ಬೀಜಿಂಗ್: ಜಾಗತಿಕ ಬಿಕ್ಕಟ್ಟು ಅನಿರೀಕ್ಷಿತ ಮಟ್ಟಕ್ಕೆ ಏರಿಕೆಯಾಗಿದ್ದು, ಜಾಗತಿಕ ತಾಪಮಾನ ದಾಖಲೆಯ ತುರ್ತುಮಟ್ಟಕ್ಕೆ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. 2023ರ ಜುಲೈ ಎಚ್ಚರಿಕೆಯ ಮೈಲಿಗಲ್ಲಾಗಿದೆ ಎಂದು ವರದಿ ತಿಳಿಸಿದೆ.
ಚೀನಾ ಗ್ಲೋಬಲ್ ಮರ್ಜಡ್ ಸರ್ಫೇಸ್ ಟೆಂಪರೆಚರ್ ದತ್ತಾಂಶ 2.0 ಆಧಾರದ ಮೇಲೆ ಸನ್ ಯಟ್ ಸೆನ್ ಯುನಿವರ್ಸಿಟಿ ಈ ಹೊಸ ಅಧ್ಯಯನ ನಡೆಸಿದೆ. 2023 ಅತ್ಯಂತ ಬಿಸಿಯಾದ ತಾಪಮಾನದ ವರ್ಷ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ನಾಸಾ ಮತ್ತು ಯುರೋಪಿಯನ್ ಯುನಿಯನ್ ಕ್ಲೈಮೇಟ್ ಮಾನಿಟರ್ ಕೂಡ 2023ನ್ನು ಅತ್ಯಂತ ಬಿಸಿಯಾದ ವರ್ಷ ಎಂದು ದಾಖಲಿಸಿದೆ.
ಹೊಸ ಅಧ್ಯಯನವನ್ನು ಅಡ್ವಾನ್ಸ್ ಇನ್ ಅಟ್ಮೋಸ್ಫೆರಿಕ್ ಸೈನ್ಸ್ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆಯಲ್ಲಿ ಸಿಎಂಎಸ್ಟಿ 2.0 ದತ್ತಾಂಶವನ್ನು ವಿಶ್ಲೇಷಿಸಲಾಗಿದೆ. ಇದರಲ್ಲಿ 2023ರ ಅರ್ಧ ವರ್ಷದ ದಾಖಲೆಯನ್ನು ಅಧ್ಯಯನ ನಡೆಸಿ ಮೂರನೇ ಬಿಸಿಯಾದ ವರ್ಷ ಎಂದು ಗುರುತಿಸಲಾಗಿದೆ. ಈ ಮೊದಲು 2016 ಮತ್ತು 2020ನ್ನು ಬಿಸಿಯಾದ ವರ್ಷ ಎಂದು ಗುರುತಿಸಲಾಗಿದೆ.
ಜಾಗತಿಕ ಅಂದರೆ ಸಮುದ್ರ ಮೇಲ್ಮೈ ತಾಪಮಾನ (ಎಸ್ಎಸ್ಟಿ) ಏಪ್ರಿಲ್ನಲ್ಲಿ ಎಲ್ಲಾ ಅವಧಿಗಿಂತ ಹೆಚ್ಚಿದೆ. ಜಾಗತಿಕ ಅರ್ಥದಲ್ಲಿ ಭೂಮಿ ಮೇಲಿನ ಗಾಳಿ ತಾಪಮಾನ ಜೂನ್ನಲ್ಲಿ ಎರಡನೇ ಅತಿ ಹೆಚ್ಚು ಮಟ್ಟಕ್ಕೆ ಏರಿಕೆಯಾಗಿತ್ತು. ಈ ಎರಡು ಫಲಿತಾಂಶವನ್ನು ಸಂಯೋಜಿಸಿ ಮೇ ತಿಂಗಳನ್ನು ಅನ್ನು ಅತಿ ಹೆಚ್ಚು ತಾಪಮಾನದ ಮಾಸವಾಗಿ ಗುರುತಿಸಲಾಗಿದೆ.
ಜಾಗತಿಕ ತಾಪಮಾನವೂ 2023ರ ಎರಡನೇ ಅವಧಿಯಲ್ಲೂ ಮುಂದುವರೆದಿದ್ದು, ಇದು ಎಲ್ ನಿನೋ ಮತ್ತು ಕಾಡ್ಗಿಚ್ಚು ಹರಡುವಿಕೆ ಅಂಶವನ್ನು ಹೊಂದಿದೆ. ಎಸ್ಎಸ್ಟಿ ಮತ್ತು ಭೂಮಿ ಮೇಲಿನ ತಾಪಮಾನವೂ ಜುಲೈನಲ್ಲಿ ಅನಿರೀಕ್ಷಿತ ಮಟ್ಟಕ್ಕೆ ಏರಿಕೆ ಕಂಡಿದೆ.
2024ರಲ್ಲೂ ಕೂಡ ಜಾಗತಿಕ ಮೇಲ್ಮೈ ತಾಪಮಾನ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಸನ್ ಯಟ್ ಸೆನ್ ಪ್ರೊ ಲಿ ಕ್ವಿಂಗ್ಸಿಂಗ್ ತಿಳಿಸಿದ್ದಾರೆ.
ದತ್ತಾಂಶವೂ ಶತಮಾನದಷ್ಟು ಮೌಲ್ಯದ ಜಾಗತಿಕ ಭೂ ಗಾಳಿಯ ಉಷ್ಣತೆಯ ದತ್ತಾಂಶ ಮತ್ತು ಪ್ರಪಂಚದಾದ್ಯಂತದ ಅತ್ಯಾಧುನಿಕ ಸಂಶೋಧನೆಯ ಫಲಿತಾಂಶಗಳನ್ನು ಸಂಯೋಜಿಸುತ್ತದೆ, ಇದು ಹವಾಮಾನ ವಿಜ್ಞಾನಿಗಳು ಮತ್ತು ನೀತಿ ನಿರೂಪಕರಿಗೆ ಅಮೂಲ್ಯವಾದ ಸಂಪನ್ಮೂಲವಾಗಿದೆ
ಸಿಎಂಎಸ್ಟಿ 2.0 ದತ್ತಾಂಶವೂ ಜಾಗತಿಕ ಮೇಲ್ಮೈ ತಾಪಮಾನದ ದತ್ತಾಂಶದ ಸಮಗ್ರವಾಗಿದೆ. ಇದು ಜಾಗತಿಕ ಮತ್ತು ಪ್ರಾದೇಶಿಕ ತಾಪಮಾನ ಬದಲಾವಣೆ ನಿಖರತೆ ಹೊಂದಿದ್ದು, ಜಾಗತಿಕ ತಾಪಮಾನದ ನಿರ್ವಹಣೆಯಿಂದ ಹೊಸ ಮಟ್ಟಕ್ಕೆ ಹೆಚ್ಚಿಸುತ್ತದೆ.
ಜಾಗತಿಕ ತಾಪಮಾನವೂ ಅತ್ಯಧಿಕ ತಾಪಮಾನದ ಘಟನೆ ಮತ್ತು ವಿಪತ್ತು ಹೆಚ್ಚಳಕ್ಕೆ ನಾಂದಿಯಾಗುತ್ತದೆ. ಈ ಹಿನ್ನೆಲೆ ತಾಪಾಮಾನ ಬದಲಾವಣೆ ಪರಿಣಾಮದ ತತ್ಕ್ಷಣ ಮತ್ತು ಸುಸ್ಥಿರ ಪ್ರಯತ್ನ ಬೇಕಾಗಿದೆ.
ಇದನ್ನೂ ಓದಿ: ಕರಗಲಿವೆ ಹಿಮನದಿಗಳು, ಏರಿಕೆಯಾಗಲಿದೆ ಸಮುದ್ರ ಮಟ್ಟ: ವಿಶ್ವಕ್ಕೆ ವಿಜ್ಞಾನಿಗಳ ಎಚ್ಚರಿಕೆ!