆನ್ನಾಗಿ ಹಚ್ಚಿ. ಇದಾದ ಬಳಿಕ 5 ರಿಂದ 10 ನಿಮಿಷ ಕಾಲ ಹಾಗೇ ಒಣಗಲಿ ಬಿಡಿ. ಬಳಿಕ ತಣ್ಣೀರಿನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ. ಇದನ್ನು ವಾರದಲ್ಲಿ ಎರಡರಿಂದ ಮೂರು ದಿನ ಸ್ಕ್ರಬ್ ಆಗಿ ಕೂಡ ಬಳಕೆ ಮಾಡುವುದರಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದು ಮುಖವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ. ನಿಮ್ಮ ಚರ್ಮವನ್ನು ಎಫ್ಫೋಲಿಯೇಟ್ ಮಾಡುವುದು
ತಣ್ಣಗಿನ ಸೌತೆಕಾಯಿ ಫೇಸ್ ವಾಶ್: ತುರಿದ ಸೌತೆಕಾಯಿಗೆ ಆಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಇದನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ, ಇದು ನೈಸರ್ಗಿಕವಾಗಿ ಮುಖವನ್ನು ಮೃದು ಮಾಡಿ ಪೋಷಣೆ ನೀಡುತ್ತದೆ. ಈ ಫೇಸ್ಪ್ಯಾಕ್ ಅನ್ನು 15 ನಿಮಿಷ ಕಾಲ ಹಾಗೆ ಬಿಡುವುದರಿಂದ ಹೆಚ್ಚಿನ ಪರಿಣಾಮ ಪಡೆಯಬಹುದು. ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿತು.
ಆಲೋವೇರ ನೈಸರ್ಗಿಕ ಅಂಶಗಳಿಂದ ಕೂಡಿದ್ದು, ಸೌತೆಕಾಯಿ ತಣ್ಣಗೆ ಮಾಡುವ ಪರಿಣಾಮ ಹೊಂದಿದೆ, ಇದು ನೈಸರ್ಗಿಕವಾಗಿ ತಾಜಾತನವನ್ನು ನೀಡುವ ಜೊತೆಗೆ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಚರ್ಮದ ಆಳದಿಂದ ಇದು ಮಾಶ್ಚರೈಸ್ ಮಾಡುವುದರಿಂದ ಶುಷ್ಕತೆ ಮಾಯಾವಾಗಿ ಇದು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.
ಓಟ್ಸ್ ಮತ್ತು ಲೆಂಟಿಲ್ ಉಬ್ಟಾನ್ : ಓಟ್ಸ್ ಅರ್ಧಕಪ್, ಒಂದು ಕಪ್ ಮಸೂರ ಬೆಳೆ, ಕಾಲು ಕಪ್ ಅಕ್ಕಿಹಿಟ್ಟು, 8-9 ಬಾದಾಮಿ, ಚಿಟಿಕೆ ಅರಿಶಿಣ ಪುಡಿ, ರೋಸ್ ವಾಟರ್ ಸಾಮಾಗ್ರಿಗಳು ಈ ಫೇಸ್ಪ್ಯಾಕ್ಗೆ ಬೇಕು. ಮಸೂರ ಬೆಳೆ , ಓಟ್ಸ್, ಬಾದಾಮಿಯನ್ನು ಪ್ರತ್ಯೇಕವಾಗಿ ರಬ್ಬಿ ಮಿಶ್ರಣ ಮಾಡಿ. ಅದಕ್ಕೆ ಅಕ್ಕಿ ಹಿಟ್ಟು, ಚಿಟಿಕೆ ಅರಿಶಿಣ ಬೆರಸಿ, ಮಿಶ್ರಣ ಮಾಡಿ. ಬಳಿಕ ಮುಖ ಮತ್ತು ಕುತ್ತಿಗೆ ಹಚ್ಚಿ, 15-20 ನಿಮಿಷ ಹಾಗೇ ಬಿಡಿ. ಪ್ಯಾಕ್ ಡ್ರೈ ಆದ ಬಳಿಕ ಅದನ್ನು ಶುಚಿ ಮಾಡಿ.
ಓಟ್ಸ್ ಚರ್ಮವನ್ನು ಮೃದು ಮಾಡುತ್ತದೆ. ಜೊತೆಗೆ ಇವು ಅಶುದ್ಧತೆ ಮತ್ತು ಅಧಿಕ ಎಣ್ಣೆಯನ್ನು ಹೊರಗೆ ಹಾಕುತ್ತದೆ. ಓಟ್ಸ್ ಕೊಳೆ ಮತ್ತು ವಿಷಯ ವನ್ನು ಹೊರ ಹಾಕಿದರೆ, ಮಸೂರ ಸತ್ತ ಚರ್ಮ ಕೋಶವನ್ನು ತೆಗೆದು ಮುಖವನ್ನು ಆಳದಿಂದ ಶುಚಿಗೊಳಿಸುತ್ತದೆ.
ಗುಲಾಬಿ ದಳದ ಮಾಶ್ವರೈಸರ್: ಒಂದು ಕಪ್ ಗುಲಾಬಿ ದಳ, ಒಂದು ಕಪ್ ಗುಲಾಬಿ ನೀರು, ಒಂದು ಕಪ್ ಆಲೋವೆರಾ ಜ್ಯಸ್ ಹಾಕಿ ಮಿಶ್ರಣ ಮಾಡಿ. ಇದು ಮುಖಕ್ಕೆ ನೈಸರ್ಗಿಕ ಮಾಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದನ್ನು ಚರ್ಮದ ಅಂದವನ್ನು ಹೆಚ್ಚಿಸಿ, ಪ್ರಯೋಜನ ನೀಡುತ್ತದೆ.
ಮುಖಕ್ಕೆ ಯಾವುದೇ ಫೇಸ್ಪ್ಯಾಕ್ ಹಾಕುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಕಡ್ಡಾಯ. ಇದರಿಂದ ಆಗಬಹುದಾದ ಭಾರೀ ಪರಿಣಾಮವನ್ನು ತಡೆಯಬಹುದಾಗಿದೆ.
ಇದನ್ನೂ ಓದಿ: Beauty Tips: ವಯಸ್ಸು ಮುಖದ ಸೌಂದರ್ಯ ಮರೆಮಾಚದಿರಲಿ!