ETV Bharat / sukhibhava

ಸೋರಿಯಾಸಿಸ್​ ಮಾರಣಾಂತಿಕವೇ? ಲಕ್ಷಣಗಳೇನು? ತಕ್ಷಣದ ಚಿಕಿತ್ಸೆಯೇನು?

author img

By

Published : Oct 29, 2021, 10:31 AM IST

Updated : Nov 19, 2021, 12:11 PM IST

ದೀರ್ಘಕಾಲದ ಕಾಡುವ ಸೋರಿಯಾಸಿಸ್‌ನಲ್ಲಿ ಹಲವು ವಿಧಗಳಿವೆ. ರೋಗಿಗಳ ಮೇಲೆ ದೈಹಿಕ ಹಾಗೂ ಭಾವನಾತ್ಮಕವಾಗಿ ಪರಿಣಾಮ ಬೀರುವ ಈ ಕಾಯಿಲೆಯ ಬಗ್ಗೆ ವಿವರ ಇಲ್ಲಿದೆ.

Psoriasis
ಸೋರಿಯಾಸಿಸ್

ಇಂದು ವಿಶ್ವ ಸೋರಿಯಾಸಿಸ್ ದಿನ. ವಿಶ್ವ ಸೋರಿಯಾಸಿಸ್ ಒಕ್ಕೂಟದ ಪ್ರಕಾರ, ಪ್ರಪಂಚದಾದ್ಯಂತ 125 ಮಿಲಿಯನ್ ಜನರು, ಅಂದರೆ ಒಟ್ಟು ಜನಸಂಖ್ಯೆಯ ಶೇಕಡಾ 2 ರಿಂದ 3 ರಷ್ಟು ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಅಂಥ ಜನರನ್ನು ಗುರುತಿಸಲು ಮತ್ತು ಈ ಬಗ್ಗೆ ಜಾಗೃತಿ ಮೂಡಿಸಲು, ಪ್ರತಿ ವರ್ಷ ಅಕ್ಟೋಬರ್ 29 ರಂದು ವಿಶ್ವ ಸೋರಿಯಾಸಿಸ್ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ರೋಗ ಹರಡುವುದು ಹೇಗೆ?

ಪ್ರತಿರಕ್ಷಣಾ ವ್ಯವಸ್ಥೆಯು ಅತಿಯಾಗಿ ಸಕ್ರಿಯವಾಗಿದ್ದಾಗ ಮತ್ತು ಆರೋಗ್ಯಕರ ಚರ್ಮದ ಅಂಗಾಂಶದ ಮೇಲೆ ದಾಳಿ ನಡೆಸಿದಾಗ ಸೋರಿಯಾಸಿಸ್​ ಉಂಟಾಗುತ್ತದೆ. ಈ ಪ್ರಕ್ರಿಯೆ ಉರಿಯೂತವನ್ನುಂಟು ಮಾಡುವುದರ ಜತೆಗೆ ಚರ್ಮದ ಕೋಶಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಇದರಿಂದಾಗಿ ಚರ್ಮ ತುರಿಕೆ, ನೋವು ಉಂಟಾಗುತ್ತದೆ. ಇದು ಇಡೀ ದೇಹವನ್ನೇ ಆವರಿಸುತ್ತದೆ. ಸಾಮಾನ್ಯವಾಗಿ ನೆತ್ತಿ, ಮೊಣಕಾಲು, ಬೆನ್ನು, ಮೊಣಕೈ ಮೇಲೆ ಕಾಣಿಸಿಕೊಳ್ಳುತ್ತದೆ. ಆದರೆ, ಇವು ತುರಿಕೆಯುಂಟು ಮಾಡುತ್ತದೆಯೇ ವಿನಃ, ನೋವನ್ನುಂಟು ಮಾಡುವುದಿಲ್ಲ ಎನ್ನುತ್ತಾರೆ ಕೆಲವರು.

ಮುಂಬೈನ ಅನಿಶಾ ಚಿಕಿತ್ಸಾಲಯದ ಚರ್ಮರೋಗ ತಜ್ಞ ಶ್ರೀಚಂದ್ ಜಿ. ಪರಶ್ರಮಣಿ ಮಾತನಾಡಿ, ಸೋರಿಯಾಸಿಸ್ ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಜನರು ಈ ಬಗ್ಗೆ ಹಲವಾರು ತಪ್ಪುಕಲ್ಪನೆಗಳನ್ನು ಹೊಂದಿದ್ದಾರೆ. ಉದಾಹರಣೆಗೆ ಇದು ಸಾಂಕ್ರಾಮಿಕ, ಇದರೊಂದಿಗೆ ಜೀವಮಾನವಿಡೀ ಬದುಕಬೇಕು ಅನ್ನೋ ಮಾತುಗಳು ಅವರ ಮೇಲೆ ಒತ್ತಡ ಸೃಷ್ಟಿಸುತ್ತವೆ.

ಸಾಂಪ್ರದಾಯಿಕ ಚಿಕಿತ್ಸೆಯ ವೈಫಲ್ಯ ಮತ್ತು ರೋಗದ ಚಿಕಿತ್ಸೆಗೆ ಹೆಚ್ಚಿನ ಹಣ ವ್ಯಯಿಸುವ ಕಾರಣದಿಂದ ಅನೇಕ ರೋಗಿಗಳು ಆಯುರ್ವೇದ ಅಥವಾ ಹೋಮಿಯೋಪತಿಯಂತಹ ಪರ್ಯಾಯ ಔಷಧದತ್ತ ಆಕರ್ಷಿತರಾಗುತ್ತಾರೆ. ಇದು ಚಿಕಿತ್ಸೆಯಲ್ಲಿ ಅನಿಯಮಿತತೆಗೆ ಕಾರಣವಾಗುತ್ತದೆ. ಪರಿಣಾಮವಾಗಿ ರೋಗವು ಮತ್ತಷ್ಟು ಉಲ್ಬಣವಾಗುತ್ತದೆ. ಹೊಸ ಚಿಕಿತ್ಸಾ ಆಯ್ಕೆಗಳೊಂದಿಗೆ ರೋಗಿಗಳು ಸಾಮಾನ್ಯ ಜೀವನವನ್ನು ನಡೆಸಬಹುದು ಎಂದು ಹೇಳಿದ್ದಾರೆ.

ಉರಿಯೂತ ಹೆಚ್ಚು

ಸೋರಿಯಾಸಿಸ್ ದೀರ್ಘಕಾಲದ ಸ್ವಯಂ ನಿರೋಧಕ ಕಾಯಿಲೆಯಾಗಿದ್ದು ಅದು ಉರಿಯೂತವನ್ನು ಉಂಟುಮಾಡುತ್ತದೆ. ಇದು ಇತರೆ ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತದೆ. ಉರಿಯೂತ ಕಾಣಿಸಿಕೊಳ್ಳುತ್ತಿದ್ದಂತೆಯೇ ನುರಿತ ವೈದ್ಯರನ್ನು ಸಂಪರ್ಕಿಸಬೇಕು.

ಇತರೆ ರೋಗಗಳಿಗೆ ಅನುವು ಮಾಡಿಕೊಡುತ್ತೆ

ಸಾಮಾನ್ಯವಾಗಿ ಸೋರಿಯಾಸಿಸ್ ರೋಗದಿಂದಾಗಿ, ಸಂಧಿವಾತ, ಕೀಲುಗಳ ನೋವು, ಮೃದುತ್ವಕ್ಕೆ ಕಾರಣವಾಗುತ್ತದೆ. ಅಲ್ಲದೇ, ಹೃದಯಾಘಾತ, ಪಾರ್ಶ್ವವಾಯು, ಶುಗರ್​​, ಕರುಳು ಸಂಬಂಧಿತ ಕಾಯಿಲೆಗಳು, ಸ್ಥೂಲಕಾಯ, ಶ್ವಾಸಕೋಶ, ಮೆಟಾಬಾಲಿಕ್ ಸಿಂಡ್ರೋಮ್​, ಮೂತ್ರಪಿಂಡ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಆರಂಭದಲ್ಲೇ ಚಿಕಿತ್ಸೆ ಪಡೆಯಿರಿ

ಸೋರಿಯಾಸಿಸ್​​ಗೆ ಬಯೋಲಾಜಿಕ್ಸ್​ನಂತಹ ಸುಧಾರಿತ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರೋಗವನ್ನು ಆರಂಭದಲ್ಲಿಯೇ ತಡೆಗಟ್ಟಬಹುದು. ಮನೆಯಲ್ಲಿ ತಯಾರಿಸಿದ ಔಷಧಿ ಬಳಸುವ ಮುನ್ನ ತಜ್ಞರನ್ನು ಸಂಪರ್ಕಿಸಿದರೆ ಶೀಘ್ರ ಗುಣಮುಖರಾಗುತ್ತೀರಿ.

ಮಾನಸಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟ

ಈ ರೋಗದ ಮತ್ತೊಂದು ದೀರ್ಘಕಾಲೀನ ಪರಿಣಾಮವೆಂದರೆ, ವ್ಯಕ್ತಿಯ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಮುಖ, ಕೈಗಳ ಮೇಲೆ ಸೋರಿಯಾಸಿಸ್ ಕಾಣಿಸಿಕೊಳ್ಳುವುದರಿಂದ ಜನರು ಅವರನ್ನು ನಿರ್ಲಕ್ಷ್ಯಿಸಬಹುದು ಅಥವಾ ಸಂಬಂಧಗಳಿಂದ ದೂರವಾಗಬಹುದು. ಈ ಬೆಳವಣಿಗೆಯು ಅವರನ್ನು ಮಾನಸಿಕ ಖಿನ್ನತೆಗೆ ದೂಡುತ್ತದೆ.

ಮೊದಲು ನೀವು ಮಾಡಬೇಕಿರುವುದು ಏನು?

ಮೊದಲು ನೀವು ಚರ್ಮರೋಗ ತಜ್ಞರನ್ನು ಸಂಪರ್ಕಿಸಿ. ಸರಳವಾದ ವಿಧಾನದ ಮೂಲಕ ದೈಹಿಕ ಪರೀಕ್ಷೆ ನಡೆಸಿ, ವೈರಸ್ ಯಾವ ಹಂತದಲ್ಲಿದೆ ಅನ್ನೋದನ್ನ ಪತ್ತೆ ಹಚ್ಚಬೇಕು. ವೈದ್ಯರು ಚರ್ಮ, ನೆತ್ತಿ, ಉಗುರುಗಳನ್ನು ಪರೀಕ್ಷೆ ಮಾಡುತ್ತಾರೆ. ಬಳಿಕ ರೋಗದ ತೀವ್ರತೆ ಅರಿತು, ಸಮಗ್ರ ಚಿಕಿತ್ಸಾ ವಿಧಾನ ನಡೆಸಬಹುದು.

Last Updated : Nov 19, 2021, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.