ETV Bharat / sukhibhava

ಕೋವಿಡ್ ಡೈರಿ 2020: ಕೊರೊನಾ ಲಕ್ಷಣಗಳ ಬಗ್ಗೆ ಮತ್ತೊಮ್ಮೆ ಪುಟ ತಿರುಗಿಸೋಣ - ಕೊರೊನಾ ವೈರಸ್​ನ ಪರಿಣಾಮ

ಕೊರೊನಾ ವೈರಸ್​ನ ಪರಿಣಾಮಗಳು ವೈದ್ಯರು ಮತ್ತು ಸಂಶೋಧಕರನ್ನು ಚಿಂತೆಗೀಡುಮಾಡುತ್ತಿವೆ. ವೈರಸ್‌ನ ಬದಲಾಗುತ್ತಿರುವ ರಚನೆ, ಅದರ ರೋಗಲಕ್ಷಣಗಳಲ್ಲಿನ ವ್ಯತ್ಯಾಸ ಮತ್ತು ದೇಹದ ಮೇಲೆ ಉಂಟಾಗುವ ಪರಿಣಾಮಗಳಿಂದಾಗಿ, ಶೀಘ್ರದಲ್ಲೇ ಕೋವಿಡ್-19 ವಿರುದ್ಧ ವ್ಯಾಕ್ಸಿನೇಷನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಲಾಗಿದ್ದರೂ, ಜನರು ಈ ಲಸಿಕೆಯ ಪರಿಣಾಮಕಾರಿತ್ವ ಅನುಮಾನಿಸಲು ಪ್ರಾರಂಭಿಸಿದ್ದಾರೆ. ಇದರ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ.

corona
corona
author img

By

Published : Dec 24, 2020, 8:26 PM IST

Updated : Dec 24, 2020, 8:48 PM IST

ಹೈದರಾಬಾದ್: ಕೋವಿಡ್-19ನ ಪತ್ತೆಯಾಗಿ ಒಂದು ವರ್ಷ ಕಳೆದಿದ್ದರೂ, ವೈರಸ್‌ನ ಭಯ ಇನ್ನೂ ಜನರ ಮನಸ್ಸಿನಲ್ಲಿ ಉಳಿದಿದೆ. ಆರಂಭದಲ್ಲಿ ಹೆಚ್ಚಿನ ಸೋಂಕಿತರು ಸಾಯುತ್ತಿದ್ದರು, ಆದರೆ, ಈಗ ವೈದ್ಯರು ರೋಗವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಅರ್ಥಮಾಡಿಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.

ಕೊರೊನಾ ವೈರಸ್​ನ ಪರಿಣಾಮಗಳು ವೈದ್ಯರು ಮತ್ತು ಸಂಶೋಧಕರನ್ನು ಚಿಂತೆಗೀಡುಮಾಡುತ್ತಿವೆ. ವೈರಸ್‌ನ ಬದಲಾಗುತ್ತಿರುವ ರಚನೆ, ಅದರ ರೋಗಲಕ್ಷಣಗಳಲ್ಲಿನ ವ್ಯತ್ಯಾಸ ಮತ್ತು ದೇಹದ ಮೇಲೆ ಉಂಟಾಗುವ ಪರಿಣಾಮಗಳಿಂದಾಗಿ, ಶೀಘ್ರದಲ್ಲೇ ಕೋವಿಡ್-19 ವಿರುದ್ಧ ವ್ಯಾಕ್ಸಿನೇಷನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಲಾಗಿದ್ದರೂ, ಜನರು ಈ ಲಸಿಕೆಯ ಪರಿಣಾಮಕಾರಿತ್ವ ಅನುಮಾನಿಸಲು ಪ್ರಾರಂಭಿಸಿದ್ದಾರೆ.

ಕೋವಿಡ್-19 ಮತ್ತು ಅದರ ಪರಿಣಾಮಗಳು ದೇಹದ ಬಹುತೇಕ ಎಲ್ಲ ಭಾಗಗಳಲ್ಲಿ ಕೆಲವು ಗಂಭೀರ ಪರಿಣಾಮ ಬೀರುತ್ತಿದೆ. ಇದು ಉಸಿರಾಟದ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ ಅಥವಾ ನರಮಂಡಲದ ಮೇಲೂ ತೀವ್ರವಾಗಿ ಪರಿಣಾಮ ಬೀರುತ್ತವೆ. ಆದರೆ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ.

ಕೋವಿಡ್-19 ಸಾಂಕ್ರಾಮಿಕ:

ಕೋವಿಡ್ -19ನ ಮೊದಲ ಪ್ರಕರಣ ಚೀನಾದ ವುಹಾನ್ ನಗರದಲ್ಲಿ ವರದಿಯಾಗಿದ್ದು, ಇದು ಕ್ರಮೇಣ ಇತರ ದೇಶಗಳಲ್ಲಿ ಹರಡಲು ಪ್ರಾರಂಭಿಸಿತು. ಜನರು ಪ್ರಯಾಣಿಸುತ್ತಿದ್ದಂತೆ ಇದು ಪ್ರಪಂಚದಾದ್ಯಂತ ಹಾನಿಯನ್ನುಂಟು ಮಾಡಿತು. ಈ ರೋಗವನ್ನು ಆರಂಭದಲ್ಲಿ 'SARS-CoV-2' ಎಂದು ಹೆಸರಿಸಲಾಯಿತು. ಬಳಿಕ ಇದನ್ನು ಕೋವಿಡ್ -19 ಅಥವಾ ಕೊರೊನಾ ವೈರಸ್ ಕಾಯಿಲೆ ಎಂದು ಕರೆಯಲಾಯಿತು.

ಆರಂಭದಲ್ಲಿ, ಕೆಮ್ಮು, ಶೀತ ಮತ್ತು ಅಧಿಕ ಜ್ವರವನ್ನು ಕೊರೊನಾದ ಲಕ್ಷಣಗಳೆಂದು ಪರಿಗಣಿಸಲಾಯಿತು. ಆದರೆ ರೋಗವು ಮುಂದುವರೆದಂತೆ, ರೋಗಲಕ್ಷಣಗಳು ಬದಲಾಗತೊಡಗಿದವು ಮತ್ತು ಉಸಿರಾಟದ ತೊಂದರೆ, ವಾಸನೆ ಮತ್ತು ರುಚಿಯ ನಷ್ಟ, ಅತಿಸಾರ, ತಲೆ ಮತ್ತು ಮೈ-ಕೈ ನೋವು, ತೀವ್ರ ಆಯಾಸ ಮತ್ತು ದೌರ್ಬಲ್ಯವನ್ನು ಕೂಡಾ ಈ ಲಕ್ಷಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಈ ವರ್ಷ ಕೊರೊನಾದಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಂಡರು ಮತ್ತು ಇದು ಅತ್ಯಂತ ಗಂಭೀರ ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಗುತ್ತಿದೆ. ಈ ರೋಗವು ಜೀವನ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿತು ಮತ್ತು ಮಾನಸಿಕವಾಗಿ ಹಾಗೂ ದೈಹಿಕವಾಗಿ ಪರಿಣಾಮ ಬೀರಿತು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ, ಮಾಸ್ಕ್ ಧರಿಸುವುದು ಮತ್ತು ನಿರಂತರ ನೈರ್ಮಲ್ಯೀಕರಣ ಎಲ್ಲರಿಗೂ ಮುಖ್ಯವಾಯಿತು.

ಕೊಮೊರ್ಬಿಡ್ ಕಾಯಿಲೆ ಇರುವ ಜನರ ಮೇಲೆ ಕೋವಿಡ್-19 ಪರಿಣಾಮ:

ಈ ಸೋಂಕು ಈಗಾಗಲೇ ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ಜನರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಇಂತಹ ಆರೋಗ್ಯ ಪರಿಸ್ಥಿತಿಗಳಿಂದ ಬಳಲುತ್ತಿರುವ ಜನರು ಈಗಾಗಲೇ ಸೋಂಕಿಗೆ ತುತ್ತಾಗಿದ್ದಾರೆ.

2020ರಲ್ಲಿ ಹೃದಯ ಸಮಸ್ಯೆಗೆ ಸಂಬಂಧಿಸಿದ ಪ್ರಕರಣಗಳು ಮೊದಲಿಗಿಂತಲೂ ಹೆಚ್ಚಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ವರ್ಷ ಹೃದಯಾಘಾತದಿಂದ ಜಾಗತಿಕವಾಗಿ ಸಂಭವಿಸಿದ ಸಾವುಗಳು ಕಳೆದ 20 ವರ್ಷಗಳಿಂದ ಅತಿ ಹೆಚ್ಚಾಗಿದೆ. ಅಂಕಿ- ಅಂಶಗಳ ಪ್ರಕಾರ, ಹೃದ್ರೋಗವು ಶೇ 16ರರಷ್ಟು ಸಾವುಗಳಿಗೆ ಕಾರಣವಾಗಿದೆ.

ಶ್ವಾಸಕೋಶ ಮತ್ತು ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ:

ಕೊರೊನಾವನ್ನು ಉಸಿರಾಟದ ವ್ಯವಸ್ಥೆ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಇದರ ಲಕ್ಷಣಗಳು ಜ್ವರ ಮತ್ತು ನ್ಯುಮೋನಿಯಾದಂತಿದ್ದವು ಮತ್ತು ಒಬ್ಬ ವ್ಯಕ್ತಿ ಈ ಸೋಂಕಿಗೆ ತುತ್ತಾದ ಬಳಿಕ ಶ್ವಾಸಕೋಶದ ಮೇಲೆ ಇದು ಹೆಚ್ಚಾಗಿ ಪರಿಣಾಮ ಬೀರುತ್ತದೆ.

ಸೋಂಕಿತರು ಉಸಿರಾಟದ ತೊಂದರೆ ಕುರಿತು ಹೆಚ್ಚು ದೂರು ನೀಡುತ್ತಿದ್ದು, ರೋಗಿಗಳಲ್ಲಿ ಗಂಭೀರ ಶ್ವಾಸಕೋಶದ ಕಾಯಿಲೆಗಳು ಕೂಡಾ ವರದಿಯಾಗಿವೆ. ಪರಿಣಾಮವಾಗಿ ಜನರ ಶ್ವಾಸಕೋಶವು ಸರಿಯಾಗಿ ತನ್ನ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಿತು ಮತ್ತು ಸೋಂಕಿತರಿಗೆ ಹೆಚ್ಚುವರಿ ಆಮ್ಲಜನಕವನ್ನು ನೀಡಲಾಯಿತು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರವೂ ಜನರ ಉಸಿರಾಟದ ವ್ಯವಸ್ಥೆಯ ಮೇಲೆ ಗಂಭೀರ ದೀರ್ಘಕಾಲೀನ ಪರಿಣಾಮಗಳಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

ಜೀರ್ಣಾಂಗ ವ್ಯವಸ್ಥೆ ಮತ್ತು ಮೇದೋಜ್ಜೀರಕ ಗ್ರಂಥಿಯ ಮೇಲೆ ಪರಿಣಾಮ:

ಶ್ವಾಸಕೋಶ ಮಾತ್ರವಲ್ಲ ಕೋವಿಡ್-19 ಅನೇಕ ರೋಗಿಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರಿತು. ರೋಗನಿರೋಧಕ ಶಕ್ತಿ ಕಡಿಮೆಯಾಗುವುದರ ಜೊತೆಗೆ, ಜೀರ್ಣಾಂಗ ವ್ಯವಸ್ಥೆ, ಕರುಳು ಮತ್ತು ಪಿತ್ತಜನಕಾಂಗವನ್ನು ಕೂಡಾ ದುರ್ಬಲಗೊಳಿಸುತ್ತದೆ.

ಇದರ ಪರಿಣಾಮವಾಗಿ ಜನರು ಹೊಟ್ಟೆ ನೋವು, ಅತಿಸಾರ, ರುಚಿ ಕಳೆದುಕೊಳ್ಳುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ವೈದ್ಯರ ಪ್ರಕಾರ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆಯೂ ವೈರಸ್‌ನಿಂದ ಹೆಚ್ಚಾಗಿದೆ.

ಮೆದುಳು ಮತ್ತು ನರಮಂಡಲದ ಮೇಲೆ ಪರಿಣಾಮ:

ಕೋವಿಡ್-19ನ ಒಂದು ಪ್ರಮುಖ ಲಕ್ಷಣವೆಂದರೆ, ಮೆದುಳು ಮತ್ತು ನರಮಂಡಲದ ಮೇಲೆ ವೈರಸ್ ಪರಿಣಾಮದಿಂದಾಗಿ ರುಚಿ ಮತ್ತು ವಾಸನೆಯ ನಷ್ಟ ಉಂಟಾಗುತ್ತದೆ. ಇದಲ್ಲದೆ ಇದು ನರಗಳಲ್ಲಿ ನೋವು ಮತ್ತು ಊತ, ರಕ್ತ ಹೆಪ್ಪುಗಟ್ಟುವಿಕೆ, ನಿರಂತರ ಅಥವಾ ತೀವ್ರವಾದ ತಲೆನೋವು ಇತ್ಯಾದಿಗಳಿಗೆ ಕಾರಣವಾಗುತ್ತದೆ.

ಮೈಗ್ರೇನ್ ತರಹದ ತಲೆನೋವು ಕೂಡಾ ಸೋಂಕಿತರಲ್ಲಿ ಕಾಣಿಸಿಕೊಂಡಿದೆ. ಇದಲ್ಲದೆ ಕೋವಿಡ್-19ನಿಂದ ಚೇತರಿಸಿಕೊಂಡ ಹೆಚ್ಚಿನ ಸಂಖ್ಯೆಯ ರೋಗಿಗಳಲ್ಲಿಯೂ ತಲೆನೋವು ಆಗಾಗ ಕಾಣಿಸಿಕೊಂಡಿದೆ.

ಮೂತ್ರಪಿಂಡದ ಕಾಯಿಲೆಗಳಲ್ಲಿ ಹೆಚ್ಚಳ:

ಕೋವಿಡ್ -19 ಸೋಂಕಿಗೆ ಒಳಗಾದ ಹೆಚ್ಚಿನ ಸಂಖ್ಯೆಯ ಸೋಂಕಿತರ ಮೂತ್ರಪಿಂಡಗಳು ಹಾನಿಗೊಳಗಾದವು. ಇದರಿಂದಾಗಿ ಅವರಿಗೆ ಡಯಾಲಿಸಿಸ್ ಅಗತ್ಯವಾಗಿತ್ತು. ವೈದ್ಯರ ಪ್ರಕಾರ ಯಾವುದೇ ಸೋಂಕಿನಿಂದ ಮೂತ್ರಪಿಂಡಕ್ಕೆ ತೊಂದರೆಯಾದಾಗ ಅಥವಾ ಡಯಾಲಿಸಿಸ್ ಅಗತ್ಯವಿದ್ದರೆ, 3 ದಿನಗಳಿಂದ 3 ವಾರಗಳಲ್ಲಿ ಚೇತರಿಸಿಕೊಳ್ಳಲು ಉತ್ತಮ ಸಾಧ್ಯತೆಗಳಿವೆ.

ಆದರೆ ಕೋವಿಡ್-19 ಸೋಂಕಿನ ಸಂದರ್ಭಗಳಲ್ಲಿ, ರೋಗಿಗಳು ತೀವ್ರ ಮೂತ್ರಪಿಂಡದ ಹಾನಿಯನ್ನು ಅನುಭವಿಸುತ್ತಿದ್ದಾರೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿಲ್ಲ. ಇಲ್ಲಿ ಆತಂಕಕಾರಿಯಾದ ಸಮಸ್ಯೆ ಏನೆಂದರೆ ಕೋವಿಡ್ -19ನ ಅಡ್ಡಪರಿಣಾಮಗಳಿಂದಾಗಿ ರೋಗಿಗಳಿಗೆ ದೀರ್ಘಕಾಲೀನ ಡಯಾಲಿಸಿಸ್ ಅಗತ್ಯವಿರಬಹುದು ಮತ್ತು ಭವಿಷ್ಯದಲ್ಲಿ ಅವರಿಗೆ ಮೂತ್ರಪಿಂಡ ಕಸಿ ಮಾಡಬೇಕಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ಮಾನಸಿಕ ತೊಂದರೆಗಳು:

ಕೊರೊನಾ ವೈರಸ್ ಮೊದಲಿನಿಂದಲೂ ಜನರಲ್ಲಿ ಭಯ ಮೂಡಿಸಿದೆ. ರೋಗದ ಕುರಿತು, ಆರ್ಥಿಕ ಅಸ್ಥಿರತೆ, ನಿರುದ್ಯೋಗ, ಭವಿಷ್ಯ, ಶಿಕ್ಷಣ ಹಾಗೂ ಸಾವಿನ ಕುರಿತು ಪ್ರಪಂಚದಾದ್ಯಂತದ ಹೆಚ್ಚಿನ ಜನರು ವರ್ಷಪೂರ್ತಿ ಒತ್ತಡ, ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರು.

ಇದು ಸೆಲೆಬ್ರಿಟಿಗಳಾಗಿರಲಿ ಅಥವಾ ಸಾರ್ವಜನಿಕರಾಗಲಿ, ಈ ವರ್ಷ ಹೆಚ್ಚಿನ ಸಂಖ್ಯೆಯ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಮಕ್ಕಳು, ವಯಸ್ಕರು, ವೃದ್ಧರು ಮತ್ತು ಪ್ರತಿ ವರ್ಗ ಮತ್ತು ಲಿಂಗದ ಜನರು ಸೇರಿದ್ದಾರೆ. ಆತ್ಮಹತ್ಯೆಯ ಅಂಕಿ ಅಂಶವು ತುಂಬಾ ಹೆಚ್ಚಾಗಿದ್ದು, ಇದು ಪ್ರಮುಖ ಕಳವಳಕ್ಕೆ ಕಾರಣವಾಯಿತು.

ಹೀಗಾಗಿ ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಮನೋವೈದ್ಯರ ಸಹಾಯದಿಂದ ಜನರಿಗೆ ಆನ್‌ಲೈನ್ ಕೌನ್ಸಿಲಿಂಗ್ ನೀಡಲು ಪ್ರಾರಂಭಿಸಿದವು. ಮನೋವೈದ್ಯರಿಂದ ಸಹಾಯ ಪಡೆಯುವ ಜನರ ಸಂಖ್ಯೆ 2020ರಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ.

ಆದ್ದರಿಂದ ಈ ವರ್ಷ ಅತ್ಯಂತ ಕಠಿಣವಾಗಿತ್ತು ಮತ್ತು ಎಲ್ಲರಿಗೂ ಅನೇಕ ಸವಾಲಿನ ಸಂದರ್ಭಗಳನ್ನು ತಂದಿದೆ. ಅನೇಕ ಜನರು ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡರು, ಅನೇಕರು ತಮ್ಮ ಉದ್ಯೋಗ ಮತ್ತು ಮನೆಗಳನ್ನು ಕಳೆದುಕೊಂಡರು. ಮುಂದಿನ ವರ್ಷ 2021, ಸಂತೋಷದಿಂದ ತುಂಬಿರಲಿ ಎಂದು ಆಶಿಸೋಣ. ಪ್ರತಿಯೊಬ್ಬರಿಗೂ ಲಸಿಕೆ ನೀಡುವವರೆಗೂ ಜನರು ಜಾಗರೂಕರಾಗಿರಬೇಕು.

Last Updated : Dec 24, 2020, 8:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.